/newsfirstlive-kannada/media/post_attachments/wp-content/uploads/2025/04/EXPENSIVE-WATER-BOTTLE.jpg)
ಈ ಮನುಷ್ಯನ ದೇಹವು ಶೇಕಡಾ 60ರಷ್ಟು ನೀರಿನಿಂದ ತುಂಬಿದೆ ಎಂದು ಹೇಳಲಾಗುತ್ತದೆ. ಇದು ಮನುಷ್ಯನ ದೇಹಕ್ಕೆ ಹಾಗೂ ಅಸ್ತಿತ್ವಕ್ಕೆ ನೀರು ಎಷ್ಟು ಪ್ರಮುಖ ಎಂಬುದನ್ನು ಬಿಂಬಿಸುವ ಒಂದು ಕೈಗನ್ನಡಿ. ಮನುಷ್ಯನ ದೇಹವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ. ಅದಕ್ಕೆ ಬೇಕಾದ ಸರಿಯಾದ ಪ್ರಮಾಣದ ಹಾಗೂ ಶುದ್ಧವಾದ ನೀರನ್ನು ನಾವು ಒದಗಿಸಬೇಕು. ಈ ಜಗತ್ತನ್ನು ಕೂಡ ನಾವು ನೀರು ಇಲ್ಲದೇ ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ನಾವು ಬದುಕಲು ಬೆಳೆಯಲು, ನಿಸರ್ಗ ಚಲನೆಶೀಲತೆಯಿಂದ ಇರಲು ಭೂಮಿಯಲ್ಲಿ ನೀರು ಬೇಕೆ ಬೇಕು. ಬೆಟ್ಟದಲ್ಲಿ ಹರಿಯುವ ನೀರಿಗೆ ಬೊಗಸೆಯೊಡ್ಡಿ ಕುಡಿದು ತನ್ನ ದಾಹವನ್ನು ತೀರಿಸಿಕೊಳ್ಳುತ್ತಾನೆ ಒಬ್ಬ ದನಗಾಹಿ ಹಾಗೂ ಕುರಿಗಾಹಿ. ಆದರೆ ಮನುಷ್ಯನಗೆ ಐಷಾರಾಮಿಯತೆ ಎನ್ನುವುದೇ ಒಂದು ಹೆಗ್ಗಳಿಕೆ.
ಎಲ್ಲದರಲ್ಲಿಯೂ ಐಷಾರಾಮಿಯತೆ ಮತ್ತು ದುಬಾರಿತನವನ್ನು ಹುಡುಕುವುದು ದುಂದುವೆಚ್ಚ ಮಾಡುವುದು ಕೂಡ ಮನುಷ್ಯನ ಸ್ವಭಾವದಲ್ಲಿ ಒಂದು. ತನ್ನ ಬದುಕಿನ ಶ್ರೀಮಂತಿಕೆಯನ್ನು ಐಷಾರಾಮಿ ವಸ್ತುಗಳ ಮೂಲಕ ತೋರಿಸಿಕೊಳ್ಳುವುದು ಕೂಡ ಒಂದು ಸ್ವಭಾವವೇ. ಈಗ ಅದು ಕುಡಿಯುವ ನೀರಿನ ಬಾಟಲ್ಗೂ ಕೂಡ ತಗುಲಿದೆ.
ಇದನ್ನೂ ಓದಿ:ನಿತ್ಯಾನಂದ ಬದುಕಿದ್ದಾರಾ? ದೇಹತ್ಯಾಗ ಮಾಡಿದ್ದಾರಾ? ಕೊನೆಗೂ ‘ಕೈಲಾಸದಿಂದ ಬಂತು ಅತಿ ದೊಡ್ಡ ಸುದ್ದಿ‘!
ನಿಮಗೆ ಗೊತ್ತಾ ಜಗತ್ತಿನ ಅತ್ಯಂತ ದುಬಾರಿ ಕುಡಿಯುವ ನೀರಿನ ಬಾಟಲ್ ಯಾವುದು ಅಂತ. ಫಿಲ್ಲಿಕೊ ಜ್ಯುವೆಲ್ಲರಿ ವಾಟರ್ನ್ನು ಜಗತ್ತಿನ ಅತ್ಯಂತ ದುಬಾರಿ ಕುಡಿಯುವ ನೀರಿನ ಬಾಟಲ್ ಎಂದು ಕರೆಯುತ್ತಾರೆ. ಈ ಒಂದು ಲೀಟರ್ ವಾಟರ್ ಬಾಟಲ್ನ ಬೆಲೆ ಬರೋಬ್ಬರಿ 1 ಲಕ್ಷ 16 ಸಾವಿರ ರೂಪಾಯಿ. ಈ ಕುಡಿಯುವ ನೀರಿನ ಬಾಟಲ್ನ ಬೆಲೆ ಇಷ್ಟೊಂದುದು ದುಬಾರಿ ಏಕೆ ಎಂದು ನೀವು ಕೇಳಬಹುದು. ಇದನ್ನು ತಯಾರಿಸಿರುವ ರೀತಿ. ಇದಕ್ಕಿರುವ ಅತಿರಂಜಿತ ವಿನ್ಯಾಸವೇ ಇದನ್ನು ಇಷ್ಟು ದುಬಾರಿ ಮಾಡಿದೆ. ಈ ಬಾಟಲ್ನ್ನು ಸ್ವರೊವಸ್ಕಿ ಹರಳುಗಳು ಸೇರಿದಂತೆ ಹಲವು ಆಭರಣಗಳಿಂದ ವಿನ್ಯಾಸ ಮಾಡುವ ಮೂಲಕ ಇದನ್ನು ಐಷಾರಾಮಿಯ ಒಂದು ಉತ್ಪನ್ನದ ಗುರತಿನ ಸ್ಟೇಟಸ್ ನೀಡಲಾಗಿದೆ.
ಇದನ್ನೂ ಓದಿ:ಪ್ರೀತಿಯ ಶ್ವಾನದ ಜೊತೆ ಮತ್ತೆ ಒಂದಾದ ಸುನಿತಾ ವಿಲಿಯಮ್ಸ್.. ಮನಮಿಡಿಯುವ ವಿಡಿಯೋ ಇಲ್ಲಿದೆ!
ಇನ್ನು ಇದನ್ನು ಡಿಸೈನ್ ಮಾಡಿದವರು ಜಪಾನ್ನ ಅತ್ಯಂತ ಅನುಭವಿ ಕುಶಲಕರ್ಮಿಗಳು ಎಂದು ಹೇಳಲಾಗುತ್ತದೆ. ವಿಶೇಷ ಗಮನವನ್ನಿಟ್ಟು ಈ ಬಾಟಲ್ನ್ನ ತಯಾರಿಸಲಾಗಿದೆ. ಬಂಗಾವನ್ನು ಬಳಸಿ ಸಂಕಿರ್ಣವಾದ ವಿನ್ಯಾಸಗಳನ್ನು ಈ ಬಾಟಲ್ನಲ್ಲಿ ನಾವು ಕಾಣಬಹುದು. ಇದರ ವಿನ್ಯಾಸ ಹಾಗೂ ಅದಕ್ಕೆ ಬಳಕೆಯಾದ ವಸ್ತುಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ