ವಿಶ್ವದ ಅತ್ಯಂತ ಹಳೆಯ ಕಂಪನಿ ಯಾವುದು ಗೊತ್ತಾ? ಇದಕ್ಕಿದೆ 1400 ವರ್ಷಗಳ ಭವ್ಯ ಇತಿಹಾಸ!

author-image
Gopal Kulkarni
Updated On
ವಿಶ್ವದ ಅತ್ಯಂತ ಹಳೆಯ ಕಂಪನಿ ಯಾವುದು ಗೊತ್ತಾ? ಇದಕ್ಕಿದೆ 1400 ವರ್ಷಗಳ ಭವ್ಯ ಇತಿಹಾಸ!
Advertisment
  • ನೂರಲ್ಲ, ಇನ್ನೂರಲ್ಲ, ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ ಈ ಕಂಪನಿ
  • ಎರಡು ವಿಶ್ವಯುದ್ಧ, ಎರಡು ಪರಮಾಣು ಬಾಂಬ್​ಗಳ ಸ್ಪೋಟಕ್ಕೆ ಮೂಕಸಾಕ್ಷಿ
  • ಜಪಾನ್​ನಲ್ಲಿ ಇನ್ನೂ ಕಾರ್ಯನಿರ್ವಹಿಸುತ್ತಿದೆ 578ರಲ್ಲಿ ಸ್ಥಾಪನೆಗೊಂಡ ಕಂಪನಿ!

ನಾವು ನೀವು ಅಬ್ಬಬ್ಬಾ ಅಂದ್ರೆ 100,150 ವರ್ಷಗಳ ಹಿಂದಿನ ಹಳೆ ಕಂಪನಿಗಳ ಹೆಸರನ್ನ ಅದು ಬೆರಳೆಣಿಕೆಯಲ್ಲಿ ನೋಡಿರಬಹುದು ಅಥವಾ ಅವುಗಳ ಬಗ್ಗೆ ಕೇಳಿರಬಹುದು. ಬ್ರ್ಯಾಂಡ್ ಕಂಪನಿಗಳ ಬಗ್ಗೆ ನೀವು 200 ವರ್ಷಗಳ ಇತಿಹಾಸವನ್ನು ಸಹ ಕೇಳಿರಬಹುದು, ಆದರೆ ಅದಕ್ಕೂ ಮುಂಚೆ ಇರುವ ಬ್ರ್ಯಾಂಡ್ ಕಂಪನಿಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಅಂದ್ರೆ ಗೂಗಲ್ ಮೊರೆಯೇ ಹೋಗಬೇಕೆ ವಿನಃ ಬೇರಾವ ಮಾರ್ಗವೂ ನಮ್ಮ ಮುಂದೆ ಇಲ್ಲ. ನಿಮಗೆ ಗೊತ್ತಾ? ಜಗತ್ತಿನಲ್ಲೊಂದು 1400 ವರ್ಷಗಳ ಹಳೆಯ ಬ್ರ್ಯಾಂಡ್​ ಕಂಪನಿ ಇಂದಿಗೂ ಕೂಡ ನಮ್ಮೆಲ್ಲರ ನಡುವೆ ಅಸ್ತಿತ್ವವನ್ನು ಉಳಿಸಿಕೊಂಡು ಹಾಗೆಯೇ ಇದೆ.

ಈ ಒಂದು ಕಂಪನಿ ಕಳೆದ 1445 ವರ್ಷಗಳಿಂದ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಇದು ಎರಡು ವಿಶ್ವ ಯುದ್ಧವನ್ನು ಕಂಡಿದೆ. ಪರಮಾಣು ಬಾಂಬ್ ದಾಳಿಯನ್ನು ನೋಡಿದೆ. 1445 ವರ್ಷಗಳಿಂದ ಈ ಜಗತ್ತಿನಲ್ಲಿ ಏನೆಲ್ಲಾ ನಡೆದಿದೆಯೋ ಅದಕ್ಕೆ ಮೂಕ ಸಾಕ್ಷಿಯಾಗುತ್ತಾ ಬಂದಿದೆ. ಈ ರಿಯಲ್ ಎಸ್ಟೇಟ್​ ಕಂಪನಿ ಕ್ರಿಸ್ತಶಕ 578ನೇ ಇಸ್ವಿಯಿಂದಲೂ ರಿಯಲ್ ಎಸ್ಟೇಟ್ ವ್ಯವಹಾರವನ್ನು ಮಾಡುತ್ತಾ ಬಂದಿದ್ದು. ಇಂದಿಗೂ ಕೂಡ ಅದನ್ನು ಮುಂದುವರಿಸಿಕೊಂಡು ಹೊರಟಿದೆ.

publive-image

ಜಪಾನ್​ನ ಕೊಂಗೊ ಗುಮಿ ಎನ್ನುವ ಈ ರಿಯಲ್ ಎಸ್ಟೇಟ್ ಕಂಪನಿ ಸರಿಸುಮಾರು 1400 ವರ್ಷಗಳಿಂದ ತನ್ನ ವ್ಯವಹಾರವನ್ನು ನಡೆಸುತ್ತಾ ಬಂದಿದೆ. ಈ ಒಂದು ಕಂಪನಿಯನ್ನು 578ನೇ ಇಸ್ವಿಯಲ್ಲಿ ಕೊರಿಯನ್ ಬಿಲ್ಡರ್ ಶಿಗೆಮಿಸ್ತು ಕೊಂಗೊ ಎಂಬುವವರು ಸ್ಥಾಪಿಸಿದ್ದರು. ಅಂದಿನಿಂದ ಇಂದಿನವರೆಗೂ ಕೂಡ ನಿರಂತರವಾಗಿ ತನ್ನ ಉದ್ಯಮವನ್ನು ಸಾಗಿಸಿಕೊಂಡು ಬಂದಿದೆ. ಕೊಂಗೊ ಗುಮಿ ಎನ್ನುವ ಈ ಕಂಪನಿ ತನ್ನ ಕಾಲಾವಧಿಯಲ್ಲಿ ಹಲವಾರು ದೇಗುಲಗಳನ್ನು, ಹಲವಾರು ಪ್ರಮುಖ ತಾಣಗಳನ್ನು ನಿರ್ಮಿಸಿದೆ. ಅವುಗಳಲ್ಲಿ ಎಷ್ಟೋ ಕಾಲಾನಂತರದಲ್ಲಿ ನಿರ್ನಾಮವಾಗಿಯೂ ಹೋಗಿವೆ. ಆದರೂ ಕೂಡ ಈ ಕಂಪನಿಯ ಉದ್ಯಮ ಇಂದಿಗೂ ಕೂಡ ನಡೆದುಕೊಂಡೇ ಬಂದಿದೆ.

ಇದನ್ನೂ ಓದಿ:ಸೌದಿ ಅರೇಬಿಯಾಗೆ ಜಾಕ್​ಪಾಟ್​; ಈ ದೇಶಕ್ಕೆ ಬಿಳಿ ಬಂಗಾರದ ನಿಕ್ಷೇಪ ದಕ್ಕಿದ್ದು ಹೇಗೆ ?

publive-image

ಈಗಾಗಲೇ ನಾವು ಹೇಳಿದಂತೆ ಕೊಂಗೊ ಗುಮಿ ಜಗತ್ತಿನಲ್ಲಿ ರಣಭೀಕರವಾಗಿ ನಡೆದ ಎರಡು ವಿಶ್ವಯುದ್ಧವನ್ನು ನೋಡಿದೆ. ಎರಡು ಪರಮಾಣು ಬಾಂಬ್ ತನ್ನದೇ ನೆಲದಲ್ಲಿ ಬಿದ್ದು ಹೀರೋಶಿಮಾ ನಾಗಾಸಾಕಿಗಳು ಸರ್ವನಾಶಗೊಂಡಿದ್ದನ್ನು ನೋಡಿದೆ. ಈ ಸಂಸ್ಥೆಯನ್ನು ಸುಮಾರು 40 ತಲೆಮಾರುಗಳು ಮುನ್ನಡೆಸಿಕೊಂಡು ಬಂದಿದೆ. ಆಎಲ್ಲಾ ಮಾಲೀಕರ ಹೆಸರನ್ನು ಇದು 3 ಮೀಟರ್​​ನ  ಒಸಾಕಾದಲ್ಲಿರುವ ತನ್ನ ಹೆಡ್​ ಕ್ವಾರ್ಟರ್ಸ್​ನಲ್ಲಿ ಬರೆದಿಡಲಾಗಿದೆ.

ಕೊರಿಯನ್ ಮೂಲದ ರಿಯಲ್ ಎಸ್ಟೇಟ್ ಕಂಪನಿಯಾಗಿದ್ದ ಕೊಂಗೊ ಗುಮಿಯನ್ನು ಅಂದಿನ ಜಪಾನ್ ರಾಜ ಶೊಟೊಕು ಜಪಾನ್​ನಲ್ಲಿ ಒಂದು ಬುದ್ಧ ಮಂದಿರ ನಿರ್ಮಿಸಲು ಕರೆಸಿದ್ದ. ಅಂದಿನಿಂದ ಇಂದಿನವರೆಗೂ ಕೊಂಗೊ ಗುಮಿ ಜಪಾನ್​​ನಲ್ಲಿಯೇ ತನ್ನ ನೆಲೆಯನ್ನೂರಿಕೊಂಡು ಕುಳಿತಿದೆ.

ಇದನ್ನೂ ಓದಿ:9/11 ಮಾದರಿ ಮತ್ತೊಂದು ಅಟ್ಯಾಕ್‌.. ರಷ್ಯಾದ ಮೇಲೆ ಡ್ರೋನ್ ದಾಳಿ; ಭಯಾನಕ ವಿಡಿಯೋ ಸೆರೆ!

ಕೊಂಗೊ ಗುಮಿ 593ನೇ ಇಸ್ವಿಯಲ್ಲಿ ಜಪಾನ್​ನ ಮೊದಲ ಬುದ್ಧ ಮಂದಿರ ನಿರ್ಮಾಣ ಮಾಡಿತ್ತು. ಕೊಸಾಕ ಕ್ಯಾಸಲ್​ನ್ನು 16ನೇ ಶತಮಾನದಲ್ಲಿ ನಿರ್ಮಾಣ ಮಾಡಿದ್ದು ಇದೇ ಕೊಂಗೊ ಗುಮಿ ಸಂಸ್ಥೆ. ಇದು ನಿರ್ಮಿಸಿದ ಅನೇಕ ಕಟ್ಟಡಗಳು ಯುನೆಸ್ಕೊದ ವಿಶ್ವ ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿವೆ. ಅದರಲ್ಲೂ ಕಟ್ಟಿಗೆಯಿಂದ ನಿರ್ಮಾಣಗೊಳ್ಳುವ ಕಟ್ಟಡಗಳನ್ನು ಕಟ್ಟುವುದರಲ್ಲಿ ಈ ಸಂಸ್ಥೆ ಎತ್ತಿದ ಕೈ
ದಿನ ಕಳೆದಂತೆ ಈ ಸಂಸ್ಥೆಯೂ ಉಳಿದ ಸಂಸ್ಥೆಯ ರೀತಿ ಆರ್ಥಿಕ ಸಂಕಷ್ಟಗಳನ್ನು ಎದುರಿಸಿದೆ. 2006ರಲ್ಲಿ ಆರ್ಥಿಕ ಸಂಕಷ್ಟದಿಂದಾಗಿ ಕೊಂಗೊ ಗುಮಿಯನ್ನು ಮಾರಾಟ ಮಾಡಲಾಯ್ತು. ಸದ್ಯ ಈ ಕಂಪನಿಯ ಮಾಲೀಕತ್ವವನ್ನು ತಕಮತ್ಸು ಕನ್​ಸ್ಟ್ರಕ್ಷನ್ ಗ್ರೂಪ್​ನವರ ಕೈಯಲ್ಲಿದೆ. ಆದ್ರೆ ಇಂದಿಗೂ ಕೂಡ ಈ ಸಂಸ್ಥೆ ಪುಣ್ಯಕ್ಷೇತ್ರ ಹಾಗೂ ಮಂದಿರಗಳನ್ನು ಕೊಂಗೊ ಗುಮಿ ಹೆಸರಿನಲ್ಲಿಯೇ ನಿರ್ಮಿಸುತ್ತಾ ಬಂದಿದೆ. ಒಟ್ಟು 100 ಜನ ಕೆಲಸಗಾರರು ಈ ಸಂಸ್ಥೆಯಲ್ಲಿ ಕೆಲಸ ಮಾಡುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment