ವಿಶ್ವದಲ್ಲಿ ಅತ್ಯಂತ ದುಬಾರಿ ಏರ್‌ಲೈನ್ಸ್‌.. ಏನಿದರ ವಿಶೇಷ? ಒಂದು ಟಿಕೆಟ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Gopal Kulkarni
Updated On
ವಿಶ್ವದಲ್ಲಿ ಅತ್ಯಂತ ದುಬಾರಿ ಏರ್‌ಲೈನ್ಸ್‌.. ಏನಿದರ ವಿಶೇಷ? ಒಂದು ಟಿಕೆಟ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ವಿಶ್ವದಲ್ಲಿಯೇ ಅತ್ಯಂತ ದುಬಾರಿ ಏರ್​ ಟಿಕೆಟ್​​ ನೀಡುವ ಏರ್​​ಲೈನ್ಸ್
  • ಒನ್ ಸೈಡ್ ಜರ್ನಿಯ ಟಿಕೆಟ್​ಗೆ ಎಷ್ಟು ಲಕ್ಷ ರೂಪಾಯಿ ನೀಡಬೇಕು
  • ಇಲ್ಲಿರುವ ಐಷಾರಾಮಿ ಸೌಲಭ್ಯಗಳಿಗೆ ಯಾವುದೇ ಏರ್​ಲೈನ್ಸ್ ಸಾಟಿಯಿಲ್ಲ

ಇಂದಿನ ಜಗತ್ತಿನಲ್ಲಿ ನೀವು ಐಷಾರಾಮಿ ಮತ್ತು ಆರಾಮದಾಯಕ ಸೌಲಭ್ಯಗಳನ್ನು ಬಯಸಿದರೆ. ಆ ಸೌಲಭ್ಯಗಳ ಬೆಲೆಗೆ ಆಕಾಶವೇ ಮಿತಿಯಾಗಿರುತ್ತದೆ. ಇದು ಕೇವಲ ಹೋಟೆಲ್​, ಬೀಚ್, ಟ್ರೈನ್​ಗೆ ಸಂಬಂಧಿಸಿದ್ದಲ್ಲ. ವಿಮಾನಯಾನಕ್ಕೂ ಕೂಡ ಸಂಬಂಧಿಸಿದೆ. ವಿಮಾನಯಾನದಲ್ಲಿ ಸೌಲಭ್ಯಗಳಿಗೆ ಕೊರತೆಯಿಲ್ಲ. ದೂರದ ಪ್ರಯಾಣಕ್ಕೆ ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತದೆ. ಆದರೆ ಅಷ್ಟೇ ದುಬಾರಿಯ ಪ್ರಯಾಣವೂ ಕೂಡ ಅದಾಗಿದೆ. ಆದರೆ ನಿಮಗೆ ಗೊತ್ತಾ ವಿಶ್ವದಲ್ಲಿಯೇ ಅತ್ಯಂತ ದುಬಾರಿ ಏರ್​ ಟಿಕೆಟ್​ ಹಾಗೂ ಐಷಾರಾಮಿ ವಿಮಾನ ಯಾವ ಏರ್​ಲೈನ್ಸ್ ಹೊಂದಿದೆ ಅಂತ? ಒಂದು ಟಿಕೆಟ್​ ಬೆಲೆ ಎಷ್ಟು ಅಂತ ಗೊತ್ತಾದರೆ ಶಾಕ್ ಆಗುವುದಂತೂ ಪಕ್ಕಾ.

publive-image

ಇದನ್ನೂ ಓದಿ:ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಜಗತ್ತು! ಈ ವಿವಾಹಕ್ಕೆ ಖರ್ಚಾಗಲಿರುವ ಹಣ ಎಷ್ಟು ಗೊತ್ತಾ?

ವಿಶ್ವದಲ್ಲಿಯೇ ಅತ್ಯಂತ ದುಬಾರಿ ಏರ್​ ಟಿಕೆಟ್ ಮಾರುವ ಏರ್​​ಲೈನ್ಸ್​ ಅಂದ್ರೆ ಅದು ಎತಿಹಾದ್ ಏರ್​​ವೇಸ್​. ಇದು ವಿಶ್ವದಲ್ಲಿಯೇ ಅತ್ಯಂತ ದುಬಾರಿ ವಿಮಾನಯಾನದ ಟಿಕೆಟ್​ ಮಾರುತ್ತದೆ. ಇದರಲ್ಲಿ ಒನ್ ಸೈಡ್​ ವಿಮಾನಯಾನ ಮಾಡಲು ನೀವು ಕೊಡಬೇಕಾದ ದುಡ್ಡು ಬರೋಬ್ಬರಿ 55 ಲಕ್ಷ ರೂಪಾಯಿ. ಈ ವಿಮಾನದ ಐಷಾರಾಮಿ ಪ್ರಯಾಣ ನ್ಯೂಯಾರ್ಕ್​​ನಿಂದ ಆರಂಭವಾಗಿ ಯುಎಇನ ಅಬುದಾಬಿ ಬಂದು ತಲುಪುತ್ತದೆ. ಈ ವಿಮಾನದ ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡಿದ ಅವನು/ಅವಳಿಗೆ ಇಲ್ಲಿ ರಾಜ ರಾಣಿಯರಿಗೆ ಸಿಗುವಂತ ಸೌಲಭ್ಯಗಳನ್ನು ನೀಡಲಾಗುತ್ತದೆ.

ಈ ವಿಮಾನದ ಫಸ್ಟ್​ಕ್ಲಾಸ್ ಟಿಕೆಟ್​ ಇಂತಹ ಒಂದು ಅನುಭವನ್ನು ನೀಡುತ್ತದೆ. ಖಾಸಗಿ ಐಷಾರಾಮಿ ಕ್ಯಾಬಿನ್​, ಸಣ್ಣದೊಂದು ಹೊಟೆಲ್ ರೂಮ್​ ಹೀಗೆ ರಾಯಲ್ ಸ್ಟೈಲ್ ಪ್ರಯಾಣದ ಅನುಭವವನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.

publive-image

ಇದನ್ನೂ ಓದಿ:ಇದು ವಿಶ್ವದ ಅತ್ಯಂತ ದುಬಾರಿ ವಾಟರ್​ ಬಾಟಲ್​! ಒಂದು ಲೀಟರ್​​ಗೆ ಎಷ್ಟು ಲಕ್ಷ ರೂಪಾಯಿ ಗೊತ್ತಾ?

ಪ್ರಯಾಣಿಕರು ಈ ವಿಮಾನಯಾನದಲ್ಲಿ ನಿದ್ರೆಗೆ ಜಾರಿದರೆ ಅವರು ಈ ಹಿಂದೆ ಎಂದೂ ಪಡೆಯದ ಅನುಭವವನ್ನು ಪಡೆಯುತ್ತಾರೆ. ಅವರಿಗೆ ಕ್ಯಾವಿಯರ್‌ಗೆ ಲಭ್ಯವಿರುವ ಅತ್ಯುತ್ತಮ ಷಾಂಪೇನ್ ಅನ್ನು ನೀಡಲಾಗುತ್ತದೆ. ಎತಿಹಾದ್ ಏರ್​​ವೇಸ್​ ತನ್ನ ಅತ್ಯಂತ ದುಬಾರಿ ಟಿಕೆಟ್​ ವಿಚಾರವಾಗ ವಿಶ್ವದಾಖಲೆಯನ್ನೇ ಬರೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment