ಕರ್ನಾಟಕದ ಈ ಜಿಲ್ಲೆಯವರು ಕ್ವೀನ್ ಶ್ರೇಯಾಂಕ ಪಾಟೀಲ್
ಕೊಹ್ಲಿ ಅಂದ್ರೆ ತುಂಬಾ ಇಷ್ಟ, ಅವರ ಆಟವನ್ನೇ ನೋಡಿ ಬೆಳೆದ ಹುಡುಗಿ
ಶ್ರೇಯಾಂಕಗೆ ಖಡಕ್ ರೊಟ್ಟಿ, ಶೇಂಗಾ ಚೆಟ್ನಿ ಅಂದ್ರೆ ಪಂಚಪ್ರಾಣ
ಐಪಿಎಲ್ನಲ್ಲಿ 16 ಸೀಸನ್ ಆಡಿರುವ ಪುರುಷರ ತಂಡವು ಇಲ್ಲಿಯವರೆಗೂ ಕಪ್ ಗೆದ್ದು ಕೊಡಲಿಲ್ಲ. ಆದರೆ 2ನೇ ಸೀಸನ್ನಲ್ಲೇ ಮಹಿಳಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದೆ. ಸ್ಮೃತಿ ಮಂದಾನ ಬಳಗ ಐತಿಹಾಸಿಕ ದಾಖಲೆ ನಿರ್ಮಿಸಿ ಕನ್ನಡಿಗರ ಹೃದಯ ಗೆದ್ದಿದೆ. ದೆಹಲಿ ವಿರುದ್ಧದ ಫೈನಲ್ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ನಮ್ಮ ಉತ್ತರ ಕರ್ನಾಟಕದ ಚೆಲುವೆ ಶ್ರೇಯಾಂಕ ಪಾಟೀಲ್.
ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕನ್ನಡದ ಕ್ವೀನ್ ಶ್ರೇಯಾಂಕ ಪಾಟೀಲ್ ಅವರ ವಿಡಿಯೋ, ಫೋಟೋಗಳೆ ವೈರಲ್ ಆಗುತ್ತಿವೆ. ಈ ಅಭೂತಪೂರ್ವ ಆರ್ಸಿಬಿಯ ಗೆಲುವಿನಲ್ಲಿ ಕನ್ನಡತಿ ಶ್ರೇಯಾಂಕ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಇದೀಗ ಜಸ್ಟ್ 21 ವರ್ಷದ ಶ್ರೇಯಾಂಕಾ ಪಾಟೀಲ್ WPL ಟೂರ್ನಿಯ 8 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್ಗಳನ್ನ ಪಡೆದು ಪರ್ಪಲ್ ಕ್ಯಾಪ್ ಪಡೆದು ಮಿಂಚಿದ್ದಾರೆ. ಜೊತೆಗೆ ಉದಯೋನ್ಮುಖ ಆಟಗಾರ್ತಿ ಎಂಬ ಪ್ರಶಸ್ತಿಗೂ ಪಾತ್ರರಾದರು. ಇಷ್ಟು ದಿನ ಭಾರತದ ಹಾಗೂ ಆರ್ಸಿಬಿ ತಂಡದಲ್ಲಿದ್ದರೂ ಯಾರಿಗೂ ಗೊತ್ತಿರದ ಶ್ರೇಯಾಂಕ ಕಪ್ ಗೆಲ್ಲುತ್ತಿದ್ದಂತೆ ಕರ್ನಾಟಕದ ಸ್ಟಾರ್ ಒಡತಿಯಾಗಿದ್ದಾರೆ.
ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪ್ಲೇಯರ್
ಇನ್ನೊಂದು ವಿಶೇಷ ಅಂದರೆ ಶ್ರೇಯಾಂಕ ನಮ್ಮ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಶೇಂಗಾ ಕಾರದ ಮಂದಿ. ಅಂದರೆ ತೊಗರಿ ಕಣಜ ಕಲಬುರಗಿ ಜಿಲ್ಲೆಯ ಜೇವರ್ಗಿಯವರು. ಕಳೆದ ವರ್ಷ 2023ರಲ್ಲಿ ಟೀಮ್ ಇಂಡಿಯಾಗೆ ಡೆಬ್ಯು ಮಾಡಿದ್ದಾರೆ. ವುಮೆನ್ಸ್ ಕ್ರಿಕೆಟ್ನಲ್ಲಿ ಸಾಧನೆ ಮಾಡುವ ಕಡೆ ಮುನ್ನುಗ್ಗುತ್ತಿರುವ ಶ್ರೇಯಾಂಕ ಕೆರಿಬಿಯಾನ್ ಪ್ರೀಮಿಯರ್ ಲೀಗ್ನ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದಲ್ಲಿ ಅತ್ಯತ್ತಮ ಪ್ರದರ್ಶನ ತೋರಿ ಹೆಚ್ಚು ವಿಕೆಟ್ (9) ಪಡೆದಿದ್ದರು.
ಇದಾದ ಬಳಿಕವೇ ಆರ್ಸಿಬಿಯಲ್ಲೂ ಸಖತ್ ಆಗಿ ಗಮನ ಸೆಳೆದಿದ್ದು ಫೈನಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ರಮುಖ ವಿಕೆಟ್ಗಳನ್ನ ಉರುಳಿಸಿದರು. ಹೀಗಾಗಿಯೇ 3.3 ಓವರ್ ಮಾಡಿದ್ದ ಶ್ರೇಯಾಂಕ ಕೇವಲ 12 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವಿಗೆ ಕಾರಣರಾದರು. ಸದ್ಯದ ಆರ್ಸಿಬಿ ಟೀಮ್ನಲ್ಲಿ ಅತ್ಯಂತ ಕಿರಿಯ ಆಟಗಾರ್ತಿ ಎಂದು ಹೇಳಲಾಗುತ್ತಿದೆ. ಈ ಟೂರ್ನಿಯ ಪ್ರಾರಂಭದಲ್ಲಿ ಅಷ್ಟಕ್ಕೆ ಅಷ್ಟೇ ಪ್ರದರ್ಶನ ತೋರಿದ್ದರು. ಆರ್ಸಿಬಿ ಫೈನಲ್ಗೆ ಬರುತ್ತಿದ್ದಂತೆ ಶ್ರೇಯಾಂಕ ಎನರ್ಜಿಯೇ ಬೇರೆಯಾಗಿತ್ತು. ಪಂದ್ಯದ ವೇಳೆ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಮೈದಾನದಲ್ಲೂ ಬೌಲಿಂಗ್, ಫೀಲ್ಡಿಂಗ್ನಲ್ಲೂ ಅಮೋಘ ಪ್ರದರ್ಶನ ತೋರಿ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ.
ವಿರಾಟ್ ಕೊಹ್ಲಿಯ ಬಿಗ್ ಫ್ಯಾನ್
ಶ್ರೇಯಾಂಕ ಪಾಟೀಲ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿಯ ಬಿಗ್ ಫ್ಯಾನ್. ಅವರ ಬ್ಯಾಟಿಂಗ್ ಅನ್ನು ಚಿಕ್ಕವಳಿದ್ದಾಗಿನಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ಪಾಲಿಗೆ ವಿರಾಟ್ ಎಂದರೆ ಸೂಪರ್ ಸ್ಟಾರ್ ಎಂದು ಹೇಳುತ್ತಾರೆ. ಯಶಸ್ಸಿನ ಉತ್ತುಂಗದಲ್ಲಿರುವ ಶ್ರೇಯಾಂಕಾ ಪಾಟೀಲ್ ಮುಂದಿನ ದಿನದಲ್ಲಿ ಟೀಮ್ ಇಂಡಿಯಾದಲ್ಲಿ ಒಳ್ಳೆಯ ಪ್ರದರ್ಶನ ತೋರಲಿ. ಕನ್ನಡಿಗರ ಜೊತೆ ಜೊತೆಗೆ ಇಡೀ ಭಾರತದ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯಲಿ ಎನ್ನುವುದು ಆಶಯವಾಗಿದೆ.
ಎಲ್ಲಾದರೂ ಇರು, ಎಂತಾದರು ಇರು ರೊಟ್ಟಿ ಏಣ್ಗಾಯಿ'ನಾ ಮರೀಬೇಡ 😍
ನಮ್ಮ ಉತ್ತರ ಕರ್ನಾಟಕ ಗೌಡ್ತಿ ಶ್ರೇಯಾಂಕ ಪಾಟೀಲ್ ❤ pic.twitter.com/smmQsBp1wD
— ರಾಹುಲ್ ಪಾಟೀಲ್ (@glb_kannadiga__) March 13, 2024
ಸದ್ಯಕಂತೂ ಆರ್ಸಿಬಿಯ ಅಭಿಮಾನಿಗಳು ಶ್ರೇಯಾಂಕ ಪಾಟೀಲರ್ನ್ನು ಸೋಷಿಯಲ್ ಮೀಡಿಯಾದಲ್ಲಿ ಆರಾಧನೆ ಮಾಡುತ್ತಿದ್ದಾರೆ. ಖಡಕ್ ರೊಟ್ಟಿ, ಎಣ್ಣೆಗಾಯಿ ಕೊಟ್ಟು ಸ್ವಲ್ಪ ಶೇಂಗಾದ ಇಂಡಿ ಕೊಟ್ಟರೆ ಇವಾಗಲೇ ಇಲ್ಲಿ ಕುಳಿತು ತಿನ್ನುತ್ತೇನೆ ಎಂದು ಶ್ರೇಯಾಂಕ ಹೇಳಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಮೊನ್ನೆ ಮೊನ್ನೆ ಆರ್ಸಿಬಿಯ ಈವೆಂಟ್ವೊಂದರಲ್ಲಿ ಡ್ಯಾನ್ಸ್ ಮಾಡಿದ್ದ ಶ್ರೇಯಾಂಕ ವಿಡಿಯೋವಂತೂ ಸಖತ್ ಹೈಫ್ ಸೃಷ್ಟಿ ಮಾಡುತ್ತಿದೆ. ಒಟ್ಟಾರೆ ಆರ್ಸಿಬಿ ತಂಡದ ಯುವರಾಣಿ, ಕನ್ನಡತಿ ಶ್ರೇಯಾಂಕ ಪಾಟೀಲ್ ಇನ್ನಷ್ಟು ಟ್ರೋಫಿಗಳನ್ನು ಬೆಂಗಳೂರು ತಂಡಕ್ಕೆ, ಟೀಂ ಇಂಡಿಯಾಗೆ ತಂದುಕೊಡಲಿ ಅನ್ನೋದು ಅಭಿಮಾನಿಗಳ ಮಹದಾಸೆ.
ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್, ನ್ಯೂಸ್ಫಸ್ಟ್
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ