ಮಳೆ ಮಾಡಿದ ಅನಾಹುತ.. ರಸ್ತೆ ಮಧ್ಯೆ ದಾರುಣ ಅಂತ್ಯ ಕಂಡ ಯಕ್ಷಗಾನ ಕಲಾವಿದ

author-image
Ganesh
Updated On
ಮಳೆ ಮಾಡಿದ ಅನಾಹುತ.. ರಸ್ತೆ ಮಧ್ಯೆ ದಾರುಣ ಅಂತ್ಯ ಕಂಡ ಯಕ್ಷಗಾನ ಕಲಾವಿದ
Advertisment
  • ಬೈಕ್​ನಲ್ಲಿ ಬರ್ತಿದ್ದಾಗ ಆಗುಂಬೆಯಲ್ಲಿ ಆಗಿದ್ದೇನು..?
  • ಓರ್ವ ಸ್ನೇಹಿತನಿಗೆ ಗಂಭೀರ ಗಾಯ, ಆಸ್ಪತ್ರೆಯಲ್ಲಿ ಚಿಕಿತ್ಸೆ
  • ಯಕ್ಷಗಾನ ಲೋಕಕ್ಕೆ ಇದೊಂದು ಕೆಟ್ಟ ಸುದ್ದಿ

ಶಿವಮೊಗ್ಗ: ರಾಜ್ಯದಲ್ಲಿ ಆಗಾಗ ಸುರಿಯುತ್ತಿರುವ ಮಳೆಗೆ ಆಗುತ್ತಿರುವ ಅನಾಹುತಗಳು ಒಂದಲ್ಲ, ಎರಡಲ್ಲ. ಇದೀಗ ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ ಯಕ್ಷಗಾನ ಯುವ ಕಲಾವಿದನೊಬ್ಬ ದಾರಿ ಮಧ್ಯೆ ದಾರುಣ ಅಂತ್ಯ ಕಂಡಿದ್ದಾನೆ.

ಆಗಿದ್ದೇನು..?

ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ದುರ್ಘಟನೆ ನಡೆದಿದೆ. ರಂಜಿತ್ ಬನ್ನಾಡಿ ಜೀವ ಕಳೆದುಕೊಂಡ ಯಕ್ಷಗಾನ ಕಲಾವಿದ. ಇವರು ಸೂರಾಲು ಮೇಳದ ಯುವ ಕಲಾವಿದರಾಗಿದ್ದರು. ನಿಗದಿಯಂತೆ ನಿನ್ನೆಯ ದಿನ ತೀರ್ಥಹಳ್ಳಿಯ ಕೊಪ್ಪ ಸಮೀಪದ ಕವಡೆಕಟ್ಟೆ ಬಳಿ ಮೇಳದ ಯಕ್ಷಗಾನ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಯಕ್ಷಗಾನ ರದ್ದಾಗಿತ್ತು.

ಇದನ್ನೂ ಓದಿ: ಬಿಗ್‌ ಬಾಸ್ ಮಾಜಿ ಸ್ಪರ್ಧಿ ನಮ್ರತಾಗೆ ‘ಡೇಟಿಂಗ್‌’ ಕಿರುಕುಳ.. ಅಪರಿಚಿತನ ಟಾರ್ಚರ್‌ಗೆ ನಟಿ ಏನಂದ್ರು?

ಹೀಗಾಗಿ ರಂಜಿತ್ ಸ್ನೇಹಿತ ವಿನೋದ್ ರಾಜ್ ಜೊತೆ ದ್ವಿಚಕ್ರ ವಾಹನ ಮೂಲಕ ಆಗುಂಬೆ ಬಳಿ ಬರುತ್ತಿದ್ದರು. ಈ ವೇಳೆ ಗಾಳಿ ಮಳೆಗೆ ವಿದ್ಯುತ್ ಕಂಬವೊಂದು ನೆಲಕ್ಕೆ ಬಿದ್ದಿದೆ. ಪರಿಣಾಮ ವಿದ್ಯುತ್ ಲೈನ್ ಇವರ ಬೈಕ್​ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಇನ್ನು, ರಂಜಿತ್ ಸ್ನೇಹಿತ್ ವಿನೋದ್ ರಾಜ್ ಕೂಡ ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Breaking: ಪಾಕ್​ಗೆ ಗಾಯದ ಮೇಲೆ ಮತ್ತೊಂದು ದೊಡ್ಡ ಬರೆ.. ಸ್ವಾತಂತ್ರ್ಯ ಘೋಷಿಸಿಕೊಂಡ ಬಲೂಚಿಸ್ತಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment