ಇದು ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂ.. ಈ ಹೂವಿಗೆ ನೀಡುವ ಹಣದಿಂದ ಮನೆಯನ್ನೇ ಖರೀದಿಸಬಹುದು!

author-image
Gopal Kulkarni
Updated On
ಇದು ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂ.. ಈ ಹೂವಿಗೆ ನೀಡುವ ಹಣದಿಂದ ಮನೆಯನ್ನೇ ಖರೀದಿಸಬಹುದು!
Advertisment
  • ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವಿನ ಬೆಲೆ ಎಷ್ಟು ಗೊತ್ತಾ?
  • ಜಗತ್ತಿನಲ್ಲಿಯೇ ಈ ಒಂದು ಗುಲಾಬಿಗೆ ಇಷ್ಟೊಂದು ಬೆಲೆ ಏಕೆ?
  • 15 ವರ್ಷದ ನಿರಂತರ ಪರಿಶ್ರಮದ ಬಳಿಕ ಸೃಷ್ಟಿಯಾದ ಗುಲಾಬಿ!

ಫೆಬ್ರವರಿಯನ್ನು ಪ್ರೀತಿಯ ತಿಂಗಳು ಎಂದೇ ಕರೆಯುತ್ತಾರೆ. ಈ ಇಡೀ ತಿಂಗಳು ಪ್ರಣಯ ಮತ್ತು ವಾತ್ಸಲ್ಯಗಳಿಂದಲೇ ತುಂಬಿ ಹೋಗಿರುತ್ತದೆ. ಇದು ವ್ಯಾಲಂಟೈನ್​ ವಾರದೀಂದಲೇ ಆರಂಭಗೊಳ್ಳುತ್ತದೆ. ರೋಸ್​ ಡೇಯಿಂದ ಆರಂಭಗೊಂಡು ಪ್ರಪೋಸ್ ಡೇ, ಚಾಕಲೇಟ್​ ಡೇ, ಟೆಡ್ಡಿ ಡೇ, ಪ್ರಾಮೀಸ್ ಡೇ, ಹಗ್​ ಡೇ, ಕಿಸ್​ ಡೇ ಮುಗಿಸಿ ಫೆಬ್ರವರಿ 14ರಂದು ವ್ಯಾಲಂಟೈನ್ ಡೇ ಮೂಲಕ ಪ್ರೀತಿ ತನ್ನ ಪರಾಕಾಷ್ಠೆಯನ್ನು ತಲುಪುತ್ತದೆ. ಇಡೀ ಈ ತಿಂಗಳಲ್ಲಿ ರೋಸ್ ಡೇ ಅಂದ್ರೆ ಗುಲಾಬಿ ದಿನ ದೊಡ್ಡ ಪಾತ್ರವನ್ನು ನಿಭಾಯಿಸುತ್ತದೆ. ಗುಲಾಬಿ ಎಂದರೇನೇ ಪ್ರೀತಿಗೆ ಮತ್ತೊಂದು ಸಂಕೇತ. ಅಂತರಾಳದ ಭಾವವನ್ನನು ವ್ಯಕ್ತಪಡಿಸಲು ಕೆಂಪು ಗುಲಾಬಿ ಒಂದು ಅದ್ಭುತ ಆಯ್ಕೆ.
ಗುಲಾಬಿ ಹೂವು ಹಲವು ಬಣ್ಣಗಳಲ್ಲಿ ಹಲವು ಸುಗಂಧಗಳಲ್ಲಿ ನಮಗೆ ಕಾಣ ಸಿಗುತ್ತವೆ. ಪ್ರೇಮಿಗಳ ದಿನದಂದು ಇವುಗಳ ಬೆಲೆ ಮುಗಿಲೆತ್ತರಕ್ಕೆ ಏರಿರುತ್ತವೆ. 20-30 ರೂಪಾಯಿಗೆ ಮಾರಾಟವಾಗುವ ಹೂವುಗಳು 100-200 ರೂಪಾಯಿಗೆ ತಲುಪುತ್ತವೆ. ಅದೆಷ್ಟೋ ಜನ ಪ್ರೀತಿ ವ್ಯಕ್ತಪಡಿಸಲು ಇಷ್ಟು ದುಡ್ಡು ಕೊಟ್ಟು ಈ ಹೂವು ಖರೀದಿಸಬೇಕಾ ಅಂತ ಗೊಣಗಿಯೂಕೊಂಡಿರುತ್ತಾರೆ. ಆದರೂ ಗುಲಾಬಿಯನ್ನು ಕೊಡುವುದು ಪ್ರೀತಿಯ ಪ್ರೀತಿಯ ಆಳದ ಒಂದು ಸಂಕೇತ.

ಇದನ್ನೂ ಓದಿ : ಕಮಲದ ಬೀಜಗಳು ಜಾಗತಿಕ ಸೂಪರ್ ಫುಡ್ ಆಗಿ ಬೆಳೆದಿದ್ದು ಹೇಗೆ?

ನೀವು ನೂರಾರು ರೂಪಾಯಿ ಕೊಟ್ಟು ನಿಮ್ಮ ಪ್ರೀತಿಗಾಗಿ ಗುಲಾಬಿಯನ್ನು ಈ ಹಿಂದೆ ಕೊಂಡಿರಬಹುದು. ಆದರೆ ನಿಮಗೆ ಗೊತ್ತಾ ಜಗತ್ತಿನಲ್ಲಿ ಅತ್ಯಂತ ದುಬಾರಿಯಾದ ಗುಲಾಬಿ ಹೂವು ಯಾವುದು ಅಂತ. ಅದರ ಬೆಲೆ ಎಷ್ಟು ಅಂತ. ಈ ವಿಶೇಷ ಗುಲಾಬಿಯನ್ನು ಖರೀದಿಸುದ ಹಣದಲ್ಲಿ ನೀವು ಒಂದು ಮನೆಯನ್ನು ಕೊಂಡುಕೊಳ್ಳಬಹುದು ಇಲ್ಲವೇ ಡೈಮಂಡ್ ರಿಂಗನ್ನು ಕೂಡ ಕೊಂಡುಕೊಳ್ಳಬಹುದು.

publive-image

ಯಾವುದು ಅದು ವಿಶ್ವದ ಅತ್ಯಂತ ದುಬಾರಿ ಗುಲಾಬಿ?
ವಿಶ್ವದ ಅತ್ಯಂತ ದುಬಾರಿ ಗುಲಾಬಿ ಹೂವು ಜ್ಯೂಲಿಯಟ್​ ರೋಸ್. ಇದು ಸಾಮಾನ್ಯ ಗುಲಾಬಿ ಹೂವುಗಳಂತೆ ಅಲ್ಲ. ಇದನ್ನು ಬೆಳೆಸುವುದು ಕೂಡ ಅಷ್ಟು ಸರಳವಲ್ಲ. ಇದನ್ನು ವಿಶೇಷ ಕಾಳಜಿಯೊಂದಿಗೆ ಬೆಳೆಯಬೇಕಾಗುತ್ತದೆ. ಇದು ಅತ್ಯಂತ ವಿರಳ ಮತ್ತು ಅಂದವಾದ ಗುಲಾಬಿ. ಇದನ್ನು ಜಗತ್ತಿಗೆ ಮೊದಲು ಪರಿಚಯಿಸಿದವನ ಹೆಸರು ಡೇವಿಡ್ ಆಸ್ಟೀನ್ ಅಂತ. ಈ ಒಂದು ವಿಶೇಷವಾದ ಹಾಗೂ ಜಗತ್ತಿನಲ್ಲಿ ವಿರಳವಾದ ಕ್ರಾಸ್​​ಬ್ರೀಡಿಂಗ್ ಗುಲಾಬಿಯನ್ನು ಸೃಷ್ಟಿಮಾಡಲು ಆತ ಸುಮಾರು 15 ವರ್ಷಗಳ ಕಾಲ ಶ್ರಮಿಸಿದ್ದ. ಈ ಜ್ಯೂಲಿಯಟ್ ರೋಸ್​ ತನ್ನ ಸೌಂದರ್ಯ ಮತ್ತು ವಿರಳತೆಯಿಂದಲೇ ಜನಪ್ರಸಿದ್ಧಿಗೊಂಡಿದೆ. 2006ರಲ್ಲಿ ಈ ಒಂದು ಗುಲಾಬಿ ಹೂವು ಸುಮಾರು 90 ಕೋಟಿ ರೂಪಾಯಿಗೆ ಮಾರಾಟವಾಗಿತ್ತು. ಅಂದೇ ಇದು ಜಗತ್ತಿನ ಅತ್ಯಂತ ದುಬಾರಿ ಗುಲಾಬಿ ಹೂವು ಎಂಬ ಹೆಸರು ಪಡೆದಿತ್ತು.

ಇದನ್ನೂ ಓದಿ:ಇದು ಜಗತ್ತಿನ ಅತ್ಯಂತ ದುಬಾರಿ ಶಾಪಿಂಗ್ ಬೀದಿ.. ಲಂಡನ್​, ಪ್ಯಾರಿಸ್ ಅಲ್ಲವೇ ಅಲ್ಲ.. ಎಲ್ಲಿದೆ ಇದು?

ಜ್ಯೂಲಿಯಟ್ ಗುಲಾಬಿ ಇಷ್ಟೊಂದು ದುಬಾರಿ ಏಕೆ ಅಂದರೆ ಅದಕ್ಕೆ ಕಾರಣ ಅದರ ಅಂದ. ಉಳಿದ ಗುಲಾಬಿ ಹೂವುಗಳಿಗಿಂತ ಇದು ವಿಶೇಷವಾದ ಪರಿಮಳವನ್ನು ಹೊಂದಿದೆ. ಇಂದಿಗೂ ಕೂಡ ಇದು ಅತ್ಯಂತ ದುಬಾರಿ ಹೂವುಗಳಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ. ಇದರ ಇನ್ನೊಂದು ವಿಶೇಷ ಸಂಗತಿ ಎಂದರೆ ಇದು ಸುಮಾರು 3 ವರ್ಷಗಳ ಕಾಲ ತನ್ನ ತಾಜಾತನವನ್ನ ಹಾಗೂ ರೋಮಾಂಚಕತೆಯನ್ನು ಉಳಿಸಿಕೊಳ್ಳುವುದು. ಇದು ಅಷ್ಟು ಸರಳವಾಗಿ ಬಾಡಿ ಹೋಗುವ ಗುಲಾಬಿಯಲ್ಲ.

ಜ್ಯೂಲಿಯಟ್ ರೋಸ್ ಹೊರತುಪಡಿಸಿ ಮತ್ಯಾವುದಾದರು ದುಬಾರಿ ಹೂವು ಇದ್ದರೆ ಅದು ಶ್ರೀಲಂಕಾದ ಕಡುಪುಲ ಹೂವು. ಇದು ಕೇವಲ ಶ್ರೀಲಂಕಾದಲ್ಲಿ ಮಾತ್ರ ದೊರೆಯುತ್ತದೆ. ಈ ವಿಶೇಷವಾದ ಹೂವು ಕೇವಲ ರಾತ್ರಿ ಸಮಯದಲ್ಲಿ ಮಾತ್ರ ಅರಳುತ್ತದೆ. ವಿಶ್ವದಲ್ಲಿ ಒಟ್ಟು 150 ತರಹದ ಗುಲಾಬಿ ಹೂವುಗಳು ಇವೆ. ಪ್ರತಿಯೊಂದು ತನ್ನ ಅಂದ ಮತ್ತು ಸುಗಂಧದಿಂದ ಗುರುತಿಸಿಕೊಳ್ಳುತ್ತವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment