/newsfirstlive-kannada/media/post_attachments/wp-content/uploads/2024/12/ROHIT_KOHLI_KL.jpg)
ಬಾಕ್ಸಿಂಗ್ ಡೇ ಟೆಸ್ಟ್​ ಪಂದ್ಯದ ಸೋಲಿನೊಂದಿಗೆ ಟೀಮ್​ ಇಂಡಿಯಾದ WTC ಫೈನಲ್​ ಲೆಕ್ಕಾಚಾರ ಜೋರಾಗಿದೆ. ಪೈನಲ್​ ಎಂಟ್ರಿಗೆ ಭಾರತ ತಂಡಕ್ಕೆ ಇನ್ನೂ ಚಾನ್ಸ್​ ಇದೆಯಾ ಎಂಬ ಪ್ರಶ್ನೆ ಮೂಡಿದೆ. ಸೌತ್​ ಆಫ್ರಿಕಾ ಅಧಿಕೃತವಾಗಿ ಫೈನಲ್​ಗೆ ಎಂಟ್ರಿ ಕೊಟ್ಟಿದೆ. 2ನೇ ತಂಡವಾಗಿ ಎಂಟ್ರಿಗೆ ಭಾರತ ತಂಡಕ್ಕೆ ಚಾನ್ಸ್​ ಇದೆಯಾ, ಫೈನಲ್ ಲೆಕ್ಕಾಚಾರ ಹೇಗಿದೆ?.
ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಟೀಮ್ ಇಂಡಿಯಾ ಪಾಲಿಗೆ ಡು ಆರ್​​​ ಡೈ ಆಗಿತ್ತು. ಈ ಗೆಲುವು ಕೇವಲ ಬಾರ್ಡರ್​-ಗವಾಸ್ಕರ್ ಟೆಸ್ಟ್​ ಸರಣಿಯಲ್ಲಿ ಮುನ್ನಡೆ ಸಾಧಿಸೋಕಾಗಿ ಮಾತ್ರ ಆಗಿರಲಿಲ್ಲ. ವಿಶ್ವ ಟೆಸ್ಟ್​ನ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ಅವಕಾಶವನ್ನ ಜೀವಂತವಾಗಿಡಲು ಗೆಲುವು ಬೇಕೆ ಬೇಕಿತ್ತು. ಆದ್ರೀಗ ಟೀಮ್ ಇಂಡಿಯಾ ಆಸಿಸ್ ಎದುರು ಮಂಡಿಯೂರಿದೆ. ಹಾಗಾದ್ರೆ, ಟೀಮ್ ಇಂಡಿಯಾಗೆ ಇನ್ನೂ ಚಾನ್ಸ್​ ಇದೆಯಾ?.
/newsfirstlive-kannada/media/post_attachments/wp-content/uploads/2024/12/ROHIT_SHARMA_KOHLI.jpg)
ಫೈನಲ್​​ ಎಂಟ್ರಿಗೆ ಟೀಮ್ ಇಂಡಿಯಾಗೆ ಇದ್ಯಾ ಚಾನ್ಸ್​.?
ಬಾಕ್ಸಿಂಗ್​ ಡೇ ಟೆಸ್ಟ್​ ಸೋಲಿನಿಂದ ವಿಶ್ವ ಟೆಸ್ಟ್​​ ಚಾಂಪಿಯನ್​​ಶಿಪ್​ ಫೈನಲ್​​ ಎಂಟ್ರಿಯ ಹಾದಿ ಮತ್ತಷ್ಟು ಕಠಿಣವಾಗಿದೆ. ಸಂಪೂರ್ಣವಾಗಿ ಫೈನಲ್​ ಬಾಗಿಲು ಬಂದ್ ಆಗದಿದ್ದರೂ ಬಹುತೇಕ ಮುಚ್ಚಿದೆ. ಆರಾಮಾಗಿ ಫೈನಲ್ಸ್​ಗೆ ಹೋಗೋ ಅವಕಾಶವನ್ನು ಕೈ ಚೆಲ್ಲಿ, ಕ್ಯಾಲ್ಕ್ಯುಲೇಟರ್ ಹಿಡಿದು ಅದೃಷ್ಟ ನಂಬಿ ಕೂರುವ ಪರಿಸ್ಥಿತಿ ಸದ್ಯ ಎದುರಾಗಿದೆ. ಸೌತ್ ಆಫ್ರಿಕಾ ತಂಡ ಈಗಾಗಲೇ ಮೊದಲ ತಂಡವಾಗಿ ಫೈನಲ್​ಗೆ ಲಗ್ಗೆ ಇಟ್ಟಿದೆ. ಫೈನಲ್​ ಪ್ರವೇಶಿಸುವ ಇನ್ನೊಂದು ಟೀಮ್ ಯಾವುದು ಅನ್ನೊ ಪ್ರಶ್ನೆಗೆ ಪಾಯಿಂಟ್ಸ್​ ಟೇಬಲ್ ಉತ್ತರ ನೀಡುತ್ತಿದೆ.
ಮೆಲ್ಬರ್ನ್ ಟೆಸ್ಟ್​​ ಬಳಿಕ ಗೆಲುವಿನ ಬಳಿಕ 16 ಪಂದ್ಯಗಳಲ್ಲಿ 10ರಲ್ಲಿ ಜಯ ಗಳಿಸಿರುವ ಆಸ್ಟ್ರೇಲಿಯಾ ತಂಡ 61.46ರ ಗೆಲುವಿನ ಸರಾಸರಿಯೊಂದಿಗೆ ಪಾಯಿಂಟ್ಸ್​ ಟೇಬಲ್​​ನಲ್ಲಿ 2ನೇ ಸ್ಥಾನಕ್ಕೇರಿದೆ. ಇನ್ನೊಂದೆಡೆ ಸೋತ ಟೀಮ್​ ಇಂಡಿಯಾ 18 ಪಂದ್ಯಗಳಲ್ಲಿ 9 ಸೋಲು ಹಾಗೂ 9 ಗೆಲುವಿನೊಂದಿಗೆ 52.78ರ ಗೆಲುವಿನ ಸರಾಸರಿಯೊಂದಿಗೆ 3ನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಫೈನಲ್​ ಎಂಟ್ರಿಯ ಹಾದಿ ದುರ್ಗಮವಾಗಿದೆ.
ಒಂದು ಸ್ಥಾನಕ್ಕಾಗಿ ತ್ರಿಕೋನ ಫೈಟ್​.. ಯಾರಿಗೆ ಚಾನ್ಸ್​.?
WTC ಫೈನಲ್​ ಪ್ರವೇಶಕ್ಕೆ ಸದ್ಯ ಆಸ್ಟ್ರೇಲಿಯಾ, ಇಂಡಿಯಾ ಹಾಗೂ ಶ್ರೀಲಂಕಾ ನಡುವೆ ಫೈಟ್​ ಇದೆ. ಟೀಮ್​ ಇಂಡಿಯಾ ಕನಸು ನನಸಾಗಬೇಕಂದ್ರೆ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಭಾರತ ಗೆಲ್ಲಲೇಬೇಕಿದೆ. ಅಲ್ಲಿಗೆ ಎಲ್ಲಾ ಮುಗಿಯಲ್ಲ. ಸಿಡ್ನಿ ಟೆಸ್ಟ್​​​ನಲ್ಲಿ ಭಾರತ ತಂಡ​ ಗೆದ್ರೂ, ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಆಸ್ಟ್ರೇಲಿಯಾ ಎರಡೂ ಪಂದ್ಯಗಳನ್ನ ಸೋಲಬೇಕಿದೆ. ಆಗ ಮಾತ್ರ ಟೀಮ್​ ಇಂಡಿಯಾಗೆ ಫೈನಲ್​​ ಫೈಟ್​ ಡೋರ್​ ಓಪನ್​ ಆಗಲಿದೆ.
ಬಲಿಷ್ಠ ಆಸಿಸ್ ಎದುರು ಲಂಕಾ ಒಂದು ಪಂದ್ಯ ಗೆಲ್ಲೋದೆ ಬಿಗ್ ಟಾಸ್ಕ್​​ ಆಗಿದೆ. ಅಂತದ್ರಲ್ಲಿ ಎರಡೂ ಪಂದ್ಯವನ್ನು ಗೆಲ್ಲೋದು ಅಂದ್ರೆ ಅದು ಅಸಾಧ್ಯದ ಮಾತೇ. ಹೀಗಾಗಿ ಸದ್ಯಕ್ಕಂತೂ ಆಸ್ಟ್ರೇಲಿಯಾಗೆ ಫೈನಲ್ ಹಾದಿ ಸುಲಭವಾಗಿದೆ. ಸಿಡ್ನಿ ಟೆಸ್ಟ್​​ನಲ್ಲಿ ಏನಾದರೂ ಸೋತರೇ, ಲಂಕಾ ವಿರುದ್ಧ ಒಂದೇ ಒಂದು ಪಂದ್ಯದಲ್ಲಿ ಗೆಲ್ಲೋದು ಬಿಡಿ ಡ್ರಾ ಸಾಧಿಸಿದ್ರೆ ಸಾಕು. ಕಾಂಗರೂಗಳಿಗೆ ಫೈನಲ್ ಟಿಕೆಟ್ ಫಿಕ್ಸ್​.
/newsfirstlive-kannada/media/post_attachments/wp-content/uploads/2024/10/ROHIT_SHARMA_1.jpg)
ಇದನ್ನೂ ಓದಿ: BIGG BOSS; ಅಮ್ಮನನ್ನು ತಬ್ಬಿಕೊಂಡು ಭವ್ಯ ಕಣ್ಣೀರು.. ತ್ರಿವಿಕ್ರಮ್ ಅತ್ತಿದ್ದು ಯಾಕೆ?
ಸಿಡ್ನಿ ಟೆಸ್ಟ್​ ಡ್ರಾಗೆ ಲಂಕನ್ನರ ಪ್ರಾರ್ಥನೆ.!
ಆಸ್ಟ್ರೇಲಿಯಾ ಹಾಗೂ ಟೀಮ್​ ಇಂಡಿಯಾ ಫೈಟ್​ ನಡುವೆ ಶ್ರೀಲಂಕಾ ತಂಡ ಕೂಡ ಫೈನಲ್​ ಎಂಟ್ರಿಯ ಕನಸು ಕಾಣುತ್ತಿದೆ. ಸಿಡ್ನಿ ಟೆಸ್ಟ್​ ಪಂದ್ಯ ಡ್ರಾ ಆಗಲಿ ಅನ್ನೋದು ಲಂಕನ್ನರ ಪ್ರಾರ್ಥನೆಯಾಗಿದೆ. ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್​​ ಡ್ರಾನಲ್ಲಿ ಅಂತ್ಯವಾಗಿ, ಆಸ್ಟ್ರೇಲಿಯಾ ವಿರುದ್ಧದ 2 ಟೆಸ್ಟ್​​ನಲ್ಲಿ ಶ್ರೀಲಂಕಾ ಜಯಭೇರಿ ಬಾರಿಸಿದ್ರೆ, ಲಂಕನ್ನರಿಗೆ ಫೈನಲ್​​ ಡೋರ್​ ತೆರಲಿದೆ. ಆಸ್ಟ್ರೇಲಿಯಾ ವಿರುದ್ಧ ಉಳಿದ 2 ಟೆಸ್ಟ್​ಗಳು ಲಂಕಾದಲ್ಲೇ ನಡೆಯೋದ್ರಿಂದ ಹೋಮ್​ ಪಿಚ್​ನಲ್ಲಿ ಗೆಲ್ಲುವ ವಿಶ್ವಾಸ ಸಿಂಹಳೀಯರದ್ದಾಗಿದೆ.
ಸದ್ಯಕ್ಕಂತೂ ಪಾಯಿಂಟ್ಸ್​ ಟೇಬಲ್​ನಲ್ಲಿ 2ನೇ ಸ್ಥಾನದಲ್ಲಿರುವ, ಆಸ್ಟ್ರೇಲಿಯಾಗೆ ಮಾತ್ರ ಫೈನಲ್​ ಎಂಟ್ರಿಯ ಅವಕಾಶ ಹೆಚ್ಚಿದೆ. ಟೀಮ್​ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳು ಅದೃಷ್ಟದ ಮೊರೆ ಹೋಗಿವೆ. ಯಾರಿಗೆ ಫೈನಲ್​ ಟಿಕೆಟ್​ ಸಿಗುತ್ತೆ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us