ವಿಶ್ವದ ಅತ್ಯಂತ ಶ್ರೀಮಂತ ದ್ವೀಪ.. ಲ್ಯಾಂಬೊರ್ಗಿನಿ, ಫೆರಾರಿ ಕಾರುಗಳು ಓಡುತ್ತಿದ್ದ ಐಲ್ಯಾಂಡ್​ ಈಗ ದಿವಾಳಿ ಆಗಿದ್ದು ಹೇಗೆ?

author-image
Gopal Kulkarni
Updated On
ವಿಶ್ವದ ಅತ್ಯಂತ ಶ್ರೀಮಂತ ದ್ವೀಪ.. ಲ್ಯಾಂಬೊರ್ಗಿನಿ, ಫೆರಾರಿ ಕಾರುಗಳು ಓಡುತ್ತಿದ್ದ ಐಲ್ಯಾಂಡ್​ ಈಗ ದಿವಾಳಿ ಆಗಿದ್ದು ಹೇಗೆ?
Advertisment
  • ಒಂದು ಕಾಲದಲ್ಲಿ ವಿಶ್ವದ ಅತ್ಯಂತ ಶ್ರೀಮಂತ ದ್ವೀಪ ಇಂದು ಏನಾಗಿದೆ?
  • ಆ ಗಣಿಗಾರಿಕೆಯಿಂದ ಗಲ್ಫ್​ ರಾಷ್ಟ್ರಗಳ ಶ್ರೀಮಂತಿಕೆಗೆ ಸೆಡ್ಡು ಹೊಡೆದಿದ್ದ ದ್ವೀಪ
  • 1968 ರಿಂದ ಸುವರ್ಣಯುಗವನ್ನು ಕಂಡಿದ್ದ ದ್ವೀಪ ದಿವಾಳಿಯಾಗಿದ್ದು ಹೇಗೆ?

ಒಂದು ಕಾಲದಲ್ಲಿ ಏನೂ ಇಲ್ಲದ ಕೇವಲ ಮರಳು ತುಂಬಿದ್ದ ಪ್ರದೇಶ ಕಪ್ಪು ಬಣ್ಣದ ತೈಲವೊಂದು ತನ್ನ ದೇಶದಲ್ಲಿ ಎಲ್ಲೆಂದರಲ್ಲಿ ದೊರಕಿದ್ದ ನಾಡು ಇಡೀ ವಿಶ್ವವೇ ಬೆರಗಾಗುವಷ್ಟು ಶ್ರೀಮಂತಿಕೆಯನ್ನು ತನ್ನದಾಗಿಸಿಕೊಂಡ ಉದಾಹರಣೆಯಾಗಿ ನಿಂತಿದ್ದು ಗಲ್ಫ್​ ರಾಷ್ಟ್ರಗಗಳು. ಈ ರಾಷ್ಟ್ರಗಳಲ್ಲಿ ಒಂದು ಕಾಲದಲ್ಲಿ ಮರಳು ಮತ್ತು ಸಮುದ್ರಾಚೆ ಏನು ಇರಲಿಲ್ಲ. ಈಗ ಅಲ್ಲಿ ಶ್ರೀಮಂತಿಕೆ ಎನ್ನುವುದು ಹಾಸಿಹೊದ್ದುಕೊಂಡು ಮಲಗಿದೆ.

ಇದೇ ರೀತಿ ಮಾದರಿಯಾಗಿ ನಿಂತಿದ್ದು ಮತ್ತೊಂದು ದ್ವೀಪವೆಂದರೆ ಅದು ನೈರುತ್ಯ ಪೆಸಿಫಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ನೌರು ದ್ವೀಪ. ಇಲ್ಲಿನ ಪ್ರಶಾಂತ ವಾತಾವರಣ, ಮನಸ್ಸು ಹಾಗೂ ದೇಹಕ್ಕೆ ಹಾಯ್ ಎನಿಸುವ ವಾತಾವರಣ ಜೊತೆಗೆ ಹವಳದ ಬಂಡೆಗಳು, ಬಿಳಿ ಮರಳಿನ ಬೀಚ್​ಗಳು ಇವೆಲ್ಲವೂ ಈ ದ್ವೀಪದ ಸೌಂದರ್ಯದ ಶ್ರೀಮಂತಿಕೆಗೆ ಸಾಕ್ಷಿಯಾಗಿದ್ದವು.publive-image

ಮೈಕ್ರೋನೇಶಿಯಾದ ಈ ಸುಂದರ ದ್ವೀಪ ಒಂದು ಕಾಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ದ್ವೀಪ ಎಂಬ ಖ್ಯಾತಿಯನ್ನು ಪಡೆದಿತ್ತು. ವಿಶ್ವ ಜಿಡಿಪಿ ತಲಾ ಆದಾಯದಲ್ಲಿ ಅತಿ ಶ್ರೀಮಂತ ದ್ವೀಪ ಎಂಬ ಹೆಸರನ್ನು ಪಡೆದಿತ್ತು. ಈ ದ್ವೀಪದಲ್ಲಿ ವಜ್ರ ತಯಾರಿಸಲು ಹಾಗೂ ಗೊಬ್ಬರಕ್ಕೆ ಉಪಯೋಗಿಸಲು ಬಹುಮುಖ್ಯವಾದ ಅಂಶ ಫಾಸ್ಫೇಟ್ ಎಂಬ ರಂಜಕ ದೊರೆಕಿತ್ತು. ಈ ಒಂದು ನಿಕ್ಷೇಪ ಬ್ರಿಟೀಷ್ ಕಂಪನಿಯ ಆಡಳಿತದ ಕಾಲವಾದ 1990ರಲ್ಲಿ ದೊರಕಿತ್ತು .

1907ರಿಂದ ಇಲ್ಲಿ ಫಾಸ್ಫೇಟ್ ಗಣಿಗಾರಿಕೆ ಜೋರಾಗಿಯೇ ನಡೆದಿತ್ತು. ಬ್ರಿಟಿಷನವರು ಇದನ್ನು 20ನೇ ಶತಮಾನದ ಆದಿಯವರೆಗೂ ನಡೆಸಿದರು. ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಸರ್ಕಾರಗಳು ಇಲ್ಲಿಗೆ ಬಂದು ಗಣಿಗಾರಿಕೆ ಶುರು ಮಾಡಿದ್ದವು.

publive-image

1968ರಲ್ಲಿ ನೈರು ದ್ವೀಪ ಸ್ವತಂತ್ರಗೊಂಡಿತು. ಫಾಸ್ಪೆಟ್​ ಮೇಲೆ ತನ್ನದೇ ಹಿಡಿತ ಸಾಧಿಸಿತು. ನೈರು ದ್ವೀಪದ ಆರ್ಥಿಕತೆ ಗಗನಕ್ಕೆ ಮುಟ್ಟುವ ರೀತಿಯಲ್ಲಿ ಬೆಳೆಯಿತು. 1982ರಲ್ಲಿ ನ್ಯೂಯಾರ್ಕ್​ ಟೈಮ್ ವರದಿ ಮಾಡಿದ ಪ್ರಕಾರ ಈ ದ್ವೀಪದ ತಲಾ ಆದಾಯ ಅರಬ್ ರಾಷ್ಟ್ರಗಳನ್ನು ಮೀರಿಸುವ ಮಟ್ಟಕ್ಕೆ ಬೆಳೆದಿತ್ತು. ಇಡೀ ದ್ವೀಪದಲ್ಲಿ ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ, ಫೆರಾರಿಗಳು ಓಡಾಡಲು ಶುರು ಮಾಡಿದವು.
ಜನರ ಬ್ಯಾಂಕ್​ ಬ್ಯಾಲೆನ್ಸ್​ ದೊಡ್ಡ ಮಟ್ಟದಲ್ಲಿ ತುಂಬಿ ತುಳುಕಲು ಆರಂಭಿಸಿದವವು.

ಇದನ್ನೂ ಓದಿ:3ನೇ ಮಗುವಿಗೆ ತಂದೆಯಾದ ವಿವಾದದಲ್ಲಿ ಮಸ್ಕ್​; ಕೊನೆಗೂ ಮೌನ ಮುರಿದ ಟೆಸ್ಲಾ CEO

ಹೀಗಾಗಿ ದ್ವೀಪದ ಜನರ ಕಲ್ಯಾಣಕ್ಕೋಸ್ಕರ ಅವರಿಗೆ ಎಲ್ಲವನ್ನೂ ಫ್ರೀಯಾಗಿ ನೀಡಲು ಆರಂಭಿಸಿತು. ಶಾಲಾ-ಕಾಲೇಜುಗಳು, ಮೆಡಿಕಲ್ ಮತ್ತು ಡೆಂಟಲ್ ಕೇರ್​ ವಿದ್ಯಾಭ್ಯಾಸ, ಬಸ್​ ಸಾರಿಗೆ ಸೇವೆ ಇಷ್ಟೇ ಅಲ್ಲಾ ಸರ್ಕಾರ ನ್ಯೂಸ್​ಪೇಪರ್​ಗಳನ್ನು ಕೂಡ ಫ್ರಿಯಾಗಿ ನೀಡಲು ಆರಂಭಿಸಿತು ಎಂದು ನ್ಯೂಯಾರ್ಕ್ ಟೈಮ್ ವರದಿ ಮಾಡಿದೆ.

ಇದನ್ನೂ ಓದಿ:ಭಾರತದಲ್ಲಿ ಮತದಾನ ಹೆಚ್ಚಿಸಲು ಅಮೆರಿಕಾದಿಂದ 21 ಮಿಲಿಯನ್ ಡಾಲರ್‌? ಎಲಾನ್ ಮಸ್ಕ್ ಹೊಸ ಬಾಂಬ್​? ಏನಿದು?

ಆದರೆ ಮಾರಕ ಖಾಯಿಲೆಯಿಂದ ಬಳಲುತ್ತಿರುವವರು 2500 ಮೈಲಿ ದೂರದಲ್ಲಿರುವ ಆಸ್ಟ್ರೇಲಿಯಾಗೆ ಹೋಗಬೇಕಾಗಿತ್ತು. ಅದರ ವೆಚ್ಚವನ್ನು ಸರ್ಕಾರವೇ ಭರಿಸುತ್ತಿತ್ತು. ಇನ್ನೂ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಗಳು ಉನ್ನತ ವಿದ್ಯಾಭ್ಯಾಸಕ್ಕಾಗಿ ಬರುವ ನೈರು ಜನರಿಂದ ಬೇಕಾಬಿಟ್ಟಿ ಹಣ ಕೀಳಲು ಆರಂಭಿಸಿದವು. ಈ ಎಲ್ಲಾ ಖರ್ಚುಗಳು ಕೇವಲ ಫಾಸ್ಪೆಟ್ ಗಣಿಗಾರಿಕೆ ಆದಾಯದ ಮೇಲೆ ನೀಡಲಾಗುತ್ತಿತ್ತು. ಕೊನೆ ಕೊನೆಗೆ ನೈರುವಿನ ಸಂಪತ್ತು ಕರಗಲು ಶುರುವಾಯಿತು.

ರೂಹಿ ಸೆನೆತ್ ಎಂಬ ಯೂಟ್ಯೂಬರ್​ 2024ರಲ್ಲಿ ನೈರುಗೆ ಭೇಟಿ ಕೊಟ್ಟು ಅಲ್ಲಿಯ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಆ ವಿಡಿಯೋದಲ್ಲಿ ಅವನು ಹೇಳಿರುವ ಪ್ರಕಾರ ನೈರುವಿನ ರಸ್ತೆ ಬದಿಯಲ್ಲಿ ಇಂದಿಗೂ ಕೂಡ ರಸ್ತೆಗೆ ಇಳಿಯದ ಲ್ಯಾಂಬೋರ್ಗಿನಿ ಫೆರಾರಿ ಕಾರುಗಳು ಸಾಲುಗಟ್ಟಿ ನಿಂತಿವೆ. ಲ್ಯಾಂಡಲೋವರ್, ಜೀಪ್​​ಗಳು ಇವೆಲ್ಲವೂ ನೈರುವಿನ ಗತಕಾಲದ ವೈಭವವನ್ನು ತಮ್ಮ ತುಕ್ಕು ಹಿಡಿದ ಬದುಕಿನೊಂದಿಗೆ ಚಿತ್ರಿಸುತ್ತಿವೆ ಎಂದು ಹೇಳಿದ್ದಾನೆ. ಯಾವಾಗ 1990 ರಿಂದ ನೈರುನಲ್ಲಿ ಫಾಸ್ಪೆಟ್ ಗಣಿಗಾರಿಕೆ ಕುಸಿಯಲು ಆರಂಭವಾಯ್ತೋ ಅಂದಿನಿಂದಲೇ ನೈರುವಿನ ವೈಭವದ ಬದುಕು ಕೂಡ ಕುಸಿಯಲು ಆರಂಭಿಸಿತು. ಅಂದು ಸುವರ್ಣಯುಗವನ್ನು ಕಂಡ ದ್ವೀಪ ಇಂದು ದಿವಾಳಿಯಾಗಿ ಹೋಗಿದೆ. ಕೇವಲ ಗತವೈಭವದ ಕುರುಹುಗಳು ಮಾತ್ರ ಅಲ್ಲಿ ಉಳಿದಕೊಂಡಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment