Yakshagana: ಜನಪ್ರಿಯ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ನಿಧನ

author-image
Ganesh
Updated On
Yakshagana: ಜನಪ್ರಿಯ ಹಾಸ್ಯ ಕಲಾವಿದ ಜಯರಾಮ ಆಚಾರ್ಯ ನಿಧನ
Advertisment
  • ತೆಂಕುತಿಟ್ಟು ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ
  • ಯಕ್ಷಗಾನ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಕಲಾವಿದ
  • 50 ವರ್ಷಗಳ ಕಾಲ ಯಕ್ಷರಂಗದಲ್ಲಿ ಸೇವೆ ಸಲ್ಲಿಸಿದ್ದರು

ಮಂಗಳೂರು: ತೆಂಕುತಿಟ್ಟು ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ (67) ನಿಧನರಾಗಿದ್ದಾರೆ. ಜಯರಾಮ ಆಚಾರ್ಯ ಅವರು ತೆಂಕುತಿಟ್ಟುವಿನ ಅಗ್ರಗಣ್ಯ ಹಾಸ್ಯ ಕಲಾವಿದರಾಗಿದ್ದರು.

ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಜಯರಾಮ ಆಚಾರ್ಯ ಬಂದಿದ್ದರು. ಸೋಮವಾರ ಮುಂಜಾನೆ 4 ಗಂಟೆ ಸುಮಾರಿಗೆ ಎದೆನೋವು ಕಾಣಿಸಿಕೊಂಡಿದೆ. ತೀವ್ರ ಎದೆನೋವು ಹಿನ್ನೆಲೆಯಲ್ಲಿ ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು.

ಚಿಕಿತ್ಸೆ ಫಲಿಸದೇ ಜಯರಾಮ ಆಚಾರ್ಯ ಅವರು ಕೊನೆಯುಸಿರೆಳೆದಿದ್ದಾರೆ. ಸದಾ ಅಧ್ಯಯನಶೀಲರಾಗಿ, ಕಲಾಸೇವೆಯನ್ನು ಮಾಡುತ್ತಾ ಹಾಸ್ಯಗಾರರಾಗಿ ರಂಜಿಸುತ್ತಿದ್ದರು. ಸುಮಾರು 50 ವರ್ಷಗಳ ಕಾಲ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದ್ದರು.

ಇದನ್ನೂ ಓದಿ:ಉಡುಪಿಯಲ್ಲಿ ಯಕ್ಷಗಾನ ವೇಷ ಗಲಾಟೆ! ಗಣೇಶ ಹಬ್ಬದ ದಿನದಂದೇ ಸಿಡಿದೆದ್ದ ಹಿರಿಯ ಕಲಾವಿದರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment