Advertisment

ಇದು ವಿಶ್ವದ ಅತ್ಯಂತ ಕಠಿಣ ಕೆಲಸ.. ವರ್ಷಕ್ಕೆ 30 ಕೋಟಿ ಸಂಬಳ.. ಇಂದಿಗೂ ಯಾರೊಬ್ಬರೂ ಮುಂದೆ ಬಂದಿಲ್ಲ.

author-image
Gopal Kulkarni
Updated On
ಇದು ವಿಶ್ವದ ಅತ್ಯಂತ ಕಠಿಣ ಕೆಲಸ.. ವರ್ಷಕ್ಕೆ 30 ಕೋಟಿ ಸಂಬಳ.. ಇಂದಿಗೂ ಯಾರೊಬ್ಬರೂ ಮುಂದೆ ಬಂದಿಲ್ಲ.
Advertisment
  • ವರ್ಷಕ್ಕೆ 30 ಕೋಟಿ ಪ್ಯಾಕೇಜ್​ ನೀಡುತ್ತೇವೆ ಎಂದರೂ ಕೆಲಸಗಾರರು ಸಿಗುತ್ತಿಲ್ಲ
  • ಟವರ್ ಒಂದರ ತುತ್ತತುದಿಯ ಮೇಲೆ ದೀಪ ಆರದಂತೆ ನೋಡಿಕೊಳ್ಳುವ ಕೆಲಸ
  • ತೋರಿಕೆ ಇದು ಸಾಮಾನ್ಯ ಕೆಲಸ ಎನಿಸಿದರು ಅಲ್ಲಿರುವ ಸವಾಲುಗಳು ಭಯಾನಕ

ಸುಮ್ಮನೆ ಕಲ್ಪಿಸಿಕೊಳ್ಳಿ ,ವರ್ಷಕ್ಕೆ 30 ಕೋಟಿ ಸಂಬಳ, ಕೇವಲ ಒಂದು ದೀಪ ಆರದಂತೆ ವರ್ಷಾನುಟ್ಟಲೆ ನೋಡಿಕೊಳ್ಳಬೇಕು. ಈ ಒಂದು ಕೆಲಸಕ್ಕಾಗಿ ಜಗತ್ತಿನಲ್ಲಿ ಒಬ್ಬನೇ ಒಬ್ಬ ವ್ಯಕ್ತಿಯೂ ಮುಂದೆ ಬರ್ತಿಲ್ಲ. ಅರೇ ಕೇವಲ ಒಂದು ದೀಪ ಆರದಂತೆ ನೋಡಿಕೊಳ್ಳುವುದು ಯಾವ ಮಹಾಕಾರ್ಯ. ಇಷ್ಟಕ್ಕೆ 30 ಕೋಟಿ ಸಂಬಳವಾ? ಆ ಒಂದು ಕೆಲಸಕ್ಕೆ ಒಬ್ಬೇ ಒಬ್ಬ ವ್ಯಕ್ತಿಯೂ ಸಿಗ್ತಿಲ್ವಾ ಅಂತ ನಿಮಗೆ ಅನಿಸಬಹುದು.

Advertisment

ಆದ್ರೆ ಇದು ನೀವು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇದು ವಿಶ್ವದಲ್ಲಿಯೇ ಅತ್ಯಂತ ಕಠಿಣ ಕೆಲಸವೆಂದೇ ಬಣ್ಣಿಸಲಾಗುತ್ತದೆ. ಈಜಿಪ್ಟನ್ ಪಾರೋಸ್​​ನಲ್ಲಿರುವ ಅಲೆಕ್ಸಾಂಡ್ರಿಯಾ ಕೋಟೆಯಲ್ಲಿ ಬಳಿ ನಿರ್ಮಿಸಲಾಗಿರುವ ಲೈಟ್​ಹೌಸ್​ನ ತುತ್ತತುದಿಯಲ್ಲಿ ಉರಿಯುತ್ತಿರುವ ದೀಪವನ್ನು ಎಂದಿಗೂ ಆರದಂತೆ ಕಾಪಾಡುವ ಕೆಲಸಕ್ಕೇನೇ ತಿಂಗಳಿಗೆ 30 ಕೋಟಿ ರೂಪಾಯಿ ನೀಡುವುದಾಗಿ ಅಲ್ಲಿನ ಸರ್ಕಾರ ಹೇಳುತ್ತಿದೆ. ಆದರೂ ಕೂಡ ಇಂದಿಗೂ ಒಬ್ಬನೇ ಒಬ್ಬ ವ್ಯಕ್ತಿ ಈ ಸವಾಲಿನ ಕೆಲಸವನ್ನು ಮಾಡಲು ಮುಂದೆ ಬಂದಿಲ್ಲ

ಇದನ್ನೂ ಓದಿ:Jaffar Express ಹೈಜಾಕ್.. ಪಾಕ್​ನಿಂದ ಬಲೂಚ್ ಬಂಡುಕೋರರು ಬಯಸುತ್ತಿರೋದು ಏನೇನು?

ಹಲವಾರು ವರ್ಷಗಳ ಹಿಂದೆ ಹೆಸರಾಂತ ಮಾರಿಷಿಯಸ್​​ನ ನಾವಿಕನೊಬ್ಬ​ ಈಜಿಪ್ತ್​ನ ಸಮೀಪದಲ್ಲಿರುವ ಅಲೆಕ್ಸಾಂಡ್ರಿಯಾ ಬಳಿ ನೌಕಾಯಾನ ಮಾಡುತ್ತಿದೆ. ಈ ವೇಳೆ ದೊಡ್ಡದೊಂದು ಚಂಡಮಾರುತ ಅಪ್ಪಳಿಸಿತು. ಸಮುದ್ರದಾಳದ ನೀರೇ ಆ ಬೋಟ್​ನ ಕ್ಯಾಪ್ಟನ್​​ಗೆ ದೊಡ್ಡ ಮೋಸ ಮಾಡಿತು. ಸಾಗರದ ಅಡಿಯಲ್ಲಿರುವ ದೊಡ್ಡ ದೊಡ್ಡ ಬಂಡೆಗಳಿಗೆ ಬಡಿದ ಹಡಗು ಧ್ವಂಸಗೊಂಡಿತು. ನೂರಾರು ಜನರು ಇಲ್ಲಿ ದುರಂತ ಅಂತ್ಯ ಕಂಡರು. ಲಕ್ಷಾಂತರ ಮೌಲ್ಯದ ಸರಕುಗಳು ಸಾಗರದ ಪಾಲಾಯಿತು. ಈ ಒಂದು ದುರಂತ ಇಲ್ಲಿ ಒದಗುವ ಅಪಾಯದ ಕುರಿತು ಹಡಗುಗಳಿಗೆ ಮಾರ್ಗದರ್ಶನ ನೀಡುವ ಒಂದು ಮುನ್ನೆಚ್ಚರಿಕೆಯ ಬೆಳಕು ತೋರಿಸುವ ಕಟ್ಟಡವನ್ನು ಸಮುದ್ರ ಮಧ್ಯದಲ್ಲಿ ನಿರ್ಮಿಸುವ ಅಗತ್ಯವನ್ನು ಮನಗಾಣಿಸಿತು.

Advertisment

publive-image

ಇದನ್ನು ಮನಗಂಡ ಅಲೆಕ್ಸಾಂಡ್ರಿಯಾದ ರಾಜ, ಮುಂದೆ ನೌಕಾಯಾನ ಮಾಡುವವರಿಗೆ ಇದು ಅಪಾಯವನ್ನುಂಟು ಮಾಡಬಹದು ಎಂದು. ನುರಿತ ಆರ್ಟಿಟೆಕ್ಟ್​ಗಳನ್ನು ಕರೆಸಿ. ಅತಿ ಎತ್ತರದ ಟವರ್​ ಒಂದನ್ನು ಸಮುದ್ರದ ಮಧ್ಯೆ ನಿರ್ಮಿಸುವಂತೆ ಸೂಚಿಸಿದ. ಅದು ಈ ಮಾರ್ಗದಲ್ಲಿ ಬರುವ ಹಡಗುಗಳಿಗೆ ಅಪಾಯದ ಅರಿವನ್ನು ಮೂಡಿಸವಂತಾಗಿ ಎಂದು ಮುಂದಾಲೋಚನೆಯಿಂದ ಇ ಒಂದು ಕಾರ್ಯಕ್ಕೆ ಸಿದ್ಧನಾದ. ರಾಜನ ಹೇಳಿದ ರೀತಿ ನುರಿತ ವಾಸ್ತುಶಿಲ್ಪಿಗಳು ಪರೋಸ್​ನ ದ್ವೀಪದಲ್ಲಿ ಒಂದು ಭವ್ಯವಾದ ಲೈಟ್​ಹೌಸ್​​​ ಎಂಬ ಟವರ್​ನನ್ನು ನಿರ್ಮಿಸಿದರು. ಇದೊಂದು ಇಂಜಿನಿಯರಿಂಗ್ ಜಗತ್ತಿನ ಅದ್ಭು ಎನ್ನುವಂತೆ ಜಗತ್ತಿನ ತುಂಬಾ ಹಳೆಯ ಟವರ್ ಒಂದು ನಿರ್ಮಾಣವಾಯಿತು. ಟವರ್​​ ತುತ್ತತುದಿಯಲ್ಲಿ ದೊಡ್ಡದೊಂದು ಬೆಂಕಿಯೂ ಸದಾ ಹೊತ್ತಿ ಉರಿಯುವಂತೆ ಮಾಡಲಾಯಿತು. ಈ ಮಾರ್ಗದಲ್ಲಿ ಚಲಿಸುವ ಹಡಗುಗಳಿಗೆ ನೂರಾರು ಕಿಲೋಮೀಟರ್ ದೂರದಲ್ಲಿಯೇ ಈ ಉರಿಯಂತ ದೀಪ ಕಾಣಿಸಿಕೊಂಡು ಅವರು ತಮ್ಮ ದಿಕ್ಕನ್ನು ಬದಲಿಸಲು ಅನುಕೂಲವಾಗುವಂತೆ ಮಾಡಲಾಯ್ತು.

ಇದನ್ನೂ ಓದಿ:ಕಾಡು ಉಳಿಸೋ ಶೃಂಗಸಭೆ, ಆದ್ರೆ ಸಾವಿರಾರು ಮರಗಳನ್ನೇ ಕಡಿದರು; Amazon ಅಲ್ಲಿ ಅರಣ್ಯರೋಧನ!

publive-image

ಈ ಲೈಟ್​ ಹೌಸ್​ನಲ್ಲಿ ಒಂದೇ ಒಂದು ಕೆಲಸ. ಅದು ಸದಾ ಟವರ್​​ನ ಮೇಲೆ ದೀಪ ಉರಿಯುವಂತೆ ನೋಡಿಕೊಳ್ಳ್ಲುವುದು. ಆದ್ರೆ ಈ ಕೆಲಸಕ್ಕೆ ಇಂದಿಗೂ ಕೂಡ ಒಬ್ಬರು ಹೋಗಿಲ್ಲ. ಹೋಗಲು ಮನಸ್ಸು ಮಾಡುತ್ತಿಲ್ಲ. ಕಾರಣ ಕೆಲಸ ಅಷ್ಟೊಂದು ಸರಳವಾದದ್ದಲ್ಲ. ಈ ಕೆಲಸ ಊಹಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಕಾಠಿಣ್ಯಗಳಿಂದ ಒಳಗೊಂಡಿದೆ.

Advertisment

publive-image

ವರ್ಷಕ್ಕೆ 30 ಕೋಟಿ ರೂಪಾಯಿ ಪ್ಯಾಕೇಜ್ ಆಫರ್ ಮಾಡಿದರು ಕೂಡ ಯಾರೊಬ್ಬರು ಈ ಕೆಲಸ ಮಾಡಲು ಮುಂದೆ ಬರುತ್ತಿಲ್ಲ. ಕಾರಣ ಸದಾ ಪ್ರತ್ಯೇಕವಾಗಿ ಇರುವ ಹಾಗೂ ನೂರಾರು ಅಪಾಯಗಳನ್ನು ತಡೆದೊಕೊಳ್ಳಬಲ್ಲವರು ಮಾತ್ರ ಈ ಒಂದು ಕೆಲಸಕ್ಕೆ ಕೈ ಹಾಕುತ್ತಾರೆ. ಇನ್ನು ಒಂದು ದೊಡ್ಡ ಸಮಸ್ಯೆಯೆಂದರೆ ಇಲ್ಲಿ ಒಂಟಿನತ ಎನ್ನುವುದು ನಿಮ್ಮನ್ನು ಅಕ್ಷರಶಃ ತಿಂದು ಹಾಕುತ್ತದೆ. ಸುತ್ತಲೂ ಕಣ್ಣು ಹಾಯಿಸಿದ ಕಡೆ ಕೊನೆಯನ್ನೇ ಕಾಣದ ನೀರನ್ನೇ ತುಂಬಿಕೊಂಡು ನಿಂತಿರುವ ಕಡಲು. ಒಬ್ಬನೇ ಒಬ್ಬ ಮನುಷ್ಯನ ಸುಳಿವು ಕೂಡ ಕಾಡುವುದಿಲ್ಲ. ಅದು ಮಾತ್ರವಲ್ಲ. ಈ ಲೈಟ್​​ಹೌಸ್​ ಸುತ್ತಲೂ ಸದಾ ಬಿರುಗಾಳಿಯ ರುದ್ರನರ್ತನ ಕಾಡುತ್ತಲೇ ಇರುತ್ತದೆ. ಕೆಲವೊಮ್ಮೆ ದೈತ್ಯ ಅಲೆಗಳು ಇಡೀ ಲೈಟ್​ಹೌಸ್​ ರಚನೆಯನ್ನೇ ಸುತ್ತುವರೆದುಕೊಂಡು ಬಿಡುತ್ತದೆ. ಅಲ್ಲಿ ಕೆಲಸ ಮಾಡಬೇಕಾದವನನು ಸದಾ ಲೈಟ್​ಹೌಸ್ ಒಳಗಡೆನೇ ಇರಬೇಕಾಗುತ್ತದೆ. ಲೈಟ್​​ಹೌಸ್​ನ ದೀಪವನ್ನು ಎಂದಿಗೂ ಆರದಂತೆ ಕಾಯಬೇಕಾಗುತ್ತದೆ. ಒಂಟಿತನ, ಭೀಕರ ಬಿರುಗಾಳಿ ಸೇರಿದಂತೆ ಹಲವು ಸವಾಲುಗಳು ಈ ಕೆಲಸದ ಕಠಿಣತೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಹೀಗಾಗಿ ಅಲೆಕ್ಸಾಂಡಿಯಾದ ಈ ಒಂದು ಪಾರಸ್​ ದ್ವೀಪದಲ್ಲಿ ಈ ಕೆಲಸ ಮಾಡಲು ಧೈರ್ಯದಿಂದ ಯಾರು ಮುಂದೆ ಬರದೆ ಇಂದಿಗೂ ಕೂಡ ಖಾಲಿಯಾಗಿಯೇ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment