/newsfirstlive-kannada/media/post_attachments/wp-content/uploads/2024/12/ARYAMAN-BIRLA-2.jpg)
ವಿಶ್ವದ ಶ್ರೀಮಂತ ಕ್ರಿಕೆಟಿಗ ಜಸ್ಟ್​​ 27 ವರ್ಷಕ್ಕೆ ಆಟ ಅಂತ್ಯಗೊಳಿಸಿದ್ದಾನೆ. ಭಾರತೀಯನೇ ಆದ ಈತ ಸಚಿನ್, ಧೋನಿ, ವಿರಾಟ್ ಕೊಹ್ಲಿಗಿಂತ ಆಗರ್ಭ ಶ್ರೀಮಂತ.. ಈತ ಟೀಮ್ ಇಂಡಿಯಾ ಪರ ಆಗ್ಲಿ, ಐಪಿಎಲ್​ನಲ್ಲಿ ಆಗಲಿ.. ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಹಾಗಾದ್ರೆ, ಈ ಜಗತ್ತಿನ ಶ್ರೀಮಂತ ಕ್ರಿಕೆಟರ್ ಚಿಕ್ಕ ವಯಸ್ಸಿಗೆ ಕರಿಯರ್​ಗೆ ಫುಲ್ ಸ್ಟಾಪ್ ಇಟ್ಟಿದ್ದೇಕೆ ಗೊತ್ತಾ?
ವಿಶ್ವದ ಶ್ರೀಮಂತ ಕ್ರಿಕೆಟಿಗ ನಿವೃತ್ತಿ! 27ನೇ ವಯಸ್ಸಿಗೆ ಗುಡ್ ಬೈ ಹೇಳಿದ್ದೇಕೆ?
ಕ್ರಿಕೆಟ್, ಭಾರತದಲ್ಲಿ ಕೇವಲ ಒಂದು ಆಟವಲ್ಲ. ಒಂದು ಧರ್ಮ. ಇಂಗ್ಲೆಂಡ್​​ನಲ್ಲಿ ಹುಟ್ಟಿದ ಈ ಆಟವನ್ನು ಶ್ರೀಮಂತಗೊಳಿಸಿದ ಖ್ಯಾತಿ ಭಾರತಕ್ಕೆ ಸೇರುತ್ತೆ. ಈ ಶ್ರೀಮಂತ ಕ್ರೀಡೆಯಿಂದ ಭಾರತದ ಹಲವು ಕ್ರಿಕೆಟರ್ಸ್​ ಕೂಡ ಶ್ರೀಮಂತರಾಗಿದ್ದಾರೆ. ಸದ್ಯ ಸಚಿನ್, ಧೋನಿ, ವಿರಾಟ್ ಈ​​ ಶ್ರೀಮಂತ ಕ್ರಿಕೆಟರ್​ಗಳ ಲಿಸ್ಟ್​ನಲ್ಲಿ ಟಾಪರ್ಸ್​ ಅನಿಸಿದ್ದಾರೆ. ಆದ್ರೆ, ಇವರೆಲ್ಲರನ್ನ ಮೀರಿಸಿದ ಮತ್ತೊಬ್ಬ ಶ್ರೀಮಂತ ಕ್ರಿಕೆಟಿಗ ಭಾರತದಲ್ಲಿದ್ದಾನೆ. ಭಾರತ ಮಾತ್ರವಲ್ಲ.. ವಿಶ್ವದ ಶ್ರೀಮಂತ ಕ್ರಿಕೆಟರ್ ಎನಿಸಿಕೊಂಡಿದ್ದ ಈತ, 27 ವರ್ಷಕ್ಕೆ ತನ್ನ ಕರಿಯರ್ ಅಂತ್ಯಗೊಳಿಸಿದ್ದಾನೆ. ಅಂದ್ಹಾಗೆ ಆ ಶ್ರೀಮಂತ ಕ್ರಿಕೆಟರ್ ಹೆಸರು ಆರ್ಯಮನ್ ಬಿರ್ಲಾ!
ಇದನ್ನೂ ಓದಿ:ಅಭ್ಯಾಸ ಕಣದಿಂದಲೇ ಆಸಿಸ್​ಗೆ ವಾರ್ನಿಂಗ್ ಕೊಟ್ಟ ಕಿಂಗ್! ಹೇಗಿದೆ ಸಮರಕಲಿಯ ಸಮರಾಭ್ಯಾಸ?
ತನ್ನ 27ನೇ ವರ್ಷಕ್ಕೆ ಕ್ರಿಕೆಟ್​​ಗೆ ಗುಡ್ ಬೈ ಹೇಳಿರುವ ಆರ್ಯಮನ್ ಬಿರ್ಲಾ, ಕ್ರಿಕೆಟ್ ಹೊರತಾಗಿ ಸೀರಿಯಸ್ಸಾಗಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಬ್ಯುಸಿನೆಸ್​ನಲ್ಲಿ ಯಶಸ್ಸಿನ ಬದುಕು ಕಟ್ಟಿಕೊಳ್ಳಲು ಮುಂದಾಗಿರುವ ಆರ್ಯಮನ್ ಬಿರ್ಲಾ ಕಥೆ ನಿಜಕ್ಕೂ ರೋಚಕ!
/newsfirstlive-kannada/media/post_attachments/wp-content/uploads/2024/12/ARYAMAN-BIRLA.jpg)
ವಿಶ್ವದ ಶ್ರೀಮಂತ​ ಕ್ರಿಕೆಟಿಗ ಆರ್ಯಮನ್ ಬಿರ್ಲಾ ಯಾರು..?
ಆರ್ಯಮನ್ ಬಿರ್ಲಾ. ಬಿಲಿಯನೇರ್ ಕುಮಾರ್ ಮಂಗಲಂ ಬಿರ್ಲಾ ಮಗ. ಭಾರತದಲ್ಲಿ ಆದಿತ್ಯ ಬಿರ್ಲಾ ಗ್ರೂಪ್ ಎಂಬ ಬ್ಯುಸಿನೆಸ್ ಸಾಮ್ರಾಜ್ಯವನ್ನೇ ಕಟ್ಟಿರುವ ಆಗರ್ಭ ಶ್ರೀಮಂತನ ಮಗ. ಡೈಮೆಂಡ್ ಸ್ಪೂನ್ ಬಾಯಲ್ಲಿಟ್ಟುಕೊಂಡು ಹುಟ್ಟಿದ ಆರ್ಯಮನ್ ಬಿರ್ಲಾ, ಕ್ರಿಕೆಟರ್​ ಆಗೋ ಕನಸು ಕಂಡಿದ್ರು. ಅಂದುಕೊಂಡತೆ ಬ್ಯುಸ್​ನೆಸ್​ನಿಂದ ಹೊರಗುಳಿದ​ ಕ್ರಿಕೆಟ್ನಲ್ಲೇ ಜೀವನ ಜರ್ನಿ ಶುರು ಮಾಡಿದ್ದರು.
70 ಸಾವಿರ ಕೋಟಿ ಒಡೆಯ ಆರ್ಯಮನ್ ಬಿರ್ಲಾ.!
ಟೀಮ್ ಇಂಡಿಯಾದ ಶ್ರೀಮಂತ ಕ್ರಿಕೆಟಿಗರು ಯಾರು ಅಂದ್ರೆ, ಲೆಂಜಡರಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹೆಸರುಗಳು ಚರ್ಚೆಗೆ ಬರುತ್ವೆ. ಆದ್ರೆ, ಟೀಮ್ ಇಂಡಿಯಾ ಇರಲಿ, ಐಪಿಎಲ್​ನಲ್ಲೂ ಡೆಬ್ಯೂ ಮಾಡದ ಆರ್ಯಮನ್ ಬಿರ್ಲಾ ಸಂಪತ್ತು, ಈ ಸಾವಿರ ಕೋಟಿ ಒಡೆಯರನ್ನೇ ಮೀರಿಸುತ್ತೆ. 70 ಸಾವಿರ ಕೋಟಿಗೂ ಹೆಚ್ಚು ಆಸ್ತಿ ಹೊಂದಿರುವ ಆರ್ಯಮನ್, ಭಾರತವಲ್ಲ..! ಇಡೀ ವಿಶ್ವ ಕ್ರಿಕೆಟ್​​ನ ಶ್ರೀಮಂತ ಎನಿಸಿಕೊಂಡಿದ್ದಾರೆ.
ಆರ್ಯಮಾನ್​ ಬಿರ್ಲಾ ತಂದೆ ಕುಮಾರ ಮಂಗಲಂ ಬಿರ್ಲಾ ಭಾರತದ 6ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇವರ ಒಟ್ಟು ಆಸ್ತಿ ಮೌಲ್ಯ, 23 ಬಿಲಿಯನ್ ಯುಸ್​ ಡಾಲರ್ಸ್ ಆಗಿದೆ. ಇಷ್ಟೆಲ್ಲಾ ಶ್ರೀಮಂತಿಕೆ ಹೊಂದಿದ್ದರು ಒಂದೇ ಒಂದು ಐಪಿಎಲ್​​​​​​​ ಮ್ಯಾಚ್ ಆಡೋ ಸೌಭಾಗ್ಯ ಸಿಕ್ಕಿಲ್ಲ.
/newsfirstlive-kannada/media/post_attachments/wp-content/uploads/2024/12/ARYAMAN-BIRLA-1.jpg)
ದೇಶಿ ಕ್ರಿಕೆಟ್ TO ಐಪಿಎಲ್​, 2 ವರ್ಷ ಬೆಂಚ್​..! ಕ್ರಿಕೆಟ್​ನಿಂದ ದೂರ, ಬ್ಯುಸಿನೆಸ್​ನತ್ತ ಹೆಜ್ಜೆ!
1997ರಲ್ಲಿ ಮುಂಬೈನಲ್ಲಿ ಜನಿಸಿದ ಆರ್ಯಮನ್ ಬಿರ್ಲಾ, 2017ರಲ್ಲಿ ಮಧ್ಯಪ್ರದೇಶದ ಪರ ರಣಜಿ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರು. 2018ರ ರಣಜಿಯಲ್ಲಿ ಈಡನ್ ಗಾರ್ಡನ್ಸ್​ನಲ್ಲಿ ಬೆಂಗಾಲ್ ಎದುರಿನ ಪಂದ್ಯದಲ್ಲಿ ಶತಕ ಸಿಡಿಸಿದ್ರು. ಇದೇ ಶತಕ 2018ರ ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್​ ಸೇರುವಂತೆ ಮಾಡಿತ್ತು. ಆದ್ರೆ, ಈತನಿಗೆ ಅವಕಾಶ ಸಿಗಲಿಲ್ಲ. ಬೆಂಚ್​ಗೆ ಮಾತ್ರವೇ ಸಿಮೀತರಾದರು. ಇದರ ಹೊರತಾಗಿ ದೇಶಿ ಕ್ರಿಕೆಟ್​ನಲ್ಲಿ ಸತತ ವೈಫಲ್ಯ ಅನುಭವಿಸಿದ್ರು. ಅಂತಿಮವಾಗಿ ತಂಡದ ಬಾಗಿಲು ಬಂದ್ ಆಯ್ತು. ಪರಿಣಾಮ ಕ್ರಿಕೆಟ್​ನಿಂದ ದೂರ ಉಳಿದ ಆರ್ಯಮನ್ ಬಿರ್ಲಾ ಬ್ಯುಸಿನೆಸ್ ಕಡೆ ಮುಖಮಾಡಿದ್ರು.
ಕಳೆದ ವರ್ಷವಷ್ಟೇ ಆದಿತ್ಯ ಬಿರ್ಲಾ ಫ್ಯಾಷನ್, ರಿಟೇಲ್ ಲಿಮಿಟೆಡ್‌ನ ನಿರ್ದೇಶಕರಾಗಿ ಆರ್ಯಮನ್ ಬಿರ್ಲಾ ಅಧಿಕಾರ ವಹಿಸಿಕೊಂಡಿದ್ದಾರೆ. ಕಳೆದ ಅಗಸ್ಟ್​ಬಲ್ಲಿ ಹಿಂಡಾಲ್ಕೋ ಇಂಡಸ್ಟ್ರಿಸ್​​ನ ಡೈರೆಕ್ಟರ್​ ಆಗಿ ನೇಮಕವಾಗಿದ್ದಾರೆ. ಕ್ರಿಕೆಟ್​ನಲ್ಲಿ ಸಿಗದ ಸಕ್ಸಸ್​ ಅನ್ನ ಬ್ಯುಸಿನೆಸ್​ನಲ್ಲಿ ಕಾಣ್ತಿದ್ದಾರೆ. ಹೀಗಾಗಿ ಇದೀಗ ಕ್ರಿಕೆಟ್​ಗೆ ಗುಡ್​​ ಬೈ ಹೇಳಿದ್ದಾರೆ. ಅಂದ್ಹಾಗೆ ಈಗ ಆರ್ಯಮಾನ್​ ಬಿರ್ಲಾ ವಯಸ್ಸು 27, ಕೊನೆಯದಾಗಿ ಕ್ರಿಕೆಟ್​ ಆಡಿದ್ದು 22ನೇ ವರ್ಷ ವಯಸ್ಸಿನಲ್ಲಿ.. ಹೀಗಾಗಿ ಈಗ ನಿವೃತ್ತಿ ಹೇಳಿದ್ರೂ ಕ್ರಿಕೆಟ್​​ ಬಿಟ್ಟಿದ್ದು 22ನೇ ವರ್ಷಕ್ಕೆ ಅಂದ್ರೆ ತಪ್ಪಲ್ಲ.
ಕ್ರಿಕೆಟ್​​​ನಲ್ಲಿ ಶ್ರೀಮಂತಿಕೆ ಅಲ್ಲ, ಪ್ರತಿಭೆಯೇ ಮುಖ್ಯ..!
ಕ್ರಿಕೆಟ್ ಶ್ರೀಮಂತರ ಕ್ರೀಡೆ ಅನ್ನೋ ಮಾತಿದೆ. ಆದ್ರೆ, ಈ ಕಥೆ ಕೇಳಿದ್ರೆ, ಈ ಮಾತು ಸುಳ್ಳು ಅನ್ನಿಸದೇ ಇರಲ್ಲ. ಯಾಕಂದ್ರೆ, ದುಡ್ಡಿರುವ ಶ್ರೀಮಂತರೇ ಕ್ರಿಕೆಟರ್ ಆಗ್ತಾರೆ ಅನ್ನೋದು ನಿಜವಾಗಿದ್ರೆ, ಈ ಆರ್ಯಮನ್ ಬಿರ್ಲಾ ಟೀಮ್ ಇಂಡಿಯಾದ ಖಾಯಂ ಸದಸ್ಯರಾಗಬೇಕಿತ್ತು. ಇದಿಷ್ಟೇ ಯಾಕೆ..? ಐಪಿಎಲ್ ತಂಡವನ್ನೇ ಖರೀದಿಸಬಹುದಿತ್ತು. ಆದ್ರೆ, ಅದೆಷ್ಟೇ ಹಣವಿದ್ದರೂ ಒಂದೇ ಒಂದು ಐಪಿಎಲ್​ ಮ್ಯಾಚ್ ಆಡಲಿಕ್ಕೆ ಸಾಧ್ಯವಾಗಲಿಲ್ಲ. ಇದು ಶ್ರೀಮಂತ ಕ್ರಿಕೆಟ್​ನಲ್ಲಿ ಟ್ಯಾಲೆಂಟ್​ ಮುಖ್ಯ ಅನ್ನೋದನ್ನೇ ತೋರಿಸುತ್ತೆ.
ಭಾರತೀಯ ಕ್ರಿಕೆಟ್​ ಕಂಡ ಅದೇಷ್ಟೋ ಕ್ರಿಕೆಟರ್​​ಗಳಿಗಿಂತ ಹೆಚ್ಚಿನ ಹಣವೇ ಆರ್ಯಮನ್​​​​​​​​​​​​​​​​​​ ಬಳಿ ಇತ್ತು. ಆದ್ರೆ, ಆ ಎಲ್ಲಾ ದುಡ್ಡು, ಕ್ರಿಕೆಟ್​ನಲ್ಲಿ ಟ್ಯಾಲೆಂಟ್ ಎಂಬ ಬ್ರಹಾಸ್ತ್ರದ ಮುಂದೆ ನಗಣ್ಯವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us