/newsfirstlive-kannada/media/post_attachments/wp-content/uploads/2025/03/EXPENSIVE-TEAPOT.jpg)
ಚಹಾ ವಿಶ್ವದ ಅತ್ಯಂತ ಜನಪ್ರಿಯ ಪೇಯಗಳಲ್ಲಿ ಒಂದು. ಅದರಲ್ಲೂ ಏಷಿಯನ್ ರಾಷ್ಟ್ರಗಳಲ್ಲಿರುವ ಚಹಾ ಕುಡಿಯುವ ಕ್ರೇಜ್ ಬೇರೆಲ್ಲೂ ನಮಗೆ ಕಾಣಸಿಗುವುದಿಲ್ಲ. ಇತಿಹಾಸಕಾರರು ಹೇಳುವ ಪ್ರಕಾರ ಚೀನಾ ಸಾಮ್ರಾಜ್ಯ ಕ್ರಿ.ಪೂ 2737ರಲ್ಲಿ ಈ ಚಹಾ ಎಲೆಯ ಉಪಯೋಗವನ್ನು ಕಂಡು ಹಿಡಿದಿದ್ದು ಎಂದು ಹೇಳಲಾಗುತ್ತದೆ. ಆ ಕಾಲದಿಂದಿಂದ ಇಂದಿನವರೆಗೂ ಚಹಾ ಏಷಿಯಾದ ಅತಿಮುಖ್ಯ ಪೇಯವಾಗಿ ಜನರಲ್ಲಿ ಗುರುತಿಸಿಕೊಂಡಿದೆ.
ವಿಶ್ವ ಮಾರುಕಟ್ಟೆಯಲ್ಲಿ ನಮಗೆ ಹಲವು ವಿಧವಾದ ಚಹಾ ಪುಡಿಗಳು ಕಾಣ ಸಿಗುತ್ತವೆ. ಸಾವಿರ ರೂಪಾಯಿಗೆ ಕೆಜಿಯಿಂದ ಹಿಡಿದು ಲಕ್ಷ ರೂಪಾಯಿ ಕೆಜಿಯವರೆಗೂ ಚಹಾಪುಡಿಗಳು ಸಿಗುತ್ತವೆ. ಇದರೊಂದಿಗೆ ಚಹಾದ ಲೋಟ ಹಾಗೂ ಚಹಾದ ಪಾಟ್​ ಕೂಡ ತಮ್ಮ ವಿಭಿನ್ನ ವಿನ್ಯಾಸಗಳಿಂದ ಪ್ರಸಿದ್ಧಿಯನ್ನು ಪಡೆದಿವೆ. ಆದ್ರೆ ನಿಮಗೆ ಗೊತ್ತಾ ಜಗತ್ತಿನ ಅತ್ಯಂತ ದುಬಾರಿ ಟೀಪಾಟ್ ಯಾವುದು ಅಂತ? ಅದನ್ನು ದಿ ಈಗೋಯಿಸ್ಟ್​ ಎಂಬ ಹೆಸರಿನಿಂದ ಕರೆಯುತ್ತಾರೆ.
/newsfirstlive-kannada/media/post_attachments/wp-content/uploads/2025/03/EXPENSIVE-TEAPOT-1.jpg)
ದಿ ಈಗೋಯಿಸ್ಟ್​
ಈ ಹೊಳೆಯುವ ಟೀಪಾಟ್​ ವಿಶ್ವದ ಅತ್ಯಂತ ದುಬಾರಿ ಟೀಪಾಟ್ ಎಂಬ ವಿಶ್ವದಾಖಲೆಯನ್ನು ಬರೆದಿದೆ. 2016ರಿಂದಲೂ ಈ ದಾಖಲೆ ದಿ ಈಗೋಯಿಸ್ಟ್ ಟೀಪಾಟ್ ಹೆಸರಲ್ಲಿಯೇ ಇದೆ. ಇದನ್ನು ನಿರ್ಮಾಣ ಮಾಡಿದ್ದು ಯುಕೆದ ಎನ್ ಸೇಥಿಯಾ ಫೌಂಡೇಷನ್. ಇಂತಹದೊಂದು ಸುಂದರ ಪಾತ್ರೆಯನ್ನು ಅದ್ಭುತವಾಗಿ ವಿನ್ಯಾಸಗೊಳಿಸಿದೆ ಸೇಥಿಯಾ ಫೌಂಡೇಶನ್.
/newsfirstlive-kannada/media/post_attachments/wp-content/uploads/2025/03/EXPENSIVE-TEAPOT-2.jpg)
ಈ ಒಂದು ಚಹಾ ಪಾತ್ರೆ ಬಂಗಾರ ಹಾಗೂ ಬೆಳ್ಳಿಯಿಂದ ತಯಾರಿ ಮಾಡಲಾಗಿದೆ. ಇದು ಮಾತ್ರವಲ್ಲ. ಇಡೀ ಟೀ ಪಾಟ್​ ಸುತ್ತಲೂ 1,658 ವಜ್ರಗಳನ್ನು ಹೊದಿಸಲಾಗಿದೆ. ಇದರ ಜೊತೆಗೆ ಸುಮಾರು 386 ಮಾಣಿಕ್ಯಗಳನ್ನು ಕೂಡ ಪಾತ್ರೆಯಲ್ಲಿ ಅಂಟಿಸಲಾಗಿದೆ. ಈ ಅತ್ಯಮೂಲ್ಯ ಮಾಣಿಕ್ಯಗಳನ್ನು ಥೈಲ್ಯಾಂಡ್ ಹಾಗೂ ಬರ್ಮಾ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ. ಸದ್ಯ ಗಿನ್ನಿಸ್ ಬುಕ್​ ಆಫ್​ ವರ್ಲ್ಡ್​ ರೆಕಾರ್ಡ್​ನಲ್ಲಿ ಸ್ಥಾನ ಪಡೆದಿರುವ ಈ ಟೀ ಪಾತ್ರೆ ಭಾರತೀಯ ಮೂಲದ ಎನ್ ಸೇಥಿಯಾ ಅವರ ಫೌಂಡೇಷನ್​​ನಿಂದ ತಯಾರಾಗಿದೆ. ಇನ್ನು ಇದರ ಬೆಲೆ ಕೇಳಿದ್ರೆ ಎಲ್ಲರೂ ಒಮ್ಮೆ ಬೆಚ್ಚಿ ಬೀಳುವುದಂತೂ ಗ್ಯಾರಂಟಿ. ಈ ಒಂದು ಟೀಪಾಟ್​ನ ಬೆಲೆ ಬರೋಬ್ಬರಿ 26 ಕೋಟಿ ರೂಪಾಯಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us