/newsfirstlive-kannada/media/post_attachments/wp-content/uploads/2024/12/MYSORE-YADUVIR-ODEYAR.jpg)
ಸದ್ಯ ಮೈಸೂರಿನ ಪ್ರಿನ್ಸೆಸ್ ಅಥವಾ ರಾಜಕುಮಾರಿ ರಸ್ತೆಗೆ ಸಿಎಂ ಸಿದ್ದರಾಮಯ್ಯನವರ ಹೆಸರು ಇಡುವ ವಿಚಾರ ದೊಡ್ಡ ಚರ್ಚೆಗೆ ಬಂದಿದೆ. ಈ ವಿಚಾರವಾಗಿ ರಾಜವಂಶಸ್ಥ ಹಾಗೂ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್​ ನ್ಯೂಸ್​ಫಸ್ಟ್​​ಗೆ ತಮ್ಮ ಮನದಾಳದ ಮಾತನ್ನು ಹೇಳಿದ್ದಾರೆ. ಹಿಂದಿನಿಂದಲೂ ರಾಜಮನೆತನವನ್ನು ಸರ್ಕಾರ ಸಾಕಷ್ಟು ಟಾರ್ಗೆಟ್ ಮಾಡಿದೆ. ಸಂಸದನಾದ ಮೇಲೆ ನಾನು ಹೆಚ್ಚು ಟಾರ್ಗೆಟ್ ಆಗಿದ್ದೇನೆ ಎಂದು ಯದುವೀರ್ ಒಡೆಯರ್ ಅವರು ಹೇಳಿದ್ದಾರೆ
ಹಲವು ವೈಯಕ್ತಿಕ ವಿಚಾರಗಳಿವೆ ಅವುಗಳನ್ನು ನಾನು ಹೇಳಲು ಇಚ್ಛೆಪಡುವುದಿಲ್ಲ. ನಾನು ಸಂಸದನಾದ ಮೇಲೆ ಹೆಚ್ಚು ಟಾರ್ಗೆಟ್ ಆಗಿದ್ದೀನಿ. ರಾಜಕಾರಣಕ್ಕೆ ಬಂದ ಮೇಲೆ ನನ್ನನ್ನು ಹೆಚ್ಚು ಗುರಿಮಾಡಿದ್ದಾರೆ. ಪ್ರಿನ್ಸರ್​ ರಸ್ತೆಗೆ ರಾಜಕುಮಾರಿಯ ಸ್ಮರಣಾರ್ಥ ಹೆಸರು ಇಡಲಾಗಿದೆ. ಈ ರಸ್ತೆಯ ಹೆಸರು ಬದಲಾವಣೆಗೆ ನಮ್ಮ ವಿರೋಧವಿದೆ. ಯಾವುದೇ ಕಾರಣಕ್ಕೂ ರಸ್ತೆ ಹೆಸರು ಬದಲಾಗಬಾರದು. ಈ ಕುರಿತು ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂಭ್ರಮಕ್ಕೆ ಕುಂದಾನಗರಿ ಸಜ್ಜು; ಹೇಗಿರಲಿದೆ ಕೈ ಪಾಳಯದ ಸಮಾವೇಶ?
/newsfirstlive-kannada/media/post_attachments/wp-content/uploads/2024/12/MYSORE-PRINCES-ROAD.jpg)
ಚಾಮುಂಡಿಬೆಟ್ಟ ಪ್ರಾಧಿಕಾರ, ಕುರುಬಾರಹಳ್ಳಿ ವಿಚಾರಗಳಲ್ಲಿಯೂ ಕೂಡ ನಾವು ಟಾರ್ಗೆಟ್ ಆಗಿದ್ದೇವೆ ಎಂದಿರುವ ಯದುವೀರ್ ಒಡೆಯರ್​, ಸಿದ್ದರಾಮಯ್ಯನವರ ಹೆಸರಿಡುವುದನ್ನು ಸಮರ್ಥಿಸಿಕೊಂಡಿದ್ದ ಪ್ರತಾಪ್ ಸಿಂಹಗೂ ಟಾಂಗ್ ಕೊಟ್ಟಿದ್ದಾರೆ. ಪ್ರತಾಪ್ ಸಿಂಹ ಪ್ರಾಯಶಃ ಇತಿಹಾಸ ಮರೆತಿದ್ದಾರೆ ಎನಿಸುತ್ತದೆ. ನಾನು ಹೇಳಿದ ಮೇಲೆ ಮತ್ತೆ ನೆನಪಾಗಬಹುದು. ರಸ್ತೆಗೆ ಸಿದ್ದರಾಮಯ್ಯನವರ ಹೆಸರಿಡಲು ನನ್ನದು ವಿರೋಧವಿಲ್ಲ. ಆದ್ರೆ ಪ್ರಿನ್ಸೆಸ್​ ರಸ್ತೆಗೆ ಸಿದ್ದರಾಮಯ್ಯನವರ ಹೆಸರು ಬೇಡ ಎಂದಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿಯಲ್ಲಿ ದಾರುಣ ಘಟನೆ.. ಉಸಿರು ನಿಲ್ಲಿಸಿದ ಅಯ್ಯಪ್ಪನ ಇಬ್ಬರು ಮಾಲಾಧಾರಿಗಳು
ಹಿಂದಿನಿಂದಲೂ ಈ ರಸ್ತೆಯನ್ನು ಪ್ರಿನ್ಸೆಸ್​, ಕೆ.ಆರ್​.ಎಸ್. ರಸ್ತೆ ಅಂತಲೇ ಕರೆಯುತ್ತಾರೆ. ರಾಜಕುಮಾರಿ ಕೃಷ್ಣರಾಜಮ್ಮಣ್ಣಿ ಹಾಗೂ ಅವರ ಮಕ್ಕಳು ಟಿಬಿ ಕಾಯಿಲೆಯಿಂದ ಮೃತರಾಗುತ್ತಾರೆ. ಈ ರೀತಿ ಯಾರಿಗೂ ಆಗಬಾರದು ಎಂದು ನಾಲ್ವಡಿ ಕೃಷ್ಣರಾಜರ ಒಡೆಯರ್ ಅವರು ತಂಗಿ ನೆನಪಿಗೆ ಅಲ್ಲಿ ಆಸ್ಪತ್ರೆ ಕಟ್ಟಿಸುತ್ತಾರೆ. ಅದಕ್ಕೆ ಆ ರಸ್ತೆಯನ್ನು ಪ್ರಿನ್ಸೆಸ್ ರಸ್ತೆ ಅಥವಾ ರಾಜಕುಮಾರಿ ರಸ್ತೆ ಅಂತ ಕರೆಯುತ್ತಾರೆ
ಈಗ ಆ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ಗ ಅಂತ ನಾಮಕರಣ ಮಾಡಲು ಪಾಲಿಕೆ ತೀರ್ಮಾನ ಮಾಡಿದೆ.ಹಾಗೆ ನೋಡಿದರೆ ಮೈಸೂರು ಮಹಾನಗರ ಪಾಲಿಕೆಗೆ ಇನ್ನೂ ಚುನಾವಣೆ ಆಗಿಲ್ಲ. ಯಾವ ಜನಪ್ರತಿನಿಧಿಗಳಿಲ್ಲ. ಈಗ ಈ ರೀತಿಯ ತೀರ್ಮಾನ ಸರಿಯಲ್ಲ. ಮೈಸೂರಿನಲ್ಲಿ ಸಾಕಷ್ಟು ರಸ್ತೆಗಳಿವೆ ಅಲ್ಲಿ ಯಾವುದಕ್ಕಾದರೂ ಸಿದ್ದರಾಮಯ್ಯನವರ ಹೆಸರಿಡಲಿ. ಇದೇ ವಿಚಾರಕ್ಕೆ ಹಿಂದಿನಿಂದಲೂ ಸಾಕಷ್ಟು ಹೋರಾಟ ಮಾಡಿದ್ದಾರೆ. ಈಗ ಪಾಲಿಕೆಗೆ ಸಾಕಷ್ಟು ಜನ ಆಕ್ಷೇಪಣೆಯನ್ನು ಸಲ್ಲಿಸಿದ್ದಾರೆ ಎಂದು ಯದುವೀರ್ ಒಡೆಯರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us