newsfirstkannada.com

ಬರೋಬ್ಬರಿ 124.. ವಿಶ್ವದ ಅತ್ಯಂತ ಹಿರಿಯ ಅಜ್ಜನಿಗೆ ಹುಟ್ಟು ಹಬ್ಬದ ಸಂಭ್ರಮ; ಅಷ್ಟಕ್ಕೂ ಇವರು ತಿನ್ನುವುದಾದರೂ ಏನು?

Share :

Published April 11, 2024 at 6:44pm

Update April 11, 2024 at 6:46pm

    ಪೆರುವಿನಲ್ಲಿ ಇರೋ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿಯ ಹೆಸರೇನು ಗೊತ್ತಾ?

    ಶೀಘ್ರದಲ್ಲೇ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರುವ ಸಾಧ್ಯತೆ!

    ಇಷ್ಟು ವರ್ಷ ಜೀವಂತವಾಗಿರಲು ಇವರು ಸೇವಿಸುತ್ತಿರೋ ಆಹಾರ ಯಾವುದು

ಪೆರು: ಮೊನ್ನೆ ಮೊನ್ನೆಯಷ್ಟೇ ಬ್ರಿಟನ್​​ ಮೂಲದ ವ್ಯಕ್ತಿಯೊಬ್ಬರು 111 ವರ್ಷ ಬದುಕಿದ್ದಲ್ಲದೆ ಗಿನ್ನಿಸ್​ ವರ್ಲ್ಡ್​​ ರೆಕಾರ್ಡ್​ ಪುಟ ಸೇರಿದ್ದರು. ಇದೀಗ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಪೆರುವಿನಲ್ಲಿ ವಾಸವಾಗಿದ್ದು, ಶೀಘ್ರದಲ್ಲೇ ಇವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: 111 ವರ್ಷ ಬದುಕಿ ಗಿನ್ನಿಸ್​ ರೆಕಾರ್ಡ್​​ ಮುಡಿಗೇರಿಸಿಕೊಂಡ ತಾತ.. ಇವರ ದೀರ್ಘಾಯುಷ್ಯದ ಸೀಕ್ರೆಟ್​ ಏನು ಗೊತ್ತಾ?

ಹೌದು, ಪೆರುವಿನಲ್ಲಿ ವಾಸವಾಗಿರೋ 124 ವರ್ಷದ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ. ಇವರ ಹೆಸರು ಮಾರ್ಸೆಲಿನೊ ಅಬಾದ್ ಟೊಲೆಂಟಿನೊ ಅಥವಾ ಮಶಿಕೊ ಅಂತಾ. ಸದ್ಯ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಆಗಿರೋ ಇವರಿಗೆ ಗಿನ್ನಿಸ್​​ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪೆರುವಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 124 ವರ್ಷದ ಮಾರ್ಸೆಲಿನೊ ಅಬಾದ್ ಟೊಲೆಂಟಿನೊ ಅಥವಾ ಮಶಿಕೊ 1900ರಲ್ಲಿ ಜನಿಸಿದ್ದರು. ಪ್ರಸ್ತುತ ಮಧ್ಯ ಪೆರುವಿನ ಹುವಾನುಕೊ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

ಸದ್ಯ ಮಾರ್ಸೆಲಿನೊ ಅಬಾದ್ ಟೊಲೆಂಟಿನೊ ಅಥವಾ ಮಶಿಕೊ ಅವರು ಏಪ್ರಿಲ್ 5ರಂದು 124ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇದೇ ಸಂಭ್ರಮದಲ್ಲಿ ಕುಟುಂಬಸ್ಥರು ಕೇಕ್ ಮೇಲೆ 124 ಸಂಖ್ಯೆಯ ಮೇಣದ ಬತ್ತಿಗಳನ್ನು ಹಚ್ಚಿ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ. ಇನ್ನು, ಮಾರ್ಸೆಲಿನೊ ಅಬಾದ್ ಟೊಲೆಂಟಿನೊ ಅಥವಾ ಮಶಿಕೊ ಅವರ ದೀರ್ಘಾಯುಷ್ಯದ ಬಗ್ಗೆ ಅನೇಕರಿಗೆ ಕುತೂಹಲವಿತ್ತು. ಈ ವ್ಯಕ್ತಿಯೂ ಹೆಚ್ಚಾಗಿ ಹಣ್ಣುಗಳು, ಮಾಂಸವನ್ನು ಸೇವಿಸುತ್ತಿರುವುದರ ಜತೆಗೆ ಕೋಕಾ ಎಲೆ ತಿನ್ನುವುದರಿಂದ ಇದು ಸಾಧ್ಯ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬರೋಬ್ಬರಿ 124.. ವಿಶ್ವದ ಅತ್ಯಂತ ಹಿರಿಯ ಅಜ್ಜನಿಗೆ ಹುಟ್ಟು ಹಬ್ಬದ ಸಂಭ್ರಮ; ಅಷ್ಟಕ್ಕೂ ಇವರು ತಿನ್ನುವುದಾದರೂ ಏನು?

https://newsfirstlive.com/wp-content/uploads/2024/04/birthday.jpg

Load More