/newsfirstlive-kannada/media/post_attachments/wp-content/uploads/2025/05/ANACONDA.jpg)
ಸಿನಿಮಾಗಳಲ್ಲಿ, ಫೋಟೋಗಳಲ್ಲಿ ಹಾಗೂ ನ್ಯೂಸ್​ ಪೇಪರ್ ಆ್ಯಡ್​ಗಳಲ್ಲಿ​ ಸೇರಿದಂತೆ ಇತರೆ ಕಡೆಗಳಲ್ಲಿ ಹಾವುಗಳನ್ನು ನೋಡಿರುತ್ತೇವೆ. ಅಬ್ಬಾಬ್ಬ ಎಂದರೆ ಕಾಳಿಂಗ ಸರ್ಪ ಅಥವಾ ಅನಕೊಂಡ ಹಾವನ್ನೇ ನಮ್ಮ ಕಣ್ಣಿಗೆ ಅತ್ಯಂತ ದೊಡ್ಡ ಹಾವು ಎಂದೆನಿಸುತ್ತದೆ. ಆದರೆ ಅತ್ಯಂತ ದೊಡ್ಡ ಅನಕೊಂಡದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಎಐ ವಿಡಿಯೋ ಎಂದು ಹೇಳಲಾಗುತ್ತಿದೆ.
/newsfirstlive-kannada/media/post_attachments/wp-content/uploads/2025/05/ANACONDA_1.jpg)
ಇದೇ ಅನಕೊಂಡ ಜಾತಿಗೆ ಸೇರುವ ಯಕುಮಾಮಾ ಎನ್ನುವ ದೊಡ್ಡ ಹಾವೊಂದು ಅಮೆಜಾನ್​ ಅರಣ್ಯದಲ್ಲಿ ಈ ಹಿಂದೆ ಕಂಡು ಬರುತ್ತಿತ್ತು. ಎಷ್ಟು ವರ್ಷಗಳ ನಂತರದ ಮೇಲೆ ಇದೀಗ ಮತ್ತೆ ಕಾಣಿಸಿದೆ ಎನ್ನುವ ರೀತಿಯಲ್ಲಿ ಅಮೆಜಾನ್​ನ ದಂತಕಥೆಯ ಯಕುಮಾಮಾ ದೈತ್ಯ ಅನಕೊಂಡವನ್ನು ಎಐ ತಂತ್ರಜ್ಞಾನದ ಮೂಲಕ ಸೃಷ್ಟಿ ಮಾಡಲಾಗಿದೆ. ಇದೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರಣ್ಯ ಅಧಿಕಾರಿಗಳು ಹೆಲಿಕಾಪ್ಟರ್​ನಲ್ಲಿ ಹೋಗುವಾಗ ಅಮೆಜಾನ್​ ನದಿಯಲ್ಲಿ ಈ ದೈತ್ಯ ಯಕುಮಾಮಾ ಅನಕೊಂಡ ನೀರಿನಲ್ಲಿ ಮಲಗಿಕೊಂಡಿರುವ ರೀತಿ ಇದನ್ನು ಸೃಷ್ಟಿಸಲಾಗಿದೆ. ಕೇವಲ ಒಂದು ಹಾವಲ್ಲ, ಮೂರು-ನಾಲ್ಕು ಅನಕೊಂಡಗಳಿರುವುದು ಇಲ್ಲಿದೆ. ಆದರೆ ಇದು ಎಐ ತಂತ್ರಜ್ಞಾನ ಮೂಲಕ ಚಾಕೋಲೇಟ್​ ಕಲರ್​ನಿಂದ ಸೃಷ್ಟಿಸಲಾಗಿದೆ ಎಂದು ನೆಟ್ಟಿಗರು ಕಮೆಂಟ್ಸ್ ಮಾಡುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/05/ANACONDA_2.jpg)
ಇಂತಹ ದೊಡ್ಡ ದೊಡ್ಡ ಹಾವುಗಳು ಈ ಹಿಂದೆ ಅಮೆಜಾನ್​ನಲ್ಲಿ ಇದ್ದಿರಬಹುದು. ಆಳವಾದ ನದಿಗಳು ಹಾಗೂ ಸರೋವರಗಳಲ್ಲಿ ವಾಸಿಸುತ್ತಿದ್ದವು ಎಂದು ಹೇಳಿದರೂ ಈ ಬಗ್ಗೆ ನಿಖರವಾದ ಮಾಹಿತಿಗಳು ಸಿಗುವುದು ಕಷ್ಟ. ಈ ದೊಡ್ಡ ಹಾವುಗಳು ವಿಶ್ವದಲ್ಲಿ ಎಲ್ಲಿಯಾದರೂ ಇರಬಹುದು. ಆದರೆ ಅಮೆಜಾನ್ ಫಾರೆಸ್ಟ್ ಕಾಣಿಸಿದೆ ಎನ್ನಲಾದ ಈ ವಿಡಿಯೋ ಫೇಕ್ ಎಂದು ನೆಟ್ಟಿಗರು ಕಮೆಂಟ್ಸ್​ ಮೇಲೆ ಕಮೆಂಟ್ಸ್ ಮಾಡುತ್ತಿದ್ದಾರೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us