ವಿಶ್ವದ ಅತ್ಯಂತ ಕಡಿಮೆ ದೂರಕ್ಕೂ ವಿಮಾನಯಾನ ಸೌಲಭ್ಯವಿದೆ
ಈ ಪ್ರಯಾಣ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಕೂಡ ಸೇರಿದೆ
ಜಸ್ಟ್ 53 ಸೆಕೆಂಡ್ ಹಾರುವ ವಿಮಾನದ ದರ 1387 ರೂಪಾಯಿ!
ವಿಮಾನಗಳ ಆವಿಷ್ಕಾರದ ನಂತರ ನಗರ, ದೇಶಗಳಿಗೆ ಪ್ರಯಾಣಿಸುವುದು ಅತ್ಯಂತ ಸುಲಭವಾಗಿದೆ. ಸುಮಾರು 18-20 ಗಂಟೆಗಳಲ್ಲಿ ಸಪ್ತ ಸಾಗರಗಳನ್ನೂ ವಿಮಾನದ ಮೂಲಕ ದಾಟಬಹುದು. ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನದಿಂದ ಇದೆಲ್ಲ ಸಾಧ್ಯವಾಗಿದೆ.
ಹೈಪರ್‌ಸಾನಿಕ್ ಮತ್ತು ಸೂಪರ್‌ಸಾನಿಕ್ ವಿಮಾನಗಳವರೆಗೆ ವೈಮಾನಿಕ ಕ್ಷೇತ್ರ ಅಭಿವೃದ್ಧಿ ಹೊಂದಿದೆ. ಸಾಮಾನ್ಯವಾಗಿ ವಿಮಾನ ಹಾರಾಟವನ್ನು ದೀರ್ಘ ಪ್ರಯಾಣಕ್ಕೆ ಉಪಯೋಗಿಸಲಾಗುತ್ತದೆ. ಈಗಂತೂ ವಿಶ್ವದ ಮೂಲೆ ಮೂಲೆಗೂ ವಿಮಾನಯಾನ ಸೌಲಭ್ಯವಿದೆ.
ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರದ ಚಾಂಗಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಉದ್ದದ ವಿಮಾನಯಾನ ಆಗಿದೆ. ವಿಶ್ವದ ಅತ್ಯಂತ ಕಡಿಮೆ ದೂರಕ್ಕೂ ವಿಮಾನಯಾನ ಸೌಲಭ್ಯವಿದೆ ಎನ್ನುವ ವಿಚಾರ ನಿಮಗೆ ಗೊತ್ತೆ?
ಇದನ್ನೂ ಓದಿ: ರಣರಣ ಮರುಭೂಮಿಯಲ್ಲಿ ರಣಭೀಕರ ಮಳೆ; ಸಹರಾದಲ್ಲಿ ಪ್ರವಾಹ ಸೃಷ್ಟಿಸಿದ ವರ್ಷಧಾರೆ!
ಹೌದು ವಿಶ್ವದ ಅತ್ಯಂತ ಕಡಿಮೆ ಹಾರಾಟ ಅವಧಿಯು ಕೇವಲ 2 ನಿಮಿಷಗಳಿಗಿಂತಲೂ ಕಡಿಮೆ ಇದೆ. ಯುನೈಟೆಡ್ ಕಿಂಗ್ಡಮ್ನ ಸ್ಕಾಟ್ಲ್ಯಾಂಡ್ನಲ್ಲಿರುವ ವೆಸ್ಟ್ರೇ ಮತ್ತು ಪ್ಯಾರಾ ವೆಸ್ಟ್ರೇ ದ್ವೀಪಗಳ ನಡುವಿನ ವಿಮಾನ ಹಾರಾಟವು ವಿಶ್ವದಲ್ಲಿಯೇ ಅತ್ಯಂತ ಕಡಿಮೆ ಅವಧಿಯದ್ದಾಗಿದೆ. ಹವಾಮಾನ ಅನುಕೂಲಕರವಾಗಿದ್ದರೆ, ಲಗೇಜ್ ಕಡಿಮೆ ಇದ್ದರೆ ಕೇವಲ 53 ಸೆಕೆಂಡ್ಗಳಲ್ಲಿಯೇ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ವಿಮಾನ ತಲುಪುತ್ತದೆ. ಇದರ ದೂರ 2.7 ಕಿಮೀ. ವಿಮಾನವು ನಿತ್ಯ 2 ರಿಂದ 3 ಟ್ರಿಪ್ ಹಾರಾಟ ನಡೆಸುತ್ತದೆ. ಇದು ಅತ್ಯಂತ ರೋಮಾಂಚನಕಾರಿ ಮತ್ತು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿದೆ.
ಇದನ್ನೂ ಓದಿ: 200 ರಹಸ್ಯ ಬ್ಯಾಂಕ್ ಅಕೌಂಟ್.. ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಮುಚ್ಚಿಟ್ಟ ಸಂಪತ್ತು ಎಷ್ಟು ಗೊತ್ತಾ?
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಕಾರ ವೆಸ್ಟ್ರೇ ಮತ್ತು ಪ್ಯಾರಾ ವೆಸ್ಟ್ರೇ ದ್ವೀಪಗಳ ನಡುವಿನ ಅವಧಿ ಅತ್ಯಂತ ಕಡಿಮೆಯದ್ದಾಗಿದ್ದರೆ, ಲೋಗನೈರ್ ವಿಶ್ವದ ಅತ್ಯಂತ ಕಡಿಮೆ ಅವಧಿಗೆ ಹಾರಾಟ ನಡೆಸುವ ವಾಣಿಜ್ಯ ವಿಮಾನ ಎನಿಸಿದೆ. Loganair ಮೂಲತಃ ಸ್ಕಾಟಿಷ್ ಪ್ರಾದೇಶಿಕ ವಿಮಾನಯಾನ ಸಂಸ್ಥೆ. ಈ ವಿಮಾನ 1967ರಿಂದಲೂ ಕಾರ್ಯನಿರ್ವಹಿಸುತ್ತಿದೆ. ವೆಸ್ಟ್ರೆಯಿಂದ ಪ್ಯಾರಾ ವೆಸ್ಟ್ರೆಗೆ ವಿಮಾನದ ದರ 1387 ರೂ. ಆದರೆ ವಿಮಾನ ಹಾರಾಟದ ಸಮಯ ಮತ್ತು ದೂರಕ್ಕೆ ಹೋಲಿಸಿದ್ರೆ ಈ ದರ ದುಬಾರಿ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ