newsfirstkannada.com

ಐತಿಹಾಸಿಕ ಸಾಧನೆಯತ್ತ RCB.. ಕೊಹ್ಲಿ, ಎಬಿಡಿ, ದ್ರಾವಿಡ್​, ಕುಂಬ್ಳೆರಿಂದ ಆಗದ್ದನ್ನ ಸಾಧಿಸ್ತಾರಾ ಸ್ಮೃತಿ ಮಂದನಾ?

Share :

Published March 17, 2024 at 11:50am

Update March 17, 2024 at 11:51am

    ಆರ್​ಸಿಬಿ ಗೆಲುವಿಗಾಗಿ ಅಭಿಮಾನಿಗಳ ಪ್ರಾರ್ಥನೆ ಜೋರು

    ಗೆದ್ದು ಬೀಗಲು​ ತುದಿಗಾಲಲ್ಲಿ ನಿಂತ ಆರ್​​ಸಿಬಿ ವುಮೆನ್ಸ್​ ಟೀಮ್

    WPL ಫೈನಲ್​ನಲ್ಲಿ ಯಾವ ಟೀಮ್ ಗೆದ್ದರೂ ಇತಿಹಾಸ ಸೃಷ್ಟಿ

ಆರ್​​ಸಿಬಿ ಅಭಿಮಾನಿಗಳ ಕನಸು ನನಸಾಗೋ ಸಮಯ ಬಂದೇ ಬಿಡ್ತು. 16 ವರ್ಷಗಳ ಟ್ರೋಫಿ ಕೊರಗಿಗೆ ಬ್ರೇಕ್​​ ಹಾಕಲು ಇನ್ನೊಂದೆ ಹೆಜ್ಜೆ ಬಾಕಿ. ಡೆಲ್ಲಿಯನ್ನ ಬಗ್ಗು ಬಡಿದು ಟ್ರೋಫಿ ಗೆದ್ದು ಬೀಗಲು ಆರ್​​ಸಿಬಿ ವುಮೆನ್ಸ್​ ಟೀಮ್​ ತುದಿಗಾಲಲ್ಲಿ ನಿಂತಿದೆ. ಅಭಿಮಾನಿಗಳ ವಲಯದಲ್ಲಿ ಗೆಲುವಿಗಾಗಿ ಪ್ರಾರ್ಥನೆ ಜೋರಾಗಿದೆ.

2ನೇ ಸೀಸನ್​ನ ಮಹಿಳಾ ಪ್ರೀಮಿಯರ್​ ಲೀಗ್​ ಫೈನಲ್​ ಫೈಟ್​​ಗೆ ಕೌಂಟ್​​ಡೌನ್ ಶುರುವಾಗಿದೆ. ದೆಹಲಿಯ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆಯೋ ಅಂತಿಮ ಕದನದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ – ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಮುಖಾಮುಖಿಯಾಗಲಿವೆ. ಚೊಚ್ಚಲ ಟ್ರೋಫಿ ಗೆಲುವಿನ ಕನಸಿನಲ್ಲಿ ಉಭಯ ತಂಡಗಳಿವೆ.

ಈ ಸಲ ಕಪ್​ ನಮ್ದೇ.. ಕನಸು ನನಸಾಗಲು ಒಂದೇ ಹೆಜ್ಜೆ.!

ಈ ಸಲ ಕಪ್​ ನಮ್ದೇ.. 16 ವರ್ಷಗಳಿಂದ ಈ ಮಾತನ್ನ ಆರ್​​ಸಿಬಿ ಫ್ಯಾನ್ಸ್​ ಹೇಳುತ್ತಲೇ ಬಂದಿದ್ದಾರೆ. ಆದ್ರೆ, ಕನಸು ಕನಸಾಗೇ ಉಳಿದಿದೆ. ಇದೀಗ ಆರ್​​ಸಿಬಿ ವನಿತೆಯರ ತಂಡ ಆ ಕನಸನ್ನ ನನಸು ಮಾಡುವತ್ತ ಹೆಜ್ಜೆ ಇಟ್ಟಿದೆ. ಇಂದು ನಡೆಯೋ ಫೈನಲ್​​ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ಗೆ ಮಣ್ಣು ಮುಕ್ಕಿಸಿ ಟ್ರೋಫಿ ಎತ್ತಿ ಹಿಡಿಯಲು ಸ್ಮೃತಿ ಮಂದಾನ ಪಡೆ ಸಜ್ಜಾಗಿದೆ.

‘ಅಸಾಧ್ಯ’ ಅಂದಿದ್ದನ್ನ ಸಾಧಿಸ್ತಾರಾ ವನಿತೆಯರು.?

2008ರಿಂದ 2024.. ಬರೋಬ್ಬರಿ 16 ವರ್ಷಗಳ ಈ ಐಪಿಎಲ್​ ಇತಿಹಾಸದಲ್ಲಿ ಆರ್​​ಸಿಬಿ ತಂಡ ಅದೆಷ್ಟೋ ದಿಗ್ಗಜರನ್ನ ನೋಡಿದೆ. ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್​, ವಿರಾಟ್​ ಕೊಹ್ಲಿಯಂತ ಲೆಜೆಂಡ್​ಗಳು ತಂಡವನ್ನ ಲೀಡ್​ ಮಾಡಿದ್ದಾರೆ. ವಿಶ್ವದ ಸೂಪರ್​ ಸ್ಟಾರ್​ಗಳು ಫ್ರಾಂಚೈಸಿ ಪರ ಆಡಿದ್ದಾರೆ. ಆದ್ರೆ, ಟ್ರೋಫಿ ಗೆದ್ದಿಲ್ಲ. ಇದೀಗ ವನಿತೆಯರ ತಂಡ ಆ ಅಸಾಧ್ಯದ ಸಾಧನೆ ಮಾಡುತ್ತಾ ಅನ್ನೋ ಕುತೂಹಲ ಕ್ರಿಕೆಟ್​ ವಲಯದಲ್ಲಿದೆ.

ಆಲ್​​ರೌಂಡ್​ ಆಟವಾಡಿದ್ರೆ ನಾವೇ ಚಾಂಪಿಯನ್.!

ಈ ಟೂರ್ನಿಯಲ್ಲಿ ಆರ್​ಸಿಬಿ ಫೈನಲ್​ ತಲುಪಿದ್ರೂ ಕೂಡ ಸಂಘಟಿತ ಹೋರಾಟದ ಕೊರತೆ ಕಾಡಿದೆ. ಸ್ಮೃತಿ ಮಂದಾನ, ಎಲ್ಲಿಸ್​ ಪೆರ್ರಿ, ಸೋಫಿ ಡಿವೈನ್​ ಕನ್ಸಿಸ್ಟೆಂಟ್​ ಪರ್ಫಾಮೆನ್ಸ್​ ನೀಡಲ್ಲ. ಬ್ಯಾಟಿಂಗ್​ ಸಕ್ಸಸ್​ ಆದ್ರೆ, ಬೌಲಿಂಗ್​ ಫೇಲ್ಯೂರ್​ ಆಗಿದೆ. ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿದಾಗ ಬ್ಯಾಟಿಂಗ್​ ಪ್ಲಾಫ್​ ಆಗಿದೆ. ಫೈನಲ್​ ಫೈಟ್​ನಲ್ಲಿ ಮಂದಾನ ಪಡೆ ಮೈ ಕೊಡವಿ ನಿಂತು ಹೋರಾಡಿದ್ರೆ ಟ್ರೋಫಿ ಗೆಲುವು ಅಸಾಧ್ಯವಲ್ಲ.

ರನ್ನರ್​ಅಪ್​ ಡೆಲ್ಲಿಗೆ ಟ್ರೋಫಿ ಗೆಲ್ಲೋ ಹಂಬಲ.!

ಕಳೆದ ಸೀಸನ್​ನ ರನ್ನರ್​ಅಪ್​ ಡೆಲ್ಲಿ ಕ್ಯಾಪಿಟಲ್ಸ್​​, ಈ ಬಾರಿ ಟ್ರೋಫಿ ಗೆಲ್ಲೋ ಕನವರಿಕೆಯಲ್ಲಿದೆ. ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಆಲ್​​ರೌಂಡ್​ ಪರ್ಫಾಮೆನ್ಸ್​ನಿಂದ ಮಿಂಚಿದೆ. ಲೀಗ್​ ಹಂತದ ಎರಡೂ ಮುಖಾಮುಖಿಯಲ್ಲಿ ಆರ್​​ಸಿಬಿಯನ್ನ ಸೋಲಿಸಿದೆ. ಇದೇ ಆತ್ಮವಿಶ್ವಾಸದಲ್ಲಿರೋ ಡೆಲ್ಲಿ ಟಫ್​ ಫೈಟ್​ ಕೊಡಲು ಸಜ್ಜಾಗಿದೆ.

RCB VS DC ಯಾರೇ ಗೆದ್ರು ಇತಿಹಾಸ ಸೃಷ್ಟಿ.!

ಐಪಿಎಲ್​ ಆರಂಭವಾಗಿ 16 ಸೀಸನ್​ ಕಳೆದಿವೆ. ಆದ್ರೆ, ಆರ್​​ಸಿಬಿ, ಡೆಲ್ಲಿ ಎರಡೂ ತಂಡಗಳು ಈವರೆಗೆ ಐಪಿಎಲ್​ ಟ್ರೋಫಿ ಗೆದ್ದಿಲ್ಲ. ಇದೀಗ ಮಹಿಳಾ ಪ್ರೀಮಿಯರ್​​ ಲೀಗ್​ನಲ್ಲಿ​ ಎರಡೂ ತಂಡಗಳು ಫೈನಲ್​ ಫೈಟ್​ ನಡೆಸಲಿವೆ. ಇದ್ರಲ್ಲಿ ಗೆದ್ದ ತಂಡ ಇತಿಹಾಸ ಸೃಷ್ಟಿಸಲಿದೆ. ಯಾವ ತಂಡ ಇತಿಹಾಸ ಸೃಷ್ಟಿಸುತ್ತೆ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಐತಿಹಾಸಿಕ ಸಾಧನೆಯತ್ತ RCB.. ಕೊಹ್ಲಿ, ಎಬಿಡಿ, ದ್ರಾವಿಡ್​, ಕುಂಬ್ಳೆರಿಂದ ಆಗದ್ದನ್ನ ಸಾಧಿಸ್ತಾರಾ ಸ್ಮೃತಿ ಮಂದನಾ?

https://newsfirstlive.com/wp-content/uploads/2024/03/RCB_SMRITI_MANDHANA.jpg

Load More