/newsfirstlive-kannada/media/post_attachments/wp-content/uploads/2024/03/Shreyanka_Patil_4.jpg)
WPL 2025 ಹರಾಜಿನಲ್ಲಿ ಆರ್ಸಿಬಿ ಹೊಸದಾಗಿ ಒಟ್ಟು ನಾಲ್ಕು ಆಟಗಾರರನ್ನು ಖರೀದಿ ಮಾಡಿದೆ. ಆ ಮೂಲಕ ಮುಂಬರುವ ಐಪಿಎಲ್ನಲ್ಲಿ ಮತ್ತೆ ಕಪ್ ಎತ್ತಲು ಬಲಿಷ್ಠ ತಂಡವನ್ನು ಕಟ್ಟಿದೆ.
ಪ್ರೇಮ ರಾವತ್ ಅವರನ್ನು 1.20 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಜೋಶಿತಾ ವಿಜೆ ಅವರನ್ನು 10 ಲಕ್ಷಕ್ಕೆ ಖರೀದಿಸಿದ್ರೆ, ಜಾಗ್ರವಿ ಪವಾರ್, ರಾಘ್ವಿ ಬಿಸ್ತ್ ಅವರನ್ನು ತಲಾ 10 ಲಕ್ಷ ರೂಪಾಯಿಗೆ ಆರ್ಸಿಬಿ ಖರೀದಿ ಮಾಡಿದೆ. ಈ ಹರಾಜಿನಲ್ಲಿ ಒಟ್ಟು 19 ಆಟಗಾರ್ತಿಯರು ಮಾರಾಟವಾಗಿದ್ದಾರೆ. ಸಮೀರನ್ ಶೇಖ್ 1.90 ಕೋಟಿಗೆ ಗುಜರಾತ್ ಟೈಟನ್ಸ್ ಖರೀದಿ ಮಾಡಿತು. ಇವರೇ ಅತ್ಯಧಿಕ ಮೊತ್ತಕ್ಕೆ ಸೇಲ್ ಆದ ಆಟಗಾರ್ತಿ. ಇನ್ನು ಟೀಂ ಇಂಡಿಯಾ ಸೂಪರ್ ಸ್ಟಾರ್ ಸ್ನೇಹಾ ರಾಣ ಅನ್ಸೋಲ್ಡ್ ಆಗಿ ಅಚ್ಚರಿ ಮೂಡಿಸಿದರು.
ಹೇಗಿದೆ ಬೆಂಗಳೂರು ತಂಡ: ಸ್ಮೃತಿ ಮಂದಾನ (ಕ್ಯಾಪ್ಟನ್), ಮೇಘನಾ, ಪೆರಿ, ರಿಚಾ, ವರೆಹಮ್, ಶ್ರೇಯಾಂಕ ಪಾಟೀಲ್, ಅಶಾ ಶೋಭನಾ, ಡಿವೈನ್, ರೇಣುಕಾ ಸಿಂಘ್, ಶೋಫಿ ಎಂ, ಎಕ್ತ ಬಿಶ್ಟ್, ಕೇಟ್ ಕ್ರಾಸ್, ಕನಿಕಾ, Wyatt-Hodge ಇವರುಗಳನ್ನು ಆರ್ಸಿಬಿ ರಿಟೈನ್ಡ್ ಮಾಡಿಕೊಂಡಿತ್ತು. ಇದೀಗ ತಂಡಕ್ಕೆ ಹೊಸದಾಗಿ ಜೋಶಿತಾ, ಜಾಗ್ರವಿ, ರಾಘ್ವಿ, ಪ್ರಮ ರಾವತ್ ಸೇರಿದ್ದಾರೆ.
ಇದನ್ನೂ ಓದಿ:ರಾಜ್ಯದ ಈ ಜಿಲ್ಲೆಗಳಲ್ಲಿ 48 ಗಂಟೆಗಳ ಕಾಲ ಭರ್ಜರಿ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್