Advertisment

ಯಾದಗಿರಿ PSI ಅನುಮಾನಾಸ್ಪದ ಸಾವಿಗೆ ದೊಡ್ಡ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಕಂಪ್ಲೀಟ್ ಮಾಹಿತಿ ಇಲ್ಲಿದೆ

author-image
Gopal Kulkarni
Updated On
ಯಾದಗಿರಿ PSI ಅನುಮಾನಾಸ್ಪದ ಸಾವಿಗೆ ದೊಡ್ಡ ಟ್ವಿಸ್ಟ್.. ಅಸಲಿಗೆ ಆಗಿದ್ದೇನು? ಕಂಪ್ಲೀಟ್ ಮಾಹಿತಿ ಇಲ್ಲಿದೆ
Advertisment
  • PSI ಪರಶುರಾಮ್​ ಹಠಾತ್​ ಸಾವು! ಸಿಡಿದೆದ್ದ ಅಧಿಕಾರಿ ಪತ್ನಿ!
  • ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ.. ಪತ್ನಿ ಕಣ್ಣೀರು
  • ಪೊಲೀಸ್​ ಸಾವಿಗೆ ಟಾರ್ಚರ್ ಕಾರಣ​ನಾ? ಏನಿದು ₹40 ಲಕ್ಷ ರಹಸ್ಯ?

ಯಾದಗಿರಿ: ವಾಲ್ಮೀಕಿ ನಿಗಮದ ಅಧಿಕಾರಿಯೊಬ್ಬರ ಸಾವು ಸಿಎಂ ಸಿದ್ದರಾಮಯ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಮಧ್ಯೆ ಪೊಲೀಸ್​ ಅಧಿಕಾರಿಯ ಸಾವಿಗೆ ಕುಟುಂಬಸ್ಥರು, ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ಶಾಸಕರೊಬ್ಬರ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ. ವರ್ಗಾವಣೆ ದಂಧೆಯ ಕಿರುಕುಳಕ್ಕೆ ಅಧಿಕಾರಿ ಬಲಿಯಾದ್ರಾ ಎನ್ನುವ ಪ್ರಶ್ನೆಗಳು ಹುಟ್ಟುವಂತಹ ಆರೋಪ ಮಾಡ್ತಿದ್ದಾರೆ. ಯಾದಗಿರಿಯ ಪಿಎಸ್​ಐ ಪರಶುರಾಮ್ ಸಾವಿನ ಸುತ್ತ ದೊಡ್ಡ ಅನುಮಾನವೇ ಹುಟ್ಟಿದೆ.

Advertisment

ವಾಲ್ಮೀಕಿ ಬಹುಕೋಟಿ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ. ಈ ಪ್ರಕರಣದ ಕಾವು ಹಾಗೆಯೇ ಇರುವಾಗ್ಲೇ ರಾಜ್ಯದಲ್ಲಿ ಮತ್ತೊಬ್ಬ ಅಧಿಕಾರಿಯ ಸಾವು ಕಾಂಗ್ರೆಸ್​ನ ಮತ್ತೊಬ್ಬ ನಾಯಕನಿಗೆ ಕಂಟಕ ತಂದಿಟ್ಟಿದೆ. ಪೊಲೀಸ್​ ಇಲಾಖೆಯಲ್ಲಿ ದಕ್ಷ ಅನಿಸಿಕೊಂಡಿದ್ದ ಅಧಿಕಾರಿಯೊಬ್ಬರ ಹಠಾತ್ ಮರಣ ಕರಾಳ ಸತ್ಯಗಳನ್ನ ಹೊರಗೆಡವುತ್ತಿದೆ.

ಯಾದಗಿರಿ ಜನರಿಗೆ ಅಕ್ಷರಶಃ ದೊಡ್ಡ ಶಾಕ್. ಮೊನ್ನೆ ಮೊನ್ನೆಯಷ್ಟೆ ಚೆನ್ನಾಗಿದ್ದ ಅಧಿಕಾರಿಗೆ ಹೃದಯಾಘಾತನಾ ಅಂತ ಜನ ದಿಗ್ಭ್ರಮೆಗೊಂಡಿದ್ದಾರೆ. ಪರಶುರಾಮ್​ ಸಾವಿನಿಂದ ಯಾದಗಿರಿ ನಗರದಲ್ಲಿ ಅಕ್ಷರಶಃ ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿಯೂ ನಿರ್ಮಾಣವಾಗಿದೆ. ಪರಶುರಾಮ್ ಸಾವಿಗೆ ಹೃದಯಾಘಾತವೇ ಕಾರಣವಾಗಿರಬಹುದು. ಆದ್ರೆ, ಆ ಹೃದಯಾಘಾತವಾಗೋದಕ್ಕೆ ಕಾಂಗ್ರೆಸ್​ನ ಶಾಸಕ ಹಾಗೂ ಅವರ ಪುತ್ರ ಇಬ್ಬರೂ ಕಾರಣ ಅನ್ನೋದು ಮೃತ ಅಧಿಕಾರಿ ಪತ್ನಿ ಮಾಡ್ತಿರೋ ಆರೋಪ.

publive-image
ವರ್ಗಾವಣೆ ದಂಧೆಗೆ ಬಲಿಯಾದ್ರಾ ಪಿಎಸ್‌ಐ ಪರಶುರಾಮ?

ಯಾದಗಿರಿ, ಪಿಎಸ್​ಐ ವರ್ಗಾವಣೆ ದಂಧೆಗೆ ಬಲಿಯಾದ್ರಾ ಅನ್ನೋ ಪ್ರಶ್ನೆಯನ್ನ ಹುಟ್ಟು ಹಾಕಿದೆ. ಖುದ್ದು ಪಿಎಸ್​ಐ ಪತ್ನಿಯೇ ಇಂಥಾದ್ದೊಂದು ಆರೋಪ ಮಾಡಿದ್ದಾರೆ. ಗಂಡನ ಸಾವಿಗೆ ವರ್ಗಾವಣೆಯೇ ಕಾರಣ ಅಂತ ಆರೋಪಿಸಿದ್ದಾರೆ. ಶಾಸಕ ಚೆನ್ನಾರೆಡ್ಡಿ ಮತ್ತು ಆತನ ಮಗ ಪಂಪನಗೌಡ ವರ್ಗಾವಣೆಗಾಗಿ ಹಣ ಕೇಳಿದ್ದರು. ಇದೇ ಕಾರಣಕ್ಕೆ ತನ್ನ ಗಂಡ ಮಾನಸಿಕವಾಗಿ ಕುಗ್ಗಿ ಸಾವನ್ನಪ್ಪಿದ್ದಾರೆ ಅಂತ ಎಂಎಲ್​ಎ ಮತ್ತು ಆತನ ಮಗನ ವಿರುದ್ಧ ಆರೋಪಿಸಿದ್ದಾರೆ.

Advertisment

ಒಂದು ವರ್ಷದ ಹಿಂದೆ ಯಾದಗಿರಿ ನಗರದ ಪಿಎಸ್‌ಐ ಆಗಿ ಪರಶುರಾಮ್ ಅಧಿಕಾರ ವಹಿಸಿಕೊಂಡಿದ್ರು. ಆದ್ರೆ ಕೆಲ ದಿನಗಳ ಹಿಂದೆ ಪರುಶುರಾಮ್​ರನ್ನ ಸೈಬರ್ ಕ್ರೈಮ್ ಠಾಣೆಗೆ ಟ್ರಾನ್ಸ್​ಫರ್​​ ಮಾಡಲಾಗಿತ್ತು. ಇದೇ ಕಾರಣಕ್ಕೆ ಗುರುವಾರ ಪರುಶರಾಮ್​ರನ್ನ ಠಾಣೆ ಸಿಬ್ಬಂದಿ ಬಿಳ್ಕೋಡುಗೆ ಕೂಡ ಮಾಡಿದ್ರು. ಆದ್ರೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಪರುಶುರಾಮ್ ಹೃದಯಘಾತದಿಂದ ಮೃತಪಟ್ಟಿದ್ದಾರೆ. ಆದ್ರೆ, ಈ ಸಾವು ಸಹಜ ಸಾವಲ್ಲ ಅನ್ನೋದು ಪಿಎಸ್​ಐ ಪತ್ನಿ ಶ್ವೇತಾ ಆರೋಪ.

ನನ್ನ ಗಂಡ ಸ್ಟ್ರೆಸ್​ನಲ್ಲಿದ್ರು.. ಕುಗ್ಗಿ ಹೋಗಿದ್ರು.. ಪತಿಯನ್ನ ಕಳೆದುಕೊಂಡಿರುವ ಪಿಎಸ್​ಐ ಪರುಶುರಾಮ್ ಪತ್ನಿಯ ಆಕ್ರೋಶ ಮಾತುಗಳನ್ನಾಡಿದ್ದಾರೆ. ಗಂಡನ ಹಠಾತ್ ಸಾವಿನಿಂದ ನೊಂದಿರುವ ಪರುಶರಾಮ್ ಪತ್ನಿ ಶ್ವೇತಾ ಯಾದಗಿರಿ ಶಾಸಕ ಚೆನ್ನಾರೆಡ್ಡಿ ವಿರುದ್ಧ ತಿರುಗಿಬಿದಿದ್ದಾರೆ. ಶಾಸಕರ ಮೇಲೆ ಕೆಂಡಾಮಂಡಲವಾಗಿರುವ ಪಿಎಸ್​ಐ ಪತ್ನಿ, ಪೋಸ್ಟಿಂಗ್‌ಗಾಗಿ ಲಕ್ಷ ಲಕ್ಷ ಹಣಕ್ಕೆ ಯಾದಗಿರಿ ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿ ಪಾಟೀಲ್‌ ಬೇಡಿಕೆ ಇಟ್ಟಿದ್ದರು. ಈಗ ನಿಯಮಬಾಹಿರವಾಗಿ ಅವರನ್ನು ವರ್ಗಾವಣೆ ಮಾಡಿದ್ದರಿಂದ ಅವರು ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಭಾರೀ ಒತ್ತಡದಿಂದ ಅವರಿಗೆ ಹೃದಯಾಘಾತವಾಗಿದೆ. ಯಾದಗಿರಿ ಶಾಸಕರಿಗೆ ಹಣದ ಆಸೆ ಬಹಳಷ್ಟಿದೆ. ಪರಶುರಾಮ್‌ ಅವರ ಜಾಗಕ್ಕೆ ಬೇರೊಬ್ಬರು ಬಂದರೂ ವರ್ಗಾವಣೆ ಪಟ್ಟಿಯಲ್ಲಿ ಪರಶುರಾಮ್‌ ಹೆಸರೇ ಇರಲಿಲ್ಲ. ಈಗ ಹೊಸದಾಗಿ ಬಂದವರು ಹಣ ನೀಡಿಯೇ ಬಂದಿದ್ದಾರೆ ಅಂತ ಆರೋಪ ಮಾಡಿದ್ದಾರೆ.

‘ಜಾತಿ ಮತ್ತು ಹಣಕ್ಕಾಗಿಯೇ ನನ್ನ ಗಂಡನ ಜೀವ ಹೋಗಿದೆ’

ಶಾಸಕ ಚೆನ್ನಾರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿರುವ ಪಿಎಸ್​ಐ ಪತ್ನಿ ಜಾತಿ ಮತ್ತು ಹಣದ ಕಾರಣಕ್ಕೆ ನನ್ನ ಗಂಡನ ಜೀವ ಹೋಗಿದೆ ಎಂದಿದ್ದಾರೆ. ನನ್ನ ಗಂಡ ಪ್ರಾಮಾಣಿಕವಾಗಿ ಕೆಲಸ ಮಾಡ್ತಿದ್ರು. ಇಂಥಾ ಅಧಿಕಾರಿಯನ್ನ ಜನ ಕಳೆದುಕೊಂಡಿದ್ದಾರೆ. ಎಂಟು ತಿಂಗಳ ಗರ್ಭಿಣಿ ನಾನು.. ನನ್ನ ಪರಿಸ್ಥಿತಿಗೆ ಯಾರಿಗೂ ಅರ್ಥ ಆಗಿಲ್ಲ.. ಅವರ ಇಲಾಖೆಯಲ್ಲೇ ಮಾನವೀಯತೆ ಇಲ್ಲ ಅಂತ ಶ್ವೇತಾ ತಮ್ಮ ಅಳಲು ತೋಡಿಕೊಂಡಿದ್ದಾರೆ.

Advertisment

ಇದನ್ನೂ ಓದಿ: BREAKING: ಪಿಎಸ್‌ಐ ಪರಶುರಾಮ ಸಾವಿನ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್; ಕಾಂಗ್ರೆಸ್‌ ಶಾಸಕ ಅರೆಸ್ಟ್ ಆಗ್ತಾರಾ?

ಮಗ ಈಗ ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನು ಹೇಳಲಿ? ನನ್ನ ಗಂಡನ ಸಾವಿಗೆ‌ ನ್ಯಾಯ ಸಿಗಬೇಕು. ಶಾಸಕ ಎಲ್ಲಿ? ಕರೆಯಿರಿ ಅಂತ ಪಿಎಸ್​ಐ ಪತ್ನಿ ಶ್ವೇತಾ ಕಣ್ನೀರು ಸುರಿಸಿದ್ದಾರೆ. ಪಿಎಸ್​ಐ ಪರುಶರಾಮ್ ಯಾದಗಿರಿಗೆ ವರ್ಗಾವಣೆಗೊಂಡು ಒಂದು ವರ್ಷ ಕೂಡ ಪೂರೈಸಿರಲಿಲ್ಲ. ಸರ್ಕಾರದ ಆದೇಶದಂತೆ ಒಂದು ವರ್ಷವಾಗದೇ ಅಧಿಕಾರಿಯನ್ನ ವರ್ಗಾವಣೆ ಮಾಡುವಂತಿಲ್ಲ.. ಆದ್ರೂ ನಿಯಮಬಾಹಿರವಾಗಿ ಪರುಶುರಾಮ್​ರನ್ನ ವರ್ಗಾವಣೆ ಮಾಡಿದ್ದಾರೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಒಂದು ವರ್ಷ ಪೂರೈಸುವ ಮುನ್ನವೇ ಅವರನ್ನು ಯಾದಗಿರಿಯ ಸೈಬರ್ ಕ್ರೈಮ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಆದ್ರೆ ನಗರ ಠಾಣೆಯಲ್ಲೇ ಮುಂದುವರಿಸಬೇಕಾದ್ರೆ 30 ಲಕ್ಷ ಹಣ ಕೊಡುವಂತೆ ಶಾಸಕ ಚೆನ್ನಾರೆಡ್ಡಿ ಮತ್ತು ಪುತ್ರ ಪಂಪನಗೌಡ ಬೇಡಿಕೆ ಇಟ್ಟಿದ್ರಂತೆ.

publive-image
ಆದ್ರೆ, ಅಷ್ಟೊಂದು ಹಣ ಹೊಂದಿಸಲು ಸಾಧ್ಯವಾಗದ ಕಾರಣ ಪರುಶರಾಮ್ ವರ್ಗಾವಣೆಗೊಂಡ ಠಾಣೆಗೆ ಶನಿವಾರ ಹೋಗಿ ಕೆಲಸ ಮಾಡೋದಾಗಿ ಹೇಳಿದ್ರಂತೆ. ಆದ್ರೆ, ಶುಕ್ರವಾರ ರಾತ್ರಿಯೇ ಪರುಶರಾಮ್​​ಗೆ ಹೃದಯಘಾತವಾಗಿದೆ. ಅವಧಿ ಪೂರ್ಣವಾಗುವ ಮುನ್ನವೇ ವರ್ಗಾವಣೆ ಮಾಡಿದ್ದು ನನ್ನ ಗಂಡನಿಗೆ ಮಾನಸಿಕವಾಗಿ ಕಾಡಿತ್ತು. ಇದ್ರಿಂದ ಅವರು ಖಿನ್ನತೆಗೆ ಜಾರಿದ್ರು. ಇದೇ ಕಾರಣಕ್ಕೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ ಅನ್ನೋದು ಪರುಶರಾಮ್ ಕುಟುಂಬಸ್ಥರ ಆರೋಪ.
ರಾ. ಹೆದ್ದಾರಿ ತಡೆದು ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Advertisment

ಇದನ್ನೂ ಓದಿ:ಅಲ್ಲಪ್ಪ ಸಿದ್ದರಾಮಯ್ಯ ಮುಂದಿನ 10 ತಿಂಗಳು CM ಆಗಿ ಮುಂದುವರಿ ನೋಡೋಣ -ಕುಮಾರಸ್ವಾಮಿ ಚಾಲೆಂಜ್..!

ದುರಂತ ಏನಂದ್ರೆ ಘಟನೆ ನಡೆದು 18 ಗಂಟೆ ಕಳೆದಿದ್ರೂ ಈ ಬಗ್ಗೆ ಪ್ರಕರಣ ಕೂಡ ದಾಖಲಾಗಿರಲಿಲ್ಲ. ಹಾಗಾಗಿ ನ್ಯಾಯಕ್ಕಾಗಿ ಪಿಎಸ್​ಐ ಪತ್ನಿ ಶ್ವೇತಾ ಪ್ರತಿಭಟನೆಯ ಮೊರೆ ಹೋಗಿದ್ದರು. ಶ್ಚೇತಾಗೆ ವಿವಿಧ ಸಂಘಟನೆಗಳು ಕೂಡ ಸಾಥ್ ನೀಡಿದ್ದವು. ಹೀಗಾಗಿ ಯಾದಗಿರಿಯ ವಿವಿಧ ಸಂಘಟನೆಗಳ ಒಕ್ಕೂಟ ರಾಷ್ಟ್ರೀಯ ಹೆದ್ದಾರಿ 150 ತಡೆದು ಪ್ರತಿಭಟನೆ ನಡೆಸಿದ್ವು. ಪರುಶರಾಮ್ ಸಾವಿಗೆ ನ್ಯಾಯ ಬೇಕು ಅಂತ ಆಗ್ರಹ ಮಾಡಿದ್ದಾರೆ.

publive-image

18 ಗಂಟೆ ಬಳಿಕ ಎಫ್​ಐಆರ್​.. ಅರೆಸ್ಟ್ ಆಗ್ತರಾ ಎಂಎಲ್ಎ?

ಇನ್ನು, ಘಟನೆ ನಡೆದು 18 ಗಂಟೆ ಕಳೆದಿದ್ರೂ ಪೊಲೀಸರು ದೂರು ದಾಖಲಿಸಿಕೊಂಡಿರಲಿಲ್ಲ. ದುರಂತ ಏನಂದ್ರೆ ಪರಶುರಾಮ್ ಕೆಲಸ ಮಾಡಿದ ಠಾಣೆಯಲ್ಲೇ ಈ ಕೇಸ್​ ದಾಖಲಿಸಿಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕಿದ್ದರಂತೆ. ಆದ್ರೆ, ಯಾವಾಗ ಪ್ರಕರಣದ ಕಾವು ಹೆಚ್ಚಾಯ್ತೋ ಶಾಸಕ ಚೆನ್ನಾರೆಡ್ಡಿ ಪಾಟೀಲ್ & ಶಾಸಕನ ಪುತ್ರ ಪಂಪನಗೌಡ ವಿರುದ್ಧ FIR ದಾಖಲಾಗಿದೆ. ಶಾಸಕ ಚೆನ್ನಾರೆಡ್ಡಿ ಎ1, ಪುತ್ರ ಪಂಪನಗೌಡನನ್ನ ಎ2 ಮಾಡಿ 108 BNS ಅಡಿಯಲ್ಲಿ ಯಾದಗಿರಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Advertisment

ಇದನ್ನೂ ಓದಿ:ದರ್ಶನ್ ಫ್ಯಾನ್ಸ್‌ಗಳಿಂದ ಕೊಲೆ ಬೆದರಿಕೆ.. ಪೊಲೀಸ್ ಮೊರೆ ಹೋದ ರಾಜ್‌ ಕುಮಾರ್‌ ಅಭಿಮಾನಿ; ಆಗಿದ್ದೇನು?

ಶಾಸಕರ ವಿರುದ್ಧ ಎಫ್​ಐಆರ್ ದಾಖಲಾಗ್ತಿದ್ದಂತೆ ಚೆನ್ನಾರೆಡ್ಡಿ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಅಪ್ಪ ಮಗ ಇಬ್ಬರ ಫೋನ್ ಬಂದ್ ಮಾಡಿದ್ದು, ತಲೆಮರೆಸಿಕೊಂಡು ಬೆಂಗಳೂರಿಗೆ ತೆರಳಿರುವ ಅನುಮಾನ ವ್ಯಕ್ತವಾಗಿದೆ.

ಪರುಶರಾಮ್ ಸಾವಿನ ಬಗ್ಗೆ ನ್ಯೂಸ್​ ಫಸ್ಟ್​ನೊಂದಿಗೆ ಮಾತನಾಡಿರುವ ಗುರುಮಿಠಕಲ್ ಕ್ಷೇತ್ರದ ಜೆಡಿಎಸ್​ ಶಾಸಕ ಶರಣಗೌಡ ಕಂದಕೂರ್​, ಟ್ರಾನ್ಸಫರ್ ವಿಚಾರವಾಗಿ ಪರಶುರಾಮ್​ ಕಂದಕೂರ ಜೊತೆ ಕೂಡ ಮಾತನಾಡಿದ್ರಂತೆ. ದಕ್ಷ ಅಧಿಕಾರಿಯಾಗಿದ್ದ ಪರಶುರಾಮ್​ ತಮ್ಮ ನೋವನ್ನ ನನ್ನ ಜೊತೆ ಹಂಚಿಕೊಂಡಿದ್ರು ಅಂತ ಕಂದಕೂರ ಹೇಳಿದ್ದಾರೆ.

publive-image

ಪಿಎಸ್ಐ ಸಾವು! ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಇನ್ನು ಪಿಎಸ್​ಐ ಪರಶುರಾಮ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಪರಮೇಶ್ವರ್​, ನ್ಯಾಚುರಲ್ ಆಗಿ ಮೃತಪಟ್ಟಿದ್ದಾಗಿ‌ ಮಾಹಿತಿ ಸಿಕ್ಕಿದೆ. ವರ್ಗಾವಣೆ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಸಾವಾಗಿದೆ ಅಂತ ಹೇಳ್ತಿದ್ದಾರೆ. ಪಿಎಸ್ ಪತ್ನಿ ಆರೋಪವನ್ನ ನಾನು ಪರಿಗಣಿಸುತ್ತೇನೆ ಎಂದಿದ್ದಾರೆ.

ಈ ಪ್ರಕರಣದ ಬಗ್ಗೆ ಮಾತನಾಡಿರುವ ಶಿವರಾಜ್ ತಂಗಡಗಿ, ಮೃತ ಪಿಎಸ್​ಐ ಪರುಶುರಾಮ ನನ್ನ ಕ್ಷೇತ್ರದ ಹುಡುಗ. ಪಾಪ ಆತನಿಗೆ ಏನಾಗಿದೆ ಅಂತ ನನಗೆ ಚೂರು ಗೊತ್ತಿಲ್ಲ.. ಆದರೆ ವರ್ಗಾವಣೆ ದಂಧೆಯಿಂದ ಸಾವಾಗಿದೆ ಎನ್ನುವುದು ತಪ್ಪು.. ಒಂದೇ ವರ್ಷದಲ್ಲಿ ವರ್ಗಾವಣೆ ಮಾಡೋಕೆ ಆಗಲ್ಲ ಎಲ್ಲ ತನಿಕೆಯಿಂದ ಹೊರ ಬರುತ್ತೆ ಎಂದಿದ್ದಾರೆಪಿಎಸ್​ಐ ಪರುಶರಾಮ್ ಹಠಾತ್ ಸಾವು ಹತ್ತು ಹಲವು ಅನುಮಾನಗಳನ್ನ ಸೃಷ್ಟಿ ಮಾಡಿದೆ. ಶಾಸಕರ ವಿರುದ್ಧವೇ ಗಂಭೀರ ಆರೋಪಗಳು ಕೇಳಿ ಬಂದಿದ್ದು, ಇದು ಸಹಜ ಸಾವಾ ಅಥವಾ ಒತ್ತಡಗಳಿಂದ ಮೃತಪಟ್ರಾ ಅನ್ನೋದು ತನಿಖೆ ಬಳಿಕವೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment