/newsfirstlive-kannada/media/post_attachments/wp-content/uploads/2025/06/rcb-fan-death3.jpg)
ಬೆಂಗಳೂರು: ಐಪಿಎಲ್​ ಫೈನಲ್​ನಲ್ಲಿ ಆರ್​ಸಿಬಿ ತಂಡವು ಪಂಜಾಬ್ ಕಿಂಗ್ಸ್​ ಅನ್ನು ಸೋಲಿಸಿ ಟ್ರೋಫಿಗೆ ಮುತ್ತಿಟ್ಟಿತು. ಇದೇ ಖುಷಿಯಲ್ಲಿ ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆರ್​ಸಿಬಿ ಟೀಂಗೆ ಹಾಗೂ ಟೀಂನ ಮ್ಯಾನೇಜ್ಮೆಂಟ್​ಗೆ ಸನ್ಮಾನ ಕಾರ್ಯಕ್ರಮ ಇಟ್ಟುಕೊಂಡಿತ್ತು.
ಇದನ್ನೂ ಓದಿ:ಮದುವೆಗೆ ಹುಡುಗಿನ ನೋಡಿದ್ವಿ.. RCB ಅಂತ ಬೆಂಗಳೂರಿಗೆ ಹೋಗಿದ್ದು ಗೊತ್ತಿಲ್ಲ- ಮಗನಿಗಾಗಿ ತಾಯಿಯ ಆಕ್ರಂದನ
/newsfirstlive-kannada/media/post_attachments/wp-content/uploads/2025/06/rcb-fan-injury4.jpg)
ಇತ್ತ ಚಿನ್ನಸ್ವಾಮಿ ಮೈದಾನದಲ್ಲಿ ಆರ್​ಸಿಬಿ, ಫ್ಯಾನ್ಸ್​ ಮೀಟ್ ಕಾರ್ಯಕ್ರಮ ಆಯೋಜನೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿಗೆ ಅಪಾರ ಅಭಿಮಾನಿಗಳು ಹರಿದು ಬಂದಿದ್ದಾರೆ. ಆಗ ನೂಕು ನುಗ್ಗಲು ಸಂಭವಿಸಿ ಕಾಲ್ತುಳಿತ ನಡೆದು ಅನಾಹುತ ಆಗಿದೆ.
/newsfirstlive-kannada/media/post_attachments/wp-content/uploads/2025/06/rcb-fan-injury5.jpg)
ಈ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಬೌರಿಂಗ್​ ಮತ್ತು ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಇದೇ ಘಟನೆಯಲ್ಲಿ ಆರ್​ಸಿಬಿ ಆಟಗಾರರನ್ನು ನೋಡಲು ಬಂದಿದ್ದ ಅಭಿಮಾನಿ ಶಿವಲಿಂಗ್ ಮೃತಪಟ್ಟಿದ್ದಾನೆ.
/newsfirstlive-kannada/media/post_attachments/wp-content/uploads/2025/06/rcb-fan-death4.jpg)
ಯಾದಗಿರಿ ಜಿಲ್ಲೆಯ ರಾಮಸಂದ್ರ ಮೂಲದ ಶಿವಲಿಂಗ್ ದ್ವಿತೀಯ ಪಿಯುಸಿಗೆ ಸೇರಲು ಟಿಸಿ ಪಡೆಯಲು ಬೆಂಗಳೂರಿಗೆ ಬಂದಿದ್ದ. ಆದ್ರೆ ಟಿಸಿ ಪಡೆಯದೇ ನೇರವಾಗಿ ಸ್ಟೇಡಿಯಂಗೆ ಹೋಗಿದ್ದಾನೆ. ಇದೇ ವೇಳೆ ಕಾಲ್ತುಳಿತದಲ್ಲಿ ವಿದ್ಯಾರ್ಥಿ ಶಿವಲಿಂಗ್​ ಮೃತಪಟ್ಟಿದ್ದಾನೆ. ನೋವಿನ ವಿಚಾರ ಏನೆಂದರೆ ಪೋಷಕರು ಕೂಲಿ ಕೆಲಸ ಮಾಡಿ ಈತನನ್ನು ಓದಿಸುತ್ತಿದ್ದರು. ಆದ್ರೆ ಹೀಗೆ ಆರ್​ಸಿಬಿ ಆಟಗಾರರನ್ನು ನೋಡಲು ಬಂದಿದ್ದ ದಾರುಣವಾಗಿ ಜೀವಬಿಟ್ಟಿದ್ದಾನೆ. ಈಗಾಗಲೇ ವಿದ್ಯಾರ್ಥಿಯ ಮೃತದೇಹವನ್ನು ಯಾದಗಿರಿಯ ರಾಮಸಂದ್ರ ಗ್ರಾಮಕ್ಕೆ ರವಾನೆ ಮಾಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us
 Follow Us
                                    


