ಮಹಾ ಕುಂಭದ ಅದ್ಭುತ ಫೋಟೋಗಳು.. ಭೋಲೇನಾಥನ ಆರಾಧನೆಯಲ್ಲಿ ತ್ರಿವೇಣಿ ಸಂಗಮ ಹೇಗೆ ಕಾಣ್ತಿದೆ..?

author-image
Ganesh
Updated On
ಮಹಾ ಕುಂಭಮೇಳಕ್ಕೆ ನೀಲಿ ಕಣ್ಣುಗಳ ಬ್ಯೂಟಿ ಮೊನಾಲಿಸಾ ಗುಡ್​ಬೈ.. ಕಾರಣವೇನು?
Advertisment
  • ಮಹಾ ಕುಂಭಮೇಳ ದೊಡ್ಡ ಧಾರ್ಮಿಕ ಸಂಗಮ
  • ಉತ್ತರ ಪ್ರದೇಶದ ಪ್ರಯಾಗ್‌ರಾಜ್​ನಲ್ಲಿ ಮಹಾಕುಂಭ
  • 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿ ನಿಯೋಜನೆ

ಮಹಾ ಕುಂಭಮೇಳ.. ಕೋಟ್ಯಂತರ ಭಕ್ತರನ್ನ ಸೆಳೆಯುತ್ತಿರೋ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ.. ಪ್ರಯಾಗ್‌ರಾಜ್‌ ಮಿನಿ ಭಾರತದಂತೆ ಕಾಣಿಸ್ತಿದೆ.. ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ.. 144 ವರ್ಷಗಳಿಗೊಮ್ಮೆ ಬರೋ ಮಾಹಾಕುಂಭಮೇಳ ಆ ಭೋಲೇನಾಥನ ಆರಾಧನೆಯಲ್ಲಿ ತೇಲಿಸುತ್ತಿದೆ.

ಇದನ್ನೂ ಓದಿ: ಮಹಾಕುಂಭದಲ್ಲಿ ಸಾಧ್ವಿ ಹರ್ಷ ರಿಚರಿಯಾ ವಿವಾದ; ಭುಗಿಲೆದ್ದ ಆಕ್ರೋಶ..

publive-image

ರಾತ್ರಿ ವೇಳೆ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡ ಪ್ರಯಾಗರಾಜ್​ನ ಅದ್ಭುತ ಫೋಟೋಗಳನ್ನು ಮಹಾಕುಂಭ ಹಂಚಿಕೊಂಡಿದೆ. ಮಹಾಕುಂಭ ನಡೆಯುತ್ತಿರುವ ವಿಹಂಗಮ ನೋಟದ ಫೋಟೋಗಳು ಅದಾಗಿವೆ.

ಜನವರಿ 13 ರಂದು ಪುಷ್ಯ ಪೂರ್ಣಿಮಾ ಸ್ನಾನ.. ಜನವರಿ 15 ರಂದು ಮಕರ ಸಂಕ್ರಾಂತಿ ಪುಣ್ಯಸ್ನಾನ.. ಇವೆರೆಡು ಮುಗಿದಿದೆ.. ಸದ್ಯಕ್ಕೆ ಮುಂದಿರೋದು ಜನವರಿ 29 ರಂದು ನಡೆಯೋ ಮೌನಿ ಅಮಾವಾಸ್ಯೆ ಪುಣ್ಯಸ್ನಾನ.. ಜನವರಿ 13 ರಂದು 1.75 ಕೋಟಿಯಷ್ಟು ಭಕ್ತರು ಸ್ನಾನ ಮಾಡಿದ್ರು.. ಜನವರಿ 15 ರಂದು 3.5 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದ್ರು.. ಜನವರಿ 29 ರಂದು ಸುಮಾರು 8 ರಿಂದ 10 ಕೋಟಿ ಭಕ್ತವೃಂದ ಸೇರೋ ನಿರೀಕ್ಷೆ ಇದೆ.

ಇದನ್ನೂ ಓದಿ:ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..

publive-image

ಈಗಾಗಲೇ ಮಹಾ ಕುಂಭವೇಳಕ್ಕೆ ಸಾಧು ಸಂತರು ಸೇರಿದಂತೆ ಕೋಟ್ಯಾಂತರ ಭಕ್ತರು ಆಗಮಿಸುತ್ತಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿ ಪುನೀತರಾಗುತ್ತಿದ್ದಾರೆ. ಹರಹರ ಮಹಾದೇವ್​​, ಜೈಶ್ರೀರಾಮ್​ ಮತ್ತು ಜೈ ಗಂಗಾ ಮಾತೆ ಎಂಬ ಘೋಷಣೆ ಮೂಲಕ ಕೋಟ್ಯಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ತ್ರಿವೇಣಿ ಸಂಗಮದ ಬಳಿ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಅಂತ ಯುಪಿ ಗೃಹ ಇಲಾಖೆ ಕಾರ್ಯದರ್ಶಿ ಸಂಜಯ್​ ಪ್ರಸಾದ್​​ ತಿಳಿಸಿದ್ದಾರೆ.

ಇದನ್ನೂ ಓದಿ:ಮಹಾಕುಂಭದಲ್ಲಿ ಪಾರಿವಾಳ ಬಾಬಾ.. ಇವರ ತಲೆ ಬಿಟ್ಟು ಎಲ್ಲಿಯೂ ಹೋಗಲ್ಲ ಈ ಹಕ್ಕಿ..!

publive-image

ಧಾರ್ಮಿಕ ಸಂಗಮ ಭಕ್ತರನ್ನ ಸೆಳೆಯೋದು ಮಾತ್ರವಲ್ಲ ಉತ್ತರ ಪ್ರದೇಶದ ಆರ್ಥಿಕತೆ ನೆಕ್ಸ್ಟ್​ ಲೆವೆಲ್​ಗೆ ಕೊಂಡೊಯ್ಯುತ್ತಿದೆ. ಮಹಾಕುಂಭಮೇಳ ಉತ್ತರ ಪ್ರದೇಶದ ಆರ್ಥಿಕತೆಗೆ ಬಲ ತುಂಬಲಿದೆ ಅಂತ ಅಂದಾಜಿಸಲಾಗಿದೆ.

publive-image

ಯುಪಿ ಸರ್ಕಾರ ಬರೋಬ್ಬರಿ 25 ಸಾವಿರ ಕೋಟಿ ರೂಪಾಯಿಗಳನ್ನ ಖರ್ಚು ಮಾಡ್ತಿದೆ. ಆದ್ರೆ ಬರೋಬ್ಬರಿ 2 ಲಕ್ಷ ಕೋಟಿ ರೂಪಾಯಿ ಆದಾಯದ ನಿರೀಕ್ಷೆಯನ್ನೂ ಹೊಂದಿದೆ. ಜೊತೆಗೆ ಕೇಂದ್ರಕ್ಕೂ ಆರ್ಥಿಕ ಲಾಭ ನೀಡ್ತಿದೆ. ಭಕ್ತಾದಿಗಳ ಓಡಾಟಕ್ಕೆ ಸುಮಾರು 13 ಸಾವಿರ ವಿಶೇಷ ರೈಲಿನ ಟ್ರಿಪ್​ ನೀಡಿದೆ.

ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ಮಹಾಕುಂಭ ವೈಭವ; ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ 10 ಕೋಟಿ ಭಕ್ತರ ನಿರೀಕ್ಷೆ..

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment