ಆಟಗಾರರಿಗೆ ಗೆಲುವಿನ ಉತ್ಸಾಹ ತುಂಬಿದ ವಿರಾಟ್ ಕೊಹ್ಲಿ
ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದ ಕಿಂಗ್
ವಿರಾಟ್ ಕೊಟ್ಟ ಟಿಪ್ಸ್ ವರ್ಕೌಟ್ ಆಗುತ್ತಾ?
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಿಜಕ್ಕೂ ಥ್ರಿಲ್ಲಿಂಗ್ ಎಂಡ್ಗೆ ಸಾಕ್ಷಿಯಾಗುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದೆ. ಆರಂಭಿಕ ಎರಡು ದಿನ ಡಲ್ ಆಗಿದ್ದ ಟೀಮ್ ಇಂಡಿಯಾ, ಆಸ್ಟ್ರೇಲಿಯನ್ನರನ್ನ ಸೆಡ್ಡು ಹೊಡೆದು ಸಖತ್ ಆಗಿಯೇ ಕಮ್ಬ್ಯಾಕ್ ಮಾಡಿದೆ. ಅಷ್ಟೇ ಅಲ್ಲ.! ಟ್ರೋಫಿ ಗೆಲುವಿನ ಆಶಾಭಾವನೆ ಹುಟ್ಟುಹಾಕಿದೆ. ಇದಕ್ಕೆಲ್ಲ ಕಾರಣ ಕಿಂಗ್ ವಿರಾಟ್ ಕೊಹ್ಲಿ.
ಹೌದು! ಪ್ರತಿಷ್ಠಿತ ಪಂದ್ಯದಲ್ಲಿ ಆಸೀಸ್ ಪಾಲಿಗೆ ಕಬ್ಬಿಣದ ಕಡಲೆಯಾಗಬೇಕಿದ್ದ ಟೀಮ್ ಇಂಡಿಯಾ, ಮೊದಲೆರೆಡು ದಿನ ನಿಜಕ್ಕೂ ಸಪ್ಪೆಯಾಗಿತ್ತು. ಹಲ್ಲಿಲ್ಲದ ಹಾವಿನಂತೆ ಆನ್ಫೀಲ್ಡ್ನಲ್ಲಿ ಕಾಣುತ್ತಿತ್ತು. ಆ ಎರಡು ದಿನಗಳ ಆಟ ನೋಡಿದವರು, ನಿಜಕ್ಕೂ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗಾಗಿ ಆಡ್ತಿದೆಯೋ, ಇಲ್ಲ ಫ್ರಾಕ್ಟೀಸ್ ಮಾಡ್ತಿದೆಯೋ ಎಂಬಂತೆ ಭಾಸವಾಗಿತ್ತು. ಯಾಕಂದ್ರೆ, ಟೀಮ್ ಇಂಡಿಯಾದ ಆಟವೇ ಅಲ್ಲ. ಹಾವಭಾವ ಅದೇ ರೀತಿ ಇತ್ತು.
ರೋಹಿತ್ ಸೈಲೆಂಟ್.. ಕೊಹ್ಲಿಗೆ ಜವಾಬ್ದಾರಿ..!
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಟೀಮ್ ಇಂಡಿಯಾ, ಆರಂಭದಲ್ಲೇ ಮೇಲುಗೈ ಸಾಧಿಸಿತ್ತು. ಆದ್ರೆ, ದಿನಕಳೆದಂತೆ ಆಸ್ಟ್ರೇಲಿಯಾ ಮೇಲಿನ ಬಿಗಿ ಹಿಡಿತ ಸಡಲಿಸಿದ ಟೀಮ್ ಇಂಡಿಯಾ ಮಂಕಾಗಿ ಹೋಗಿತ್ತು. ಅದ್ರಲ್ಲೂ ಆಟಗಾರರನ್ನ ಹುರಿದುಂಬಿಸಿ ಜೋಶ್ ತುಂಬಬೇಕಿದ್ದ ನಾಯಕ ರೋಹಿತ್ ಶರ್ಮಾನೇ, ಬಳಲಿ ಬೆಂಡಾಗಿ ಹೋಗಿದ್ದರು.
ಸ್ಮಿತ್-ಟ್ರಾವಿಸ್ ಆಟಕ್ಕೆ ಹತಾಶೆಗೆ ಒಳಗಾದ ರೋಹಿತ್, ಬೌಲರ್ಗಳ ಮೇಲೆಯೇ ಕೆಂಡಕಾರಿದರು. ಒಂದೊಂದು ಬೌಂಡರಿಗೂ ತಾಳ್ಮೆ ಕಳೆದುಕೊಳ್ಳುತ್ತಿದ್ದ ರೋಹಿತ್, ನಿಜಕ್ಕೂ ಏನೂ ತೋಚದ ಮನಸ್ಥಿತಿಯಲ್ಲಿ ಸೈಲೆಂಟ್ ಆಗ್ಬಿಟ್ಟರು. ನಾಯಕನ ಈ ನಡೆ ನಿಜಕ್ಕೂ ಟೀಮ್ ಇಂಡಿಯಾದ ಸೋಲನ್ನೇ ಪ್ರತಿಬಿಂಬಿಸುವಂತಿತ್ತು. ಆದ್ರೆ, ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದೇ ಮೂರನೇ ದಿನ.
ಹೌದು.! ಟೀಮ್ ಇಂಡಿಯಾ ಎದುರು ಮೇಲುಗೈ ಸಾಧಿಸಿದ್ದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್ ಆರಂಭಿಸಿದ್ದೇ ತಡ, ಖಾಯಂ ಕ್ಯಾಪ್ಟನ್ ರೋಹಿತ್, ಕಿಂಗ್ ಕೊಹ್ಲಿಯ ಹೆಗಲಿಗೆ ತಂಡದ ಜವಾಬ್ದಾರಿ ವಹಿಸಿದರು. ಅಷ್ಟೇ ಅಲ್ಲ.! ಆನ್ಫೀಲ್ಡ್ಗೆ ಇಳಿಯುತ್ತಿದ್ದಂತೆ ಸ್ಪೂರ್ತಿದಾಯಕ ಮಾತುಗಳನ್ನಾಡಿದ ವಿರಾಟ್, ಆಟಗಾರರಲ್ಲಿ ಹೊಸ ಉತ್ಸಾಹ ತುಂಬುವ ಕೆಲಸಕ್ಕೆ ಕೈಹಾಕಿದರು.
ಆಟಗಾರರನ್ನ ಪ್ರೇರೇಪಿಸಿತಾ ಕೊಹ್ಲಿ ಮಾತು ..?
ಸಹಜವಾಗೇ ಭಾರೀ ಹಿನ್ನಡೆ ಅನುಭವಿಸಿದ್ದ ಟೀಮ್ ಇಂಡಿಯಾ, ಕಮ್ಬ್ಯಾಕ್ ಮಾಡೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬಹುತೇಕ ಸೋಲೋಪ್ಪಿಕೊಂಡಿದ್ದ ಟೀಮ್ ಇಂಡಿಯಾ, ಕೊಹ್ಲಿಯ ಸ್ಪೂರ್ತಿದಾಯಕ ಮಾತುಗಳಿಗೆ ಪ್ರೇರಣಿಗೊಳ್ತು. ಡು ಆರ್ ಡೈ ಪರಿಸ್ಥಿತಿಯಲ್ಲಿ ಗೆಲುವಿನ ಛಲ ತುಂಬಿದರು. ಇದು ಸಹಜವಾಗೇ ಆಟಗಾರರಲ್ಲಿ ಗೆಲುವಿನ ಉತ್ಸಾಹ ತುಂಬುವಂತೆ ಮಾಡಿತ್ತು. ಅಷ್ಟೇ ಅಲ್ಲ.! ಆಟಗಾರರಲ್ಲಿ ಹೊಸ ಚೈತನ್ಯ ತುಂಬಿತ್ತು.
ಬದಲಾಯ್ತು ಆಟಗಾರರ ಬಾಡಿ ಲಾಂಗ್ವೇಜ್ ..!
ಮೊದಲ ಎರಡು ದಿನ, ವಿರಾಟ್ ಕೊಹ್ಲಿ, ರಹಾನೆ, ಶಾರ್ದೂಲ್ ಠಾಕೂರ್, ಜಡೇಜಾ ಬಿಟ್ಟರೆ, ಉಳಿವರೆಲ್ಲ ಸುಸ್ತಾದಂತೆ ಕಾಣ್ತಿದ್ದರು. ಆದ್ರೆ, ಕಿಂಗ್ ಕೊಹ್ಲಿ ಆನ್ಫೀಲ್ಡ್ನ ಜವಾಬ್ದಾರಿ ತೆಗೆದುಕೊಂಡಿದ್ದೇ ತಡ, ಆಟಗಾರರನ್ನ ಪುಟಿದೇಳುವಂತೆ ಮಾಡಿತ್ತು. ಕೊಹ್ಲಿ ನೀಡುತ್ತಿದ್ದ ಪ್ರೋತ್ಸಾಹಕ್ಕೆ ಆಟಗಾರರ ಎನರ್ಜಿ ಡಬಲ್ ಆಗಿತ್ತು. ಅಗ್ರೆಸ್ಸಿವ್ ಸ್ಟೈಲ್ ಆಫ್ ಕ್ರಿಕೆಟ್ ಮೂಡ್ಗೆ ಜಾರಿದ್ರು.
ಬೌಲರ್ಗಳಿಂದ 3ನೇ ದಿನ ಅಗ್ರೆಸ್ಸಿವ್ ಬೌಲಿಂಗ್ ಸ್ಪೆಲ್..!
ಫೀಲ್ಡರ್ಗಳು ಮಾತ್ರವಲ್ಲ. ಟೀಮ್ ಇಂಡಿಯಾ ಬೌಲರ್ಗಳ ಸ್ಪೆಲ್ ಕೂಡ ಚುರುಕಾಗಿತ್ತು. ಅದರಲ್ಲೂ ಸಿರಾಜ್ರ ಉರಿದಾಳಿಗೆ ಲಬುಶೇನ್, ಪತರಗುಟ್ಟಿದ್ದರು. ಸಿರಾಜ್ ಮಾತ್ರವೇ ಅಲ್ಲ. ಸ್ಪೀಡ್ ಟ್ರ್ಯಾಕ್ನಲ್ಲಿ ಚೆಂಡನ್ನ ಬುಗುರಿಯಂತೆ ತಿರುವಿ ಟ್ರಾವಿಸ್ ಹೆಡ್ ಕಕ್ಕಬಿಕ್ಕಿಯಾಗುವಂತೆ ಮಾಡಿದ್ದರು.
ವರ್ಕೌಟ್ ಆಗುತ್ತಾ ಕೊಹ್ಲಿ ಕೊಟ್ಟ ಟಿಪ್ಸ್..?
ಟೀಮ್ ಹಡಲ್ನಲ್ಲಿ ವಿರಾಟ್ ಕೊಟ್ಟಂತ ಟಿಪ್ಸ್, ನಿಜಕ್ಕೂ ಟೀಮ್ ಇಂಡಿಯಾ ಆಟಗಾರರಲ್ಲಿ ಹೋರಾಟದ ಕಿಚ್ಚನ್ನೇ ಎಬ್ಬಿಸಿತ್ತು. ಇದನ್ನ ಮೂರನೇ ದಿನ ಹಾಗೂ ನಾಲ್ಕನೇ ದಿನ ಫೀಲ್ಡಿಂಗ್ ವೇಳೆ ಆಟಗಾರರು ಫೈಟ್ ಬ್ಯಾಕ್ ಮಾಡಿದ ಪರಿಯೇ ತಾಜಾ ಉದಾಹರಣೆ.. ಆದ್ರೆ, ಕಕೊಹ್ಲಿ ಟಿಪ್ಸ್ ಸಂಪೂರ್ಣ ವರ್ಕೌಟ್ ಆಯ್ತಾ ಅನ್ನೋದಕ್ಕೆ ಉತ್ತರ ಇಂದೇ ಸಿಗಬೇಕಿದೆ.
ಒಟ್ನಲ್ಲಿ.! ಅದೇನೇ ಆಗಲಿ. ಮೊದಲೆರೆಡು ದಿನ ಮಂಕಾಗಿದ್ದ ಟೀಮ್ ಇಂಡಿಯಾ, 3ನೇ ಹಾಗೂ 4ನೇ ದಿನ ಆಸಿಸ್ಗೆ ಕೌಂಟರ್ ನೀಡೋ ಪರ್ಫಾಮೆನ್ಸ್ ನೀಡಿದ್ದಂತು ವಿರಾಟ್ ಕೊಹ್ಲಿಯ ಮೋಟಿವೇಷನಲ್ ಸ್ಪೀಚ್ಗೆ ಅನ್ನೋದರಲ್ಲಿ ಎರಡು ಮಾತಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ