ವಿಶ್ವದ ಅತ್ಯಂತ ಅಪಾಯಕಾರಿ ಜಾಗ; ಮನುಷ್ಯ ವಾಸಿಸೋ ಪ್ರದೇಶದಿಂದ 3 ಸಾವಿರ ಕಿಮೀ ದೂರದಲ್ಲಿರೋದು ಏಕೆ?

author-image
Gopal Kulkarni
Updated On
ವಿಶ್ವದ ಅತ್ಯಂತ ಅಪಾಯಕಾರಿ ಜಾಗ; ಮನುಷ್ಯ ವಾಸಿಸೋ ಪ್ರದೇಶದಿಂದ 3 ಸಾವಿರ ಕಿಮೀ ದೂರದಲ್ಲಿರೋದು ಏಕೆ?
Advertisment
  • ಇದು ವಿಶ್ವದಲ್ಲಿಯೇ ಮಾನವರ ಸಾಮೀಪ್ಯದಿಂದ ದೂರ ಇರುವ ದ್ವೀಪ
  • ಯಾರೂ ಊಹಿಸಲಾಗದ ವಿಸ್ಮಯ, ನಿಗೂಢತೆಯ ಗೂಡು ಈ ಐಲ್ಯಾಂಡ್​
  • ಇಲ್ಲಿಗೆ ಮನುಷ್ಯರು ಕಾಲಿಡಲು ಕೂಡ ಭಯಗೊಳ್ಳಲು ಕಾರಣವೇನು ಗೊತ್ತಾ?

ಇಡೀ ವಿಶ್ವವೇ ಒಂದು ಅಚ್ಚರಿಗಳ ಮೂಟೆ. ಇಲ್ಲಿ ಬಿಡಿಸಲಾಗದ ಸಾವಿರಾರರು ಒಗಟುಗಳಿವೆ. ಸೃಷ್ಟಿ ತನ್ನ ಗರ್ಭದಲ್ಲಿ ಎಂದಿಗೂ ಬೇಧಿಸಲಾಗದ ರಹಸ್ಯಗಳನ್ನು ಅಡಗಿಸಿಕೊಂಡು ಕೂತಿದೆ. ಮನುಷ್ಯ ಎಷ್ಟೇ ಮುಂದುವರಿದರೂ ಕೂಡ ಸೃಷ್ಟಿಯ ಅನೇಕ ವೈಚಿತ್ರ್ಯಗಳನ್ನು ಬಿಚ್ಚಿಡುವಲ್ಲಿ ಯಶಸ್ವಿಯಾಗಿಲ್ಲ. ಇಲ್ಲಿ ಸಾವಿರಾರು ಉತ್ತರಿಸಲಾಗದ ಪ್ರಶ್ನೆಗಳಿವೆ. ಸಾವಿರಾರು ವಿವರಿಸಲು ಸಾಧ್ಯವಿಲ್ಲದ ವಿಸ್ಮಯಗಳು ಇವೆ. ನೂರಾರು ಸಂಶೋಧನೆ, ಪ್ರಯೋಗ, ಸಿದ್ಧಾಂತಗಳಲ್ಲಿ ಅಳೆದು ತೂಗಿ ನೋಡಿದರು ಒಂದು ರವೆಯಷ್ಟೂ ಕೂಡ ಬಿಡಿಸಲಾಗದ ವೈಚಿತ್ರ್ಯಗಳು ಜಗತ್ತಿನಲ್ಲಿ ಇಂದಿಗೂ ಮಾನವನಿಗೆ ಸವಾಲಾಗಿ ನಿಂತಿವೆ. ಅಂತಹ ವಿಚಿತ್ರ ವಿಸ್ಮಯಗಳಲ್ಲಿ ಒಂದಾಗಿ ನಿಂತಿದೆ ಈ ಒಂದು ದ್ವೀಪ

ಇದನ್ನೂ ಓದಿ:ವಿಶ್ವದಲ್ಲೇ ಟಾಪ್ 10 ಅತ್ಯಂತ ಅಸಂತುಷ್ಟ ರಾಷ್ಟ್ರಗಳು ಯಾವುವು? ಭಾರತಕ್ಕೆ ಎಷ್ಟನೇ ಸ್ಥಾನ ಗೊತ್ತಾ?

ಬೋವೆಟ್ ದ್ವೀಪ, ಇದೊಂದು ಮನುಷ್ಯರಿಂದ ತುಂಬಾ ದೂರದಲ್ಲಿರುವ ವಿಶ್ವದ ಏಕೈಕ ದ್ವೀಪ. ಇದು ಮನುಷ್ಯರು ವಾಸವಿರುವ ಪ್ರದೇಶದಿಂದ ಸುಮಾರು 3 ಸಾವಿರ ಕಿಲೋ ಮೀಟರ್​ನಷ್ಟು ದೂರವಿದೆ. ಈ ಒಂದು ದ್ವೀಪ ದಕ್ಷಿಣ ಆಫ್ರಿಕಾ ಹಾಗೂ ಆಂಟಾರ್ಕಟಿಕಾದ ನಡುವೆ ಇದೆ. ಅಂದ್ರೆ ಅಂಟ್ಲಾಂಟಿಕಾ ಸಮುದ್ರದ ಮಧ್ಯದಲ್ಲಿ ಇದೆ. ಇದರ ಸುತ್ತಲೂ ಕೇವಲ ಹಿಮ ಹಾಗೂ ಸಮುದ್ರದಾಚೆ ಏನೂ ಇಲ್ಲ. ಮನುಷ್ಯರಿಂದ ತೀರ ದೂರದಲ್ಲಿರುವ ಈ ದ್ವೀಪ ವಿಸ್ಮಯ ನಿಸರ್ಗವೆನಿಸಿಕೊಂಡಿದೆ.

publive-image

ಈ ದ್ವೀಪದ ಬಗ್ಗೆ ಅನೇಕ ವಿಸ್ಮಯಕಾರಿ ಕಥೆಗಳು ಇವೆ. 1964ರಲ್ಲಿ ಈ ಒಂದು ದ್ವೀಪದಲ್ಲಿ ಒಂದು ಹಡಗು ಕಂಡು ಬಂದಿತ್ತು. ಆದರೆ ಅಲ್ಲಿ ಹೋಗಿ ನೋಡಿದರೆ ಆ ಹಡಗಿನಲ್ಲಾಗಲಿ. ಅದರ ಸುತ್ತಮುತ್ತಲಾಗಲಿ ಯಾವುದೇ ರೀತಿಯ ಮನುಷ್ಯರ ಸುಳಿವು ಇರಲಿಲ್ಲ. ಈ ಬೋಟ್​ನ ಹಿಂದಿನ ರಹಸ್ಯ ರಹಸ್ಯವಾಗಿಯೇ ಉಳಿದು ಹೋಯಿತು ಅದನ್ನು ಯಾರಿಂದಲೂ ಕೂಡ ಬೇಧಿಸಲು ಆಗಲಿಲ್ಲ. ಇನ್ನೂ 1979ರಲ್ಲಿ ಅಮೆರಿಕಾದ ಸ್ಯಾಟ್​ಲೈಟ್​ ಕಣ್ಣಿಗೆ ಇಲ್ಲಿ ಒಂದು ವಿವರಿಸಲಾಗದಂತಹ ಒಂದು ಪ್ರಕಾಶಮಾನವಾದ ಬೆಳಕು ಕಂಡು ಬಂದಿತ್ತು. ಇದನ್ನು ಕೆಲವು ದೇಶಗಳು ಆಫ್ರಿಕನ್-ಇಸ್ರೇಲಿಯ ನ್ಯೂಕ್ಲಿಯರ್ ಟೆಸ್ಟ್ ಎಂದು ಊಹಿಸಿದ್ದವು. ಆದ್ರೆ ಈ ಎರಡು ದೇಶಗಳು ಈ ಆರೋಪಗಳನ್ನು ನಿರಾಕರಿಸಿದವು. ಆದರೆ ಅಸಲಿಗೆ ಅಲ್ಲಿ ನಿಜಕ್ಕೂ ನಡೆದಿದ್ದು ಏನು ಎಂಬುದು ಕೊನೆಗೂ ಗೊತ್ತಾಗಲಿಲ್ಲ

publive-image

ಈ ಒಂದು ದ್ವೀಪ ಕೇವಲ ವಿಸ್ಮಯ ನಿಗೂಢತೆಗಳ ಗೂಡಲ್ಲ. ಇಲ್ಲಿ ಅತ್ಯುದ್ಭುತವಾದ ನಿಸರ್ಗ ಸೌಂದರ್ಯವಿದೆ. ಇದು ಅನೇಕ ಸಮುದ್ರ ಜೀವಿಗಳಿಗೆ, ಪಕ್ಷಿಗಳಿಗೆ ಸ್ವರ್ಗಸ್ಥಾನವಾಗಿದೆ. ಕೋಟ್ಯಾಂತರ ಪೆಂಗ್ವಿನ್​ಗಳು ಇಲ್ಲಿ ಜೀವಿಸುತ್ತವೆ. ಹಿಮ ಪ್ರದೇಶದಲ್ಲಿ ವಾಸಿಸುವ ಸಾವಿರಾರು ಜೀವಿಗಳಿಗೆ ಇದು ಸ್ವರ್ಗದಂತಹ ಜಾಗ.

ಇದನ್ನೂ ಓದಿ:ಸದ್ಯದಲ್ಲೇ ಬೀದಿ ನಾಯಿಗಳ ಮಾರಣ ಹೋಮ; ಎಷ್ಟು ಲಕ್ಷ ಶ್ವಾನಗಳ ಬಲಿ ಗೊತ್ತಾ?

ಆದರೆ ಈ ದ್ವೀಪದ ಹವಾಮಾನದಲ್ಲಿ ಮನುಷ್ಯ ಮಾತ್ರರು ಬದುಕಲು ಸಾಧ್ಯವಿಲ್ಲ. ಹೆಜ್ಜೆ ಹೆಜ್ಜೆಗೂ ಇದು ಭೌಗೋಳಿಕ ಪರಿಸ್ಥಿತಿಗಳಿಗೆ ಸವಾಲನ್ನೊಡ್ಡುತ್ತದೆ. ಸದಾ ಹಿಮದ ಬಂಡೆಗಳಿಂದಲೇ ಕೂಡಿಕೊಂಡಿರುವ ಈ ದ್ವೀಪ ಮನುಷ್ಯರು ಬದುಕಲಂತೂ ಸಾಧ್ಯವೇ ಇಲ್ಲದ ಹವಾಮಾನವನ್ನು ಹೊಂದಿದೆ. ಹೀಗಾಗಿ ಇದು ಮನಷ್ಯವಾಸದಿಂದ ಅತ್ಯಂತ ದೂರ ಇರುವ ವಿಶ್ವದ ಏಕೈಕ ದ್ವೀಪ ಎಂದು ಗುರುತಿಸಲಾಗುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment