/newsfirstlive-kannada/media/post_attachments/wp-content/uploads/2025/01/CHEESE-MILK.jpg)
ಐಷಾರಾಮಿ ಆಹಾರಗಳಲ್ಲಿ ಮೊದಲ ಸ್ಥಾನ ಪಡೆಯೋದು ಚೀಸ್. ಚೀಸ್ ಇಲ್ಲದೇ ಇದ್ದಲ್ಲಿ ಮ್ಯಾಕ್ಡೊನಾಲ್ಡ್ಸ್, ಡಾಮಿನೋಸ್ಗಳಲ್ಲಿ ಸಿದ್ದಗೊಳ್ಳುವ ಯಾವ ಆಹಾರವೂ ಇಷ್ಟೊಂದು ಫೇಮಸ್ ಆಗುತ್ತಿರಲಿಲ್ಲ. ಅನೇಕ ರೆಸ್ಟೊರೆಂಟ್ಗಳಲ್ಲಿ ಚೀಸ್ನಿಂದ ಸಿದ್ಧಗೊಳ್ಳುವ ಆಹಾರಗಳಿಗೆ ಸಾವಿರಾರು ರೂಪಾಯಿಗಳು ಬೆಲೆ ಇದೆ. ಚೀಸ್ ಆಹಾರವನ್ನು ಪ್ರೀತಿಸಿವವರು ಇಡೀ ಜಗತ್ತಿನ ತುಂಬೆಲ್ಲಾ ಇದ್ದಾರೆ. ಅವರೆಲ್ಲರಿಗೂ ಒಂದು ಆಶ್ಚರ್ಯಕರ ಮಾಹಿತಿ ಗೊತ್ತಿಲ್ಲ. ಜಗತ್ತಿನಲ್ಲಿಯೇ ಅತಿ ದುಬಾರಿಯಾದ ಚೀಸ್ ಸೃಷ್ಟಿಯಾಗುವುದು ಹಸು, ಎಮ್ಮೆ, ಮೇಕೆ, ಕುರಿಯ ಹಾಲುಗಳಿಂದ ಅಲ್ಲ. ಅದು ಯಾವ ಪ್ರಾಣಿಯ ಹಾಲಿನಿಂದ ಅಂತ ಗೊತ್ತಾದ್ರೆ ನೀವು ಖಂಡಿತ ಶಾಕ್ ಆಗ್ತೀರಾ.
ಅಸಲಿಗೆ ಜಗತ್ತಿನಲ್ಲಿ ಅತ್ಯಂತ ದುಬಾರಿ ಚೀಸ್ ಸಿದ್ಧಗೊಳ್ಳುವುದು ಕತ್ತೆಯ ಹಾಲಿನಿಂದ. ಜಗತ್ತಿನಲ್ಲಿ ಅತ್ಯಂತ ದುಬಾರಿ ಚೀಸ್ ಅಂದ್ರೆ ಅದು ಪ್ಯೂಲೆ ಚೀಸ್. ಇದರ ಬೆಲೆ ಉಳಿದ ಚೀಸ್ಗಳಿಗಿಂತ ದುಬಾರಿ. ಡೇಲಿ ಮೇಲ್ ಮಾಡಿರುವ ವರದಿಯೊಂದರ ಪ್ರಕಾರ. ಈ ಚೀಸ್ ಕತ್ತೆಯ ಹಾಲಿನಿಂದ ಸಿದ್ಧಗೊಳ್ಳುತ್ತದೆ. ಕತ್ತೆಯ ಹಾಲಿನಿಂದ ಸಿದ್ಧಗೊಳ್ಳುವ ಈ ಚೀಸ್ ತಯಾರಾಗುವುದು ಪ್ರಮುಖವಾಗಿ ಸರ್ಬಿಯಾದ ಜಸಾವಿಕಾದಲ್ಲಿ. ಬಲ್ಕಾನ್ ಜಾತಿಯ ಕತ್ತೆಗಳ ಹಾಲಿನಿಂದ ಈ ದುಬಾರಿ ಚೀಸ್ನ್ನು ಉತ್ಪಾದಿಸಲಾಗುತ್ತದೆ. ಇದರ ಉತ್ಪಾದನೆಗೆ ತಗಲುವ ವೆಚ್ಚ ಹಾಗೂ ಸಮಯವೇ ಈ ಚೀಸ್ ವಿಶ್ವ ಮಾರುಕಟ್ಟೆಯಲ್ಲಿ ದುಬಾರಿಯಾಗಲು ಕಾರಣವಾಗಿದೆ. ಪ್ಯೂಲೆ ಚೀಸ್ ಎಷ್ಟು ದುಬಾರಿ ಅಂದ್ರೆ ಒಂದು ಕಿಲೋ ಗ್ರಾಂಗೆ ಸುಮಾರು 80 ರಿಂದ 82 ಸಾವಿರ ರೂಪಾಯಿ ಬೆಲೆ ಇದೆ.
ಇದನ್ನೂ ಓದಿ:ನಿಮ್ಮ ಕೂದಲು ಉದುರುತ್ತಿದೆಯೇ.. ತಲೆ ಬೋಳಾಗಲು ಕಾರಣ ಏನು ಬಲ್ಲೀರಾ..!
ಇನ್ನೂ ಈ ಚೀಸ್ ಇಷ್ಟೊಂದು ದುಬಾರಿಯಾಗಿರಲು ಕಾರಣ ಶೇಕಡಾ 60 ರಷ್ಟು ಕತ್ತೆ ಹಾಲು ಹಾಗೂ ಶೇಕಡಾ 40 ರಷ್ಟು ಮೇಕೆ ಹಾಲು ಮಿಶ್ರಣ ಮಾಡಿ ಸಿದ್ಧಪಡಿಸಲಾಗುತ್ತದೆ. ಒಂದು ಕೆಜಿ ಪ್ಯೂಲೆ ಚೀಸ್ ಸಿದ್ಧಗೊಳ್ಳಲು ಸುಮಾರು 25 ಲೀಟರ್ ಕತ್ತೆಯ ಹಾಲು ಬೇಕು. ಒಂದು ಕತ್ತೆ ದಿನಕ್ಕೆ 0.2 ರಿಂದ 0.3 ಲೀಟರ್ನಷ್ಟು ಮತ್ರ ಹಾಲು ನೀಡುತ್ತವೆ. ಹೀಗಾಗಿ ಇದನ್ನು ಸಿದ್ಧಪಡಿಸುವಿಕೆಯಲ್ಲಿಯೇ ಸಾಕಷ್ಟು ಪ್ರಮಾಣದ ವೆಚ್ಚ ಇರುವುದರಿಂದ ಈ ಚೀಸ್ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಚೀಸ್ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ದಿನಕ್ಕೆ ಎರಡೇ ಎರಡು ಖರ್ಜೂರ.. ಚಳಿಗಾಲದಲ್ಲಿ ಈ ಹಣ್ಣು ತಿನ್ನೋದ್ರಿಂದ ಏನಾಗುತ್ತದೆ ಗೊತ್ತಾ..?
ಇನ್ನು ಕತ್ತೆಯ ಹಾಲನ್ನು ಕೇವಲ ಚೀಸ್ ಉತ್ಪಾದನೆಗೆ ಮಾಡಲು ಮಾತ್ರ ಬಳಸುವುದಿಲ್ಲ. ಸ್ಕಿನ್ ಕೇರ್ ಪ್ರೊಡಕ್ಟ್ಗಳಿಗೂ ಕೂಡ ಕತ್ತೆ ಹಾಲು ತುಂಬಾ ಶ್ರೇಷ್ಠ. ಭಾರತದಲ್ಲಿ ಕತ್ತೆಗಳ ಸಂಖ್ಯೆ ಅತ್ಯಂತ ಕಡಿಮೆಯಿದೆ. ಇನ್ನೂ ಒಂದು ಅಚ್ಚರಿಯ ವಿಷಯ ಅಂದ್ರೆ ಕತ್ತೆಯ ಹಾಲು ಕೂಡ ತುಂಬಾ ದುಬಾರಿ. ಒಂದು ಲೀಟರ್ ಕತ್ತೆ ಹಾಲಿಗೆ 25 ಸಾವಿರ ರೂಪಾಯಿಯಿಂದ 30 ಸಾವಿರ ರೂಪಾಯಿ ಇದೆಯಂತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ