newsfirstkannada.com

ರಾಜರು ಯುದ್ಧಕ್ಕೆ ಸನ್ನದ್ಧ, ಚಾಲೆಂಜ್ ಎದುರಿಸಲು ವೈದ್ಯರೂ ರೆಡಿ; ಲೋಕ ಕದನ ಮತ್ತಷ್ಟು ರೋಚಕ..!

Share :

Published March 14, 2024 at 6:55am

Update March 14, 2024 at 9:00am

  ಡಾ.ಮಂಜುನಾಥ್, ಯದುವೀರ್ ಬಿಜೆಪಿ ಸೇರ್ಪಡೆಗೆ ವೇದಿಕೆ ರೆಡಿ

  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾಕ್ಟರ್​ ಸ್ಪರ್ಧೆ ಫಿಕ್ಸ್​​

  ಡಿಕೆ ಬ್ರದರ್ಸ್​ಗೆ ಠಕ್ಕರ್​ ಕೊಡ್ತಾರಾ ಡಾಕ್ಟರ್​​ ಮಂಜುನಾಥ್​!?

ವೈದ್ಯಕೀಯ ಕ್ಷೇತ್ರದಲ್ಲಿ ಜನಸೇವೆ ಮೂಲಕ ಗುರುತಿಸಿಕೊಂಡಿದ್ದ ಡಾ.ಸಿ.ಎನ್​.ಮಂಜುನಾಥ್​ ರಾಜಕೀಯಕ್ಕೆ ಧುಮುಕುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಡಾಕ್ಟರ್​ ಸ್ಪರ್ಧೆ ಖಚಿತವಾಗಿದೆ. ಅತ್ತ, ಮೈಸೂರಿನಿಂದ ರಾಜ ಯಧುವೀರ್​ಗೆ ಟಿಕೆಟ್​ ಅನೌನ್ಸ್​ ಆಗಿದ್ದು, ಇಬ್ಬರು ಇನ್ನೆರಡು ದಿನದಲ್ಲಿ ಬಿಜೆಪಿ ​ಸೇರ್ಪಡೆಯಾಗಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇನ್ನೆರಡು ದಿನದಲ್ಲಿ ಡಾ.ಮಂಜುನಾಥ್​ ‘ಬಿಜೆಪಿ’ ಸೇರ್ಪಡೆ..!
ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ್ದ ಡಾ.ಸಿ.ಎಸ್​.ಮಂಜುನಾಥ್​ ಚುನಾವಣಾ ಚಕ್ರವ್ಯೂಹ ಬೇಧಿಸಲು ಸಜ್ಜಾಗಿದ್ದಾರೆ. ಸೋಲಿಲ್ಲದ ಸರದಾರನಾಗಿ ಮೆರೆಯುತ್ತಿರುವ ಡಿಸಿಎಂ ಡಿಕೆಶಿ ಸಹೋದರ ಡಿ.ಕೆ.ಸುರೇಶ್ ಮಣಿಸಲು ದೋಸ್ತಿ ಪಡೆ ಮಾಸ್ಟರ್ ಪ್ಲಾನ್ ಹೆಣೆದಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಹಾಗೂ ಮಾಜಿ ಪ್ರಧಾನಿ ಅಳಿಯ ಡಾ. ಸಿ.ಎನ್​.ಮಂಜುನಾಥ್​ ಬಿಜೆಪಿಯಿಂದ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ರಣರೋಚಕವಾಗುತ್ತಾ ಬೆಂಗಳೂರು ಗ್ರಾಮಾಂತರ ಕಾಳಗ?
ಡಿ.ಕೆ ಬ್ರದರ್ಸ್​ ಪಾಲಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಪ್ರತಿಷ್ಠೆಯ ಕಣ.. ಈಗಾಗಲೇ ಕಾಂಗ್ರೆಸ್ ಪಾಳಯ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹಾಲಿ ಸಂಸದ ಡಿ.ಕೆ.ಸುರೇಶ್​ರನ್ನ ಅಭ್ಯರ್ಥಿಯನ್ನಾಗಿ ಘೋಷಿಸಿದೆ.. ಹೀಗಾಗಿ ಈ ಬಾರಿಯ ಬೆಂಗಳೂರು ಗ್ರಾಮಾಂತರ ಕ್ಷೇತ್ರ ರಣರೋಚಕ ಕಾಳಗಕ್ಕೆ ಸಾಕ್ಷಿಯಾಗೋದ್ರಲ್ಲಿ ಯಾವುದೇ ಅನುಮಾನ ಇಲ್ಲ. ಡಾ.ಸಿ.ಎನ್​.ಮಂಜುನಾಥ್​ ಸ್ಪರ್ಧೆ ವಿಚಾರವಾಗಿ ಡಿಕೆಶಿ ಮತ್ತು ಹೆಚ್​ಡಿಕೆ ಮಧ್ಯೆ ವಾಕ್ಸಮರ ಜೋರಾಗಿದೆ.

ಡಾ.ಮಂಜುನಾಥ್​ ಇನ್ನೆರಡು ದಿನಗಳಲ್ಲಿ ಬಿಜೆಪಿ ಸೇರೋದು ಪಕ್ಕಾ ಆಗಿದೆ. ತಡರಾತ್ರಿ ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪರನ್ನ ಭೇಟಿ ಮಾಡಿ ಡಾ. ಸಿ ಎನ್ ಮಂಜುನಾಥ್ ಮಾತುಕತೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಡಾಕ್ಟರ್​, ಗೆಲ್ಲೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಶುಭ ಶುಕ್ರವಾರದಂದು ಯದುವೀರ್​​ ಬಿಜೆಪಿ ಸೇರ್ಪಡೆ
ಲೋಕ ಕದನದ ಹೈವೋಲ್ಟೇಜ್​ ಕ್ಷೇತ್ರವಾದ ಮೈಸೂರು-ಕೊಡಗು ಕ್ಷೇತ್ರದಲ್ಲಿ ಕ್ಷಣಕ್ಕೊಂದು ತಿರುವುಗಳ ನಡುವೆ ಕೊನೆಗೂ ಯದುವೀರ್​ಗೆ ಟಿಕೆಟ್​ ಘೋಷಣೆಯಾಗಿದೆ.. ಮೈಸೂರು-ಕೊಡಗು ಟಿಕೆಟ್​ ಯದುವೀರ್​ ಒಡೆಯರ್​ಗೆ ಘೋಷಣೆ ಆಗ್ತಿದ್ದಂತೆ, ಪ್ರತಾಪ್​ ಸಿಂಹ ಟ್ವೀಟ್​ ಮೂಲಕ ಮೈಸೂರು ರಾಜರಿಗೆ ಶುಭಕೋರಿದ್ರು. ಟಿಕೆಟ್​ ಸಿಕ್ಕಬಗ್ಗೆ ಯದುವೀರ್​ ಒಡೆಯರ್​ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಇದೇ ಶುಕ್ರವಾರದೊಂದು ನಾಡ ದೇವಿ ಚಾಮುಂಡೇಶ್ವರಿಯ ದರ್ಶನವನ್ನು ಪಡೆದು, ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆಯಾಗಲಿದ್ದಾರೆ.

ಬೆಂಗಳೂರು ಗ್ರಾಮಾಂತರದಿಂದ ಡಾ. ಮಂಜುನಾಥ್ ಸ್ಪರ್ಧಿಸಿದ್ರೆ ಡಿ.ಕೆ.ಸುರೇಶ್‍ಗೆ ಭಾರೀ ಹಿನ್ನಡೆ ಆಗೋ ನಿರೀಕ್ಷೆಯಲ್ಲಿ ದೋಸ್ತಿಗಳಿದ್ದಾರೆ. ಇತ್ತ ಮೈಸೂರು ಯುದ್ಧದಲ್ಲೂ ಭಾರಿ ಕುತೂಹಲ ಮನೆ ಮಾಡಿರೋದಂತೂ ಸತ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಜರು ಯುದ್ಧಕ್ಕೆ ಸನ್ನದ್ಧ, ಚಾಲೆಂಜ್ ಎದುರಿಸಲು ವೈದ್ಯರೂ ರೆಡಿ; ಲೋಕ ಕದನ ಮತ್ತಷ್ಟು ರೋಚಕ..!

https://newsfirstlive.com/wp-content/uploads/2024/03/MANJUNATH-YADUVEER.jpg

Load More