/newsfirstlive-kannada/media/post_attachments/wp-content/uploads/2025/01/Wu-Zetian-1.jpg)
ಸದ್ಯ ನಾವು ಶ್ರೀಮಂತಿಕೆ ಅನ್ನೋ ವಿಚಾರ ಬಂದಲ್ಲಿ ವಿಶ್ವದ ಕೆಲವೊಂದಿಷ್ಟು ಬಿಲೆನೀಯರ್ಗಳ ಬಗ್ಗೆ ಮಾತನಾಡುತ್ತೇವೆ. ಹಲವು ಶ್ರೀಮಂತ ಉದ್ಯಮಿಗಳು ನಮ್ಮ ಮಾತಿನಲ್ಲಿ ಬಂದು ಹೋಗುತ್ತಾರೆ. ಆದ್ರೆ ಇತಿಹಾಸವನ್ನು ಒಮ್ಮೆ ಕೆದಕಿ ನೋಡಿದಾಗ ಅಂದಿನ ರಾಜಮಹಾರಾಜರು ಕಂಡಂತ ಐಶ್ವರ್ಯ ಹಾಗೂ ವೈಭೋಗದ ಜೀವನ ಇಂದಿನ ವಿಶ್ವದ ಶ್ರೀಮಂತರೆನಿಸಿಕೊಂಡವರು ಸಾಧ್ಯವೇ ಇಲ್ಲ. ಅವರ ಕಂಡಂತಹ ಸಂಪತ್ತಿನ ಒಂದಂಶವೂ ಕೂಡ ಇಂದಿನ ಜಗತ್ತಿನ ಶ್ರೀಮಂತರಲ್ಲಿ ನಾವು ಕಾಣುವುದಿಲ್ಲ. ಅಂತಹ ಶ್ರೀಮಂತರ ಸಾಲಿನಲ್ಲಿ ಬರುತ್ತಾರೆ ಅಂದಿನ ಕಾಲದ ಅತ್ಯಂತ ಶ್ರೀಮಂತ ಮಹಾರಾಣಿ, ವು ಜೆಟೈನ್. ಈಕೆಯ ಬಳಿ ಇದ್ದಂತ ಸಂಪತ್ತು ಜಗತ್ತಿನ ಯಾರ ಬಳಿಯೂ ಕೂಡ ಅಂದು ಇರಲಿಲ್ಲ. ಇಂದಿನ ಆಧುನಿಕ ಕಾಲದ ಕೋಟ್ಯಾಧೀಶರ ಬಳಿಯೂ ಕೂಡ ಇಲ್ಲ. ಈ ರಾಣಿ ಕೇವಲ ಶ್ರೀಮಂತಿಕೆಗೆ ಮಾತ್ರವಲ್ಲ ರೂಪ ಲಾವಣ್ಯದ ಜೊತೆ ಜೊತೆ ತನ್ನ ನಿರ್ದಯತೆಯಿಂದಲೂ ಜಗತ್ತಿನಲ್ಲಿ ಗುರುತಿಸಿಕೊಂಡಿದ್ದಳು.
ಇದನ್ನೂ ಓದಿ:ಪ್ರಧಾನಿ ಮೋದಿ ವ್ಯಂಗಿಸುವ ಆ ಶೀಶ್ ಮಹಲ್ ಯಾವುದು ಗೊತ್ತಾ? ಆ ರಾಣಿ ನಕ್ಷತ್ರ ನೋಡಲೆಂದೇ ಸಿದ್ಧಗೊಂಡಿತ್ತು ಕೋಟೆ!
690 ರಿಂದ 705ರವರೆಗೆ ತಂಗ್ ಸಾಮ್ರಾಜ್ಯದ ದೊರಸಾನಿಯಾಗಿ ಆಳ್ವಿಕೆ ಮಾಡಿದ್ದು ಇದೇ ವು ಜೆಟೈನ್. ಈ 2 ಸಾವಿರ ವರ್ಷಗಳಲ್ಲಿ ಚೀನಾವನ್ನಾಳಿದ ಏಕೈಕ ಮಹಾರಾಣಿ ಈ ಜೆಟೈನ್. ಈಕೆಯಾಚೆ ಚೀನಾವನ್ನು ಆಳಿದ ಯಾವ ರಾಣಿಯೂ ಇಲ್ಲ. ಇತಿಹಾಸ ಹೇಳವು ಪ್ರಕಾರ ಜೆಟೈನ್ ಬಳಿ ಅಂದಿನ ಕಾಲದಲ್ಲಿ ಸುಮಾರು 16 ಟ್ರಿಲಿಯನ್ ಯುಎಸ್ ಡಾಲರ್ನಷ್ಟು ಸಂಪತ್ತು ಇತ್ತು ಎಂದು ಹೇಳಲಾಗುತ್ತದೆ. ಇದು ಇಂದಿನ ಮುಖೇಶ್ ಅಂಬಾನಿ, ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಬಳಿ ಇರುವ ಸಂಪತ್ತಿನ ಸಾವಿರಪಟ್ಟು ಜಾಸ್ತಿ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ದೆಹಲಿ ಮಹಿಳೆಯರಿಗಾಗಿ ‘ಪ್ಯಾರಿ ದೀದಿ ಯೋಜನೆ’ ಘೋಷಿಸಿದ ಡಿಕೆ ಶಿವಕುಮಾರ್!
ಈಕೆಯ ಸಿಂಹಾಸನದ ದಾಹ ಆರಂಭವಾಗಿದ್ದೇ ಆಕೆ 13-14 ವರ್ಷದವಳಿದ್ದಾಗಿಂದ. ಅಂದು ತಂಗ್ ಸಾಮ್ರಾಜ್ಯವನ್ನಾಳುತ್ತಿದ್ದ ತೈಜೊಂಗ್ ಈಕೆಯನ್ನು ಉಪಪತ್ನಿಯಾಗಿ ಮದುವೆ ಮಾಡಿಕೊಳ್ಳುತ್ತಾನೆ. ಅರಮನೆಗೆ ಹೆಜ್ಜೆಯಿಟ್ಟ ಜೆನೈಟ್, ತನ್ನ ಪ್ರಭಾವವನ್ನು ನಿಧಾನವಾಗಿ ಬೀರಲು ಆರಂಭಿಸುತ್ತಾಳೆ. ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಈಕೆ ಸಿಂಹಸಾನವನ್ನೇರುವ ದುರಾಸೆಯಿಂದಾಗಿ ಅರಮನೆಯ ಕುಟುಂಬದ ಒಬ್ಬೊಬ್ಬರನ್ನು ಹತ್ಯೆ ಮಾಡಲು ಆರಂಭಿಸುತ್ತಾಳೆ.
ಡಜನ್ಗೂ ಹೆಚ್ಚು ಅರಮನೆಯ ಸಿಬ್ಬಂದಿಗಳನ್ನು ಸೇರಿ ಕುಟುಂಬದವರ ಕಥೆ ಮುಗಿಸುತ್ತಾಳೆ. ಕೊನೆಗೆ ಈಕೆಯ ಕ್ರೌರ್ಯತ್ವ ಯಾವ ಮಟ್ಟಕ್ಕೆ ಹೋಗುತ್ತದೆ ಅಂದ್ರೆ ತನ್ನ ಸಿಂಹಾಸನಕ್ಕೆ ಮುಂದೊಂದು ದಿನ ಈಕೆ ಕಂಟಕವಾಗುತ್ತಾಳೆ ಎಂದು ಹೆತ್ತ ಮಗಳನ್ನೇ ಕತ್ತು ಹಿಸುಕಿ ಆಕೆಯ ಕಥೆಯನ್ನು ಮುಗಿಸುತ್ತಾಳೆ. ಚೀನಾ ಕಂಡ ಏಕೈಕ ಮಹಾರಾಣಿಯನ್ನು ವಿಶ್ವದ ಶ್ರೀಮಂತ ರಾಣಿಯೆಂದು ಗುರುತಿಸಲಾದಂತೆ ಆಕೆಯ ಕ್ರೌರ್ಯವನ್ನೂ ಕೂಡ ಗುರುತಿಸಲಾಗುತ್ತದೆ. ಈ ಮಹಾರಾಣಿಯ ಕಾಲದಲ್ಲಿಯೇ ಅತಿಹೆಚ್ಚು ರಕ್ತಪಾತವಾಗಿತ್ತು. ಈಕೆಯನ್ನು ಜಗತ್ತು ಕಂಡ ಅತ್ಯಂತ ಕ್ರೂರ ಮಹಾರಾಣಿಯೆಂದು ಕೂಡ ಕರೆಯಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ