newsfirstkannada.com

WTC2023: ಟೀಂ ಇಂಡಿಯಾ ಎಡವಿದ್ದೆಲ್ಲಿ? ಆಸಿಸ್ ಮುಂದೆ ರೋಹಿತ್​ ಲೆಕ್ಕಚಾರ​ ಹಿಂಗ್ಯಾಕಾಯ್ತು?

Share :

Published June 11, 2023 at 6:46am

Update June 11, 2023 at 6:48am

    IPLನಲ್ಲಿ ಆಡಿ ಇಲ್ಯಾಕೆ ಹಿಂಗಾಯ್ತು?

    ಟೀಂ ಇಂಡಿಯಾಗೆ ಶನಿದೆಸೆಯೇ?

    ಟೀಂ ಇಂಡಿಯಾದ ಮುಂದೆ ಆಸೀಸ್​ ಓಟದ ಆಟ

ಐಸಿಸಿ ಟ್ರೋಫಿ ಬರಕ್ಕೆ ಬ್ರೇಕ್​ ಹಾಕೋ ಪ್ಲಾನ್​ ಹಾಕಿಕೊಂಡು ಇಂಗ್ಲೆಂಡ್​ ಫ್ಲೈಟ್​​ ಹತ್ತಿದ ಟೀಮ್​ ಇಂಡಿಯಾದ ಲೆಕ್ಕಾಚಾರ ಮೊದಲ ದಿನದಲ್ಲೇ ತಲೆ ಕೆಳಗಾಯ್ತು. ಆಸ್ಟ್ರೇಲಿಯಾ ಖಡಕ್​ ಆಟದ ಮುಂದೆ ರೋಹಿತ್​ ಪಡೆ ದಿಕ್ಕೇ ತೋಚದೆ ನಿಂತು ಬಿಡ್ತು. ತಂಡದಲ್ಲಿ ಕಾನ್ಫಿಡೆನ್ಸ್​ ಅನ್ನೋದೆ ಮಾಯವಾಯ್ತು. ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ ಬೌಲರ್​​ಗಳ ಬೌಲಿಂಗ್​ ಅಷ್ಟು ಕಳಪೆಯಾಗಿತ್ತು.

ರನ್​ಮಷೀನ್​ಗಳಾದ ಬೌಲರ್ಸ್​​, ಕಂಗೆಟ್ಟ​ ಕ್ಯಾಪ್ಟನ್​.!

ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದ್ದೇ ತಡ ಟೀಮ್​ ಇಂಡಿಯಾ ಅರ್ಧಪಂದ್ಯ ಗೆಲ್ತು ಅಂತ ಎಲ್ರೂ ಭಾವಿಸಿದ್ರು. ಆರಂಭದಲ್ಲೇ ಆಸಿಸ್​​ ಟಾಪ್​ ಆರ್ಡರ್​ ಬ್ಯಾಟ್ಸ್​ಮನ್​ಗಳಿಗೆ ಪೆವಿಲಿಯನ್​ ದಾರಿ ತೋರಿಸಿದ ಮೇಲಂತೂ, ಟೀಮ್​ ಇಂಡಿಯಾ ಆತ್ಮವಿಶ್ವಾಸ ದುಪ್ಪಟ್ಟಾಗಿತ್ತು. ಆದ್ರೆ, ಸೀನ್​ ಕಟ್​ ಮಾಡಿದ್ರೆ, ಆಗಿದ್ದೇ ಬೇರೆ. ಆಸಿಸ್​ ಪಡೆಯ ರಣಾರ್ಭಟಕ್ಕೆ ಬೌಲಿಂಗ್​ ಯುನಿಟ್​ ಬೆಸ್ತು ಬಿತ್ತು. ಬರೋಬ್ಬರಿ 469 ರನ್​ಗಳನ್ನ ಕಾಂಗರೂ ಪಡೆ ಕಲೆ ಹಾಕ್ತು. ಇದ್ರ ಬೆನ್ನಲ್ಲೇ, ಟೀಮ್​ ಇಂಡಿಯಾ ಕ್ಯಾಂಪ್​ನಲ್ಲಿ ಕಾನ್ಫಿಡೆನ್ಸೇ ಮಾಯವಾಯ್ತು.

ಟೀಮ್​ ಇಂಡಿಯಾ ಪರದಾಟ, ಆಸಿಸ್​ ಮೆರೆದಾಟ.!

ಒಂದೆಡೆ ಟೀಮ್​ ಇಂಡಿಯಾ ಬೌಲರ್​ಗಳು ವಿಕೆಟ್​ ಬೇಟೆಗೆ ಪರದಾಡಿದ್ರೆ, ಆಸಿಸ್​ ಬೌಲರ್ಸ್​ ಸಲೀಸಾಗಿ ವಿಕೆಟ್​ ಎಗರಿಸಿದ್ರು. ಕೊಹ್ಲಿ, ರೋಹಿತ್​, ಪೂಜಾರ, ಗಿಲ್​ ಎಲ್ರೂ ಮಕಾಡೆ ಮಲಗಿದ್ರು. ಹಾಗಾದ್ರೆ, ಟೀಮ್​ ಇಂಡಿಯಾ ಬೌಲರ್ಸ್​ ಎಡವಿದ್ದೆಲ್ಲಿ ಅನ್ನೋದು ಈಗ ಹುಟ್ಟಿರೋ ಪ್ರಶ್ನೆಯಾಗಿದೆ. ಕಣಕ್ಕಿಳಿಸಿದ ನಾಲ್ವರು ಬೌಲರ್​ಗಳು ಕ್ವಾಲಿಟಿ ಬೌಲರ್ಸ್​ ಇಂಗ್ಲೆಂಡ್​ನಲ್ಲಿ ಆಡಿದ ಅನುಭವವೂ ಇದೆ. ಹಾಗಿದ್ರೂ, ವಿಕೆಟ್​​ ಭೇಟೆಗೆ ಪರದಾಡಿದ್ದು ಯಾಕೆ ಅನ್ನೋ ಚರ್ಚೆ ನಡೀತಾ ಇದೆ. ಇದಕ್ಕೆ ಉತ್ತರ ಐಪಿಎಲ್.

ಐಪಿಎಲ್​ನಲ್ಲಿ ಮಿಂಚು, ಟೆಸ್ಟ್​ ಫೈನಲ್​ನಲ್ಲಿ ಮಂಕು.!

ಮೊಹಮ್ಮದ್​ ಶಮಿ, ಮೊಹಮ್ಮದ್​ ಸಿರಾಜ್​ ಇವರಿಬ್ಬರೂ ಈ ಸೀಸನ್​ನ ಐಪಿಎಲ್​ನಲ್ಲಿ ಅಬ್ಬರಿಸಿ ಬೊಬ್ಬಿರಿದ್ರು. ಆದ್ರೆ, ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ನಲ್ಲಿ ವಿಕೆಟ್​ ಬೇಟೆಗೆ ಒದ್ದಾಡಿದ್ರು. ವೈಟ್​ಬಾಲ್​ ಫಾರ್ಮೆಟ್​ನಿಂದ ರೆಡ್​ಬಾಲ್​ ಶಿಫ್ಟ್​ ಆಗಿದ್ದೇ ತಡ ಇಬ್ಬರೂ ರಿಧಮ್​ ಕಂಡುಕೊಳ್ಳೋಕೆ ಆಗಲಿಲ್ಲ. ಟೀಮ್​ ಇಂಡಿಯಾ ಮಾಜಿ ವೇಗಿ ಇರ್ಫಾನ್​ ಪಠಾಣ್​ ಕೂಡ ಸತತ 2 ತಿಂಗಳು ಐಪಿಎಲ್​ ಆಡಿದ್ದೇ ಹಿನ್ನಡೆಗೆ ಕಾರಣ ಅಂತಿದ್ದಾರೆ. ಸತತ 2 ತಿಂಗಳು ಪಂದ್ಯದಲ್ಲಿ 4 ಓವರ್​ ಮಾತ್ರ ಬೌಲಿಂಗ್​ ಮಾಡಿ, ಇದ್ದಕ್ಕಿದ್ದಂತೆ 15-20 ಓವರ್​ಗೆ ಜಂಪ್​ ಮಾಡಿದ್ರೆ ಹೇಗೆ ಅಂತಾ ಪ್ರಶ್ನಿಸಿದ್ದಾರೆ.

ವರ್ಕ್​ಲೋಡ್​ ಮ್ಯಾನೇಜ್​ಮೆಂಟ್​ನಲ್ಲಿ ವಿಫಲ.!

ಹೌದು. ಈ ಸೀಸನ್​ ಐಪಿಎಲ್​ಗೂ ಮುನ್ನ ಟೀಮ್​ ಇಂಡಿಯಾದ ಕ್ಯಾಪ್ಟನ್​ ಒಂದು ಮಾತು ಹೇಳಿದ್ರು. ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ನಮ್ಮ ಟಾರ್ಗೆಟ್​. ಐಪಿಎಲ್​​ನಲ್ಲಿ ವರ್ಕ್​​ಲೋಡ್​ ಮ್ಯಾನೇಜ್​ಮೆಂಟ್​ ಮಾಡ್ತೀವಿ ಅಂತಾ. ಆದ್ರೆ, ಐಪಿಎಲ್​ನಲ್ಲಿ ಆಗಿದ್ದೇ ಬೇರೆ. ತಂಡದ ಪ್ರಮುಖ ಆಟಗಾರರೆಲ್ಲಾ ವಿಶ್ರಾಂತಿಯನ್ನೇ ಪಡೀಲಿಲ್ಲ. ಸತತ 2 ತಿಂಗಳು ಐಪಿಎಲ್​ ಆಡಿ, ದಿಢೀರ್​ ಟೆಸ್ಟ್​ ಫಾರ್ಮೆಟ್​ಗೆ ಶಿಫ್ಟ್​ ಆದ್ರು.

ಕಂಡೀಷನ್​​ಗೆ ಹೊಂದಿಕೊಳ್ಳುವಲ್ಲೂ ಫೇಲ್​​.!

ಇಂಗ್ಲೆಂಡ್​ನ ಪ್ಲೇಯಿಂಗ್​ ಕಂಡೀಷನ್​ಗೂ ಭಾರತದ ಪ್ಲೇಯಿಂಗ್​ ಕಂಡೀಷನ್​ಗೂ ಸಿಕ್ಕಾಪಟ್ಟೆ ವ್ಯತ್ಯಾಸವಿದೆ. ಹೀಗಾಗಿ ಟೂರ್ನಿಗೂ ಮುನ್ನವೇ ಟೀಮ್​ ಇಂಡಿಯಾ ಆಟಗಾರರು ತೆರಳಬೇಕು ಅನ್ನೋದು ಎಲ್ಲರ ಅಭಿಪ್ರಾಯವಾಗಿತ್ತು. ಆದ್ರೆ, ಐಪಿಎಲ್​ ಕಾರಣದಿಂದ ಇದು ಸಾಧ್ಯವಾಗಲೇ ಇಲ್ಲ. ಇನ್​ಫ್ಯಾಕ್ಟ್​​. ತಂಡದ ಮೇನ್​ ವೆಪನ್​ ಮೊಹಮದ್​ ಶಮಿ ತಂಡ ಕೂಡಿಕೊಂಡಿದ್ದು ಕೊನೆಯ ಆಟಗಾರನಾಗಿ. ಜೊತೆಗೆ ಮಹತ್ವದ ಪಂದ್ಯಕ್ಕೂ ಮುನ್ನ ಒಂದು ಅಭ್ಯಾಸ ಪಂದ್ಯವನ್ನೂ ಆಟಗಾರರು ಆಡಲಿಲ್ಲ.

ಇನ್ನೊಂದೆಡೆ ಫೈನಲ್​ಗೂ ಮುನ್ನ ಇಂಗ್ಲೆಂಡ್​ನಲ್ಲಿ ಆಸಿಸ್​ ಪಡೆ ಭರ್ಜರಿ ಅಭ್ಯಾಸ ನಡೆಸಿತ್ತು. ಸ್ವತಃ ಕ್ಯಾಪ್ಟನ್​ ಕಮಿನ್ಸ್​ ಇದರಿಂದ ಹೊರತಾಗಲಿಲ್ಲ. ಹೀಗಾಗಿಯೇ ಸಿದ್ಧತೆಯಿಲ್ಲದ ಟೀಮ್​ ಇಂಡಿಯಾ ಬೌಲರ್​ಗಳು ಸಾಲು ಸಾಲು ಹಿನ್ನಡೆಯನ್ನ ಅನುಭವಿಸಿದ್ರು. ತಂಡವೂ ಸಂಕಷ್ಟಕ್ಕೆ ಸಿಲುಕಿತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WTC2023: ಟೀಂ ಇಂಡಿಯಾ ಎಡವಿದ್ದೆಲ್ಲಿ? ಆಸಿಸ್ ಮುಂದೆ ರೋಹಿತ್​ ಲೆಕ್ಕಚಾರ​ ಹಿಂಗ್ಯಾಕಾಯ್ತು?

https://newsfirstlive.com/wp-content/uploads/2023/06/Team-India-6.jpg

Load More