newsfirstkannada.com

RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್; ಕಪ್ ಗೆಲ್ಲುವಲ್ಲಿ ಕನ್ನಡತಿಯ ಪಾಲು ದೊಡ್ಡದು..!

Share :

Published March 18, 2024 at 1:09pm

Update March 18, 2024 at 2:18pm

    ಕರ್ನಾಟಕದ ಈ ಜಿಲ್ಲೆಯವರು ಕ್ವೀನ್ ಶ್ರೇಯಾಂಕ ಪಾಟೀಲ್

    ಕೊಹ್ಲಿ ಅಂದ್ರೆ ತುಂಬಾ ಇಷ್ಟ, ಅವರ ಆಟವನ್ನೇ ನೋಡಿ ಬೆಳೆದ ಹುಡುಗಿ

    ಶ್ರೇಯಾಂಕಗೆ ಖಡಕ್ ರೊಟ್ಟಿ, ಶೇಂಗಾ ಚೆಟ್ನಿ ಅಂದ್ರೆ ಪಂಚಪ್ರಾಣ

ಐಪಿಎಲ್​ನಲ್ಲಿ 16 ಸೀಸನ್​ ಆಡಿರುವ ಪುರುಷರ ತಂಡವು ಇಲ್ಲಿಯವರೆಗೂ ಕಪ್ ಗೆದ್ದು ಕೊಡಲಿಲ್ಲ. ಆದರೆ 2ನೇ ಸೀಸನ್​ನಲ್ಲೇ ಮಹಿಳಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಕಿರೀಟ ಮುಡಿಗೇರಿಸಿಕೊಂಡಿದೆ. ಸ್ಮೃತಿ ಮಂದಾನ ಬಳಗ ಐತಿಹಾಸಿಕ ದಾಖಲೆ ನಿರ್ಮಿಸಿ ಕನ್ನಡಿಗರ ಹೃದಯ ಗೆದ್ದಿದೆ. ದೆಹಲಿ ವಿರುದ್ಧದ ಫೈನಲ್​ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ನಮ್ಮ ಉತ್ತರ ಕರ್ನಾಟಕದ ಚೆಲುವೆ ಶ್ರೇಯಾಂಕ ಪಾಟೀಲ್. ​

ಸೋಷಿಯಲ್ ಮೀಡಿಯಾದಲ್ಲಿ ಎಲ್ಲಿ ನೋಡಿದರೂ ಕನ್ನಡದ ಕ್ವೀನ್ ಶ್ರೇಯಾಂಕ ಪಾಟೀಲ್ ಅವರ ವಿಡಿಯೋ, ಫೋಟೋಗಳೆ ವೈರಲ್ ಆಗುತ್ತಿವೆ. ಈ ಅಭೂತಪೂರ್ವ ಆರ್​​ಸಿಬಿಯ ಗೆಲುವಿನಲ್ಲಿ ಕನ್ನಡತಿ ಶ್ರೇಯಾಂಕ ಪಾತ್ರ ಅತ್ಯಂತ ಪ್ರಮುಖವಾಗಿತ್ತು. ಇದೀಗ ಜಸ್ಟ್​ 21 ವರ್ಷದ ಶ್ರೇಯಾಂಕಾ ಪಾಟೀಲ್ WPL ಟೂರ್ನಿಯ 8 ಪಂದ್ಯಗಳಲ್ಲಿ ಒಟ್ಟು 13 ವಿಕೆಟ್​ಗಳನ್ನ​ ಪಡೆದು ಪರ್ಪಲ್ ಕ್ಯಾಪ್ ಪಡೆದು ಮಿಂಚಿದ್ದಾರೆ. ಜೊತೆಗೆ ಉದಯೋನ್ಮುಖ ಆಟಗಾರ್ತಿ ಎಂಬ ಪ್ರಶಸ್ತಿಗೂ ಪಾತ್ರರಾದರು. ಇಷ್ಟು ದಿನ ಭಾರತದ ಹಾಗೂ ಆರ್​ಸಿಬಿ ತಂಡದಲ್ಲಿದ್ದರೂ ಯಾರಿಗೂ ಗೊತ್ತಿರದ ಶ್ರೇಯಾಂಕ ಕಪ್​ ಗೆಲ್ಲುತ್ತಿದ್ದಂತೆ ಕರ್ನಾಟಕದ ಸ್ಟಾರ್ ಒಡತಿಯಾಗಿದ್ದಾರೆ.

ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಪ್ಲೇಯರ್

ಇನ್ನೊಂದು ವಿಶೇಷ ಅಂದರೆ ಶ್ರೇಯಾಂಕ ನಮ್ಮ ಉತ್ತರ ಕರ್ನಾಟಕದ ಖಡಕ್​ ರೊಟ್ಟಿ, ಶೇಂಗಾ ಕಾರದ ಮಂದಿ. ಅಂದರೆ ತೊಗರಿ ಕಣಜ ಕಲಬುರಗಿ ಜಿಲ್ಲೆಯ ಜೇವರ್ಗಿಯವರು. ಕಳೆದ ವರ್ಷ 2023ರಲ್ಲಿ ಟೀಮ್​ ಇಂಡಿಯಾಗೆ ಡೆಬ್ಯು ಮಾಡಿದ್ದಾರೆ. ವುಮೆನ್ಸ್​ ಕ್ರಿಕೆಟ್​ನಲ್ಲಿ ಸಾಧನೆ ಮಾಡುವ ಕಡೆ ಮುನ್ನುಗ್ಗುತ್ತಿರುವ ಶ್ರೇಯಾಂಕ ಕೆರಿಬಿಯಾನ್ ಪ್ರೀಮಿಯರ್ ಲೀಗ್​ನ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದಲ್ಲಿ ಅತ್ಯತ್ತಮ ಪ್ರದರ್ಶನ ತೋರಿ ಹೆಚ್ಚು ವಿಕೆಟ್​ (9) ಪಡೆದಿದ್ದರು.

ಇದಾದ ಬಳಿಕವೇ ಆರ್​ಸಿಬಿಯಲ್ಲೂ ಸಖತ್ ಆಗಿ ಗಮನ ಸೆಳೆದಿದ್ದು ಫೈನಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪ್ರಮುಖ ವಿಕೆಟ್​ಗಳನ್ನ ಉರುಳಿಸಿದರು. ಹೀಗಾಗಿಯೇ 3.3 ಓವರ್ ಮಾಡಿದ್ದ ಶ್ರೇಯಾಂಕ ಕೇವಲ 12 ರನ್ ನೀಡಿ 4 ವಿಕೆಟ್​ ಕಬಳಿಸಿ ಗೆಲುವಿಗೆ ಕಾರಣರಾದರು. ಸದ್ಯದ ಆರ್​ಸಿಬಿ ಟೀಮ್​ನಲ್ಲಿ ಅತ್ಯಂತ ಕಿರಿಯ ಆಟಗಾರ್ತಿ ಎಂದು ಹೇಳಲಾಗುತ್ತಿದೆ. ಈ ಟೂರ್ನಿಯ ಪ್ರಾರಂಭದಲ್ಲಿ ಅಷ್ಟಕ್ಕೆ ಅಷ್ಟೇ ಪ್ರದರ್ಶನ ತೋರಿದ್ದರು. ಆರ್​ಸಿಬಿ ಫೈನಲ್​ಗೆ ಬರುತ್ತಿದ್ದಂತೆ ಶ್ರೇಯಾಂಕ ಎನರ್ಜಿಯೇ ಬೇರೆಯಾಗಿತ್ತು. ಪಂದ್ಯದ ವೇಳೆ ಪ್ರತಿ ಕ್ಷಣವನ್ನು ಎಂಜಾಯ್ ಮಾಡಿದ್ದಾರೆ. ಮೈದಾನದಲ್ಲೂ ಬೌಲಿಂಗ್, ಫೀಲ್ಡಿಂಗ್​ನಲ್ಲೂ ಅಮೋಘ ಪ್ರದರ್ಶನ ತೋರಿ ಅಭಿಮಾನಿಗಳ ಮನಸ್ಸು ಕದ್ದಿದ್ದಾರೆ.

ವಿರಾಟ್‌ ಕೊಹ್ಲಿಯ ಬಿಗ್ ಫ್ಯಾನ್

ಶ್ರೇಯಾಂಕ ಪಾಟೀಲ್​ಗೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ ಬಿಗ್ ಫ್ಯಾನ್. ಅವರ ಬ್ಯಾಟಿಂಗ್​ ಅನ್ನು ಚಿಕ್ಕವಳಿದ್ದಾಗಿನಿಂದ ನೋಡಿಕೊಂಡು ಬಂದಿದ್ದೇನೆ. ನನ್ನ ಪಾಲಿಗೆ ವಿರಾಟ್‌ ಎಂದರೆ ಸೂಪರ್ ಸ್ಟಾರ್ ಎಂದು ಹೇಳುತ್ತಾರೆ. ಯಶಸ್ಸಿನ ಉತ್ತುಂಗದಲ್ಲಿರುವ ಶ್ರೇಯಾಂಕಾ ಪಾಟೀಲ್​ ಮುಂದಿನ ದಿನದಲ್ಲಿ ಟೀಮ್​ ಇಂಡಿಯಾದಲ್ಲಿ ಒಳ್ಳೆಯ ಪ್ರದರ್ಶನ ತೋರಲಿ. ಕನ್ನಡಿಗರ ಜೊತೆ ಜೊತೆಗೆ ಇಡೀ ಭಾರತದ ಕ್ರಿಕೆಟ್​ ಅಭಿಮಾನಿಗಳ ಗಮನ ಸೆಳೆಯಲಿ ಎನ್ನುವುದು ಆಶಯವಾಗಿದೆ.

ಸದ್ಯಕಂತೂ ಆರ್​ಸಿಬಿಯ ಅಭಿಮಾನಿಗಳು ಶ್ರೇಯಾಂಕ ಪಾಟೀಲರ್​ನ್ನು ಸೋಷಿಯಲ್ ಮೀಡಿಯಾದಲ್ಲಿ ಆರಾಧನೆ ಮಾಡುತ್ತಿದ್ದಾರೆ.  ಖಡಕ್ ರೊಟ್ಟಿ, ಎಣ್ಣೆಗಾಯಿ ಕೊಟ್ಟು ಸ್ವಲ್ಪ ಶೇಂಗಾದ ಇಂಡಿ ಕೊಟ್ಟರೆ ಇವಾಗಲೇ ಇಲ್ಲಿ ಕುಳಿತು ತಿನ್ನುತ್ತೇನೆ ಎಂದು ಶ್ರೇಯಾಂಕ ಹೇಳಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಮೊನ್ನೆ ಮೊನ್ನೆ ಆರ್​ಸಿಬಿಯ ಈವೆಂಟ್​ವೊಂದರಲ್ಲಿ ಡ್ಯಾನ್ಸ್ ಮಾಡಿದ್ದ ಶ್ರೇಯಾಂಕ ವಿಡಿಯೋವಂತೂ ಸಖತ್ ಹೈಫ್ ಸೃಷ್ಟಿ ಮಾಡುತ್ತಿದೆ. ಒಟ್ಟಾರೆ ಆರ್​ಸಿಬಿ ತಂಡದ ಯುವರಾಣಿ, ಕನ್ನಡತಿ ಶ್ರೇಯಾಂಕ ಪಾಟೀಲ್ ಇನ್ನಷ್ಟು ಟ್ರೋಫಿಗಳನ್ನು ಬೆಂಗಳೂರು ತಂಡಕ್ಕೆ, ಟೀಂ ಇಂಡಿಯಾಗೆ ತಂದುಕೊಡಲಿ ಅನ್ನೋದು ಅಭಿಮಾನಿಗಳ ಮಹದಾಸೆ.

ವಿಶೇಷ ವರದಿ: ಭೀಮಪ್ಪ, ಡಿಜಿಟಲ್ ಡೆಸ್ಕ್, ನ್ಯೂಸ್​ಫಸ್ಟ್ 

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ತಂಡದ ಮುದ್ದಿನ ಯುವರಾಣಿ ಶ್ರೇಯಾಂಕ ಪಾಟೀಲ್; ಕಪ್ ಗೆಲ್ಲುವಲ್ಲಿ ಕನ್ನಡತಿಯ ಪಾಲು ದೊಡ್ಡದು..!

https://newsfirstlive.com/wp-content/uploads/2024/03/Shreyanka_Patil.jpg

Load More