Advertisment

‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್​ಐ ಪರಶುರಾಮ್ ಪತ್ನಿ ಕಣ್ಣೀರು

author-image
Ganesh
Updated On
ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ
Advertisment
  • ಪಿಎಸ್ಐ ಪರಶುರಾಮ ಹೃದಯಾಘಾತದಿಂದ ಸಾವು
  • ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದ ಪರಶುರಾಮ
  • ಪತಿಯನ್ನು ಕಳೆದುಕೊಂಡು ಪತ್ನಿ ಶ್ವೇತಾ ಕಣ್ಣೀರು

ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸ್ತಿದ್ದ ಪರಶುರಾಮ ಹಠಾತ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪಿಎಸ್ಐ ಪರಶುರಾಮ್ ಅವರು ಸೈಬರ್ ಕ್ರೈಮ್ ಪಿಎಸ್ಐ ಆಗಿ ವರ್ಗಾವಣೆಗೊಂಡಿದ್ದರು. ಮೊನ್ನೆ ನಗರ ಠಾಣೆಯಲ್ಲಿ ಅಭಿಮಾನದ ಬೀಳ್ಕೊಡುಗೆ ಪಡೆದಿದ್ದರು. ನಿನ್ನೆ ಸಂಜೆ ಪೊಲೀಸ್ ಕ್ವಾಟರ್ಸ್ ನಿವಾಸದಲ್ಲಿ ಹಠಾತ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Advertisment

ಪಿಎಸ್ಐ ಪರಶುರಾಮ ಸಾವಿನ ಸುತ್ತ ಅನುಮಾನಗಳು ಶುರುವಾಗಿದ್ದು, ಯಾದಗಿರಿ ನಗರದ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ನಗರದ ಖಾಸಗಿ ಆಸ್ಪತ್ರೆ ಬಳಿ ವಿವಿಧ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ರವಾನೆ ಮಾಡಲಾಗುತ್ತಿತ್ತು. ಈ ವೇಳೆ ಆ್ಯಂಬುಲೆನ್ಸ್ ಅಡ್ಡಗಟ್ಟಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

ಇನ್ನು ಪಿಎಸ್​ಐ ಪತ್ನಿ ಶ್ವೇತಾ, ಪತಿಯನ್ನು ಕಳೆದುಕೊಂಡು ಕಣ್ಣೀರು ಇಡುತ್ತಿದ್ದಾರೆ. ಸ್ಥಳಕ್ಕೆ ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್ ಬರಲು ಹೇಳಿ. ಎಲ್ಲದಕ್ಕೂ ದುಡ್ಡು, ದುಡ್ಡು. ಮಗ ಪಪ್ಪಾ, ಪಪ್ಪಾ ಎಂದು ಓಡಿಕೊಂಡು ಇದ್ದ. ಅವನು ಬರ್ತಿದ್ದಂತೆ ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನು ಹೇಳಲಿ? ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು. ಶಾಸಕ ಎಲ್ಲಿ? ಕರೆಯಿರಿ ಎಂದು ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ವರ್ಗಾವಣೆಗೊಂಡಿದ್ದ PSI ಪರಶುರಾಮ ಹಠಾತ್ ಸಾವು; ಕುಟುಂಬಸ್ಥರಿಂದ ಗಂಭೀರ ಆರೋಪ

Advertisment

publive-image

ಮಧ್ಯರಾತ್ರಿಯೂ ನನ್ನ ಗಂಡ ಕರ್ತವ್ಯ ಅಂತಾ ಓಡಾಡುತ್ತಿದ್ದ. ನನ್ನ ಗಂಡ ಏನು ಅನ್ಯಾಯ ಮಾಡಿದ್ದ ಮೇಡಂ. ಕರೆಯಿರಿ ಎಂಎಲ್​ಎಯನ್ನು, ರಾತ್ರಿ ಆಗಲಿ, ಬೆಳಗಾಗಲಿ ಎಂಎಲ್ಎ ಬರೋವರೆಗೂ ನಾನ್ ಇಲ್ಲಿಂದ ಹೋಗಲ್ಲ. ನನ್ನ ಗಂಡನ ಸಾವಿಗೆ ನ್ಯಾಯ ಕೊಡಿಸಿ ಮೇಡಂ. ನನ್ನ ಗಂಡ ಊಟ ಮಾಡೋದು ಬಿಟ್ಟು ಕೆಲಸ ಅಂತ ಓಡ್ತಿದ್ದ ಮೇಡಂ ಎಂದು ಯಾದಗಿರಿ ಎಸ್ಪಿ ಜಿ.‌ ಸಂಗೀತಾ ಎದುರು ಶ್ವೇತಾ ಕಣ್ಣೀರು ಇಟ್ಟಿದ್ದಾರೆ.

ಇದನ್ನೂ ಓದಿ:ಆಡಿ ಕಾರು ಮರಕ್ಕೆ ಡಿಕ್ಕಿ.. ಸ್ನೇಹಿತನ ಮನೆಗೆ ಬಂದಿದ್ದ ಮೂವರು ವಿದ್ಯಾರ್ಥಿಗಳು ದಾರುಣ ಸಾವು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment