Advertisment

ಚಿನ್ನ ಗೆಲ್ಲಬೇಕಾಗಿದ್ದ ಹುಡುಗಿ ಬರೀಗೈಯಲ್ಲಿ ವಾಪಸ್ ಬಂದಿದ್ದೇಕೆ: ವಿನೇಶ್ ಪೋಗಟ್​ಗೆ ತೂಕವೇ ‘ಭಾರ‘ವಾಯ್ತು!

author-image
Gopal Kulkarni
Updated On
ಚಿನ್ನ ಗೆಲ್ಲಬೇಕಾಗಿದ್ದ ಹುಡುಗಿ ಬರೀಗೈಯಲ್ಲಿ ವಾಪಸ್ ಬಂದಿದ್ದೇಕೆ: ವಿನೇಶ್ ಪೋಗಟ್​ಗೆ ತೂಕವೇ ‘ಭಾರ‘ವಾಯ್ತು!
Advertisment
  • ಚಿನ್ನದ ಪದಕಕ್ಕೆ ಗುರಿಯಿಟ್ಟ ಹೆಣ್ಣು, ಅನುಭವಿಸಿದ್ದು ಏನೇನು?
  • ಕೊನೆ ಹಂತದಲ್ಲಿ ಭಾರವಾಯ್ತಾ ಬರೀ ಆ 100 ಗ್ರಾಂ ತೂಕ..?
  • ವಿನೇಶ್ ಪೋಗಾಟ್ ಅನುಭವಿಸಿದ, ಒದ್ದಾಡಿದ ಕ್ಷಣಗಳಿವು

ಪ್ಯಾರಿಸ್: ಒಲಿಂಪಿಕ್ಸ್ ಪಂದ್ಯಾವಳಿಯಿಂದ ಅನರ್ಹಗೊಂಡಿರುವ ವಿನೇಶ್ ಪೋಗಟ್​​ಗೆ ನಿನ್ನೆ ರಾತ್ರಿಯೇ ತೂಕ ಹೆಚ್ಚಳದ ಸೂಚನೆ ಸಿಕ್ಕಿತ್ತಂತೆ. ಪ್ಯಾರಿಸ್ ಒಲಿಂಪಿಕ್ಸ್​​​ ರೆಸ್ಲಿಂಗ್​​​ ಸೆಮಿಫೈನಲ್​​ನಲ್ಲಿ ಭರ್ಜರಿ ಆಟವಾಡಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಪೋಗಟ್​​​​​​​​​​​ ತೂಕ ಇಳಿಸಿಕೊಳ್ಳಲು ರಾತ್ರಿಯೆಲ್ಲಾ ಕಸರತ್ತು ಮಾಡಿದ್ದರು. ಕಡೇ ಘಳಿಗೆಯಲ್ಲಿ ತೂಕ ಇಳಿಸಿಕೊಳ್ಳಲು ವಿನೇಶ್ ಪೋಗಟ್ ಹಾಕಿದ ಶ್ರಮ ಅಷ್ಟಿಷ್ಟಲ್ಲ.

Advertisment

ಇದನ್ನೂ ಓದಿ:ರಕ್ತ ಹೀರಿದ್ರು.. ಹೇರ್ ​ಕಟ್ ಮಾಡಿದ್ರು; ತೂಕ ಇಳಿಸಲು ವಿನೇಶ್ ಫೋಗಟ್‌ ಮಾಡಿದ ಸಾಹಸ ಭಯಾನಕ!

ಇದು ಅಕ್ಷರಶಃ ನಿಜ. ಒಲಿಂಪಿಕ್ಸ್​​ನಲ್ಲಿ ಪದಕ ಗೆಲ್ಲೋದು ಅಷ್ಟು ಸುಲಭದ ಮಾತಲ್ಲ. 50 ಕೆ.ಜಿ ಪ್ರೀಸ್ಟೈಲ್​​ನಲ್ಲಿ ಸ್ಪರ್ಧಿಸೋ ವಿನೇಶ್ ಪೋಗಟ್ ತನ್ನ ದೇಹದ ತೂಕ ಇಳಿಸಿಕೊಳ್ಳಲು ಭಾರಿ ಶ್ರಮ ಹಾಕಿದ್ದರು. ಒಲಿಂಪಿಕ್ಸ್ ಕುಸ್ತಿ ವಿಭಾಗದ ಕ್ರೀಡಾಳುಗಳ ತೂಕವನ್ನು ಕರಾರುವಾಕ್ಕಾಗಿ ಪರಿಶೀಲಿಸಲಾಗುತ್ತೆ. 50 ಕೆ.ಜಿಗಿಂತ ಸ್ವಲ್ಪ ಜಾಸ್ತಿಯಿದ್ದರೂ ಅವರನ್ನು ಮುಂದಿನ ಪಂದ್ಯದಿಂದ ಅನರ್ಹಗೊಳಿಸಲಾಗುತ್ತದೆ. ವಿಶ್ವದ ಖ್ಯಾತ ಆಟಗಾರ್ತಿಯರನ್ನು ಸೋಲಿಸಿ ಅಂತಿಮ ಹಂತಕ್ಕೆ ಲಗ್ಗೆ ಇಟ್ಟಿದ್ದ ವಿನೇಶ್ ಪೋಗಟ್​​ಗೆ ನಿನ್ನೆಯೇ ತೂಕ ಹೆಚ್ಚಳದ ಸೂಚನೆ ಸಿಕ್ಕಿತ್ತಂತೆ. ಹೀಗಾಗಿ ಇಡೀ ರಾತ್ರಿ ತೂಕ ಇಳಿಸಿಕೊಳ್ಳಲು ಕಸರತ್ತು ನಡೆಸಿದ್ದರು.

publive-image

ಸೆಮಿಫೈನಲ್ ಗೆದ್ದಾಗ ಪೋಗಟ್ ತೂಕ 50 ಕೆ.ಜಿ ಮೀರಿತ್ತು

ಸೆಮಿಫೈನಲ್ ಗೆದ್ದಾಗ ಪೋಗಟ್ ತೂಕ 50 ಕೆ.ಜಿ ಮೀರಿತ್ತು. ಇದರ ಸುಳಿವರಿತ ಪೋಗಟ್ ತೂಕ ಇಳಿಸಲು ಇಡೀ ರಾತ್ರಿ ನಿದ್ದೆ ಮಾಡದೇ ಕಸರತ್ತು ಮಾಡಿದ್ದರು. ನೀರು ಕುಡಿಯದೇ ಬೆವರಿಳಿಸುವ ಮೂಲಕ, ದೇಹದಲ್ಲಿನ ನೀರಿನ ಅಂಶ ಕಡಿತಗೊಳಿಸಿ ತೂಕ ಕಡಿತಕ್ಕೆ ಯತ್ನಿಸಿದ್ದರು. ತೂಕ ಇಳಿಸಲು ಸೈಕ್ಲಿಂಗ್, ಸ್ಕಿಪ್ಪಿಂಗ್ ಜೊತೆಗೆ ತಲೆ ಕೂದಲು, ಉಗುರುಗಳನ್ನೂ ಕತ್ತರಿಸಿಕೊಂಡಿದ್ದರು ಎನ್ನಲಾಗಿದೆ. ತೂಕ ಇಳಿಸಲು ದೇಹದ ರಕ್ತ ಕೂಡ ಹೊರತೆಗೆಸಿದ್ದರು ಎನ್ನಲಾಗಿದೆ. ಇಷ್ಟೆಲ್ಲಾ ಶ್ರಮ ಹಾಕಿದ್ದರೂ ಕೊನೆಗೆ ನೂರರಿಂದ ನೂರಿಪ್ಪತ್ತು ಗ್ರಾಂ ತೂಕ ಹೆಚ್ಚಳ ಆಗಿದ್ದಕ್ಕೆ ಫೈನಲ್ ಪಂದ್ಯಕ್ಕೆ ಅನರ್ಹತೆ ಹೊಂದಿದ್ದಾರೆ. ತೀವ್ರ ಕಸರತ್ತಿನ ಕಾರಣ ಡಿಹೈಡ್ರೇಷನ್‌ನಿಂದ ವಿನೇಶ್ ಪೋಗಟ್ ಆಸ್ಪತ್ರೆಗೆ ದಾಖಲು ಕೂಡ ಆಗಿದ್ದರು.

Advertisment

ಇನ್ನು, ವಿನೇಶ್ ಫೋಗಟ್ 50 ಕೆಜಿ ಕೆಟಗರಿಯ ಮೊದಲ ದಿನದ ಪಂದ್ಯಗಳಲ್ಲಿ ಸತತವಾಗಿ ಮೂರು ಪಂದ್ಯಗಳನ್ನಾಡಿ ತೀವ್ರವಾಗಿ ಸುಸ್ತಾಗಿದ್ದರು. ಹೀಗಾಗಿ ಪೋಗಟ್​​ಗೆ ಎಲೆಕ್ಟ್ರೋಲೈಟ್ ಹೆಚ್ಚಿನ ಮಟ್ಟಿಗೆ ನೀಡಲಾಗಿತ್ತು. ಕೆಲವು ಪೌಷ್ಠಿಕ ಆಹಾರಗಳನ್ನು ಕೂಡ ನೀಡಲಾಗಿತ್ತು. ಇದರಿಂದ ಆಕೆಯ ತೂಕ ಗಣನೀಯವಾಗಿ ಹೆಚ್ಚಾಗಿತ್ತೆಂದು ಹೇಳಲಾಗಿದೆ.

publive-image

ಒಟ್ಟಾರೆ, ರೆಸ್ಲಿಂಗ್ ಫೈನಲ್‌ನಲ್ಲಿ ವಿನೇಶ್ ಪೋಗಟ್ ಜಯಗಳಿಸಿದ್ದರೆ ಒಲಿಂಪಿಕ್ಸ್ ಇತಿಹಾಸದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕುಸ್ತಿಪಟು ಎಂಬ ಕೀರ್ತಿಗೆ ಪಾತ್ರರಾಗ್ತಿದ್ದರು. ಕಾಮನ್​ವೆಲ್ತ್, ಏಷ್ಯನ್ ಗೇಮ್ಸ್​​​​​​​​​ನಲ್ಲಿ ಚಿನ್ನ ಸೇರಿದಂತೆ 8 ಪದಕ ಗೆದ್ದಿರುವ ವಿನೇಶ್‌ ಡಿಕ್ಷನರಿಯಲ್ಲಿ ಒಲಿಂಪಿಕ್ಸ್ ಪದಕ ಮಿಸ್ ಆಗಿತ್ತು. ಹಿಂದಿನ ಎರಡು ಒಲಿಂಪಿಕ್ಸ್​​​ನಲ್ಲೂ ಪದಕ ವಂಚಿತಳಾಗಿದ್ದ ಪೋಗಟ್​​​​​​ ಈ ಬಾರಿ ಫೈನಲ್​​ನಲ್ಲಿ ಗೆಲ್ಲದಿದ್ರೂ ಬೆಳ್ಳಿ ಪದಕವಂತೂ ಒಲಿಯುತ್ತಿತ್ತು. ಆದ್ರೆ ಚಿನ್ನದಂತಹ ಅವಕಾಶವನ್ನು ಕಳೆದುಕೊಂಡಿದ್ದು ಮಾತ್ರ ಬೇಸರದ ಸಂಗತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment