/newsfirstlive-kannada/media/post_attachments/wp-content/uploads/2024/11/JOB_NEW.jpg)
ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯೋಗಕ್ಕಾಗಿ ಹುಡುಕುತ್ತಿದ್ದರೇ ಇಲ್ಲೊಂದು ಶುಭ ಸುದ್ದಿ ಇಲ್ಲಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಡಿ ಯಾದಗಿರಿ ಜಿಲ್ಲೆಯಲ್ಲಿ ಉದ್ಯೋಗಗಳನ್ನು ಆಹ್ವಾನ ಮಾಡಲಾಗಿದೆ. ಅರ್ಹ ಹಾಗೂ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮ ಅಡಿ ಈ ಉದ್ಯೋಗಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಷರತ್ತುಗಳಂತೆ ಹುದ್ದೆಗೆ ಆಯ್ಕೆ ಆದವರು ಕೆಲಸ ಮಾಡಬೇಕಾಗುತ್ತದೆ. ಆಫ್​ಲೈನ್ ಅರ್ಜಿಗಳಿಗೆ ಇಲ್ಲಿ ಅವಕಾಶ ಇರುವುದಿಲ್ಲ. ಇನ್ನು ಈ ಉದ್ಯೋಗಗಳ ಮಾಹಿತಿ, ತಿಂಗಳ ಸಂಬಳ, ಯಾವ ಕೋರ್ಸ್ ಮಾಡಿರಬೇಕು ಎನ್ನುವ ಮಾಹಿತಿ ಇಲ್ಲಿದೆ.
/newsfirstlive-kannada/media/post_attachments/wp-content/uploads/2024/10/JOBS_TEACHER.jpg)
ಇದನ್ನೂ ಓದಿ: CWC ಅಲ್ಲಿ ವಿವಿಧ ಹುದ್ದೆಗಳು ಖಾಲಿ ಖಾಲಿ.. 150ಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ
ಯಾದಗಿರಿಯಲ್ಲಿ ಜಿಲ್ಲಾ ಕಾರ್ಯಕ್ರಮ ಹುದ್ದೆ ಒಂದು ಖಾಲಿ ಇದ್ದು 45 ವರ್ಷದವರು ಇದಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು. ವೇತನ ಮಾಸಿಕವಾಗಿ 24,150 ರೂಪಾಯಿ ಕೊಡಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ಅವಕಾಶ ಇದೆ. ಪಿಜಿ ಡಿಪ್ಲೊಮಾದಲ್ಲಿ ಮ್ಯಾನೇಜ್​ಮೆಂಟ್, ಎಂಬಿಎ, ಆರೋಗ್ಯ ಹೆಲ್ತ್ ಅಡ್ಮಿನಿಸ್ಟ್ರೇಷನ್ ಕೋರ್ಸ್ ಪೂರ್ಣಗೊಳಿಸಿದವರಿಗೆ ಚಾನ್ಸ್ ಇದೆ.
ಯಾದಗಿರಿಯ ಸುರಪುರ ತಾಲೂಕಿನಲ್ಲಿ ಪ್ರಯೋಗಶಾಲಾ ತಂತ್ರಜ್ಞ ಸಿಬ್ಬಂದಿ ಹುದ್ದೆ ಒಂದು ಖಾಲಿ ಇದೆ. 40 ವರ್ಷದವರಿಗೆ ಅವಕಾಶ ಇದೆ. ತಿಂಗಳಿಗೆ 16,100 ರೂಪಾಯಿ ನೀಡಲಾಗುತ್ತದೆ. ಕಲ್ಯಾಣ ಕರ್ನಾಟಕದ ಎಸ್​ಟಿ ಸಮುದಾಯಕ್ಕೆ ಮೀಸಲಿದ್ದು 10ನೇ ತರಗತಿ ಜೊತೆ ಡಿಪ್ಲೊಮ ಶಿಕ್ಷಣ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ ಪೂರ್ಣಗೊಳಿಸಿರಬೇಕು.
ಅರ್ಜಿಯನ್ನು 30 ಜನವರಿ 2025ರ ಒಳಗಾಗಿ ಸಲ್ಲಿಸಬಹುದಾಗಿದೆ. ಮಾಹಿತಿ ಹಾಗೂ ಅರ್ಜಿಗಾಗಿ ವೆಬ್​ಸೈಟ್- https://zpyadgiri.karnataka.gov.in/ ಅರ್ಜಿ ಸಲ್ಲಿಸುವಾಗ ಇಲಾಖೆ ಕೇಳಿರುವ ಎಲ್ಲ ದಾಖಲೆಗಳನ್ನು ಸರಿಯಾಗಿ ಮತ್ತು ನಿಖರವಾಗಿ ಇರಬೇಕು ಎಂದು ತಿಳಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us