/newsfirstlive-kannada/media/post_attachments/wp-content/uploads/2025/02/WPL.jpg)
ಇಂದಿನಿಂದ ಮಹಿಳಾ ಪ್ರೀಮಿಯರ್ ಲೀಗ್ (WPL) ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು (RCB) ಮತ್ತು ಗುಜರಾತ್ ಜೇಂಟ್ಸ್ಟ್ (Gujarat Giants) ಸೆಣಸಾಟ ನಡೆಸಲಿವೆ.
ಈ ಬಾರಿ ಏನು ವಿಶೇಷ?
ಮಹಿಳಾ ಪ್ರೀಮಿಯರ್ ಲೀಗ್-2025ರ ಅತ್ಯಂತ ವಿಶೇಷ ವಿಷಯ ಏನೆಂದರೆ ಪಂದ್ಯಗಳು ನಡೆಯುತ್ತಿರುವ ಸ್ಥಳ. ಮೊದಲ ಸೀಸನ್ ಕೇವಲ ಒಂದೇ ಸ್ಥಳದಲ್ಲಿ ನಡೆಯಿತು. ಈ ಇಡೀ ಸೀಸನ್ ಮುಂಬೈನಲ್ಲಿ ನಡೆಯಿತು. ಎರಡನೇ ಸೀಸನ್ ಬೆಂಗಳೂರು ಮತ್ತು ದೆಹಲಿಯಲ್ಲಿ ಮಾತ್ರ ನಡೆಯಿತು. ಈ ಬಾರಿ ಒಟ್ಟು ನಾಲ್ಕು ಸ್ಥಳಗಳಲ್ಲಿ WPL ನಡೆಯುತ್ತಿದೆ.
ವಡೋದರಾದಲ್ಲಿ ಮೊದಲ ಪಂದ್ಯ ನಡೆಯಲಿದೆ. ಮೊದಲ ಆರು ಪಂದ್ಯಗಳು ಇಲ್ಲಿಯೇ ನಡೆಯಲಿವೆ. ಎರಡನೇ ಲೆಗ್‌ನ 8 ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ. ಅಂತಿಮ ಹಂತದಲ್ಲಿ 4 ಪಂದ್ಯಗಳು ಲಕ್ನೋದಲ್ಲಿ ಮತ್ತು 4 ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ. ಟೂರ್ನಿಯ ಎಲಿಮಿನೇಟರ್ ಪಂದ್ಯಗಳು ಮುಂಬೈನಲ್ಲಿ ನಡೆಯಲಿವೆ.
WPL-2025ರಲ್ಲಿ ಒಟ್ಟು 5 ತಂಡಗಳು ಭಾಗವಹಿಸುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಮತ್ತು ಯುಪಿ ವಾರಿಯರ್ಸ್ ತಂಡಗಳು. ಒಟ್ಟು 22 ಪಂದ್ಯಗಳು ನಡೆಯಲಿವೆ. ಆ ಪೈಕಿ 20 ಪಂದ್ಯಗಳು ಗುಂಪು ಹಂತದಲ್ಲಿರುತ್ತವೆ. ಪ್ರತಿ ತಂಡವು ಇತರ 4 ತಂಡಗಳ ವಿರುದ್ಧ ಎರಡು ಬಾರಿ ಆಡಲಿವೆ. ಗುಂಪು ಹಂತದಲ್ಲಿ ನಂಬರ್-1 ಆಗಿ ಹೊರಹೊಮ್ಮಿದ ತಂಡ ನೇರವಾಗಿ ಫೈನಲ್‌ಗೆ ಹೋಗುತ್ತದೆ. ಎರಡನೇ ಮತ್ತು ಮೂರನೇ ಸ್ಥಾನ ಪಡೆದ ತಂಡಗಳು ಎಲಿಮಿನೇಟರ್ ಪಂದ್ಯ ಆಡುತ್ತವೆ. ಇಲ್ಲಿ ಗೆದ್ದವರು ಫೈನಲ್ ಪ್ರವೇಶ ಮಾಡುತ್ತವೆ.
ಕಳೆದ ಎರಡು ಋತುಗಳಲ್ಲಿ ವಿಜೇತ ತಂಡಕ್ಕೆ 6 ಕೋಟಿ ರೂಪಾಯಿ ಬಹುಮಾನ ನೀಡಲಾಗಿದೆ. ರನ್ನರ್ ಅಪ್ ತಂಡಕ್ಕೆ 3 ಕೋಟಿ ರೂ. ಬಹುಮಾನ ನೀಡಲಾಗಿದೆ. ಅತಿ ಹೆಚ್ಚು ರನ್ ಹಾಗೂ ವಿಕೆಟ್ ಪಡೆದ ಆಟಗಾರನಿಗೆ ಐದು ಲಕ್ಷ ರೂಪಾಯಿ ಬಹುಮಾನ ನೀಡಲಾಗಿದೆ.
- ಇಂದು ಎಷ್ಟು ಗಂಟೆಗೆ ಪಂದ್ಯ..? : ಸಂಜೆ 7.30ಕ್ಕೆ ಪಂದ್ಯ ನಡೆಯಲಿದೆ.
- ಎಲ್ಲಿ ಪಂದ್ಯ ವೀಕ್ಷಣೆ..?: ಸ್ಟಾರ್ ಸ್ಪೋರ್ಟ್ಸ್​ ನೆಟ್​​ವರ್ಕ್​ ಹಾಗೂ Disney + Hotstar.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us