/newsfirstlive-kannada/media/post_attachments/wp-content/uploads/2024/08/second-largest-diamond-1.jpg)
ದಕ್ಷಿಣ ಆಫ್ರಿಕಾದ ಬೋಟ್ಸವಾನಾದಲ್ಲಿ ವಿಶ್ವದ ಎರಡನೇ ಅತಿದೊಡ್ಡ ವಜ್ರ ಪತ್ತೆಯಾಗಿದೆ. ಕೆನಡಾದ ವಜ್ರದ ಗಣಿಗಾರಿಕೆಯ ಕಂಪನಿಯಾದ ಲುಕಾರ ಡೈಮಂಡ್​ಗೆ ಈ ಒಂದು ವಜ್ರ ದೊರಕಿದ್ದು ಸುಮಾರು 120 ವರ್ಷಗಳ ಬಳಿಕ ಇಂತಹದೊಂದು ವಜ್ರ ಪತ್ತೆಯಾಗಿದೆ ಎಂದು ಲುಕಾರ ಡೈಮಂಡ್ ಹೇಳಿದೆ. ಈ ವಜ್ರ ಸುಮಾರು 2492 ಕ್ಯಾರೆಟ್​​ನ ವಜ್ರವಾಗಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ:Breaking: ನದಿಗೆ ಬಿದ್ದ 40 ಪ್ರಯಾಣಿಕರಿದ್ದ ಬಸ್; ಭಾರೀ ದುರಂತದ ಆತಂಕ
1905ರಲ್ಲಿ ಇದೇ ದಕ್ಷಿಣ ಆಫ್ರಿಕಾದಲ್ಲಿ 3106 ಕ್ಯಾರೆಟ್​ನ ವಜ್ರ ಪತ್ತೆಯಾಗಿತ್ತು. ಅದು ಜಗತ್ತಿನ ಅತ್ಯಂತ ದೊಡ್ಡ ವಜ್ರ ಎಂದೇ ಖ್ಯಾತಿ ಪಡೆದಿದೆ. ಅದಾದ ಬಳಿಕ ಈಗ ಸಿಕ್ಕಿರುವ ವಜ್ರವೇ ಎರಡನೇ ಸ್ಥಾನ ಪಡೆದುಕೊಂಡಿದೆ. ಸುಮಾರು ಅಂಗೈ ಅಗಲದಷ್ಟಿರುವ ಈ ಡೈಮಂಡ್ ಬೋಟ್ಸವಾನಾದ ರಾಜಧಾನಿ ಆದ ಗಬೊರೊನೆ ಬಳಿಯಲ್ಲಿರುವ ಕರೋವಾ ಗಣಿ ಬಳಿ ದೊರಕಿದೆ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2024/08/second-largest-diamond.jpg)
ಇದನ್ನೂ ಓದಿ:ಯೂಟ್ಯೂಬ್ ಇತಿಹಾಸದಲ್ಲೇ ಕ್ರಿಸ್ಟಿಯಾನೋ ರೊನಾಲ್ಡೊ ರೆಕಾರ್ಡ್ ಬ್ರೇಕ್; 24 ಗಂಟೆಯಲ್ಲೇ ಡೈಮಂಡ್ ಬಟನ್!
2019ರಲ್ಲಿ ಇದೇ ಗಣಿಗಾರಿಕೆ ಕಂಪನಿಗೆ ಸುಮಾರು 1758 ಕ್ಯಾರೆಟ್​​ನ ವಜ್ರವೊಂದು ಸಿಕ್ಕಿತ್ತು. ಆಗ ಅದನ್ನು ಜಗತ್ತಿನ ಎರಡನೇ ಅತಿದೊಡ್ಡ ವಜ್ರವಾಗಿ ಪರಿಗಣಿಸಲಾಗಿತ್ತು. ಈಗ ಮತ್ತೆ ಅದೇ ಕರೋವಾ ಮೈನಿಂಗ್ಸ್​​ನಲ್ಲಿ 2492 ಕ್ಯಾರೆಟ್ ಗುಣಮಟ್ಟದ ವಜ್ರ ದೊರಕಿದ್ದು ಕಂಪನಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.
ಈ ಬಗ್ಗೆ ಮಾತನಾಡಿರುವ ಲುಕಾರ ಗಣಿಗಾರಿಕೆ ಸಂಸ್ಥೆಯ ಮುಖ್ಯಸ್ಥ ವಿಲಿಯಮ್ ಲ್ಯಾಂಬ್, ಈ ಒಂದು ಅತಿದೊಡ್ಡ ಡೈಮಂಡ್ ಪತ್ತೆ ಮಾಡಲು ನಾವು ಡೈಮಂಡ್ ರಿಕವರಿ ಎಕ್ಸ್​ರೇ ಅನ್ನೋ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದೆವು. ಆ ತಂತ್ರಜ್ಞಾನ ಸಹಾಯದಿಂದ ಈ ಒಂದು ವಜ್ರ ನಮ್ಮ ಕೈಸೇರಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us