Advertisment

ಕುಡಿದ ಅಮಲಿನಲ್ಲಿ ಗಲಾಟೆ.. ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಕೊಲೆ

author-image
AS Harshith
Updated On
ಕುಡಿದ ಅಮಲಿನಲ್ಲಿ ಗಲಾಟೆ.. ಕ್ಷುಲ್ಲಕ ಕಾರಣಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಕೊಲೆ
Advertisment
  • ಬಡಿಗೆ ಹಾಗೂ ಕಾಲಿನಿಂದ ಒದ್ದು ಅಧಿಕಾರಿಯ ಕೊಲೆ
  • ಗಂಡನ ಮೃತದೇಹವನ್ನು ಕಂಡು ಶಂಕೆ ವ್ಯಕ್ತಪಡಿಸಿದ ಪತ್ನಿ
  • ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಯಾದಗಿರಿ: ಕ್ಷುಲ್ಲಕ ವಿಚಾರಕ್ಕೆ ಅರಣ್ಯಾಧಿಕಾರಿಯನ್ನು ಅಟ್ಟಾಡಿಸಿ ಕೊಲೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಶಹಾಪೂರ ಅರಣ್ಯಾಧಿಕಾರಿ ಮಹೇಶ್ ಕನಕಟ್ಟಿ ಬರ್ಬರವಾಗಿ ಹತ್ಯೆಯಾದ ದುರ್ದೈವಿ .

Advertisment

ಜೂನ್ 5 ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶಹಾಪೂರ ಪಟ್ಟಣದ ಮೋಟಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ನಲ್ಲಿ ಕೊಲೆ ನಡೆದಿದೆ. ಕ್ಷುಲ್ಲಕ ವಿಚಾರಕ್ಕೆ ಹಂತಕರು ಅರಣ್ಯಾಧಿಕಾರಿಯನ್ನು ಕೊಲೆಗೈದಿದ್ದಾರೆ.

ಕುಡಿದ ಅಮಲಿನಲ್ಲಿ ಗಲಾಟೆ

ಕುಡಿದ ಅಮಲಿನಲ್ಲಿ ಅರಣ್ಯಾಧಿಕಾರಿ ಮಹೇಶ್ ಕನಕಟ್ಟಿಯನ್ನು ಐವರು ದುಷ್ಕರ್ಮಿಗಳು ಕೊಂದಿದ್ದಾರೆ. ಜೂನ್ 5ರಂದು ಎಂದಿನಂತೆ ಅರಣ್ಯಾಧಿಕಾರಿ ಮಹೇಶ್ ಮೋಟಗಿ ರೆಸ್ಟೋರೆಂಟ್ ಗೆ ಊಟಕ್ಕೆ ತೆರಳಿದ್ದರು. ಇದೇ ವೇಳೆ ಮೋಟಗಿ ರೆಸ್ಟೋರೆಂಟ್ ನಲ್ಲಿ ಐವರು ಕುಡಿದು ಚೀರಾಡುತ್ತಿದ್ದರು. ಈ ವೇಳೆ ಅರಣ್ಯಾಧಿಕಾರಿ ಮಹೇಶ್ ಹಾಗೂ ದುಷ್ಕರ್ಮಿಗಳ ಮಧ್ಯ ವಾಗ್ವಾದ ನಡೆದಿದೆ. ಬಳಿಕ ಐವರು ದುಷ್ಕರ್ಮಿಗಳು ಬಡಿಗೆ ಹಾಗೂ ಕಾಲಿನಿಂದ ಜಾಡಿಸಿ ಒದ್ದು ಅಧಿಕಾರಿಯನ್ನು ಕೊಲೆ ಮಾಡಿದ್ದಾರೆ.

publive-image

ಇದನ್ನೂ ಓದಿ: ಅಮ್ಮನಿಗೆ ಅನಾರೋಗ್ಯ, ಕಣ್ಣೀರು ಹಾಕಿತ್ತಿರೋ ಅಕ್ಕ.. ದರ್ಶನ್​ ನಂಬಿ ಜೈಲು ಸೇರಿದ ನಂದೀಶ್ ಕುಟುಂಬಕ್ಕೆ ಸಂಕಷ್ಟ

Advertisment

ಇದು ಸಹಜ ಸಾವಲ್ಲ ಕೊಲೆ

ಕೊಲೆ ನಡೆದ ಬಳಿಕ ಮಹೇಶ್ ಶವ ಮೋಟಗಿ ರೆಸ್ಟೋರೆಂಟ್ ಹೊರಗೆ ಬಿದ್ದಿತ್ತು. ಗಂಡನ ಶವವನ್ನು ಕಂಡು ಪತ್ನಿ ನಾಗವೇಣಿ ಇದು ಸಹಜ ಸಾವಲ್ಲ ಕೊಲೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದ್ದಾಗ ಕೊಲೆ ಎಂಬುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಇಂದು ದರ್ಶನ್ ಆ್ಯಂಡ್​ ಗ್ಯಾಂಗ್ ಕಸ್ಟಡಿ ಅಂತ್ಯ.. ಕೋರ್ಟ್​ ಈ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ?

ಐವರನ್ನು ಹೆಡೆಮುರಿ ಕಟ್ಟಿದ ಪೊಲೀಸರು

ಸದ್ಯ ಐವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ರಾಜು, ರೇಖು ನಾಯ್ಕ್, ತಾರಾ ಸಿಂಗ್, ನರಸಿಂಗ್ ಹಾಗೂ ಪ್ರಕಾಶ ಎನ್ನುವ ಆರೋಪಿಗಳನ್ನ ಶಹಾಪುರ ಪೊಲೀಸ್ರರು ಬಂಧಿಸಿದ್ದಾರೆ. ಐವರು ಆರೋಪಿಗಳ ವಿರುದ್ಧ ಶಹಾಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment