ಅಮೆರಿಕದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಭಾರೀ ವಿರೋಧ.. ಡೊನಾಲ್ಡ್​ ಟ್ರಂಪ್ vs ಎಲಾನ್ ಮಸ್ಕ್!

author-image
Bheemappa
Updated On
ಅಮೆರಿಕದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಭಾರೀ ವಿರೋಧ.. ಡೊನಾಲ್ಡ್​ ಟ್ರಂಪ್ vs ಎಲಾನ್ ಮಸ್ಕ್!
Advertisment
  • ಎಲಾನ್ ಮಸ್ಕ್​​ನ ಆಫ್ರಿಕಾಗೆ ಕಳಿಸಬೇಕಾಗುತ್ತದೆ ಎಂದ ಟ್ರಂಪ್
  • ಡೊನಾಲ್ಡ್ ಟ್ರಂಪ್ ಹಾಗೂ ಎಲಾನ್ ಮಸ್ಕ್ ನಡುವೆ ಜಗಳ ಏಕೆ?
  • ವಿಶ್ವದ ಇಬ್ಬರು ದಿಗ್ಗಜರ ಮಧ್ಯೆ ಅಮೆರಿಕದಲ್ಲೇ ನಡೆದಿದೆ ಗಲಾಟೆ

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಮಾಜಿ ಸಲಹೆಗಾರ ಎಲಾನ್ ಮಸ್ಕ್​​ರನ್ನು ಅಮೆರಿಕಾದಿಂದಲೇ ಗಡೀಪಾರು ಮಾಡುವ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದಲ್ಲಿ ಎಲಾನ್ ಮಸ್ಕ್ ತಮ್ಮ ಟೆಸ್ಲಾ ಕಂಪನಿಯ ಬಾಗಿಲು ಮುಚ್ಚಿ ವಾಪಸ್ ದಕ್ಷಿಣ ಆಫ್ರಿಕಾಗೆ ಹಿಂತಿರುಗಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಡೋನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಮಧ್ಯೆ ಮತ್ತೆ ಬಹಿರಂಗ ಸಮರ ಆರಂಭವಾಗಿದೆ.

ಡೋನಾಲ್ಡ್ ಟ್ರಂಪ್ ಮತ್ತು ಎಲಾನ್ ಮಸ್ಕ್ ಕಳೆದ ಕೆಲ ದಿನಗಳು ಮತ್ತೆ ಒಂದಾಗಬಹುದು ಎಂಬ ಸುಳಿವು ನೀಡಿದ್ದರು. ಆದರೇ, ಎಲಾನ್ ಮಸ್ಕ್ ಅಮೆರಿಕಾದಲ್ಲಿ ತಮ್ಮದೇ ಆದ ಹೊಸ ರಾಜಕೀಯ ಪಕ್ಷ ಆರಂಭಿಸುವ ಆಸೆ ವ್ಯಕ್ತಪಡಿಸಿದ ಮೇಲೆ ಡೋನಾಲ್ಡ್ ಟ್ರಂಪ್ ಮತ್ತೆ ಎಲಾನ್ ಮಸ್ಕ್ ಮೇಲೆ ಕೋಪಗೊಂಡಿದ್ದಾರೆ. ಈ ಕೋಪದಲ್ಲೇ ಅಮೆರಿಕಾದಲ್ಲಿ ಟೆಸ್ಲಾ ಕಂಪನಿಯ ಬಾಗಿಲು ಮುಚ್ಚಿಸುತ್ತೇನೆ ಎಂಬ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದಲ್ಲಿ ಟೆಸ್ಲಾ ಎಲೆಕ್ಟ್ರಿಕ್ ಕಾರ್​ಗಳಿಗೆ ಹೆಚ್ಚಿನ ಸಬ್ಸಿಡಿಯನ್ನು ಸರ್ಕಾರ ನೀಡಿದೆ. ಭೂಮಿಯ ಮೇಲೆ ಮನುಷ್ಯರ ಪಡೆದ ಹೆಚ್ಚಿನ ಸಬ್ಸಿಡಿಗಳನ್ನು ಎಲೆಕ್ಟ್ರಿಕ್ ಕಾರ್, ಮಸ್ಕ್​​​ಗೆ ನೀಡಲಾಗಿದೆ. ಸಬ್ಸಿಡಿ ನಿಲ್ಲಿಸಿದರೇ, ಮಸ್ಕ್ ಅಂಗಡಿಯ ಬಾಗಿಲು ಮುಚ್ಚಬೇಕಾಗುತ್ತೆ ಎಂದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಟ್ರೂಥ್​​ನಲ್ಲಿ ಹೇಳಿದ್ದಾರೆ.

publive-image

ಟ್ರಂಪ್ ಎಲೆಕ್ಟ್ರಿಕ್ ಕಾರುಗಳ ವಿರೋಧಿ

ಎಲಾನ್ ಮಸ್ಕ್‌ಗೂ ಗೊತ್ತಿರುವ ವಿಷಯ ಏನೆಂದರೇ, ಎಲಾನ್ ಮಸ್ಕ್​​ರನ್ನು ಬೆಂಬಲಿಸುವುದಕ್ಕಿಂತ ಮುಂಚಿನಿಂದಲೂ ನಾನು ಎಲೆಕ್ಟ್ರಿಕ್ ಕಾರುಗಳ ವಿರೋಧಿ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದು ಹಾಸ್ಯಾಸ್ಪದ. ಇದು ನನ್ನ ಕ್ಯಾಂಪೇನ್ ದೊಡ್ಡ ಭಾಗವಾಗಿತ್ತು. ಎಲೆಕ್ಟ್ರಿಕ್ ಕಾರುಗಳು ಒಳ್ಳೆಯವು. ಆದರೇ, ಎಲ್ಲರಿಗೂ ಎಲೆಕ್ಟ್ರಿಕ್ ಕಾರು ಕೊಳ್ಳುವಂತೆ ಬಲವಂತ ಮಾಡಬಾರದು. ಎಲಾನ್ ಮಸ್ಕ್, ಬೇರೆಯವರಿಗಿಂತ ಹೆಚ್ಚಿನ ಸಬ್ಸಿಡಿ ಪಡೆದಿದ್ದಾರೆ. ಸಬ್ಸಿಡಿ ಇಲ್ಲದಿದ್ದರೇ, ಎಲಾನ್ ಮಸ್ಕ್ ತಮ್ಮ ಅಂಗಡಿ ಮುಚ್ಚಬೇಕಾಗುತ್ತೆ. ವಾಪಸ್ ದಕ್ಷಿಣ ಆಫ್ರಿಕಾಗೆ ಹೋಗಬೇಕಾಗುತ್ತೆ ಎಂದು ಡೋನಾಲ್ಡ್ ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ.

ರಾಕೆಟ್ ಲಾಂಚ್, ಸ್ಯಾಟಲೈಟ್ ಅಥವಾ ಎಲೆಕ್ಟ್ರಿಕ್ ಕಾರ್ ಉತ್ಪಾದನೆ ಇಲ್ಲದೇ ಇದ್ದರೇ, ನಮ್ಮ ದೇಶ ಬಹಳಷ್ಟು ಅನ್ನು ಉಳಿತಾಯ ಮಾಡಬಹುದು. ಡಿಪಾರ್ಟ್​​​ಮೆಂಟ್ ಆಫ್ ಗರ್ವನೆನ್ಸ್ ಅಂಡ್ ಎಫಿಷಿಯನ್ಸಿ ಇದರ ಬಗ್ಗೆ ಗಮನ ಹರಿಸಬೇಕು. ದೊಡ್ಡ ಮೊತ್ತದ ಹಣವನ್ನು ಉಳಿತಾಯ ಮಾಡಬಹುದು ಎಂದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

ಡೋನಾಲ್ಡ್ ಟ್ರಂಪ್ ಸರ್ಕಾರದ ಜನಪ್ರಿಯವಲ್ಲದ ಪ್ಯಾಕೇಜ್ ಅನ್ನು ಬೆಂಬಲಿಸುವ ಸಂಸದರನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿ ಎಲಾನ್ ಮಸ್ಕ್ ಬೆದರಿಕೆ ಹಾಕಿದ್ದಾರೆ.

ಭೂಮಿಯ ಮೇಲೆ ಮಾಡುವ ಕೊನೆಯ ಕೆಲಸ

ಸರ್ಕಾರದ ವೆಚ್ಚ ಕಡಿಮೆ ಮಾಡುವುದಾಗಿ ಪ್ರಚಾರ ಮಾಡಿದ್ದ ಕಾಂಗ್ರೆಸ್ ಸದಸ್ಯರು, ಈಗ ತಕ್ಷಣವೇ ಇತಿಹಾಸದಲ್ಲೇ ಅತಿ ದೊಡ್ಡದಾದ ಸಾಲದ ಹೆಚ್ಚಳದ ಪರವಾಗಿ ವೋಟ್ ಹಾಕುತ್ತಿದ್ದಾರೆ. ಇಂಥವರು ನಾಚಿಕೆಯಿಂದ ತಲೆ ತಗ್ಗಿಸಬೇಕು ಎಂದು ಎಲಾನ್ ಮಸ್ಕ್ ಟ್ವೀಟರ್​ನಲ್ಲಿ ಟ್ವೀಟ್ ಮಾಡಿದ್ದಾರೆ. ಮುಂದಿನ ವರ್ಷ ಇವರೆಲ್ಲಾ ತಮ್ಮ ಪ್ರೈಮರಿ ಚುನಾವಣೆಯಲ್ಲೇ ಸೋಲುತ್ತಾರೆ. ನಾನು ಭೂಮಿಯ ಮೇಲೆ ಮಾಡುವ ಕೊನೆಯ ಕೆಲಸ ಇದು ಎಂದು ಟೆಸ್ಲಾ ಕಂಪನಿಯ ಸಿಇಓ ಹಾಗೂ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಟ್ವೀಟ್ ಮಾಡಿದ್ದಾರೆ.

ನಾನು ಅಮೆರಿಕಾದಲ್ಲಿ ಹೊಸ ರಾಜಕೀಯ ಪಕ್ಷ, ಅಮೆರಿಕನ್ ಪಾರ್ಟಿ ಆರಂಭಿಸುವುದಾಗಿ ಎಲಾನ್ ಮಸ್ಕ್ ಎಚ್ಚರಿಕೆ ನೀಡಿದ್ದಾರೆ. ಅಮೆರಿಕಾದ ಕಾಂಗ್ರೆಸ್ ಸಂಸದರು ಡೋನಾಲ್ಡ್ ಟ್ರಂಪ್ ಅವರ ಬಿಗ್ ಬ್ಯೂಟಿಫುಲ್ ಮಸೂದೆಯನ್ನು ಬೆಂಬಲಿಸಿದರೇ, ತಾವು ಹೊಸ ರಾಜಕೀಯ ಪಕ್ಷ ಆರಂಭಿಸುವುದಾಗಿ ಎಲಾನ್ ಮಸ್ಕ್ ಘೋಷಿಸಿದ್ದಾರೆ.

ಯುಎಸ್ ಸೆನೆಟ್ ಶನಿವಾರ ಅಧ್ಯಕ್ಷ ಟ್ರಂಪ್ ಅವರ ಪ್ರಮುಖ ತೆರಿಗೆ ಕಡಿತ ಮತ್ತು ಖರ್ಚು ಮಸೂದೆಯನ್ನು ಮುಂದುವರೆಸಿತು. ಜುಲೈ 4 ರಿಂದ ಅಮೆರಿಕಾದ ಪಾರ್ಲಿಮೆಂಟ್​​ನ ಬ್ರೇಕ್‌ಗೂ ಮುನ್ನ ಮಸೂದೆಯನ್ನು ಅಂಗೀಕರಿಸಲಾಗಿದೆ.

ಇದನ್ನೂ ಓದಿ:BJPಯ ಮಾಜಿ ಕಾರ್ಪೋರೇಟರ್ ಮನೆಯಲ್ಲಿ ಯುಪಿಎಸ್ ಸ್ಫೋಟ.. ಜೀವ ಬಿಟ್ಟ ಇಬ್ಬರು

publive-image

ಒನ್ ಬಿಗ್ ಬ್ಯೂಟಿಫುಲ್ ಬಿಲ್ ಏನಿದು?

940 ಪುಟಗಳ ಪ್ಯಾಕೇಜ್​​ ಅನ್ನು ಔಪಚಾರಿಕವಾಗಿ ಒನ್ ಬಿಗ್ ಬ್ಯೂಟಿಫುಲ್ ಬಿಲ್ ಎಂಬ ಹೆಸರಿನಡಿ 51-49 ಮತಗಳ ಅಂತರದಲ್ಲಿ ಶನಿವಾರ ತಡರಾತ್ರಿ ಹೌಸ್ ಆಫ್ ರೆಪ್ರೆಸೆಂಟೆಟೀವ್ಸ್​​ನಲ್ಲಿ ಅನುಮೋದಿಸಲಾಗಿದೆ. ಮೇಲ್ಮನೆಯಾದ ಸೆನೆಟ್​ನಲ್ಲಿ ಪ್ರಾಥಮಿಕ ಅನುಮೋದನೆ ಪಡೆದಿದೆ. ಇದು ಮಸೂದೆಯ ಬಗ್ಗೆ ಔಪಚಾರಿಕ ಚರ್ಚೆಗೆ ವೇದಿಕೆ ಕಲ್ಪಿಸಿದೆ. ಸೆನೇಟ್​​ನಲ್ಲಿ ಮಸೂದೆಗೆ ತಿದ್ದುಪಡಿಯಾಗಿ ಅದಕ್ಕೆ ವೋಟಿಂಗ್ ಮೂಲಕ ಅನುಮೋದನೆ ಸಿಕ್ಕರೆ, ನಂತರ ಈ ತಿದ್ದುಪಡಿ ಮಸೂದೆ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್​ನ ಅನುಮೋದನೆಗೆ ವಾಪಸ್ ಬರುತ್ತದೆ. ಅಲ್ಲಿ ಒಪ್ಪಿಗೆ ಪಡೆದ ಬಳಿಕ ಅಧ್ಯಕ್ಷರಿಂದ ಅಂತಿಮ ಮುದ್ರೆ ಸಿಕ್ಕು ನಂತರ ಕಾಯ್ದೆಯಾಗಿ ಬದಲಾಗುತ್ತದೆ.

ಮಸೂದೆಯು 2017ರ ತೆರಿಗೆ ಕಡಿತವನ್ನು ವಿಸ್ತರಿಸಲು, ಇತರ ತೆರಿಗೆ ಕಡಿತಗೊಳಿಸಲು ಮತ್ತು ಮಿಲಿಟರಿ ಮತ್ತು ಗಡಿ ಭದ್ರತಾ ಖರ್ಚು ಹೆಚ್ಚಿಸಲು ಉದ್ದೇಶಿಸಿದೆ. ಆದರೆ ಮೆಡಿಕೈಡ್, ಆಹಾರ, ಅಂಚೆ ಚೀಟಿಗಳು, ನವೀಕರಿಸಬಹುದಾದ ಇಂಧನ ಮತ್ತು ಇತರ ಸಾಮಾಜಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಭಾರಿ ಕಡಿತದ ಮೂಲಕ ಆದಾಯ ನಷ್ಟವನ್ನು ಸರಿದೂಗಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment