ReyMisterio: WWE ಲೆಜೆಂಡ್‌ ರೇಯ್ ಮಿಸ್ಟೀರಿಯೋ ಅಂಕಲ್ ಇನ್ನಿಲ್ಲ.. ಫ್ಯಾನ್ಸ್‌ಗೆ ಆಘಾತದ ಸುದ್ದಿ!

author-image
admin
Updated On
ReyMisterio: WWE ಲೆಜೆಂಡ್‌ ರೇಯ್ ಮಿಸ್ಟೀರಿಯೋ ಅಂಕಲ್ ಇನ್ನಿಲ್ಲ.. ಫ್ಯಾನ್ಸ್‌ಗೆ ಆಘಾತದ ಸುದ್ದಿ!
Advertisment
  • ರೇಯ್ ಮಿಸ್ಟೀರಿಯೋ ಮನೆಯಲ್ಲಿ ಮತ್ತೊಂದು ದುರಂತದ ಘಟನೆ
  • ರೇಯ್ ಮಿಸ್ಟೀರಿಯೋ ಅಂಕಲ್‌ ಮೆಕ್ಸಿಕನ್ ಮೂಲದ ಕುಸ್ತಿಪಟು
  • 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್‌ಗೆ ಅತಿದೊಡ್ಡ ಆಘಾತ

ರೇಯ್ ಮಿಸ್ಟೀರಿಯೋ.. 1990ರ ಮಕ್ಕಳ ಹಾಟ್ ಫೇವರೆಟ್ WWE ಸ್ಟಾರ್. ರೇಯ್ ಮಿಸ್ಟೀರಿಯೋ ಫೈಟಿಂಗ್ ಹಾಗೂ ಪಲ್ಟಿ ಹೊಡೆಯೋ ಸ್ಟೈಲ್‌ ಅಷ್ಟು ರೋಮಾಂಚನಕಾರಿ. ತನ್ನದೇ ವಿಭಿನ್ನ ಶೈಲಿಯಲ್ಲಿ ಎಂಟ್ರಿ ಕೊಡುತ್ತಿದ್ದ ರೇಯ್ ಮಿಸ್ಟೀರಿಯೋ ಅಬ್ಬರ ನೋಡೋದೇ ಒಂದು ಆನಂದವಾಗಿತ್ತು.

ರೇಯ್ ಮಿಸ್ಟೀರಿಯೋ ಅಂಕಲ್‌ ರೇ ಮಿಸ್ಟೀರಿಯೋ ಸೀನಿಯರ್ ಇನ್ನಿಲ್ಲ. 66 ವರ್ಷದ ರೇ ಮಿಸ್ಟೀರಿಯೋ ಸೀನಿಯರ್‌ ಸಾವನ್ನಪ್ಪಿರುವ ಸುದ್ದಿ ವರದಿಯಾಗಿದೆ. WWE ಸ್ಟಾರ್‌ಗಳ ಸಾವಿನ ಸುದ್ದಿ ಬಗ್ಗೆ ಆಗಾಗ ಸುಳ್ಳು ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಆದರೆ ಈ ಬಾರಿ ರೇ ಮಿಸ್ಟೀರಿಯೋ ಅಭಿಮಾನಿಗಳು ಇದು ಕೂಡ ಸುಳ್ಳಾಗಲಿ ಎಂದು ಬಯಸಿದ್ದರು. ಆದರೆ ಈ ಬಾರಿ ಮಿಸ್ಟೀರಿಯೋ ಕುಟುಂಬಸ್ಥರು ಈ ಶಾಕಿಂಗ್‌ ಸುದ್ದಿಯನ್ನ ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: BBK11: ಈ ವಾರದ ಎಲಿಮಿನೇಷನ್​ನಲ್ಲೂ ಕಾದಿದೆ ಟ್ವಿಸ್ಟ್‌.. ಈ ನಾಲ್ವರಲ್ಲಿ ಯಾರಿಗೆ ಬಿಗ್ ಶಾಕ್‌? 

publive-image

ಸಾಮಾನ್ಯವಾಗಿ WWEನಲ್ಲಿ ದಢೂತಿ ದೇಹ. 6 ಅಡಿಗಿಂತ ಎತ್ತರದ ಕುಸ್ತಿಪಟುಗಳು ಅಖಾಡಕ್ಕೆ ಇಳಿಯುತ್ತಾರೆ. ಆದರೆ ಮಿಸ್ಟೀರಿಯೋ ಸೀನಿಯರ್ WWE ಸೂಪರ್ ಸ್ಟಾರ್‌ಗಳ ಮಧ್ಯೆ ಕುಳ್ಳನಂತೆ ಕಾಣುತ್ತಿದ್ದರು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅನ್ನೋ ಹಾಗೇ ಮಿಸ್ಟೀರಿಯೋ ಸೀನಿಯರ್‌ ಅನ್ನ ಸೋಲಿಸೋದು ಅಷ್ಟು ಸುಲಭವಲ್ಲ.

ರೇಯ್ ಮಿಸ್ಟೀರಿಯೋ ಆಡಿದ ಒಂದೊಂದು ಮ್ಯಾಚ್‌ಗಳು ರೋಚಕ ಫಲಿತಾಂಶಗಳನ್ನೇ ಕೊಡುತ್ತಿದ್ದವು. ರೇಯ್ ಮಿಸ್ಟೀರಿಯೋ ಫೈಟಿಂಗ್ ಸ್ಟೈಲ್ ಹಾಗೂ ರೋಚಕ ಟ್ವಿಸ್ಟ್‌ಗಳು ನೋಡುಗರನ್ನ ತುದಿಗಾಲಲ್ಲಿ ನಿಲ್ಲುವಂತೆ ಮಾಡುತ್ತಿದ್ದವು. ರೇಯ್ ಮಿಸ್ಟೀರಿಯೋ WWE ಪಂದ್ಯಗಳನ್ನ ಈಗಲೂ ನೋಡಿದ್ರೆ ಮೈ ರೋಮಾಂಚನಗೊಳ್ಳುವಂತೂ ಪಕ್ಕಾ!

ರೇಯ್ ಮಿಸ್ಟೀರಿಯೋ ಕುಟುಂಬಕ್ಕೆ 2 ಆಘಾತ!
ರೇಯ್ ಮಿಸ್ಟೀರಿಯೋ ಮನೆಯಲ್ಲಿ ಇತ್ತೀಚೆಗೆ ಒಂದು ಘೋರ ದುರಂತ ಸಂಭವಿಸಿತ್ತು. ಕಳೆದ ನವೆಂಬರ್ 17ರಂದು ರೇಯ್ ತಂದೆ ರೋಬೇರ್ತ್ವ್ ಗುಟೈರ್ರ್ಜ್ ಅವರು ನಿಧನರಾಗಿದ್ದರು. ಈ ದುಃಖದಲ್ಲಿ ಇಡೀ ಫ್ಯಾಮಿಲಿ ಮುಳುಗಿರುವಾಗಲೇ ರೇ ಮಿಸ್ಟೀರಿಯೋ ಸೀನಿಯರ್ ಅವರು ಇಹಲೋಕವನ್ನ ತ್ಯಜಿಸಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment