ವಿಶ್ವದಲ್ಲೇ ಅತ್ಯಂತ ದುಬಾರಿ ನೀರಿನ ಬಾಟಲ್ ಕಣ್ರೀ ಇದು.. ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!

author-image
Gopal Kulkarni
Updated On
ವಿಶ್ವದಲ್ಲೇ ಅತ್ಯಂತ ದುಬಾರಿ ನೀರಿನ ಬಾಟಲ್ ಕಣ್ರೀ ಇದು.. ಇದರ ಬೆಲೆ ಸಾವಿರ ಅಲ್ಲ ಲಕ್ಷ, ಲಕ್ಷ!
Advertisment
  • ಇದು ವಿಶ್ವದ ಅತ್ಯಂತ ದುಬಾರಿ ಕುಡಿಯುವ ನೀರಿನ ಬಾಟಲ್​
  • ಇದರ ಬೆಲೆ ಅನೇಕ ಐಟಿ ಉದ್ಯೋಗಿಗಳ ತಿಂಗಳ ಸಂಬಳಕ್ಕೆ ಸಮ
  • ಜಪಾನ್​ನಲ್ಲಿ ಸಿದ್ಧಗೊಂಡಿರುವ ಈ ನೀರಿನ ಬಾಟಲ್ ಬೆಲೆ ಎಷ್ಟು?

ನೀರು ಜಗತ್ತಿನ ಎಲ್ಲಾ ಜೀವುಗಳಿಗೂ ಬೇಕಾದಂತಹ ಮೂಲಭೂತ ಸೌಕರ್ಯಗಳಲ್ಲಿ ಒಂದು. ನೀರು ಇಲ್ಲದೇ ಜಗತ್ತನ್ನು, ಜೀವ ಸಂಕುಲಗಳನ್ನು ಊಹಿಸಲು ಕೂಡ ಆಗುವುದಿಲ್ಲ. ಮನುಷ್ಯನ ದೇಹವೇ ಶೇಕಡಾ 60 ರಷ್ಟು ನೀರಿನಿಂದ ತುಂಬಿದೆ. ಇದು ಇಡೀ ದೇಹದ ಕಾರ್ಯವ್ಯವಸ್ಥೆಗೆ ಅತ್ಯಗತ್ಯವಾದದ್ದು. ಕೃಷಿಯಿಂದ ಹಿಡಿದು ಆಹಾರ ತಯಾರಾಗುವವರೆಗೂ ನಮಗೆ ನೀರು ಬೇಕೇಬೇಕು.

ಜಗತ್ತಿನ ಎಲ್ಲೆಡೆಯೂ ಕೂಡ ನೀರು ಸಿಗುತ್ತದೆ. ನಲ್ಲಿಯಲ್ಲಿಯೇ ನಿತ್ಯ ನೀರು ಬಂದರು ಕೂಡ, ಕುಡಿಯಲು ಯೋಗ್ಯವಾದ ಅದು ಕುಡಿಯಲು ಯೋಗ್ಯವಾಗಿದೆಯಾ ಎಂಬ ಪ್ರಶ್ನೆ ಮೂಡುತ್ತದೆ. ಒಂದು ಕಾಲದಲ್ಲಿ ಬಾಟಲಿಯಲ್ಲಿ ನೀರು ಮಾರಾಟವಾಗುತ್ತಿದೆ ಎಂದಾಗ ಅನೇಕರು ಹಾಸ್ಯ ಮಾಡಿದ್ದರು. ನೀರನ್ನು ಮಾರುವುದಾ ಎಂದು ಅಚ್ಚರಿ ವ್ಯಕ್ತಪಡಿಸಿದ್ದರು. ಈಗ ಎಲ್ಲರೂ ಹೆಚ್ಚಾಗಿ ಬಾಟಲ್ ನೀರನ್ನೇ ಅವಲಂಬಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಪ್ರಯಾಣ ಮಾಡುವಾಗ ನೀರಿನ ಬಾಟಲ್ ಇಲ್ಲದೇ ಪ್ರಯಾಣ ಸಂಪೂರ್ಣವಾಗುವುದಿಲ್ಲ. ಆರೋಗ್ಯದ ವಿಚಾರವಾಗಿ ಶುದ್ಧ ನೀರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತೇವೆ. ಇದೇ ಈಗ ಹಲವಾರು ನೀರಿನ ಬಾಟಲ್ ಬ್ರ್ಯಾಂಡ್​ಗಳು ಮಾರುಟ್ಟೆಗೆ ಬರಲು ಕಾರಣವಾಗಿವೆ. ಅದರಲ್ಲೂ ವಿಶ್ವದ ಅತ್ಯಂತ ದುಬಾರಿ ನೀರಿನ ಬಾಟಲಿಗಳು ಕೂಡ ಮಾರುಕಟ್ಟೆಗೆ ಬರುತ್ತಿವೆ.

ಇದನ್ನೂ ಓದಿ:ಜೀವಕ್ಕೆ ಸಂಚಕಾರ ತರುತ್ತೆ ಟೀ, ಕಾಫಿ! ಕುಡಿಯುವಾಗ ಇರಲಿ ಈ ಎಚ್ಚರ! ಸತ್ಯ ಬಿಚ್ಚಿಟ್ಟ ಆರೋಗ್ಯ ಇಲಾಖೆ

ವಿರಾಟ್ ಕೊಹ್ಲಿ ಕುಡಿಯುವ ನೀರು, ಅಂಬಾನಿ ಮನೆಯಲ್ಲಿ ಕುಡಿಯುಲು ಬಳಸುವ ನೀರಿನ ದರಗಳು ಅನೇಕ ಬಾರಿ ಚರ್ಚೆಯ ವಿಷಯವಾಗಿವೆ. ಆದ್ರೆ ಈಗ ಒಂದು ಬ್ರ್ಯಾಂಡ್ ಪರಿಶುದ್ಧ ನೀರಿನ ವಿಚಾರದಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಫಿಲ್ಲಿಕೊ ಜ್ಯವೆಲರಿ ವಾಟರ್​ ಎಂಬ ಕುಡಿಯುವ ನೀರಿನ ಬಾಟಲಿ ಈಗ ಮಾರುಕಟ್ಟೆಯಲ್ಲಿ ದೊಡ್ಡ ಹವಾ ಸೃಷ್ಟಿಸಿದೆ. ಇದರ ಒಂದು ಬಾಟಲಿ ಅಂದ್ರೆ ಒಂದು ಲೀಟರ್ ಬಾಟಲಿಯ ಬೆಲೆ 1 ಲಕ್ಷ 16 ಸಾವಿರ ರೂಪಾಯಿ. ಇದನ್ನು ಈಗ ವಿಶ್ವದ ಅತ್ಯಂತ ದುಬಾರಿ ಕುಡಿಯುವ ನೀರಿನ ಬಾಟಲ್ ಎಂದು ಗುರುತಿಸಲಾಗುತ್ತದೆ. ಇದು ಕೇವಲ ಪರಿಶುದ್ಧ ನೀರಿಗಾಗಿ ಮಾತ್ರ ಹೆಸರು ಮಾಡಿಲ್ಲ. ಅದರ ಲ್ಯಾವಿಶ್ ಪ್ಯಾಕಿಂಗ್​ನಿಂದಲೂ ಕೂಡ ದೊಡ್ಡ ಹೆಸರು ಮಾಡಿದೆ. ಈ ಒಂದು ಬಾಟಲಿಯನ್ನು ಸ್ವರೊಸ್ಕಿ ಹರುಳುಗಳಿಂದ ಅಲಂಕರಿಸಲಾಗಿದೆ. ಅದ್ಭುತ ಆಭರಂಣಗಳನ್ನು ಹೋಲುವಂತೆ ವಿನ್ಯಾಸಗೊಳಿಸಲಾಗಿದೆ. ಒಂದೊಂದು ಬಾಟಲಿಯೂ ಕೂಡ ಐಷಾರಾಮಿ ಗುರುತಾಗಿ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ:₹23 ಕೋಟಿ, 1 ಕೆಜಿ ಚಿನ್ನ​, ಬೆಳ್ಳಿ ಪಿಸ್ತೂಲ್ ಮತ್ತು ಬೇಡಿ! ಯಾವ ದೇವರಿಗೆ ಇಷ್ಟು ದಾನ ಬಂದಿದೆ ಗೊತ್ತಾ?

ಫೆಲ್ಲಿಕೊ ಜುವೆಲ್ಲರಿ ವಾಟರ್ ಬಾಟಲ್ ಮೂಲತಃ ಜಪಾನ್​ನ ಕೊಬೆ ಸಿಟಿಯಲ್ಲಿ ತಯಾರಾಗುತ್ತದೆ. ಈ ಒಂದು ನೀರಿನ ಬಾಟಲ್ ತನ್ನ ಪರಿಶುದ್ಧತೆಯಿಂದಲೇ ಹೆಸರು ಮಾಡಿದೆ. ಅದರಲ್ಲೂ ಬಾಟಲಿ ಡಿಸೈನ್ ಮಾಡಿದ ರೀತಿಯೂ ಕೂಡ ಅದ್ಭುತವಾಗಿದೆ. ಈ ಬಾಟಲಿಯನ್ನು ಸೂಕ್ಷ್ಮವಾಗಿ ಕರಕುಶಲತೆಯಿಂದ ತಯಾರಿಸಲಾಗಿದೆ. ಅಲ್ಲಲ್ಲಿ ಅಲಂಕಾರಕ್ಕಾಗಿ ಚಿನ್ನವನ್ನು ಕೂಡ ಬಳಸಲಾಗಿದೆ. ಇದು ಜಪಾನಿಗರ ಕರಕುಶಲತೆ ಹಾಗೂ ಹೊಸ ಆವಿಷ್ಕಾರಗಳಿಗೆ ಹೊಸ ಸಾಕ್ಷಿಯಾಗಿ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment