newsfirstkannada.com

WPL 2024: ಆರ್​ಸಿಬಿ ಪಾಲಿಗೆ ಪೆರ್ರಿ ಆಪದ್ಬಾಂಧವ.. ಬಲಿಷ್ಠ ಮುಂಬೈ ಬಗ್ಗು ಬಡಿದು ಪ್ಲೇ-ಆಫ್​​ಗೆ ಲಗ್ಗೆ..!

Share :

Published March 13, 2024 at 8:10am

    ಮುಂಬೈ ವಿರುದ್ಧ ಆರ್​​ಸಿಬಿಗೆ 7 ವಿಕೆಟ್​ಗಳ ಜಯ

    UP ವಾರಿಯರ್ಸ್​, ಗುಜರಾತ್​ ಟೈಟನ್ಸ್​ ಟೂರ್ನಿಯಿಂದ ಔಟ್

    ಆಲ್​ರೌಂಡರ್ ಆಟ ಪ್ರದರ್ಶಿಸಿದ ಎಲಿಸ್ ಪೆರ್ರಿ

ವುಮೆನ್ಸ್‌ ಪ್ರೀಮಿಯರ್ ಲೀಗ್​​ನಲ್ಲಿ ಆರ್​ಸಿಬಿ ತಂಡವು ಮುಂಬೈ ಇಂಡಿಯನ್ಸ್​ ವಿರುದ್ಧ ಭರ್ಜರಿ ಜಯಗಳಿಸಿ ಮೊಟ್ಟಮೊದಲ ಬಾರಿಗೆ WPL ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಎಲ್ಲಿಸ್‌ ಪೆರ್ರಿ ದಾಖಲೆಯ ಆಲ್‌ರೌಂಡ್‌ ಆಟದ ನೆರವಿನಿಂದ, ಆರ್‌ಸಿಬಿ ತಂಡ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ವಿಮೆನ್ಸ್‌ ಪ್ರೀಮಿಯರ್ ಲೀಗ್‌ ಎರಡನೇ ಆವೃತ್ತಿಯಲ್ಲಿ ಮೂರನೇ ತಂಡವಾಗಿ ಪ್ಲೇ ಆಫ್‌ ಸುತ್ತು ಪ್ರವೇಶಿಸಿದೆ.

ಸ್ಮೃತಿ ಮಂದಾನ ಬಳಗದ ಗೆಲುವಿನೊಂದಿಗೆ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ. ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಇಂಡಿಯನ್ಸ್​ 19 ಓವರ್​​ಗೆ ಎಲ್ಲಾ ವಿಕೆಟ್ ಕಳೆದುಕೊಂಡು 113 ರನ್​ಗಳಿಸಿತ್ತು. ವಿಶೇಷ ಅಂದರೆ ಆರ್​ಸಿಬಿಯ ಪೆರ್ರಿ ಅವರು, 6 ವಿಕೆಟ್ ಕಿತ್ತು ಮುಂಬೈ ಇಂಡಿಯನ್ಸ್ ತಂಡದ ಬೃಹತ್ ಮೊತ್ತ ಗುರಿಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

114 ರನ್​​ಗಳ ಗುರಿಯನ್ನು ಬೆನ್ನು ಹತ್ತಿರ ಮಂದಾನ ಬಳಗ, 15 ಓವರ್​ನಲ್ಲಿ ನಿಗದಿತ ಗುರಿಯನ್ನು ಮುಟ್ಟಿತು. ಬ್ಯಾಟಿಂಗ್​ನಲ್ಲೂ ಅದ್ಭುತ ಪ್ರದರ್ಶನ ನೀಡಿದ ಪೆರ್ರಿ ಅಜೆಯ 40 ರನ್​ಗಳಿಸಿದರು. ರಿಚಾ ಘೋಷ್ 36 ರನ್​​ಗಳಿಸಿದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

WPL 2024: ಆರ್​ಸಿಬಿ ಪಾಲಿಗೆ ಪೆರ್ರಿ ಆಪದ್ಬಾಂಧವ.. ಬಲಿಷ್ಠ ಮುಂಬೈ ಬಗ್ಗು ಬಡಿದು ಪ್ಲೇ-ಆಫ್​​ಗೆ ಲಗ್ಗೆ..!

https://newsfirstlive.com/wp-content/uploads/2024/03/PERY.jpg

Load More