newsfirstkannada.com

30 ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ.. ಅಳಿಯನಿಗೆ 3 ಎಕರೆ ಜಮೀನು ಮಾರಿಯೇ ಬಿಟ್ಟ ಭೂಪ..!

Share :

Published October 23, 2023 at 9:38am

Update October 23, 2023 at 9:39am

    ಬೆಂಗಳೂರಿಗೆ ದುಡಿಯಲು ವಲಸೆ ಹೋಗಿದ್ದ ಜಮೀನು ನೋಡಿಕೊಳ್ತಿದ್ದವ್ರು

    30 ವರ್ಷದ ಹಿಂದೆ ಮೃತಪಟ್ಟಿದ್ದವನ ಹೆಸರಲ್ಲಿ ದಾಖಲೆ ರೆಡಿ ಮಾಡಿದ್ದರು...!

    ಆರೋಪಿಗಳ ವಿರುದ್ಧ ದೂರು ದಾಖಲು, ಇನ್ನಿಬ್ಬರಿಗಾಗಿ ಹುಡುಕಾಟ

ಯಾದಗಿರಿ: 30 ವರ್ಷದ ಹಿಂದೆ ಮೃತಪಟ್ಟ ವ್ಯಕ್ತಿಯ ಹೆಸರಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ 3 ಎಕರೆ 28 ಗುಂಟೆ ಜಮೀನು ಮಾರಾಟ ಮಾಡಿರುವ ಘಟನೆ ಗುರುಮಿಠಕಲ್ ತಾಲೂಕಿನ ಚಿಂತನಹಳ್ಳಿ ಗ್ರಾಮದಲ್ಲಿ ನಡೆದಿದೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಇನ್ನಿಬ್ಬರಿಗಾಗಿ ಬಲೆ ಬೀಸಿದ್ದಾರೆ.

ಚಿಂತನಹಳ್ಳಿ ಗ್ರಾಮದ ಗಂಗಪ್ಪ, ಹೆಡಗಿಮುದ್ರಾ ಗ್ರಾಮದ ಸಾಬಣ್ಣ ಎನ್ನುವವರು ಬಂಧಿತರು. ಸುಭಾಷ್, ಬಸವರಾಜ ಎನ್ನುವರು ತಲೆ ಮರೆಸಿಕೊಂಡ ಆರೋಪಿಗಳು. ಈ ನಾಲ್ವರ ವಿರುದ್ಧ ಯಾದಗಿರಿ ನಗರದ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಚಂದ್ರಶೇಖರ್, ಜಮೀನು ಕಳೆದುಕೊಂಡ ವ್ಯಕ್ತಿ

ಗ್ರಾಮದ ನಿವಾಸಿ ನರಸಪ್ಪ ಎಂಬುವವರು 30 ವರ್ಷದ ಹಿಂದೆ ಸಾವನ್ನಪ್ಪಿದ್ದು ಈತನಿಗೆ ಕೇವಲ ಒಬ್ಬ ಮಗಳಿದ್ದು ಅವರಿಗೆ ಮದುವೆ ಮಾಡಿಕೊಡಲಾಗಿದೆ. ಇನ್ನು ನರಸಪ್ಪನ ಸಹೋದರ ಹನುಮಂತನ ಮೊಮ್ಮಕ್ಕಳು ಗ್ರಾಮದಲ್ಲಿದ್ದು ಇವರೇ ಜಮೀನು ಅನ್ನು ನೋಡಿಕೊಂಡು ಹೋಗುತ್ತಿದ್ದಾರೆ. ಕಳೆದ 4-5 ವರ್ಷಗಳಿಂದ ಇವರು ಕೂಡ ದುಡಿಯಲೆಂದು ಬೆಂಗಳೂರಿಗೆ ಗೂಳೆ ಹೋಗಿದ್ದರಿಂದ ಜಮೀನಿನಲ್ಲಿ ಯಾವುದೇ ಕೃಷಿ ಮಾಡುತ್ತಿಲ್ಲ. ಇದೇ ಅವಕಾಶವನ್ನು ಬಳಸಿಕೊಂಡ ಆರೋಪಿಗಳು ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ.

ಆರೋಪಿ ಗಂಗಪ್ಪ ನಕಲಿ ದಾಖಲೆ ಸೃಷ್ಟಿಸಿ ಅಳಿಯ ಸುಭಾಷ್​ನಿಗೆ ಅದನ್ನು ಮಾರಾಟ ಮಾಡಿದ್ದಾನೆ. ವಿಷಯ ತಿಳಿದ ಗ್ರಾಮಸ್ಥರು ಮೃತ ನರಸಪ್ಪನ ಮೊಮ್ಮಗ ಚಂದ್ರಶೇಖರ್​ಗೆ ಈ ಬಗ್ಗೆ ಹೇಳಿದ್ದಾರೆ. ಗ್ರಾಮಕ್ಕೆ ಆಗಮಿಸಿದ ಅವರು ಗ್ರಾಮಸ್ಥರೊಂದಿಗೆ ತೆರಳಿ ಯಾದಗಿರಿ ನಗರದ ಪೊಲೀಸ್​ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ದೂರು ದಾಖಲು ಮಾಡಿ, ಜಮೀನು ವಾಪಸ್ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದು, ಇನ್ನಿಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

30 ವರ್ಷದ ಹಿಂದೆ ಸತ್ತ ವ್ಯಕ್ತಿ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿ.. ಅಳಿಯನಿಗೆ 3 ಎಕರೆ ಜಮೀನು ಮಾರಿಯೇ ಬಿಟ್ಟ ಭೂಪ..!

https://newsfirstlive.com/wp-content/uploads/2023/10/YDR_JAMEENU_FAKE_DOCUMENTS.jpg

Load More