newsfirstkannada.com

×

WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

Share :

Published October 28, 2024 at 11:04am

Update October 28, 2024 at 11:06am

    ಬೆಂಗಳೂರು, ಪುಣೆ ಟೆಸ್ಟ್​ನಲ್ಲಿ ಸೋತಿರುವ ಟೀಮ್​ ಇಂಡಿಯಾ

    ಕಿವೀಸ್​ ಜೊತೆಗಿನ ಟೆಸ್ಟ್ ಬಳಿಕ ಕಾಂಗರೂ ನಾಡಲ್ಲಿ 5 ಪಂದ್ಯಗಳು

    ಇನ್ನೊಂದು ಟೆಸ್ಟ್ ಸೋತರೇ ಟೀಮ್ ಇಂಡಿಯಾದ ಕಥೆ ಅಷ್ಟೇ!

ನ್ಯೂಜಿಲೆಂಡ್​ ವಿರುದ್ಧದ 2ನೇ ಟೆಸ್ಟ್​ನಲ್ಲಿ ಮಕಾಡೆ ಮಲಗಿದ ಟೀಮ್​ ಇಂಡಿಯಾ ಹೀನಾಯ ಸೋಲು ಅನುಭವಿಸಿದೆ. ತವರಿನಲ್ಲಾದ ಈ ಮುಖಭಂಗದಿಂದ ಟೀಮ್​ ಇಂಡಿಯಾ ಸರಣಿ ಸೋಲುಂಡಿರೋದು ಮಾತ್ರವಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​​ ಶಿಪ್​ ಫೈನಲ್​ ಎಂಟ್ರಿಯ ದಾರಿಗೂ ತಾನೇ ಮುಳ್ಳು ಹಾಕಿಕೊಂಡಿದೆ. ಸ್ವಲ್ಪ ಯಾಮಾರಿದ್ರೂ, ಟೆಸ್ಟ್​ ಮೆಸ್​ ಗೆಲ್ಲೋ ಕನಸು ನುಚ್ಚುನೂರಾಗಲಿದೆ. WTC ಫೈನಲ್​ ಪ್ರವೇಶಕ್ಕೆ ಟೀಮ್​ ಇಂಡಿಯಾ ಮುಂದಿರೋ ದಾರಿ ಏನು?.

ನ್ಯೂಜಿಲೆಂಡ್ ಎದುರಿನ​ 2ನೇ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಹೀನಾಯ ಮುಖಭಂಗ ಅನುಭವಿಸಿದೆ. ಪುಣೆ ಪಿಚ್​ನಲ್ಲಿ ಕಿವೀಸ್​ ಖೆಡ್ಡಾಗೆ ಬಿದ್ದ ಟೀಮ್​ ಇಂಡಿಯಾ 117 ರನ್​ಗಳ ಸೋಲಿಗೆ ಶರಣಾಗಿತ್ತು. ಗೆದ್ದ ನ್ಯೂಜಿಲೆಂಡ್​ ತಂಡ ಭಾರತದಲ್ಲಿ ಮೊದಲ ಟೆಸ್ಟ್​ ಸರಣಿ ಜಯಿಸಿದ ಇತಿಹಾಸ ರಚಿಸಿದ್ರೆ, ಭಾರತದ 12 ವರ್ಷಗಳ ಗೆಲುವಿನ ಓಟಕ್ಕೆ ಬ್ರೇಕ್​ ಬಿತ್ತು. ಇಷ್ಟೇ ಅಲ್ಲ. ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಎಂಟ್ರಿಯ ದಾರಿ ದುರ್ಗಮವಾಗಿದೆ.

ಇದನ್ನೂ ಓದಿ: INDW vs NZW; ಮೈದಾನದಲ್ಲಿ ಅತ್ಯದ್ಭುತ ಕ್ಯಾಚ್ ಹಿಡಿದ ರಾಧ.. ಕ್ರಿಕೆಟ್ ಲೋಕ ಫುಲ್ ಫಿದಾ!

ಸರಣಿ ಸೋಲು, ಸಂಕಷ್ಟಕ್ಕೆ ಸಿಲುಕಿದ ಟೀಮ್​ ಇಂಡಿಯಾ.!

ನ್ಯೂಜಿಲೆಂಡ್​ ಎದುರು ಬ್ಯಾಕ್​ ಟು ಬ್ಯಾಕ್​ 2 ಪಂದ್ಯಗಳ ಸೋಲು ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಹಾದಿಯನ್ನ ದುರ್ಗಮಗೊಳಿಸಿದೆ. ಬೆಂಗಳೂರು ಹಾಗೂ ಪುಣೆ ಟೆಸ್ಟ್​ ಪಂದ್ಯಗಳ ಮುಖಭಂಗದ ಬೆನ್ನಲ್ಲೇ WTC ಅಂಕಪಟ್ಟಿಯಲ್ಲಿ ರೋಹಿತ್​ ಪಡೆಯ ಗೆಲುವಿನ ಸರಾಸರಿ ಕುಸಿದಿದೆ. ಪುಣೆ ಟೆಸ್ಟ್​ಗೂ ಮುನ್ನ 68.06ರಷ್ಟಿದ್ದ ವಿನ್ನಿಂಗ್​ ಪರ್ಸಂಟೇಜ್​ ಇದೀಗ 62.82ಕ್ಕೆ ಕುಸಿದಿದೆ. ಈಗಲೂ ಟೀಮ್​ ಇಂಡಿಯಾನೇ ಟೇಬಲ್​ ಟಾಪರ್​. ಆದ್ರೆ, ಇದೀಗ ಉಳಿದ ತಂಡಗಳಿಗೂ ಅವಕಾಶದ ಬಾಗಿಲು ತೆರೆದಿದೆ.

WTC ಪಾಯಿಂಟ್ಸ್​ ಟೇಬಲ್​

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಸೀಸನಲ್ಲಿ 8 ಟೆಸ್ಟ್​ ಗೆದ್ದಿರುವ ಟೀಮ್​ ಇಂಡಿಯಾ 4ರಲ್ಲಿ ಸೋಲುಂಡಿದ್ದು, ಒಂದು ಪಂದ್ಯ ಡ್ರಾ ಸಾಧಿಸಿ 62.82ರ ಗೆಲುವಿನ ಸರಾಸರಿ ಹೊಂದಿದೆ. ಆಸ್ಟ್ರೇಲಿಯಾ ತಂಡ 8 ಟೆಸ್ಟ್​ ಗೆದ್ದು, 3ರಲ್ಲಿ ಸೋತು 1 ಡ್ರಾ ಸಾಧಿಸಿದ್ದು, 62.50ರ ವಿನ್ನಿಂಗ್​​ ಪರ್ಸಂಟೇಜ್​ ಹೊಂದಿದೆ. ಶ್ರೀಲಂಕಾ 5 ಟೆಸ್ಟ್ ಗೆದ್ದು, 4ರಲ್ಲಿ ಸೋತು 55.56ರ ಗೆಲುವಿನ ಸರಾಸರಿ ಹೊಂದಿದ್ರೆ, 5 ಗೆದ್ದು, 5ರಲ್ಲಿ ಸೋತಿರೋ ನ್ಯೂಜಿಲೆಂಡ್​ 50.00ರ ಗೆಲುವಿನ ಸರಾಸರಿ ಹೊಂದಿದೆ. ಸೌತ್​ ಆಫ್ರಿಕಾ 3 ಟೆಸ್ಟ್​ ಗೆದ್ದು, 3ರಲ್ಲಿ ಸೋತಿದ್ದು 1 ಡ್ರಾ ಸಾಧಿಸಿ 47.62ರ ವಿನ್ನಿಂಗ್​ ಪರ್ಸೆಂಟೇಜ್​ ಹೊಂದಿದೆ. ಈ ಎಲ್ಲಾ ತಂಡಗಳಿಗೆ ಫೈನಲ್​ ಪ್ರವೇಶದ ಅವಕಾಶವಿದೆ.

ಆಸಿಸ್​​ ಟೂರ್​​ಗೂ ಮುನ್ನ ಟೀಮ್​ ಇಂಡಿಯಾಗೆ ಒತ್ತಡ.!

ನ್ಯೂಜಿಲೆಂಡ್​ ಎದುರಿನ ಟೆಸ್ಟ್ ಸರಣಿ ಆರಂಭಕ್ಕೂ ಮುನ್ನ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ಎಂಟ್ರಿಗೆ ಟೀಮ್​ ಇಂಡಿಯಾ 8 ಟೆಸ್ಟ್​ಗಳ ಪೈಕಿ 4ರಲ್ಲಿ ಗೆಲುವು, 2ರಲ್ಲಿ ಡ್ರಾ ಸಾಧಿಸಬೇಕಿತ್ತು. ಇದೀಗ ಕಿವೀಸ್​ ವಿರುದ್ಧದ ಮೊದಲ 2 ಟೆಸ್ಟ್​ ಸೋಲಿನೊಂದಿಗೆ ಟೀಮ್​ ಇಂಡಿಯಾ ಒತ್ತಡಕ್ಕೆ ಸಿಲುಕಿದೆ. ಉಳಿದ 6 ಟೆಸ್ಟ್​ಗಳ ಪೈಕಿ 4ರಲ್ಲಿ ಗೆಲುವು ಸಾಧಿಸಿಲೇ ಬೇಕಾದ ಬಿಗ್​ ಟಾಸ್ಕ್​ ಎದುರಾಗಿದೆ.

ನ್ಯೂಜಿಲೆಂಡ್​​ ವಿರುದ್ಧದ ಮುಂದಿನ ಟೆಸ್ಟ್​ ಬಳಿಕ ಟೀಮ್​ ಇಂಡಿಯಾ ಆಸ್ಟ್ರೇಲಿಯಾದಲ್ಲಿ 5 ಟೆಸ್ಟ್​ ಆಡಲಿದೆ. ಇಲ್ಲಿ ಗೆಲ್ಲೋದೆ ರೋಹಿತ್​ ಪಡೆಯ ಮುಂದಿರೋ ಬಿಗ್​ ಸವಾಲಾಗಿದೆ. ಕಿವೀಸ್​ ವಿರುದ್ಧದ 3ನೇ ಟೆಸ್ಟ್​ ಗೆದ್ದು, ಆಸಿಸ್​ ಪ್ರವಾಸದಲ್ಲಿ 3 ಟೆಸ್ಟ್​ ಗೆಲ್ಲಬೇಕು. ಯಾವ ಪಂದ್ಯದಲ್ಲೂ ಎಲ್ಲೂ ಸ್ಲೋ ಓವರ್​ ರೇಟ್​ನ ಫೈನ್​ ಬೀಳಬಾರದು. ಹಾಗಾದ್ರೆ ಮಾತ್ರ 64.04ರ ಭಾರತದ ಗೆಲುವಿನ ಸರಾಸರಿಯೊಂದಿಗೆ, ಯಾರ ಮೇಲೂ ಡಿಪೆಂಡ್​ ಆಗದೆ ಭಾರತ ತಂಡ ಫೈನಲ್​ ಪ್ರವೇಶ ಮಾಡಲಿದೆ.

ಯಾರ ಸ್ಥಾನವೂ ಸೇಫ್​ ಇಲ್ಲ.. ಫೈನಲ್​ ಪ್ರವೇಶಕ್ಕೆ ಟಫ್​ ಫೈಟ್​.!

ಟೀಮ್​ ಇಂಡಿಯಾ ಮಾತ್ರವಲ್ಲ.. ಸದ್ಯ ವಿಶ್ವ ಟೆಸ್ಟ್​ ಚಾಂಪಿಯನ್​ ಶಿಪ್​ ಫೈನಲ್​ ದಾರಿಯಲ್ಲಿ ಯಾರ ಸ್ಥಾನ ಸೇಫ್​ ಆಗಿಲ್ಲ. 2ನೇ ಸ್ಥಾನದಲ್ಲಿರೋ ಆಸ್ಟ್ರೇಲಿಯಾ, ಟೀಮ್​ ಇಂಡಿಯಾ ವಿರುದ್ಧದ ಸೋತ್ರೆ ಕುಸಿತ ಕಾಣಲಿದೆ. ಒಂದು ವೇಳೆ ಆಸಿಸ್​​ ಗೆದ್ರೆ, ಭಾರತ ಅಗ್ರಸ್ಥಾನದಿಂದ ಇಳಿಯಲಿದೆ. ಸದ್ಯ 3ನೇ ಸ್ಥಾನದಲ್ಲಿರೋ ಶ್ರೀಲಂಕಾ, ನ್ಯೂಜಿಲೆಂಡ್​ ಅವಕಾಶದ ಬಾಗಿಲು ತೆರೆದಿದೆ. 5ನೇ ಸ್ಥಾನದಲ್ಲಿರೋ ಸೌತ್​ ಆಫ್ರಿಕಾ ಬಿಗ್​ ಅಡ್ವಾಂಟೇಜ್​ ಇದೆ.

ಇದನ್ನೂ ಓದಿ: Amaran; ಸೌತ್ ಬ್ಯೂಟಿ ಸಾಯಿ ಪಲ್ಲವಿ, ನಟ ಶಿವಕಾರ್ತಿಕೇಯ‌ನ್ ಇಂದು ಬೆಂಗಳೂರಿಗೆ ಭೇಟಿ

ಕಿವೀಸ್​ ಎದುರಿನ ಟೆಸ್ಟ್ ಸರಣಿ​ ಸೋಲು ಟೀಮ್​ ಇಂಡಿಯಾದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ. ಬೆಂಗಳೂರು, ಪುಣೆ ಟೆಸ್ಟ್​ನಲ್ಲಿ ಸೋತಿರೋ ಟೀಮ್​ ಇಂಡಿಯಾ, ಮುಂಬೈನಲ್ಲಾದ್ರೂ ಗೆಲ್ಲಲೇಬೇಕಿದೆ. ಅಲ್ಲೂ ಸೋತ್ರೆ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪ್ರವೇಶದ ಕನಸು ನುಚ್ಚು ನೂರಾಗಲಿದೆ.

ಏಕೆಂದರೆ, ಹೋಮ್​ ಅಟ್ವಾಂಟೇಜ್​​ ಇದ್ದಾಗಲೇ ಸೋತರೆ, ಕಾಂಗರೂ ನಾಡಿನ ಪೇಸ್​ & ಬೌನ್ಸಿ ಟ್ರ್ಯಾಕ್​​ಗಳಲ್ಲಿ ಟೀಮ್​ ಇಂಡಿಯಾ ಗೆಲ್ಲೋದು ಟಫ್​ ಟಾಸ್ಕ್​ ಆಗಲಿದೆ. ಸರಣಿ ಸೋತು ಸಂಕಷ್ಟಕ್ಕೆ ಸಿಲುಕಿರೋ ಟೀಮ್​ ಇಂಡಿಯಾ, ಮುಂದೆ ಕಲ್ಲು-ಮುಳ್ಳಿನ ಹಾದಿಯಲ್ಲಿ ಹೇಗೆ ಸಾಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

WTC ಅಂಕಪಟ್ಟಿಯಲ್ಲಿ ಟೀಮ್ ಇಂಡಿಯಾ ಕುಸಿತ.. ರೋಹಿತ್ ಪಡೆಗೆ ಫೈನಲ್ ಮತ್ತಷ್ಟು ಕಷ್ಟ.. ಕಷ್ಟ!

https://newsfirstlive.com/wp-content/uploads/2024/09/GILL-ROHIT-KOHLI.jpg

Load More