newsfirstkannada.com

ಪೆರ್ರಿ ಇದ್ದಲ್ಲಿ ವಿಜಯಲಕ್ಷ್ಮೀ..! RCB ಗೆಲುವಿನ ದೈತ್ಯ ಶಕ್ತಿ ಇವರು, ಅದೃಷ್ಟದ ಚೆಲುವೆಗೆ ಕ್ರಿಕೆಟ್ ಅಂದ್ರೆನೇ ಇಷ್ಟವಿರಲಿಲ್ಲ!

Share :

Published March 16, 2024 at 2:49pm

    ಮೂವರ ಮಕ್ಕಳ ತಾಯಿ ಪೆರ್ರಿ ವೈಯಕ್ತಿಕ ಜೀವನ ಹೇಗಿದೆ..?

    ಪೆರ್ರಿ ಇದ್ದಲ್ಲಿ ಗೆಲುವಿನ ಪೇರಿ ಖಂಡಿತ, ಆರ್​ಸಿಬಿ ನಿರೀಕ್ಷೆ ದುಪ್ಪಟ್ಟು..!

    ಪೆರ್ರಿ ಪೂರ್ಣ ಹೆಸರು ಏನು ಗೊತ್ತಾ..? ಇವರಿಗೂ ಇದೆ ಒಂದು ನಿಕ್​ ನೇಮ್..!

ಇಡೀ ಐಪಿಎಲ್​ನ ಕ್ರೇಜ್​ ಒಂದು ತೂಕವಾದರೆ, ಅದರಲ್ಲಿ ಆರ್​ಸಿಬಿ ತಂಡದ ಕ್ರೇಜ್ ಇನ್ನೊಂದು ತೂಕ ಆಗಿರುತ್ತದೆ. ಏಕೆಂದರೆ ಬೆಂಗಳೂರು ತಂಡಕ್ಕೆ ಕೋಟಿ ಕೋಟಿ ಅಭಿಮಾನಿಗಳ ಹಾರೈಕೆ ಇದೆ. ಈ ಹಾರೈಕೆಯಿಂದಲೋ ಏನೋ ವುಮೆನ್ಸ್​ ಪ್ರೀಮಿಯರ್ ಲೀಗ್​ (WPL) ನಲ್ಲಿ ಸ್ಮೃತಿ ಮಂದನಾ ನೇತೃತ್ವದ ತಂಡ ಫೈನಲ್​ಗೆ ಎಂಟ್ರಿ ಕೊಟ್ಟಿದೆ. ಇದರ ಹಿಂದೆ ಶಕ್ತಿಯಾಗಿ ನಿಂತಿದ್ದು ಮಾತ್ರ ಆಸ್ಟ್ರೇಲಿಯಾದ ಆಲ್​ರೌಂಡರ್​ ಎಲ್ಲಿಸ್ ಪೆರ್ರಿ. ಆರ್​ಸಿಬಿಯ ಪವರ್ ಆಗಿರುವ ಪೆರ್ರಿ ಯಾರು, ಇವರ ಕುಟುಂಬದ ಬಗ್ಗೆ ಏನು ಗೊತ್ತು, ಇವರ ಸಾಧನೆ ಏನು ಎಂಬುದರ ಇಣುಕು ನೋಟ ಇಲ್ಲಿದೆ.

ಆಸ್ಟ್ರೇಲಿಯಾ ಮಹಿಳಾ ತಂಡದ ಸ್ಟಾರ್ ಆಲ್​ರೌಂಡರ್ ಆಗಿರುವ ಎಲ್ಲಿಸ್ ಪೆರ್ರಿ, ಪೆಜ್​ ಎಂಬ ನಿಕ್​ನೇಮ್​ನಿಂದ ಫೇಮಸ್​. ಈಕೆಯ ಪೂರ್ಣ ಹೆಸರು ಎಲ್ಲಿಸ್ ಅಲೆಕ್ಸಾಂಡ್ರಾ ಪೆರ್ರಿ. ಸಿಡ್ನಿಯ ನ್ಯೂ ಸೌತ್​ವೆಲ್ಸ್​ನ ವಹ್ರೂಂಗಾದಲ್ಲಿ 3 ನವೆಂಬರ್​ 1990 ರಂದು ಜನಿಸಿದರು. ಇವರಿಗೆ ಮೊದಮೊದಲು ಕ್ರಿಕೆಟ್ ಅಂದರೆ ಅಷ್ಟಕ್ಕೆ ಅಷ್ಟೇ. ​ಫುಟ್ಬಾಲ್​ ಎಂದರೆ ಪಂಚಪ್ರಾಣ. ಕೇವಲ 16 ವರ್ಷದವರಿದ್ದಾಗಲೇ ರಾಷ್ಟ್ರೀಯ ಕ್ರಿಕೆಟ್ ಮತ್ತು ಫುಟ್ಬಾಲ್​​ ಎರಡಕ್ಕೂ ಎಂಟ್ರಿ ಕೊಟ್ಟಿದ್ದರು. ಐಸಿಸಿ ಹಾಗೂ FIFA ವಿಶ್ವಕಪ್‌ಗಳನ್ನು ಆಡಿದಂತಹ ಆಸಿಸ್​ನ ಅತ್ಯಂತ ಕಿರಿಯ ಆಟಗಾರ್ತಿ ಎನ್ನುವ ಕೀರ್ತಿ ಪೆರ್ರಿಗೆ ಇದೆ.

ಆಸಿಸ್​ ತಂಡದಲ್ಲೇ ಪೆರ್ರಿ ಅತ್ಯಂತ ಸುಂದರಿ. ನೋಡುಗರನ್ನ ತನ್ನ ಅಂದದಿಂದಲೇ ಸೆಳೆಯುವಂತಹ ಮೈಮಾಟ ಹೊಂದಿರುವ ಆಟಗಾರ್ತಿ. ಹೀಗಾಗಿಯೇ ಹಲವಾರು ಕಂಪನಿಗಳಿಗೆ ಆಡ್​ಗಳನ್ನ ನೀಡಿದ್ದಾರೆ. 2016 ಮತ್ತು 18ರಲ್ಲಿ ಬೆಲಿಂಡಾ ಕ್ಲಾರ್ಕ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 2017ರಲ್ಲಿ ಐಸಿಸಿಯಿಂದ ನೀಡುವ ವರ್ಷದ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಟಿ20ಯಲ್ಲಿ 1,000 ರನ್ ಹಾಗೂ 100 ವಿಕೆಟ್​​

ಆಕ್ರಮಣಕಾರಿಯಾಗಿ ಬೌಲಿಂಗ್, ಬ್ಯಾಟಿಂಗ್​ ಮಾಡುವ ಪೆರ್ರಿ ಹಲವು ದಾಖಲೆಗಳನ್ನು ಆಸ್ಟ್ರೇಲಿಯಾ ತಂಡದಲ್ಲಿ ಮಾಡಿದ್ದಾರೆ. ಟಿ20ಯಲ್ಲಿ 1,000 ರನ್ ಹಾಗೂ 100 ವಿಕೆಟ್​​ ಕಬಳಿಸಿದ ಆಸಿಸ್​​ನ ಮೊದಲ ಆಟಗಾರ್ತಿ. ವುಮೆನ್ಸ್​ ಟೆಸ್ಟ್​ ಪಂದ್ಯದಲ್ಲಿ 213* ರನ್​ ಗಳಿಸಿ ದಾಖಲೆ ಬರೆದಿದ್ದು ಇನ್ನೂವರೆಗು ಯಾವ ಆಸಿಸ್ ಆಟಗಾರ್ತಿಯು ಇದನ್ನು ಬ್ರೇಕ್ ಮಾಡಿಲ್ಲ. ಏಕದಿನ ಪಂದ್ಯದಲ್ಲಿ 150 ವಿಕೆಟ್​ ಪಡೆದ ಆಸಿಸ್​ನ 3ನೇ ಪ್ಲೇಯರ್​​ ಎನಿಸಿಕೊಂಡಿದ್ದಾರೆ.

ಈ ಎಲ್ಲವುಗಳ ಜೊತೆಗೆ ಪೆರ್ರಿ ಇದ್ದ ಕಡೆ ಗೆಲುವು ಕಟ್ಟಿಟ್ಟ ಬುತ್ತಿ ಎಂದರೆ ತಪ್ಪಾಗಲ್ಲ. ಏಕೆಂದರೆ ಇಲ್ಲಿವರೆ ಪರ್ರಿ ಇಂಟರ್​ನ್ಯಾಷನಲ್ ಹಾಗೂ ನ್ಯಾಷನಲ್​ ಟೀಮ್​ನಲ್ಲಿ ಹಲವಾರು ಕಪ್​ಗಳನ್ನು ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಆಸಿಸ್​ ತಂಡಕ್ಕೆ 8 ವಿಶ್ವ ಚಾಂಪಿಯನ್‌ಶಿಪ್‌ಗಳು, ನ್ಯೂ ಸೌತ್ ವೇಲ್ಸ್‌ ತಂಡಕ್ಕೆ 11 WNCL ಚಾಂಪಿಯನ್‌ಶಿಪ್‌ಗಳು ಮತ್ತು 2 ಬಾರಿ WBBL ಚಾಂಪಿಯನ್‌ ಶಿಪ್‌ ಗೆಲ್ಲಲು ಪರ್ರಿಯ ಕೊಡುಗೆ ತುಂಬಾ ಇದೆ. ಇದಿಷ್ಟೇ ಅಲ್ಲದೇ ಇವರ ಸಾಧನೆ ಗುರುತಿಸಿ ಹಲವಾರು ಪ್ರಶಸ್ತಿಗಳು ಒಲಿದಿವೆ. ಈಕೆಯ ಕ್ರೀಡೆಯ ರೋಲ್ ಮಾಡೆಲಿಂಗ್​ನಿಂದ ಮಹಿಳೆಯರಲ್ಲಿ ಕ್ರೀಡಾ ಸ್ಫೂರ್ತಿ ಹೆಚ್ಚಲು ಕಾರಣವಾಗಿದೆ.

ಆಸಿಸ್​ನ ಅಲಿಸ್ಸಾ ಹೀಲಿ ಮತ್ತು ಪೆರ್ರಿ ಶಾಲಾ ದಿನಗಳಿಂದಲೇ ಕ್ರಿಕೆಟ್​ ಸೇರಿದಂತೆ ಸ್ಪೋರ್ಟ್ಸ್​ನಲ್ಲಿ ಭಾಗವಹಿಸುತ್ತಿದ್ದರು. ಹೀಗಾಗಿ ಇವರಿಬ್ಬರು ಈಗಲೂ ಒಳ್ಳೆಯ ಸ್ನೇಹಿತರು ಆಗಿದ್ದಾರೆ.

ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಪೆಜ್​

22 ಜುಲೈ 2007ರಲ್ಲಿ ಪೆರ್ರಿ ತನ್ನ 16 ವಯಸ್ಸಿನಲ್ಲಿ ನ್ಯೂಜಿಲೆಂಡ್ ​ವಿರುದ್ಧದ ಏಕದಿನ ಪಂದ್ಯಕ್ಕೆ ಪಾದರ್ಪಣೆ ಮಾಡಿದರು. ಡೆಬ್ಯು ಪಂದ್ಯದಲ್ಲಿ 8 ಓವರ್ ಮಾಡಿ 37 ರನ್ ನೀಡಿ 2 ವಿಕೆಟ್​ ಉರುಳಿಸಿದ್ದರು. ಜೊತೆಗೆ 9ನೇ ಸ್ಥಾನದಲ್ಲಿ ಬ್ಯಾಟಿಂಗ್​ಗೆ ಇಳಿದು 20 ಎಸೆತಗಳಲ್ಲಿ 19 ರನ್​ ಗಳಿಸಿದ್ದರು. ಆದರೆ ಈ ಪಂದ್ಯದಲ್ಲಿ ಆಸಿಸ್​ 35 ರನ್​ಗಳಿಂದ ಸೋತು ಹೋಗಿತ್ತು. ಅಲ್ಲದೇ 2010ರಲ್ಲಿ ಮೊಟ್ಟ ಮೊದಲ ಮಹಿಳಾ ಟ್ವಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಆಸಿಸ್​ ಗೆದ್ದು ಫೈನಲ್ ಪ್ರವೇಶಿಸಲು ಈ ಪೆರ್ರಿಯೇ ಮುಖ್ಯ ಕಾರಣ. 2010-11ರಲ್ಲಿ ಮಹಿಳಾ ಆಶಸ್‌ ಟೆಸ್ಟ್‌ ಅನ್ನು ಇಂಗ್ಲೆಂಡ್​ ವಿರುದ್ಧ ಗೆಲ್ಲಲು ಪೆರ್ರಿ ಬೌಲಿಂಗ್ ಕಾರಣವಾಗಿತ್ತು.

ಆಸಿಸ್ ತಂಡ ಗೆದ್ದ ಕಪ್​ಗಳು

  • 2010ರ ಮೊದಲ ಟಿ20 ವಿಶ್ವಕಪ್​
  • 2011-12ರ 2ನೇ ಟಿ20 ವಿಶ್ವಕಪ್
  • 2013ರ ಏಕದಿನ ವಿಶ್ವಕಪ್
  • 2014-15ರಲ್ಲಿ 3ನೇ ವಿಶ್ವಕಪ್
  • 201-19ರಲ್ಲಿ 4ನೇ ಟಿ20 ವಿಶ್ವಕಪ್
  • 2020-21ರಲ್ಲಿ 5ನೇ T20 ವಿಶ್ವಕಪ್
  • 2022ರಲ್ಲಿ 2ನೇ ವಿಶ್ವಕಪ್
  • 2023ರಲ್ಲಿ 6ನೇ T20 ವರ್ಲ್ಡ್​ಕಪ್​

ಪೆಜ್​ ಫ್ಯಾಮಿಲಿ ಬಗ್ಗೆ ನಿಮಗೇನು ಗೊತ್ತು?

ಈ ಎಲ್ಲ ವಿಶ್ವಕಪ್​​ ಗೆದ್ದ ಆಸಿಸ್​ ತಂಡದಲ್ಲಿ ಪೆರ್ರಿ ಅತ್ಯಂತ ಅಮೋಘವಾದ ಕೊಡುಗೆ ನೀಡಿದ್ದಾರೆ. ಇಷ್ಟೇಲ್ಲ ಹೇಳಿದ ನಿಮಗೆ ಪೆರ್ರಿಯ ಕುಟುಂಬದ ಬಗ್ಗೆ ಹೇಳಿದರೆ ಎಲ್ಲ ಪೂರ್ಣ ಎನಿಸುತ್ತದೆ. ಎಲ್ಲಿಸ್ ಪೆರ್ರಿ ತಾಯಿ ಕ್ಯಾಥಿ ಇವರು ವೃತ್ತಿಯಲ್ಲಿ ಡಾಕ್ಟರ್ ಆಗಿದ್ದು ತಂದೆ ಮಾರ್ಕ್​ ಗಣಿತ ಟೀಚರ್ ಆಗಿದ್ದಾರೆ. ಆಸ್ಟ್ರೇಲಿಯಾದ ರಗ್ಬಿ ಆಟಗಾರ ಮ್ಯಾಟ್ ಟೂಮುವಾ ಅವರೊಂದಿಗೆ 2 ವರ್ಷ ಡೇಟಿಂಗ್ ಮಾಡಿದ್ದ ಪೆಜ್​ 2015 ರಲ್ಲಿ ವಿವಾಹವಾದರು. ಆದರೆ 2020ರಲ್ಲಿ ವಿಚ್ಛೇದನ ಪಡೆದುಕೊಂಡು ಬೇರೆ ಬೇರೆ ಇದ್ದಾರೆ. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ.

ಆರ್​ಸಿಬಿಯಲ್ಲಿ ಆಡುತ್ತಿರುವ ಪೆರ್ರಿ WPL ಕಪ್​ ಗೆಲ್ಲುವ ನಿರೀಕ್ಷೆ ಹುಟ್ಟು ಹಾಕಿದ್ದಾರೆ. ಇಡೀ ಆರ್​​ಸಿಬಿ ತಂಡದಲ್ಲಿ ಅತ್ಯಂತ ಹೆಚ್ಚು ರನ್​ ಗಳಿಸಿದ್ದು ಫೈನಲ್​ನಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಾರೆ ಎನ್ನುವುದು ಎಲ್ಲರ ಆಶಯವಾಗಿದೆ. ಪೆರ್ರಿ ಕಪ್​ ಗೆದ್ದು ಕೊಡುವ ಹುರುಪು ಹೆಚ್ಚಿಸಿರುವುದು ಅಭಿಮಾನಿಗಳ ಕುತೂಹಲ ಇನ್ನಷ್ಟು ದುಪ್ಪಟ್ಟು ಮಾಡಿದೆ. ಏನೇ ಆಗಲಿ ನಾಳೆ ಡೆಲ್ಲಿ ಟೀಮ್ ವಿರುದ್ಧ ನಡೆಯುವ ಫೈನಲ್​ ಪಂದ್ಯದ ಜೊತೆಗೆ ಎಲ್ಲಿಸ್​  ಪೆರ್ರಿ ಅವರ ಬ್ಯಾಟಿಂಗ್, ಬೌಲಿಂಗ್​​ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

ವಿಶೇಷ ವರದಿ; ಭೀಮಪ್ಪ, ಡಿಜಿಟಲ್ ಡೆಸ್ಕ್​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಪೆರ್ರಿ ಇದ್ದಲ್ಲಿ ವಿಜಯಲಕ್ಷ್ಮೀ..! RCB ಗೆಲುವಿನ ದೈತ್ಯ ಶಕ್ತಿ ಇವರು, ಅದೃಷ್ಟದ ಚೆಲುವೆಗೆ ಕ್ರಿಕೆಟ್ ಅಂದ್ರೆನೇ ಇಷ್ಟವಿರಲಿಲ್ಲ!

https://newsfirstlive.com/wp-content/uploads/2024/03/RCB_Ellyse_Perry.jpg

Load More