ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಜಗತ್ತು! ಈ ವಿವಾಹಕ್ಕೆ ಖರ್ಚಾಗಲಿರುವ ಹಣ ಎಷ್ಟು ಗೊತ್ತಾ?

author-image
Gopal Kulkarni
Updated On
ಅತ್ಯಂತ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಜಗತ್ತು! ಈ ವಿವಾಹಕ್ಕೆ ಖರ್ಚಾಗಲಿರುವ ಹಣ ಎಷ್ಟು ಗೊತ್ತಾ?
Advertisment
  • ಅತ್ಯಂತ ಅದ್ಧೂರಿ ಹಾಗೂ ದುಬಾರಿ ಮದುವೆಗೆ ಸಾಕ್ಷಿಯಾಗಲಿದೆ ಇಡೀ ವಿಶ್ವ
  • ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ವಿಶ್ವದ ಕೋಟ್ಯಾಧಿಪತಿ
  • 61 ವರ್ಷದ ಈ ವ್ಯಕ್ತಿ ವರಿಸಲಿದ್ದಾರೆ 55 ವರ್ಷದ ತನ್ನ ಬಹುದಿನಗಳ ಗೆಳತಿಯನ್ನ

ವಿಶ್ವದಲ್ಲಿಯೇ ಅತ್ಯಂತ ಅದ್ಧೂರಿ ಹಾಗೂ ದುಬಾರಿ ಮದುವೆಯೊಂದಕ್ಕೆ ಸದ್ಯದಲ್ಲಿಯೇ ಜಗತ್ತಿ ಸಾಕ್ಷಿಯಾಗಿ ನಿಲ್ಲಲಿದೆ. ಈ ಮದುವೆಗೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಲಿದೆ. ವಿಶ್ವದ ದೊಡ್ಡ ದೊಡ್ಡ ಗಣ್ಯರು ಈ ವಿವಾಹಕ್ಕೆ ಸಾಕ್ಷಿಯಾಗಲಿದ್ದಾರೆ. ಅದು ಯಾರ ಮದುವೆ ಅಂತ ಗೊತ್ತಾ? ಸದ್ಯದಲ್ಲಿಯೇ ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ವಿಶ್ವದ ಕೋಟ್ಯಾಧಿಪತಿಗಳಲ್ಲಿ ಒಬ್ಬರಾದ ಆ ಶ್ರೀಮಂತ ವ್ಯಕ್ತಿ ಯಾರು?

ಇದನ್ನೂ ಓದಿ:ಇವು ಅಮೆರಿಕಾದ 5 ಅತ್ಯಂತ ದುಬಾರಿ ಕಾಲೇಜ್​! ಇಲ್ಲಿ ಕಲಿಯಲು ನೀವು ಎಷ್ಟು ಕೋಟಿ ಖರ್ಚು ಮಾಡಬೇಕು ಗೊತ್ತಾ?

ಜೆಫ್ ಬೆಜೋಸ್, ಅಮೆಜಾನ್​​ನ ಸಂಸ್ಥಾಪಕ ಕಳೆದ ಹಲವು ವರ್ಷಗಳಿಂದ ಜಾಗತಿಕವಾಗಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಲೇ ಇದ್ದಾರೆ. ಪ್ರತಿಯೊಂದು ಪತ್ರಿಕೆಗಳ ಹೆಡ್​ಲೈನ್ ಆಗುತ್ತಿದ್ದಾರೆ. ಈಗ ಜೆಫ್ ಬೆಜೋಸ್​ಗೆ ಸಂಬಂಧಿಸಿದ ಮತ್ತೊಂದು ಸುದ್ದಿ ಜಾಗತಿಕವಾಗಿ ದೊಡ್ಡದಾಗಿ ಸದ್ದು ಮಾಡುತ್ತಿದೆ. ಅದು ಅವರ ಎರಡನೇ ವಿವಾಹ. 61 ಜೆಫ್ ಬೆಜೋಸ್ ತನ್ನ 55 ವರ್ಷದ ಫಿಯಾನ್ಸೆ ಲಾರೆನ್ ಸ್ಯಾಂಚೆಜ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಎಲ್ಲ ರೀತಿಯ ಸಿದ್ಧತೆಗಳು ಈಗ ನಡೆದಿವೆ.

publive-image

ಜೂನ್ 26 ರಂದು ಇಟಲಿಯಲ್ಲಿ ಈ ಜೋಡಿ ದಂಪತಿಗಳಾಗಿ ಒಂದಾಗಲಿದ್ದಾರೆ. ಈ ಮದುವೆ ವಿಶ್ವದಲ್ಲಿಯೇ ಅತ್ಯಂತ ಅದ್ಧೂರಿ ಹಾಗೂ ದುಬಾರಿ ಮದುವೆ ಎಂದೆನೆಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಅದ್ಧೂರಿತನಕ್ಕೆ ಮತ್ತೊಂದು ಹೆಸರಾಗಿರುವ ಇಟಲಿಯ ವೆನಿಸ್​ನಲ್ಲಿ ಈ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಡಲಿವೆ. ಈ ಮದುವೆಗೆ ಸುಮಾರು 4 ಸಾವಿರ ಕೋಟಿ ರೂಪಾಯಿ ಖರ್ಚಾಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಈ ಮದುವೆಗೆ ಹಾಲಿವುಡ್​ನ ಬಿಗ್​ ಸ್ಟಾರ್​ಗಳ ಜೊತೆ ಜಗತ್ತಿನ ಅನೇಕ ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಈ 7 ಪ್ರಾಣಿಗಳನ್ನು ಸ್ಮರಿಸದೇ ಜಗತ್ತಿನ ಇತಿಹಾಸ ಸಂಪೂರ್ಣ ಆಗುವುದಿಲ್ಲ! ಮರೆಯಲಾದೀತೆ ಇವುಗಳ ತ್ಯಾಗ?

publive-image

ಡೈಲಿ ಮೇಲ್ ವರದಿ ಮಾಡಿರುವ ಪ್ರಕಾರ ವೆನಿಸ್​​ನ ಅತಿದೊಡ್ಡ ಎರಡು ಐಷಾರಾಮಿ ಹೋಟೆಲ್​ಗಳಾದ ಗ್ರಿಟ್ಟಿ ಪ್ಯಾಲೇಸ್ ಮತ್ತು ಅಮನ್ ವೆನಿಸ್​ ಈಗಾಗಲೇ ಸಂಪೂರ್ಣವಾಗಿ ಮದುವೆಯ ದಿನದಂದು ಬುಕ್ ಮಾಡಲಾಗಿದೆಯಂತೆ. ಮದುವೆಗೆ ಬರುವ ಗಣ್ಯ ಅತಿಥಿಗಳು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಹೋಟೆಲ್​ಗಳ ರೂಮ್​​ ರೇಟ್​ ದಿನಕ್ಕೆ 3200 ಯುಎಸ್ ಡಾಲರ್ ಎಂದು ಹೇಳಲಾಗುತ್ತಿದೆ. ಅಂದರೆ ಭಾರತ ರೂಪಾಯಿಗಳ ಲೆಕ್ಕದಲ್ಲಿ ದಿನಕ್ಕೆ 2,74,114 ರೂಪಾಯಿ.

publive-image

ವೆನಿಸ್​ನ ಮೂಲಗಳು ತಿಳಿಸಿರುವ ಪ್ರಕಾರ ಈ ಅದ್ಧೂರಿ ಹಾಗೂ ದುಬಾರಿ ಮದುವೆಗೆ 2 ಸಾವಿರ ಪ್ರಮುಖ ಗಣ್ಯ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗುತ್ತದೆಯಂತೆ. ಇದರಲ್ಲಿ ಕೆಲವು ದೊಡ್ಡ ದೊಡ್ಡ ಹೆಸರುಗಳು ಕೂಡ ಕೇಳಿ ಬರುತ್ತಿವೆ. ಅಮೆರಿಕಾದ ಅಧ್ಯಕ್ಷ ಟ್ರಂಪ್ ಕುಟುಂಬದ ಸದಸ್ಯರು. ಒರ್ಲ್ಯಾಂಡ್ ಬ್ಲೂಮ್, ಕಟಿ ಪೆರಿಽ ಜೊರ್ಡಾನ್​ನ ಕ್ವೀನ್ ರಾನಿಯಾ ಸೇರಿ ಹಲವು ಗಣ್ಯರು ಭಾಗಿಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ:15 ದೇಶಗಳಿಗೆ ಡಬಲ್ ಶಾಕ್‌ ಕೊಟ್ಟ ಡೊನಾಲ್ಡ್ ಟ್ರಂಪ್ ಸುಂಕ; ಭಾರತಕ್ಕೆ ಎಷ್ಟು ನಷ್ಟ?

ಆದರೆ ಇಲ್ಲಿಯವರೆಗೆ ತಾವು ಮದುವೆಯಾಗುತ್ತಿರುವುದರ ಬಗ್ಗೆ ಜೋಡಿಯಿಂದ ಯಾವುದೇ ಅಧಕೃತವಾದ ಹೇಳಿಕೆಗಳು ಬಂದಿಲ್ಲ. ಆದರೆ ಅವರ ಅಹ್ವಾನ ಪತ್ರಿಕೆ ಸದ್ಯ ಸೋಷಿಯಲ್ ಮೀಡಿಯಾಲ್ಲಿ ಭಾರೀ ವೈರಲ್ ಆಗಿದ್ದು. ಕುತೂಹಲಕ್ಕೆ ಮತ್ತಷ್ಟು ಇಂಧನವನ್ನು ಒದಗಿಸಿವೆ. ಆದರೆ ಅಂತಾರಾಷ್ಟ್ರೀಯ ಮಾಧ್ಯಗಮಗಳು ವರದಿ ಮಾಡಿರುವ ಪ್ರಕಾರ ಈ ಜೋಡಿ ಜೂನ್ 26 ರಂದು ದಾಂಪತ್ಯಕ್ಕೆ ಜೀವನಕ್ಕೆ ಕಾಲಿಡುವುದು ಪಕ್ಕಾ. ಇದು ವಿಶ್ವದ ಅತ್ಯಂತ ಅದ್ಧೂರಿ ಹಾಗೂ ದುಬಾರಿ ಮದುವೆಯಾಗಿ ಇತಿಹಾಸ ಬರೆಯುವುದು ನಿಶ್ಚಿತ ಎನ್ನುತ್ತಿವೆ. ಮುಖೇಶ್​ ಅಂಬಾನಿ ಪುತ್ರ ಅನಂತ್ ಅಂಬಾನಿಯ ಮದುವೆಗೆ ಒಟ್ಟು 5 ಸಾವಿರ ಕೋಟಿ ರೂಪಾಯಿ ಖರ್ಚಾಗಿತ್ತು. ಈ ಮದುವೆ ಅದನ್ನೂ ಮೀರಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment