/newsfirstlive-kannada/media/post_attachments/wp-content/uploads/2025/03/AGARWOOD-5.jpg)
ವಿಶ್ವದಲ್ಲಿ ಒಂದು ಮರದ ತುಂಡಿದೆ. ಅದಕ್ಕೆ ಜಗತ್ತಿನಲ್ಲಿ ವಜ್ರ ಹಾಗೂ ಬಂಗಾರಕ್ಕಿಂತ ಇದರ ಬೆಲೆ ದುಬಾರಿ. ಅದರ ಹೆಸರು ಅಗರವುಡ್. ಇದನ್ನು ವಿಶ್ವದಲ್ಲಿ Woods Of God ಎಂದು ಕರೆಯುತ್ತಾರೆ. ಅಂದ್ರೆ ಕಟ್ಟಿಗೆಗಳ ದೇವರು ಎಂದು ಕರೆಯಲಾಗುತ್ತದೆ. ಕಾರಣ ಇದಕ್ಕೆ ಜಾಗತಿಕವಾಗಿ ಇರುವ ಬೆಲೆ ಮತ್ತು ಬೇಡಿಕೆ. ಇದರ ಬೆಲೆ ಕೇಳಿದ್ರೆ ಎಂತವರೂ ಕೂಡ ಒಂದು ಕ್ಷಣ ಹೈರಾಣಾಗಿ ಹೋಗುತ್ತಾರೆ. ಕಾರಣ ಈ ಮರದ ಕಟ್ಟಿಗೆಗೆ ಇರುವ ಬೇಡಿಕೆ ಹಾಗೂ ಇದು ಹಲವು ಪದಾರ್ಥಗಳ ಉತ್ಪಾದನೆಗೆ ಸಹಾಯಕವಾಗುವ ಗುಣ. ಇದೇ ಕಾರಣದಿಂದ ಈ ಕಟ್ಟಿಗೆ ಬೆಲೆ ಸಿಕ್ಕಾಪಟ್ಟೆ ದುಬಾರಿ.
ಶ್ರೀಗಂಧದ ಮರದ ಕಟ್ಟಿಗೆಗೆ ಹೆಚ್ಚು ಬೆಲೆ ಎಂದು ಇಷ್ಟು ದಿನ ಅನೇಕರು ಅಂದುಕೊಂಡಿದ್ದಿರಬಹುದು. ಅದು ಸಹಜ ಕೂಡ. ಅದರೆ ಈ ಅಗರವುಡ್ ಕಟ್ಟಿಗೆಗೆ ಅದಕ್ಕಿಂತ ಹೆಚ್ಚಿನ ಬೆಲೆ ಇದೆ. ಕಾರಣ ಇದನ್ನು ಪರ್ಫ್ಯೂಮ್, ಅಗರಬತ್ತಿ ಮತ್ತು ಔಷಧಿಗಳಿಗಾಗಿ ಉಪಯೋಗಿಸಲಾಗುತ್ತದೆ. ಈ ಮೂರು ಉತ್ಪಾದನಾ ಕ್ಷೇತ್ರಗಳಲ್ಲಿ ಇದಕ್ಕೆ ತುಂಬಾ ಬೇಡಿಕೆ ಇದೆ ಹೀಗಾಗಿ ಇದನ್ನು ಕಟ್ಟಿಗೆಗಳ ದೇವರು ಎಂದು ಕರೆಯುತ್ತಾರೆ.
ಈ ಅಗರವುಡ್ಗೆ ಒಂದು ಕೆಜಿಯ ಬಲೆ ಸುಮಾರು 1 ಲಕ್ಷ ಡಾಲರ್ ಅಂದ್ರೆ, 73.5 ಲಕ್ಷ ರೂಪಾಯಿ ಪ್ರತಿ ಕೆಜಿಗೆ ದೊರೆಯುತ್ತದೆ. ಈ ಕಟ್ಟಿಗೆಯ ಮರವನ್ನು ದಕ್ಷಿಣ ಪೂರ್ವ ಏಷಿಯಾ, ಚೀನಾ, ಅರಬ್ ಮತ್ತು ಭಾರತದ ಕಾಡುಗಳಲ್ಲಿ ನಾವು ಕಾಣಬಹುದು. ಭಾರತದಲ್ಲಿ ಅಸ್ಸಾಂನ್ನು ಭಾರತದ ಅಗರ್ವುಡ್ ಫ್ಯಾಕ್ಟರಿ ಅಂತಲೇ ಕರೆಯುತ್ತಾರೆ. ಭಾರತದಲ್ಲಿ ಅತಿಹೆಚ್ಚು ಅಗರವುಡ್ ಮರಗಳು ಹೆಚ್ಚು ಕಂಡು ಬರುತ್ತವೆ. ಇದಕ್ಕೆ ಇರುವ ಬೆಲೆಯಿಂದಾಗಿ ಇದನ್ನು ವಿಶ್ವದ ಅತಿಹೆಚ್ಚು ದುಬಾರಿ ಮರದ ಕಟ್ಟಿಗೆ ಎಂದು ಕರೆಯುತ್ತಾರೆ.
ಇದನ್ನೂ ಓದಿ:ಬ್ಯಾಂಕಾಕ್‌ನಲ್ಲಿ ಪ್ರಬಲ ಭೂಕಂಪ, ಕಟ್ಟಡಗಳ ಕುಸಿತ.. ಭಾರತೀಯರಿಗಾಗಿ ಸಹಾಯವಾಣಿ ಆರಂಭ
ಹಾಗಂತ ಈ ಮರಗಳನ್ನು ಎಲ್ಲಿ ಬೇಕಂದರಲ್ಲಿ, ಹೇಗೆ ಬೇಕಂದರೆ ಹಾಗೆ ಬೆಳೆಯಲು ಸಾಧ್ಯವಿಲ್ಲ. ಇದನ್ನು ಬೆಳೆಯುವ ಪ್ರಕ್ರಿಯೆಯೇ ತುಂಬಾ ಜಟಿಲವಾಗಿದೆ. ಅಕ್ವಿಲೇರಿಯಾ ಮರವನ್ನು ಸೀಳಿ ಅದರಲ್ಲಿ ಒಂದು ವಿಶೇಷ ಶೀಲಿಂದ್ರವನ್ನು ಹಾಕಲಾಗುತ್ತದೆ. ಮರ ಈ ಫಂಗಸ್ನ್ನು ಅಪಾಯಕಾರಿ ಎಂದು ತಿಳಿದು ತನ್ನ ರಕ್ಷಣೆಗೊಸ್ಕರ ಗಾಢ ಕಪ್ಪು ರಾಳವನ್ನು ಸೃಷ್ಟಿ ಮಾಡುತ್ತದೆ. ಇದೇ ಮುಂದೆ ಹಂತ ಹತವಾಗಿ ಅಗರವುಡ್ ಆಗಿ ಬದಲಾಗುತ್ತಾ ಹೋಗುತ್ತದೆ. ಈ ಒಂದು ಪ್ರಕ್ರಿಯೆಗೆ ಅನೇಕ ವರ್ಷಗಳೇ ಬೇಕಾಗುತ್ತದೆ. ಇದಾದ ಬಳಿಕೆವೇ ಮರದ ಕಟ್ಟಿಗೆಯನ್ನು ಕೊರೆದು ಹೊರಕ್ಕೆ ತರಲಾಗುತ್ತದೆ. ಈ ಪ್ರಕ್ರಿಯೆಯ ಖರ್ಚು ಕೂಡ ದುಬಾರಿಯೇ ಆದರೆ ಅದಕ್ಕೆ ಸಿಗುವ ಪ್ರತಿಫಲವೂ ಕೂಡ ಹೆಚ್ಚೆ ಇರುತ್ತದೆ.
ಇದನ್ನೂ ಓದಿ: ಕೈದಿಯಾಗಿ ಬಂದವಳು.. ಮೊಘಲ್ ಸಾಮ್ರಾಜ್ಯದ ಮಹಾ ಸಾಮ್ರಾಜ್ಞಿನಿಯಾಗಿ ಬೆಳೆದಳು ! ಇದು ನಿಜಕ್ಕೂ ಒಂದು ರೋಚಕ ಕಥೆ
ಈ ಒಂದು ಮರದ ತುಂಡಿನಲ್ಲಿರುವ ಪರಿಮಳ ಇನ್ಯಾವ ಮರದಲ್ಲೂ ನಮಗೆ ಕಾಣಸಿಗುವುದಿಲ್ಲ. ಇದನ್ನು ಸುಟ್ಟರು ಕೂಡ ಸುಗಂಧವಾದ ವಾಸನೆ ಅದರಿಂದ ಹೊರಹೊಮ್ಮುತ್ತದೆ. ಒಂದು ಕೋಣೆಯಲ್ಲಿ ಈ ಕಟ್ಟಿಗೆಯನ್ನು 4 ರಿಂದ 5 ಗಂಟೆಗಳವರೆಗೂ ಇಟ್ಟರೆ ಇಡೀ ಕೋಣೆಯೇ ತುಂಬಾ ಸೌಂಗಧದಿಂದ ತುಂಬಿರುತ್ತದೆ. ಇದರ ಪರಿಮಳದ ಮುಂದೆ ಯಾವು ಸುಗಂಧದ್ರವ್ಯವೂ ಕೂಡ ಸಮವಾಗುವದಿಲ್ಲ. ಇದರಿಂದಾಗಿ ಈ ಮರಕ್ಕೆ ಜಗತ್ತಿನಲ್ಲಿ ಅತಿಹೆಚ್ಚು ಬೆಲೆ ಸಿಗುವುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ