WPL ಮಿನಿ ಹರಾಜು.. ನಾಲ್ವರಿಗೆ ಕೋಟಿ ಕೋಟಿ ಜಾಕ್​​ಪಾಟ್​.. ಅತ್ಯಂತ ದುಬಾರಿ ಆಟಗಾರ್ತಿ ಯಾರು?

author-image
Ganesh
Updated On
WPL ಮಿನಿ ಹರಾಜು.. ನಾಲ್ವರಿಗೆ ಕೋಟಿ ಕೋಟಿ ಜಾಕ್​​ಪಾಟ್​.. ಅತ್ಯಂತ ದುಬಾರಿ ಆಟಗಾರ್ತಿ ಯಾರು?
Advertisment
  • ನಾಲ್ವರು ಆಟಗಾರ್ತಿಯರಿಗೆ ಕೋಟಿ ಕೋಟಿ ಹಣ
  • ಅತಿ ಹೆಚ್ಚು ಹಣ ಬಿಡ್ ಮಾಡಿದ ತಂಡ ಯಾವುದು?
  • ಅಕ್ಷತಾ ಮಹೇಶ್ವರಿ 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲು

ಮಹಿಳಾ ಪ್ರೀಮಿಯರ್ ಲೀಗ್-2025 ಕ್ಕಾಗಿ ನಡೆದ ಮಿನಿ ಹರಾಜಿನಲ್ಲಿ ಗುಜರಾತ್ ಜೈಂಟ್ಸ್ ಅತ್ಯಂತ ದುಬಾರಿ ಬಿಡ್ ಮಾಡಿದ ಫ್ರಾಂಚೈಸಿಯಾಗಿದೆ.

ಭಾರತದ ಬ್ಯಾಟ್ಸ್‌ಮನ್ ಸಿಮ್ರಾನ್ ಶೇಖ್ (Simran Shaikh) ಅವರನ್ನು ಗುಜರಾತ್ 1.9 ಕೋಟಿ ರೂಪಾಯಿಗೆ ಖರೀದಿಸಿದೆ. ಗುಜರಾತ್ ತಂಡವು 4.4 ಕೋಟಿ ಮೊತ್ತದೊಂದಿಗೆ ಹರಾಜಿಗೆ ಪ್ರವೇಶ ಮಾಡಿತ್ತು. ಒಟ್ಟು 19 ಆಟಗಾರರಿಗೆ ಜಾಕ್​ಪಾಟ್​ ಸಿಕ್ಕಿದೆ.

ಅತಿಹೆಚ್ಚು ಮೊತ್ತಕ್ಕೆ ಖರೀದಿ ಆದವರು..!

  • ಸಿಮ್ರಾನ್ ಶೇಖ್ 1.90 ಕೋಟಿ (ಗುಜರಾತ್ ಟೈಟನ್ಸ್​)
  • ದಿಯಂದ್ರ ದೊಟ್ಟಿನ್ 1.70 ಕೋಟಿ (ಗುಜರಾತ್ ಟೈಟನ್ಸ್​)
  • ಜಿ ಕಮಲಾನಿ 1.60 ಕೋಟಿ (ಮುಂಬೈ ಇಂಡಿಯನ್ಸ್​)
  • ಪ್ರೇಮ್ ರಾವತ್ 1.20 ಕೋಟಿ (ಆರ್​ಸಿಬಿ)

ನಾಲ್ವರು ಆಟಗಾರರು ಕೋಟಿ ಲೆಕ್ಕದಲ್ಲಿ ಜಾಕ್​ಪಾಟ್ ಗಿಟ್ಟಿಸಿಕೊಂಡರೆ, ಎನ್​.ಚರಣಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ 55 ಲಕ್ಷ ರೂಪಾಯಿಗೆ ಖರಿದಿಸಿದೆ. ನದೇನೆ ಡಿ ಕ್ಲೆರೆಕ್ (ಮುಂಬೈ ಇಂಡಿಯನ್ಸ್​), ಅಲನಾ ಕಿಂಗ್ (ಉತ್ತರ ಪ್ರದೇಶ), ಡನಿಯಲ್ಲೆ ಗಿಬ್ಸನ್ (ಗುಜರಾತ್ ಟೈಟನ್ಸ್) 30 ಲಕ್ಷ ರೂಪಾಯಿಗೆ ಖರೀದಿ ಮಾಡಿದೆ. ಅಕ್ಷತಾ ಮಹೇಶ್ವರಿ ಅವರು 20 ಲಕ್ಷಕ್ಕೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. WPL 2025 ಹರಾಜಿನಲ್ಲಿ ಆರ್​​ಸಿಬಿ ಹೊಸದಾಗಿ ಒಟ್ಟು ನಾಲ್ಕು ಆಟಗಾರರನ್ನು ಖರೀದಿ ಮಾಡಿದೆ. ಆ ಮೂಲಕ ಮುಂಬರುವ ಐಪಿಎಲ್​​ನಲ್ಲಿ ಮತ್ತೆ ಕಪ್ ಎತ್ತಲು ಬಲಿಷ್ಠ ತಂಡವನ್ನು ಕಟ್ಟಿದೆ. ಪ್ರೇಮ ರಾವತ್ ಅವರನ್ನು 1.20 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಜೋಶಿತಾ ವಿಜೆ ಅವರನ್ನು 10 ಲಕ್ಷಕ್ಕೆ ಖರೀದಿಸಿದ್ರೆ, ಜಾಗ್ರವಿ ಪವಾರ್, ರಾಘ್ವಿ ಬಿಸ್ತ್​ ಅವರನ್ನು ತಲಾ 10 ಲಕ್ಷ ರೂಪಾಯಿಗೆ ಆರ್​​ಸಿಬಿ ಖರೀದಿ ಮಾಡಿದೆ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment