/newsfirstlive-kannada/media/post_attachments/wp-content/uploads/2025/03/RCB-Womens-IPL-3.jpg)
2024ರಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕಪ್ ಗೆದ್ದಾಗ RCB ಅಭಿಮಾನಿಗಳಿಗೆ ತುಂಬಾ ಖುಷಿ ಆಗಿತ್ತು. RCB ಫ್ಯಾನ್ಸ್ ಸಿಕ್ಕಾಪಟ್ಟೆ ಸೆಲಬ್ರೇಟ್ ಮಾಡಿದ್ದರು. ಆದರೆ ಈ ಮಹಿಳಾ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಇನ್ನು ಒಂದು ಪಂದ್ಯ ಬಾಕಿ ಇರುವಂತೆ ಟೂರ್ನಿಯಿಂದಲೇ ಔಟ್ ಆಗಿದ್ದಾರೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ಅಪ್ಪಟ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಮಹಿಳಾ ಐಪಿಎಲ್ನ 18ನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ತಂಡ ಆರ್‌ಸಿಬಿ ವಿರುದ್ಧ 12 ರನ್‌ಗಳ ರೋಚಕ ಗೆಲುವು ಸಾಧಿಸಿದೆ.
ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 225 ರನ್‌ಗಳ ಬೃಹತ್ ಮೊತ್ತ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಆರ್‌ಸಿಬಿ 213 ರನ್ಗಳಿಸಿತು.
ಇದನ್ನೂ ಓದಿ: ChampionsTrophyFinal: ಕಿಂಗ್ ಕೊಹ್ಲಿ ಫ್ಯಾನ್ಸ್‌ಗೆ ಸೂಪರ್ ಸಂಡೇ.. ದುಬೈನಲ್ಲಿ ಟೀಂ ಇಂಡಿಯಾದ್ದೇ ದರ್ಬಾರ್!
ಇದು ಯುಪಿ ವಾರಿಯರ್ಸ್ ತಂಡದ ಕೊನೆಯ ಪಂದ್ಯವಾಗಿದ್ದು, ಟೂರ್ನಿಯಲ್ಲಿ 2 ಗೆಲುವು ಸಾಧಿಸಿ ಟೂರ್ನಿಯಿಂದ ಹೊರಬಿದ್ದಿದೆ. ವಿಶೇಷವೆಂದರೆ ಈ ಟೂರ್ನಿಯಲ್ಲಿ ಯುಪಿ ಗೆದ್ದ 2 ಪಂದ್ಯಗಳೂ ಆರ್‌ಸಿಬಿ ವಿರುದ್ಧ.
ಸತತ 5 ಸೋಲಿನೊಂದಿಗೆ ಆರ್‌ಸಿಬಿ ಕೂಡ ಇನ್ನು ಒಂದು ಪಂದ್ಯ ಇರುವಂತೆ 2025ರ WPL ಟೂರ್ನಿಯಿಂದ ಹೊರ ಬಿದ್ದಿದೆ.
ಕಳೆದ ಬಾರಿ ಕಪ್ ಗೆದ್ದ ಮಹಿಳಾ RCB ತಂಡದ ಮೇಲೆ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಈ ಬಾರಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿ ಕುಸಿಯೋ ಮೂಲಕ ಆರ್‌ಸಿಬಿ ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ