/newsfirstlive-kannada/media/post_attachments/wp-content/uploads/2025/03/INDINA-BEST-DISH-2.jpg)
ಭಾರತದ ಆಹಾರ ಅದರ ಸ್ವಾದ ಹಾಗೂ ವಿಶಿಷ್ಟತೆಯಿಂದಲೇ ವಿಶ್ವದಲ್ಲಿ ಮಾನ್ಯತೆ ಪಡೆದಿದೆ. ಆದರೆ ನಿಮಗೆ ಗೊತ್ತಿದೆಯಾ ಭಾರತದ ಆ ಒಂದು ಆಹಾರ ಸದ್ಯ ವಿಶ್ವದಲ್ಲಿಯೇ ಎಲ್ಲರಿಗೂ ಮೆಚ್ಚುಗೆಯಾದಂತಹ ಖಾದ್ಯ. ಈ ಒಂದು ವಿಶೇಷ ಆಹಾರ ಟೆಸ್ಟ್ ಎಟಲಸ್ 2024-25ರಲ್ಲಿ ವಿಶ್ವದಲ್ಲಿ ಅತ್ಯಂತ ಜನಪ್ರಿಯ ಆಹಾರದಲ್ಲಿ 12ನೇ Rank ಪಡೆದುಕೊಂಡಿದೆ.
ಈ ಒಂದು ಭಾರತೀಯ ಆಹಾರ ಕೇವಲ ಭಾರತದಲ್ಲಿ ಮಾತ್ರವಲ್ಲ. ವಿಶ್ವದಲ್ಲಿಯೇ ಪ್ರಸಿದ್ಧಿಯನ್ನು ಪಡೆದಿದೆ. ವಿದೇಶಗಳ ಹೋಟೆಲ್ ಹಾಗೂ ರೆಸ್ಟೋರೆಂಟ್ಗಳಲ್ಲಿಯೂ ಕೂಡ ಈ ಆಹಾರವು ಅವುಗಳ ಮೆನು ಲಿಸ್ಟ್ನಲ್ಲಿ ಇರುತ್ತದೆ. ಈ ಒಂದು ಆಹಾರವನ್ನು ಭಾರತದ ಅತ್ಯಂತ ಪ್ರಸಿದ್ಧ ನಗರದಲ್ಲಿ ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಈ ಆಹಾರವನ್ನು ಸಾಂಪ್ರದಾಯಿಕ ಮಸಾಲೆಯೊಂದಿಗೆ ವಿಶೇಷವಾಗಿ ತಯಾರಿಸಲಾಗುತ್ತದೆ. ಇದರಿಂದಾಗಿ ಇದರ ಸ್ವಾದಿಷ್ಟತೆ ಮತ್ತಷ್ಟು ಹೆಚ್ಚಾಗುತ್ತದೆ.
ಟೆಸ್ಟ್ ಎಟಲೆಸ್ನ ಲಿಸ್ಟ್ನಲ್ಲಿ ಇದನ್ನು ವಿಶ್ವದಲ್ಲಿಯೇ ಅತಿಹೆಚ್ಚು ಜನರು ಇಷ್ಟ ಪಡುವ ಭಾರತೀಯ ಆಹಾರವೆಂದೇ ಉಲ್ಲೇಖಿಸಲಾಗಿದೆ. ನೀವು ಈ ಸ್ಪೇಷಲ್ ಡಿಶ್ ಯಾವುದು ಅಂತ ಊಹಿಸಲು ಸಾಧ್ಯವಾ?
ವಿಶ್ವದಲ್ಲಿಯೇ ತನ್ನ ಬೇಡಿಕೆಯನ್ನು ಹೆಚ್ಚಿಸಿಕೊಂಡಿರುವ ಈ ಸ್ಪೇಷಲ್ ಡಿಶ್ನ ಹೆಸರು ಮುರ್ಗಾ ಮಖನಿ. ಹೀಗೆ ಹೇಳಿದರೆ ಹೆಚ್ಚು ಜನರಿಗೆ ತಿಳಿಯುವುದಿಲ್ಲ. ಇದನ್ನು ಮತ್ತೊಂದು ಹೆಸರಿನಲ್ಲಿ ಕರೆಯುತ್ತಾರೆ ಅದು ಬಟರ್ ಚಿಕನ್ ಅಂತ. ಈ ಒಂದು ವಿಶೇಷವಾದ ಆಹಾರವನ್ನ ದೆಹಲಿಯ ಮೋತಿ ಮಹಲ್ ರೆಸ್ಟೋರೆಂಟ್ನಲ್ಲಿ ಮೊದಲ ಬಾರಿಗೆ ತಯಾರಿಸಲಾಗಿತ್ತು.
ಟೆಸ್ಟ್ ಎಟಲೆಸ್ನ ಪ್ರಕಾರ ಹೈದ್ರಾಬಾದಿ ಬಿರಿಯಾನಿ, ಚಿಕನ್ 65 ಮತ್ತು ಖಿಮಾ ಕೂಡ ವಿಶ್ವದಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದಿರುವ ಭಾರತೀಯ ಆಹಾರಗಳಲ್ಲಿ ಸೇರಿವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ