Advertisment

ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಆಗ್ತಾರಾ ಒಡೆಯರ್..? ಕುತೂಹಲ ಮೂಡಿಸಿದ ಯದುವೀರ್ ಶಾರದಾಂಬೆ ದರ್ಶನ

author-image
Bheemappa
Updated On
ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿ ಆಗ್ತಾರಾ ಒಡೆಯರ್..? ಕುತೂಹಲ ಮೂಡಿಸಿದ ಯದುವೀರ್ ಶಾರದಾಂಬೆ ದರ್ಶನ
Advertisment
  • ಪ್ರತಾಪ್​ ಸಿಂಹರಿಂದ ಕೈ ಜಾರುತ್ತಾ ಮೈಸೂರು-ಕೊಡಗು ಟಿಕೆಟ್​?
  • ಮಠದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ಮೈಸೂರು ರಾಜರು
  • ಮೈಸೂರು-ಶೃಂಗೇರಿ ಮಧ್ಯೆ ಮೊದಲಿಂದ ಅವಿನಾಭವ ಸಂಬಂಧ

ಚಿಕ್ಕಮಗಳೂರು: ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶೃಂಗೇರಿಯ ಶ್ರೀಮಠಕ್ಕೆ ಭೇಟಿ ನೀಡಿ ಶಾರದಾಂಬೆ ದರ್ಶನ ಪಡೆದುಕೊಂಡಿದ್ದಾರೆ.

Advertisment

publive-image

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದೇವಿಯ ದರ್ಶನ ಪಡೆದ ಬಳಿಕ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾದರು. ಕಿರಿಯ ಜಗದ್ಗುರು ವಿಧುಶೇಖರ ಭಾರತೀ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಂಡರು. ಶೃಂಗೇರಿಯ ಶ್ರೀಮಠಕ್ಕೂ ಹಾಗೂ ಮೈಸೂರು ಸಂಸ್ಥಾನಕ್ಕೂ ಇತಿಹಾಸ ಕಾಲದಿಂದಲೂ ಅವಿನಾಭವ ಸಂಬಂಧವಿದೆ.

publive-image

ಹೀಗಾಗಿ ಮೈಸೂರು ಸಂಸ್ಥಾನದವರು ಶ್ರೀಮಠಕ್ಕೆ ಭೇಟಿ ನೀಡುವುದು ಮೊದಲನಿಂದಲೂ ನಡೆದುಕೊಂಡು ಬಂದಿದ್ದರಿಂದ ಮಠದ ಹಲವು ಕಾರ್ಯಕ್ರಮಗಳಲ್ಲಿ ಮೈಸೂರು ರಾಜವಂಶಸ್ಥರು‌ ಭಾಗಿಯಾಗುತ್ತಿದ್ದರು. ಇದೀಗ ಮೈಸೂರು-ಕೊಡಗು ಬಿಜೆಪಿ ಅಭ್ಯರ್ಥಿಯಾಗಿ ಒಡೆಯರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲೇ ಶೃಂಗೇರಿ ಶ್ರೀಮಠಕ್ಕೆ ಭೇಟಿ ನೀಡಿರುವುದು ತೀವ್ರ ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment