newsfirstkannada.com

VIDEO: ಶಾಕಿಂಗ್​ ನ್ಯೂಸ್​​.. ಬೇಸಿಗೆ ಅಂತಾ ಐಸ್​ ಕ್ರೀಮ್​ ತಿನ್ನೋರೇ ಎಚ್ಚರ!

Share :

Published April 6, 2024 at 5:41pm

  ಬಿಸಿಲಿನ ಬೇಗೆಗೆ ತಂಪು ಪಾನೀಯ ಮೋರೆ ಹೋಗುತ್ತಿರೋ ಜನ

  ಲುಲು ಮಾಲ್​ನ ಫಲೂದ ನೇಷನ್​ ಶಾಪ್​​ನಲ್ಲಿ ನಡೆದ ಘಟನೆ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಈ ವಿಡಿಯೋ

ಲಕ್ನೋ: ಇಡೀ ದೇಶಾದ್ಯಂತ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಸಿಲಿನ ಬೇಗೆಗೆ ತಾಳಲಾರದೇ ಜನರು ತಂಪು ಪಾನೀಯ ಕಡೆ ಮುಖ ಮಾಡುತ್ತಿದ್ದಾರೆ. ಚಿಕ್ಕ ಮಕ್ಕಳಂತೂ ಐಸ್ ಕ್ರೀಂ, ಫ್ರೂಟ್ಸ್ ಜ್ಯೂ ಅಂತಾ ಮೊರೆ ಹೋಗುತ್ತಿದ್ದಾರೆ. ಆದರೆ ಹೀಗೆ ಮಕ್ಕಳಿಗೆ ಐಸ್ ಕ್ರೀಂ ಕೊಡಿಸಿದ ಪೋಷಕರು ಶಾಕ್​ ಆಗಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಮಹಿಳೆಯರೇ ಎಚ್ಚರ.. ಮಗನೊಂದಿಗೆ ಸರಗಳ್ಳತನ ಮಾಡುತ್ತಿದ್ದ ತಾಯಿ ಅರೆಸ್ಟ್

ಲಕ್ನೋದ ಪ್ರತಿಷ್ಠಿತ ಲುಲು ಮಾಲ್​ನ ಶಾಪ್​ವೊಂದರಲ್ಲಿ ಖರೀದಿ ಮಾಡಿದ್ದ ಐಸ್ ಕ್ರೀಂನಲ್ಲಿ ಹುಳು ಪತ್ತೆಯಾಗಿದೆ. ಐಸ್ ಕ್ರೀಂ ತಿನ್ನಲು ಅಂತ ಬಂದ ಗ್ರಾಹಕರು ಹುಳ ನೋಡಿ ಒಂದು ಕ್ಷಣ ಗಾಬರಿಯಾಗಿದ್ದಾರೆ. ಹೌದು, ಲುಲು ಮಾಲ್​ನ ಫಲೂದ ನೇಷನ್ ಶಾಪ್​​ವೊಂದರಲ್ಲಿ ಗ್ರಾಹಕರು ಐಸ್ ಕ್ರೀಂ ಆಡರ್​ ಮಾಡಿದ್ದರು. ಐಸ್ ಕ್ರೀಂ ತಿನ್ನುತ್ತಿದ್ದ ವೇಳೆ ಚಮಚದಲ್ಲಿ ಹುಳು ಪತ್ತೆಯಾಗಿದೆ. ಕೂಡಲೇ ಗಾಬರಿಗೊಂಡ ಗ್ರಾಹಕ ಹುಳ ಇದೆ ಅಂತ ಶಾಪ್​ನ ಸಿಬ್ಬಂದಿಗೆ ತೋರಿಸಿದ್ದಾರೆ. ಇದನ್ನು ನೋಡಿದ ಶಾಪ್​ ಸಿಬ್ಬಂದಿ ಏನೂ ಆಗೇ ಇಲ್ಲ ಅನ್ನೋ ಹಾಗೇ ಪ್ರತಿಕ್ರಿಯೆ ನೀಡಿದ್ದಾರೆ. ಆಯ್ತು ಬಿಡಿ ಬೇರೆ ಐಸ್ ಕ್ರೀಂ ಕೊಡುತ್ತೇನೆ ಅಂತ ಸಿಬ್ಬಂದಿ ಉಡಾಫೆ ಉತ್ತರ ಕೊಟ್ಟಿದ್ದಾರೆ.

ಸದ್ಯ ಐಸ್ ಕ್ರೀಂನಲ್ಲಿ ಹುಳ ಪತ್ತೆಯಾದ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೇ ವಿಡಿಯೋ ಈಗ ಸಖತ್​ ವೈರಲ್​ ಆಗುತ್ತಿದೆ. ವಿಡಿಯೋವನ್ನು ನೋಡಿದ ನೆಟ್ಟಿಗರು ಮಾಲ್​ನಲ್ಲೇ ಈ ರೀತಿಯಾದ್ರೆ ಇನ್ನೂ ಹೊರಗಡೆ ಹೇಗೆ ಅಂತ ಕಮೆಂಟ್ ಮಾಡಿ, ಲುಲು ಮಾಲ್ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಶಾಕಿಂಗ್​ ನ್ಯೂಸ್​​.. ಬೇಸಿಗೆ ಅಂತಾ ಐಸ್​ ಕ್ರೀಮ್​ ತಿನ್ನೋರೇ ಎಚ್ಚರ!

https://newsfirstlive.com/wp-content/uploads/2024/04/hula.jpg

Load More