/newsfirstlive-kannada/media/post_attachments/wp-content/uploads/2025/03/MUMBAI_WOMANS_WIN.jpg)
ಡೆಲ್ಲಿ ಕ್ಯಾಪಿಟಲ್ಸ್ ಸುಲಭ ಗುರಿ ಮುಟ್ಟಲಾಗದೇ ಮೂರನೇ ಸಲ ಟ್ರೋಫಿಯನ್ನು ಬಿಟ್ಟುಕೊಟ್ಟು ಕಣ್ಣೀರು ಹಾಕಿದೆ. ಕೇವಲ 8 ರನ್ಗಳಿಂದ ಕಪ್ ಸೋತ ಡೆಲ್ಲಿ ಆಟಗಾರ್ತಿಯರು ಬೇಸರ ಹೊರ ಹಾಕಿದರು. ಪೈನಲ್ನಲ್ಲಿ ಮುಂಬೈ ವಿರುದ್ಧವೇ ಎರಡು ಬಾರಿ ಮಂಡಿಯೂರಿದ್ದಾರೆ. ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್ ಆಟಗಾರ್ತಿಯರು ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡರು.
ಮುಂಬೈ ತಂಡದ ಬಹುತೇಕ ಆಟಗಾರ್ತಿಯರು ದೊಡ್ಡ ಮೊತ್ತದಲ್ಲೇ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಡಬ್ಲುಪಿಎಲ್ 2025ರ ಬಹುಮಾನ ಮೊತ್ತ ಕೋಟಿ ರೂಪಾಯಿಗಳಲ್ಲಿ ಗೆದ್ದ ತಂಡ ಖುಷಿಯಲ್ಲಿ ತೇಲಾಡುತ್ತಿದೆ. ಇದರ ಜೊತೆಗೆ ಆಟಗಾರ್ತಿಯರ ವೈಯಕ್ತಿಕ ಪ್ರದರ್ಶನದ ಮೇಲೆ ಪ್ರಶಸ್ತಿಗಳನ್ನು ನೀಡಲಾಗಿದೆ. ಅವು ಯಾವುವು ಎನ್ನುವುದನ್ನು ವಿವರವಾಗಿ ಇಲ್ಲಿ ನಿಡಲಾಗಿದೆ.
ಇದನ್ನೂ ಓದಿ: WPL 2025 ಟ್ರೋಫಿ ಗೆದ್ದ ಮುಂಬೈ ಇಂಡಿಯನ್ಸ್.. ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?
ಬಹುಮಾನ ಪಡೆದ ಮುಂಬೈ ಇಂಡಿಯನ್ಸ್ 5 ಆಟಗಾರ್ತಿಯರು
ಉದಯೋನ್ಮುಖ ಆಟಗಾರ್ತಿ ಅಮನ್‌ಜೋತ್ ಕೌರ್- 5 ಲಕ್ಷ ರೂಪಾಯಿ
ಅತ್ಯಂತ ಮೌಲ್ಯಯುತ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್- 5 ಲಕ್ಷ ರೂಪಾಯಿ
ಆರೆಂಜ್ ಕ್ಯಾಪ್ ಪಡೆದ ಆಟಗಾರ್ತಿ ನ್ಯಾಟ್ ಸಿವರ್-ಬ್ರಂಟ್- 5 ಲಕ್ಷ ರೂಪಾಯಿ
(523 ರನ್)
ಪರ್ಪಲ್ ಕ್ಯಾಪ್ ಪಡೆದ ಆಟಗಾರ್ತಿ ಅಮೇಲಿಯಾ ಕೆರ್- 5 ಲಕ್ಷ ರೂಪಾಯಿ (18 ವಿಕೆಟ್‌ಗಳು)
ಟೂರ್ನಿಯಲ್ಲಿ ಅತಿ ಹೆಚ್ಚು ಡಾಟ್ ಬಾಲ್ ಮಾಡಿದ ಪ್ಲೇಯರ್ ಶಬ್ನಿಮ್ ಇಸ್ಮಾಯಿಲ್- 5 ಲಕ್ಷ ರೂಪಾಯಿ (131 ಡಾಟ್ ಬಾಲ್)
ಇತರೆ ತಂಡದ ಆಟಗಾರ್ತಿಯರು
ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ್ತಿ ಆಶ್ಲೀ ಗಾರ್ಡ್ನರ್- 5 ಲಕ್ಷ ರೂಪಾಯಿ (ಗುಜರಾತ್ ಜೈಂಟ್ಸ್, 18 ಸಿಕ್ಸರ್)
ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ ಆಟಗಾರ್ತಿ ಚಿನೆಲ್ಲೆ ಹೆನ್ರಿ- 5 ಲಕ್ಷ ರೂಪಾಯಿ (ಯುಪಿ ವಾರಿಯರ್ಜ್)
ಟೂರ್ನಿಯಲ್ಲಿ ಹೆಚ್ಚು ಕ್ಯಾಚ್ ಪಡೆದ ಪ್ಲೇಯರ್ ಅನ್ನಾಬೆಲ್ ಸದರ್ಲ್ಯಾಂಡ್- 5 ಲಕ್ಷ ರೂಪಾಯಿ (ದೆಹಲಿ ಕ್ಯಾಪಿಟಲ್ಸ್)
ಫೇರ್ ಪ್ಲೇ ಪ್ರಶಸ್ತಿ ಪಡೆದ ಟೀಮ್- ಗುಜರಾತ್ ಜೈಂಟ್ಸ್
- ಮುಂಬೈ ಇಂಡಿಯನ್ಸ್ ಟ್ರೋಫಿ ವಿನ್ನರ್- 6 ಕೋಟಿ ರೂಪಾಯಿಗಳು
- ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್- 3 ಕೋಟಿ ರೂಪಾಯಿಗಳು
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ