/newsfirstlive-kannada/media/post_attachments/wp-content/uploads/2025/02/yajurveda-chahal-Divorce.jpg)
ಸ್ಟಾರ್ ಕ್ರಿಕೆಟಿಗ ಯಜುವೇಂದ್ರ ಚಹಲ್, ಧನುಶ್ರೀ ದಾಂಪತ್ಯ ಜೀವನ ಕೊನೆಗೂ ಮುರಿದು ಬಿದ್ದಿದೆ. ಹಲವು ದಿನಗಳ ವದಂತಿ ಬಳಿಕ ಇಬ್ಬರು ಬಾಂದ್ರಾ ಫ್ಯಾಮಿಲಿ ಕೋರ್ಟ್‌ನಲ್ಲಿ ವಿಚ್ಛೇದನ ಪಡೆದಿದ್ದಾರೆ. ಡಿವೋರ್ಸ್ ಬೆನ್ನಲ್ಲೇ ಯಜುವೇಂದ್ರ ಚಹಲ್‌ಗೆ ಜೀವನಾಂಶದ ಬಿಗ್ ಶಾಕ್ ಎದುರಾಗಿದೆ.
ಧನುಶ್ರೀಗೆ ಜೀವನಾಂಶ ಕೊಡಬೇಕಾ?
ಯಜುವೇಂದ್ರ ಚಹಲ್ ವಿಚ್ಛೇದನ ಅಧಿಕೃತವಾಗುವ ಮೊದಲೇ ಜೀವನಾಂಶದ ಬಗ್ಗೆ ಹಲವು ಬಗ್ಗೆಯ ಚರ್ಚೆಗಳು ಶುರುವಾಗಿತ್ತು. ವಿಚ್ಛೇದನದ ಬಳಿಕ ಧನಶ್ರೀಗೆ ಚಹಲ್ ಅವರು ಬರೋಬ್ಬರಿ 60 ಕೋಟಿ ರೂಪಾಯಿ ಜೀವನಾಂಶ ನೀಡಬೇಕು ಅನ್ನೋ ಬಗ್ಗೆ ವರದಿಯಾಗಿದೆ.
ನಿನ್ನೆಯಷ್ಟೇ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ವಿಚ್ಛೇದನ ಫ್ಯಾಮಿಲಿ ಕೋರ್ಟ್‌ನಲ್ಲಿ ಅಧಿಕೃತವಾಗಿದೆ. ಇದಾದ ಬಳಿಕ ಚಹಲ್ ಅವರು ತಮ್ಮ ಮಾಜಿ ಪತ್ನಿಗೆ ಜೀವನಾಂಶದ ಪರಿಹಾರ ನೀಡಬೇಕಾಗುತ್ತದೆ.
ಕೆಲವು ಮೂಲಗಳ ಪ್ರಕಾರ ಯಜುವೇಂದ್ರ ಚಹಲ್ ಹಾಗೂ ಧನಶ್ರೀ ಪರಸ್ಪರ ಹೊಂದಾಣಿಕೆಯ ಮೂಲಕ ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ. ಒಪ್ಪಂದದ ಪ್ರಕಾರ ಯಜುವೇಂದ್ರ ಚಹಲ್ ಅವರು 60 ಕೋಟಿ ರೂಪಾಯಿ ಜೀವನಾಂಶ ಕೊಟ್ಟರೆ ಒಪ್ಪಂದ ಅಂತ್ಯಗೊಳ್ಳಲಿದೆ. ಆದರೆ ಹಣಕಾಸಿನ ಒಪ್ಪಂದಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ.
ಇದನ್ನೂ ಓದಿ: ಯಜುವೇಂದ್ರ ಚಹಲ್-ಧನಶ್ರೀ ವಿಚ್ಛೇದನ ಅಧಿಕೃತ; ಬೇರೆ, ಬೇರೆಯಾಗಲು ಕೊಟ್ಟ ಕಾರಣವೇನು?
ಯಜುವೇಂದ್ರ ಚಹಲ್ ಹಾಗೂ ಧನಶ್ರೀ ವಿಚ್ಛೇದನ ಅಧಿಕೃತವಾದರೂ 60 ಕೋಟಿ ಜೀವನಾಂಶ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಒಂದು ವೇಳೆ ವಿಚ್ಛೇದನದ ಬಳಿಕ ಇಷ್ಟು ದೊಡ್ಡ ಮೊತ್ತದ ಹಣವನ್ನು ಯಜುವೇಂದ್ರ ಜೀವನಾಂಶವಾಗಿ ಕೊಟ್ಟರೆ ಇದು ಹೊಸ ದಾಖಲೆಯಾಗಲಿದೆ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ